ತುಮಕೂರು


ಬಿಜೆಪಿ ರಾಷ್ಟ್ರಭಕ್ತ ಸಮರ್ಪಣಾ ಮನೋಭಾವದ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಪ್ರಪಂಚದ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದೆ. ಎಲ್ಲಾ ವರ್ಗ, ಸಮುದಾಯಗಳನ್ನು ಸಮಾಜದ ಸೇವೆಗೆ ಸರ್ಮಪಿಸಿಕೊಂಡಿರುವ ಕಾರ್ಯಕರ್ತರ ಆಧಾರಿತ ಪಕ್ಷವಾಗಿದೆ ಎಂದು ಬಿಜೆಪಿ ರಾಜ್ಯ ಎಸ್.ಟಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಮಾಜಿ ಸದಸ್ಯರಾದ ನರಸಿಂಹನಾಯಕ್ ತಿಳಿಸಿದರು.
ಇವರು ಕೊರಟಗೆರೆಯ ಶ್ರೀಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಶಾಖಾ ಮಠದ ಸಭಾ ಭವನದಲ್ಲಿ ಬಿಜೆಪಿ ತುಮಕೂರು- ಮಧುಗಿರಿ ಸಂಘಟನಾತ್ಮಕ ಜಿಲ್ಲೆಗಳ ಎಸ್.ಟಿ.ಮೋರ್ಚಾದ ಪ್ರಮುಖ ಪದಾಧಿಕಾರಿಗಳು, ಪ್ರಮುಖರ ಎರಡು ದಿನಗಳ ಪ್ರಶಿಕ್ಷಣ ವರ್ಗದ ಉದ್ಘಾಟನೆ ಮಾಡಿ ಮಾತನಾಡುತ್ತಾ, 1951ರಲ್ಲಿ ಜನಸಂಘ, 1980ರಲ್ಲಿ ಬಿಜೆಪಿಯು ಆರಂಭಗೊಂಡು ಇಂದು ಪ್ರಪಂಚದಲ್ಲೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದೆ. ದೇಶದ ಏಕತೆ, ಅಖಂಡತೆ, ಸಮಗ್ರತೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ವಿಕಾಸನ ಧ್ಯೇಯದಿಂದ ಕಾರ್ಯನಿರ್ವಹಿಸುತ್ತಿದ್ದು ದೇಶವನ್ನು ಪರಿವರ್ತನೆ ಮಾಡುವ ಹಾದಿಯಲ್ಲಿ ಸಾಗುತ್ತಿದೆ ಎಂದರು.
ಕಾಂಗ್ರೆಸ್, ಇತರರಿಂದ ದೇಶ ಹಿನ್ನಡೆ
ದೇಶ, ರಾಜ್ಯವನ್ನು 60 ವರ್ಷ ಆಳಿದ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಜನರು ಮತ್ತು ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸದೆ, ವಂಶಪಾರಂಪರ್ಯವಾದ ರಾಜಕಾರಣದಲ್ಲಿ ಮುಳುಗಿದ್ದವು. ಬಿಜೆಪಿ ದೇಶದಲ್ಲಿ ಆರೋಗ್ಯ, ಶಿಕ್ಷಣ, ರಕ್ಷಣೆ, ಕೈಗಾರಿಕೆ, ಮೂಲಬೂತ ಸೌಕರ್ಯ, ಹಿಂದುಳಿದ ವರ್ಗದವರು, ರೈತರು, ಪರಿಶಿಷ್ಟರು, ಮಹಿಳೆಯರು ಅಭಿವೃದ್ಧಿಗೆ ಬಾರೀ ಪ್ರಮಾಣದ ಅನುದಾನ ನೀಡಿ, ಸಮಗ್ರ ಅಭಿಮೃದ್ಧಿಗೆ ಶ್ರೇಮಿಸುತ್ತಿದೆ ಎಂದು ಹೇಳಿದರು.
ಸಭ್ ಕೇ ಸಾಥ್, ಸಭ್ ಕಾ ವಿಕಾಸ್, ಸಭ್ ಕಾ ವಿಶ್ವಾಸ್ : ಬಿಜೆಪಿ ಮಂತ್ರ
ದೇಶ ಮೊದಲ, ಪಕ್ಷ, ವ್ಯಕ್ತಿ ನಂತರ ಎನ್ನುವ ಬಿಜೆಪಿ, ಕೇಂದ್ರದ ನರೇಂದ್ರಮೋದಿ ಮತ್ತು ಕರ್ನಾಟಕದ ಬಸವರಾಜ ಬೊಮ್ಮಾಯಿರವರ ಡಬ್ಬಲ್ ಇಂಜಿನ್ ಸರ್ಕಾರಗಳು ಸಮಾಜದ ಎಲ್ಲಾ ವರ್ಗ, ಸಮುದಾಯಗಳಿಗೆ ನೆರವು ನೀಡುತ್ತಿದ್ದು, ಸಭ್ ಕೇ ಸಾಥ್, ಸಭ್ ಕಾ ವಿಕಾಸ್, ಸಭ್ ಕಾ ವಿಶ್ವಾಸ್ ಎಂಬ ಮಂತ್ರವನ್ನು ಅನುಷ್ಠಾನಕ್ಕೆ ತಂದಿದ್ದು ಸಮಗ್ರ ಅಭಿವೃದ್ಧಿ, ವಿಕಾಸದ ಹಾದಿಯಲ್ಲಿ ಸಾಗುತ್ತಿದೆ ಎಂದು ವಿವರಿಸಿದರು.
ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಳ
ಕರ್ನಾಟಕದಲ್ಲಿ ಜನಸಂಖ್ಯೆ ಆಧಾರಿತ ಪರಿಶಿಷ್ಟ ವರ್ಗಕ್ಕೆ ಶೇಕಡ 3 ರಿಂದ 7ಕ್ಕೆ ಮೀಸಲಾತಿ ಹೆಚ್ಚಿಸಿ ಎಸ್.ಟಿ. ಸಮುದಾಯದ 51 ಉಪಪಂಗಡಗಳಿಗೆ ಅನುಕೂಲವಾಗುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಬಿಜೆಪಿ ನೇತೃತ್ವದ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ ಎಂದು ನರಸಿಂಹನಾಯಕ್ ತಿಳಿಸಿದರು. ಬಿಜೆಪಿಯು ದೇಶದ ರಾಷ್ಟ್ರಪತಿಯಾಗಿ ಒರಿಸ್ಸಾದ ಆದಿವಾಸಿ ಸಂತಾಳ ತಳಸಮುದಾಯಕ್ಕೆ ಸೇರಿರುವ ಸಾಮಾನ್ಯ ಕುಟುಂಬದ ಎಸ್.ಟಿ. ಸಮುದಾಯಕ್ಕೆ ಸೇರಿದ ಮಹಿಳೆ ಶ್ರೀಮತಿ ದ್ರೌಪದಿ ಮುರ್ಮರವರನ್ನು ಘನವೆತ್ತ ರಾಷ್ಟ್ರಪತಿಗಳಾಗಿ ಮಾಡಿದೆ ಎಂದರು.
ಸಮಾರಂಭದಲ್ಲಿ ಬಿಜೆಪಿ ರಾಜ್ಯ ಎಸ್.ಟಿ. ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಹಾಗೂ ತುಮಕೂರು-ಮಧುಗಿರಿ ಪ್ರಭಾರಿ ಶ್ರೀಮತಿ ಹೇಮಲತಾ ನಾಯಕ್, ತುಮಕೂರು ಜಿಲ್ಲಾ ಪ್ರಧಾನಕಾರ್ಯದರ್ಶಿ ಹೆಚ್.ಟಿ. ಭೈರಪ್ಪ, ಮಧುಗಿರಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಪಾವಗಡ ರವಿ, ತುಮಕೂರು ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಎ ವಿಜಯ ಕುಮಾರ್, ಮಧುಗಿರಿ ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಶಿವು ಬ್ಯಾಡನೂರು, ತುಮಕೂರು ಜಿಲ್ಲಾ ವಕ್ತಾರ ಮತ್ತು ಎಸ್.ಟಿ. ಮೋರ್ಚಾ ಪ್ರಭಾರಿ ಕೆ.ಪಿ. ಮಹೇಶ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಸಾಗರ್ ದಯಾನಂದ ಪ್ರಸ್ತಾವಿಕ ನುಡಿಗಳನ್ನು ಆಡಿದರು. ಯುವ ಮೋರ್ಚಾ ಜಿಲ್ಲಾಕಾರ್ಯದರ್ಶಿ ರಕ್ಷಿತ್.ವಿ ವಂದೇ ಮಾತರಂ ಹಾಡಿದರು. ಮಧುಗಿರಿ ಜಿಲ್ಲಾ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿ ಸ್ವಾಗತಿಸಿದರೆ, ತುಮಕೂರು ಜಿಲ್ಲಾ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಯು.ಆರ್.ವೆಂಕಟೇಶ್ ಕಾರ್ಯಕ್ರಮ ನಿರೂಪಿಸರು. ಮಧುಗಿರಿ ಜಿಲ್ಲಾ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಗುಡ್ಡದ ರಂಗಪ್ಪ ವಂದಿಸಿದರು.

ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ : ನರಸಿಂಹನಾಯಕ್

 

(Visited 3 times, 1 visits today)