ಹಿರಿಯ ನಿರ್ದೇಶಕ ಎಂ.ಎಸ್ ರಾಜಶೇಖರ್ ಇನ್ನಿಲ್ಲ

 ಬೆಂಗಳೂರು: 
      ಹಿರಿಯ ನಿರ್ದೇಶಕ ಎಂ.ಎಸ್ ರಾಜಶೇಖರ್ (75) ಸೋಮವಾರ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. 
      ಸ್ಯಾಂಡಲ್​ವುಡ್ ನ ಸೃಜನಶೀಲ ನಿರ್ದೇಶಕ ಅಂತಲೇ ಕರೆಸಿಕೊಂಡಿದ್ದ ಎಂ.ಎಸ್​. ರಾಜಶೇಖರ್ ಅವರು 30ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
     
      ಪತ್ನಿ ರಾಣಿ, ಮಗಳು ಶಾರದಾ, ಮಗ ರಘು ಅವರನ್ನು ಅಗಲಿದ್ದಾರೆ. ನಾಳೆ ನಾಗರಬಾವಿ ಸಮೀಪದ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

      

(Visited 12 times, 1 visits today)

Related posts

Leave a Comment