ತುಮಕೂರು


ಶ್ರದ್ಧೆ ಏಕಾಗ್ರತೆ ಮತ್ತು ಸೇವೆ ಎಂಬ ಮೂರು ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವರು ಅದ್ವಿತೀಯ ಸಾಧನೆ ಮಾಡುವುದು ನಿಶ್ಚಿತ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ವಿವೇಕಾನಂದ ಯುವಕ ಸಂಘದ ಸಂಚಾಲಕ ಸುನಿಲ್ ಎಚ್ ಅರ್ ಅಭಿಪ್ರಾಯಪಟ್ಟರು.
ತುಮಕೂರು ವಿವಿಯ ಸ್ವಾಮಿ ವಿವಕಾನಂದ ಅಧ್ಯಯನ ಪೀಠವು ವಿವಿ ಕಲಾ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲೆಯ ದ್ವಿತೀಯ ಉಪನ್ಯಾಸ ಕಾರ್ಯಕ್ರಮದಲ್ಲಿ ಆಧುನಿಕ ಮನೋವಿಜ್ಞಾನದ ಬೆಳಕಿನಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳು ವಿಷಯದ ಕುರಿತು ಮಾತನಾಡಿದ ಅವರು ನಮ್ಮಲ್ಲಿ ಸದೃಢ ವ್ಯಕ್ತಿತ್ವವಿದ್ದರೆ ನಿರ್ದಿಷ್ಟ ಗುರಿಯನ್ನು ತಲುಪುವುದು ಸಾಧ್ಯವೆಂದು ವಿವೇಕಾನಂದರು ಹೇಳುತ್ತಾರೆ ಎಂದು ತಿಳಿಸಿ ವಿಧ್ಯಾರ್ಥಿಗಳನ್ನು ಸ್ವಾಮಿ ವಿವೇಕಾಂದರ ಚಿಂತನೆಗಳು ಮತ್ತು ಆದರ್ಶಗಳನ್ನು ಬದುಕಿನಲ್ಲಿ ಅಳವಡಸಿಕೊಳ್ಳುವಂತೆ ಪ್ರೇರೇಪಿಸಿದರು.
ಇಡೀ ಜಗತ್ತು ವಸಾಹತುಶಾಹಿ ಅಲೆಗೆ ಸಿಲುಕುತಿದ್ದ ಸಂದರ್ಭಲ್ಲಿ ಭಾತೃತ್ವವನ್ನು ಪರಿಚಯಿಸಿ ಪರಿಸರದ ಮಹಾನ್ ಚೇತನ ಭಾರತದ ಸಾಂಸ್ಕøತಿಕ ಪ್ರತಿನಿಧಿ ಸ್ವಾಮಿ ವಿವೇಕಾನಂದರು ಎಂದು ವಿವಿ ಯ ಕುಲಸಚಿವ ಪೆÇ್ರ.ನಿರ್ಮಲ್ ರಾಜು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ವಿವಿಯ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ಸಂಯೋಜಕ ಡಾ.ಚೇತನ್ ಪ್ರತಾಪ್ ಕೆ.ಎನ್. ಮಾತನಾಡಿ ಒಬ್ಬ ಬಾಲಕ ನರೇಂದ್ರನಾಥನು ಸ್ವಾಮಿ ವಿವೇಕಾನಂದ ಆಗುವಲ್ಲಿ ಅವರ ಗುರು ರಾಮಕೃಷ್ಣರ ಪಾತ್ರ ಹಿರಿದು. ಒಬ್ಬ ಗುರುವಿನ ಮೂಲಕ ಅನೇಕ ಸಾಧಕರು ಮಾತನಾಡುತ್ತಾರೆ, ಒಂದಿಡೀ ಪರಂಪರೆಯನ್ನೇ ಅವರು ನಮ್ಮೆದುರಿಡುತ್ತಾರೆ. ಹಾಗಾಗಿ ಗುರು ಎಂದರೆ ಕೇವಲ ವ್ಯಕ್ತಿ ಅಲ್ಲ, ಅವರೊಂದು ಶಕ್ತಿ ಎಂದು ಅಭಿಪ್ರಾಯ ಪಟ್ಟರು.
ವಿವಿ ಕಲಾ ಕಾಲೇಜಿನ ಪ್ರಾಂಶುಪಾಲರು ಪೆÇ್ರ. ಬಿ. ಕರಿಯಣ್ಣ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ವಾಸುದೇವ ವಂದಿಸಿದರು.

 

(Visited 1 times, 1 visits today)