ಸಾಮೂಹಿಕ ವಿವಾಹಗಳು ಪ್ರೇರಣೆಯಾಗಬೇಕು

ಮಧುಗಿರಿ :

      ಆಡಂಬರದ ಮದುವೆಗಳಿಗೆ ಇತಿಶ್ರೀ ಹಾಡಲು ಸಾಮೂಹಿಕ ವಿವಾಹಗಳು ಪ್ರೇರಣೆಯಾಗಬೇಕೆಂದು ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷ ಶ್ರೀಹನುಮಂತನಾಥಸ್ವಾಮೀಜಿ ತಿಳಿಸಿದರು.

      ತಾಲೂಕಿನ ಗಿರೇಗೌಡನಹಳ್ಳಿಯ ಶ್ರೀ ರಂಗನಾಥಸ್ವಾಮಿದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 6 ಜೋಡಿಗಳಿಗೆ ಆಶೀರ್ವಚನ ನೀಡಿ ಮಾತನಾಡಿದ ಅವರು, ಹಣವಂತರು, ವಿದ್ಯಾವಂತರು ಆಡಂಬರದ ಮದುವೆಗಳಿಗೆ ಮಾರು ಹೋಗದೆ ಸಾಂಪ್ರದಾಯಕ ರೀತಿಯಲ್ಲಿ ಸಾಮೂಹಿಕ ವಿವಾಹಗಳಿಗೆ ಒತ್ತು ನೀಡುವುದರಿಂದ ದುಂದು ವೆಚ್ಚ ಕಡಿಮೆಯಾಗಿ ನವ ದಂಪತಿಗಳು ಆರ್ಥಿಕವಾಗಿ ಉನ್ನತಿ ಹೊಂದಲು ಸಹಕಾರಿಯಾಗಲಿದೆ ಎಂದರು.

      ನವದಂಪತಿಗಳು ಕುಟುಂಬಕ್ಕೊಂದು ಮಗು ಯೋಜನೆ ಅಳವಡಿಸಿಕೊಳ್ಳುವುದರಿಂದ ಮಕ್ಕಳನ್ನು ವಿದ್ಯಾವಂತನ್ನಾಗಿ, ಸುಸಂಸ್ಕøತರನ್ನಾಗಿ ಮಾಡಲು ಸಾಧ್ಯ. ಸರ್ಕಾರ ಕೂಡ ಸಾಮೂಹಿಕ ವಿವಾಹಕ್ಕೆ ಒತ್ತು ನೀಡುತ್ತಿದ್ದು. ಸಂಘ ಸಂಸ್ಥೆಗಳು ಸಾಮೂಹಿಕ ವಿವಾಹಗಳನ್ನು ನಡೆಸಲು ಮುಂದಾಗಬೇಕು. ಬಡವರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಂತಹ ವಿವಾಹಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಬೇಕಾಗಿದೆ. ಈ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಕುಂಚಿಟಿಗ ಮಠ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಮುಂದಿನ ದಿನಗಳಲ್ಲಿ ಮಠದ ವತಿಯಿಂದ ದೇವಸ್ಥಾನಗಳ ನಿರ್ಮಾಣ, ಶಿಕ್ಷಣಕ್ಕೆ ಒತ್ತು ನೀಡಲಾಗುವುದು ಎಂದರು.

 

(Visited 13 times, 1 visits today)

Related posts

Leave a Comment