ಹೆಣ್ಣುಮಕ್ಕಳಿಗೆ ಉದ್ಯೋಗ ಒದಗಿಸುವ ವಲಯಗಳಲ್ಲಿ ಸಿಂಹ ಪಾಲು ಗಾರ್ಮೆಂಟ್ಸ್ ಗಳದ್ದು”

  ತುಮಕೂರು :

     ಇಂದು ನಗರದ ಸಮರ್ಥ್ ಫೌಂಡೇಷನ್ ಕೌಶಲ್ಯಾಭಿವೃಧ್ಧಿ ಮತ್ತು ತರಬೇತಿ ಕೇಂದ್ರದಲ್ಲಿ ಜವಳಿ ಮತ್ತು ಕೈಮಗ್ಗ ಇಲಾಖೆಯಿಂದ ನಡೆಯುತ್ತಿರುವ ಉಚಿತ ಟೈಲರಿಂಗ್ ತರಬೇತಿಯ ಶಿಬಿರಾರ್ಥಿಗಳಿಗಾಗಿ ತುಮಕೂರಿನ ಭೀಮಸಂದ್ರದಲ್ಲಿ ಇರುವ ಷಾಹಿ  ಗಾರ್ಮೆಂಟ್ಸ್ ನ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮವವನ್ನು ಏರ್ಪಡಿಸಲಾಗಿತ್ತು.

      ಸಂವಾದ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಷಾಹಿ ಗಾರ್ಮೆಂಟ್ಸ್‍ನ ಮಾನವ ಸಂಪನ್ಮೂಲ ಅಧಿಕಾರಿಯಾದ ಲೋಕೇಶ್ ರವರು ಮಾತನಾಡುತ್ತಾ. ಒಬ್ಬ ಹೆಣ್ಣು ಮಗಳಿಂದ ಪ್ರಾರಂಭವಾದ ಪುಟ್ಟ ಕಂಪನಿ 21 ಘಟಕಗಳನ್ನು ಹೊಂದಿದ್ದು ಇಂದು ಒಂದೂವರೆ ಲಕ್ಷ ಹೆಣ್ಣುಮಕ್ಕಳಿಗೆ ಉದ್ಯೋಗ ಒದಗಿಸಿದೆ, ಕೇವಲ ಸಹಿ ಮಾಡಲು ಬರುವ ಕ್ರಿಯಾಶೀಲ ಹೆಣ್ಣು ಮಕ್ಕಳು ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು ವೇತನವನ್ನು ಪಡೆದು ತಮ್ಮ ಕುಟುಂಬ ನಡೆಸುತ್ತಿದ್ದಾರೆ. ಅಂತಹ ವ್ಯಾಪಕ ಅವಕಾಶವನ್ನು ಗಾರ್ಮೆಂಟ್ಸ್ ವಲಯ ಸೃಷ್ಠಿಸಿದೆ. ನೀವು ಇಲ್ಲಿ ತರಬೇತಿ ಮುಗಿಸಿದ ನಂತರ ನಮ್ಮಲ್ಲಿ ಬಂದು ಉದ್ಯೋಗ ಮಾಡಬಹುದು ಎಂದರು.

      ಸಮರ್ಥ್ ಫೌಂಡೇಷನ್ನಿನ ಅಧ್ಯಕ್ಷರಾದ ಹೆಚ್.ಮಲ್ಲಿಕಾರ್ಜುನ್.ರವರು ಮಾತನಾಡುತ್ತಾ ಮೊದಲು ಮಹಿಳೆಯರು ತುಮಕೂರಿನಿಂದ ಬೆಂಗಳೂರಿಗೆ ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಅರಸಿ ಹೋಗುತ್ತಿದ್ದರು. ಸೂರ್ಯ ಹುಟ್ಟುವ ಮೊದಲು ಅವರು ತುಮಕೂರು ಬಿಟ್ಟರೆ ಸೂರ್ಯ ಮುಳುಗಿದ ಮೇಲೆ ಮನೆ ಸೇರುತ್ತಿದ್ದರು. ಆದರೆ ಈಗ ಬೆಳೆಯುತ್ತಿರುವ ತುಮಕೂರಿನ ಸುತ್ತ ಮುತ್ತ ಅನೇಕ ಪ್ಯಾಕ್ಟರಿಗಳು ಆಗಿರುವುದರಿಂದ ನಮ್ಮಲ್ಲಿಯ ಮಹಿಳೆಯರು ಇಲ್ಲೇ ಉದ್ಯೋಗ ಮಾಡಬಹುದು ಎಂದರು.

      ಸಮರ್ಥ್ ಫೌಂಡೇಷನ್ನಿನ ಕಾರ್ಯದರ್ಶಿ ರಾಣಿ ಚಂದ್ರಶೇಖರ್ ರವರು ಮಾತನಾಡುತ್ತಾ ಜವಳಿ ಇಲಾಖೆಯು 18-35 ವರ್ಷ ವಯಸ್ಸಿನ ಮಹಿಳೆಯರಿಗೆ ಉಚಿತ ತರಬೇತಿ ಕೊಡುವುದರ ಮೂಲಕ ಅವರನ್ನು ಉದ್ಯಮಿಯಾಗಿ ರೂಪುಗೊಳಿಸುವ ಹಿನ್ನೆಲೆಯನ್ನು ಕಾರ್ಯನಿರ್ವಹಿಸುತ್ತಿದೆ. ಇಂತಹ ಅವಕಾಶವನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು. ಸಂವಾದಲ್ಲಿ ತರಬೇತಿಯ ಶಿಕ್ಷಕಿಯರಾದ ಭಾಗ್ಯಮ್ಮ, ಶಬ್ನನಂ. ಕೋಮಲ, ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.

(Visited 11 times, 1 visits today)

Related posts

Leave a Comment