ಹೇಮಾವತಿ ನಾಲಾ ಅಚ್ಚುಕಟ್ಟು ಕಾಮಗಾರಿ ಹೆಸರಿನಲ್ಲಿ ಕೋಟ್ಯಾಂತರ ಹಣ ಗೋಲ್‍ಮಾಲ್-ಶಾಸಕ ಆರೋಪ

ತುರುವೇಕೆರೆ:

      ಹೇಮಾವತಿ ನಾಲಾ ಅಚ್ಚುಕಟ್ಟು ಕಾಮಗಾರಿ ಹೆಸರಿನಲ್ಲಿ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕೆಲಸ ಮಾಡದೆಯೇ ಕೋಟ್ಯಾಂತರ ರೂಪಾಯಿ ಹಣ ಗೋಲ್‍ಮಾಲ್ ಮಾಡಿದ್ದಾರೆಂದು ಶಾಸಕ ಮಸಾಲಜಯರಾಮ್ ಆರೋಪಿಸಿದರು.

      ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಮಾವತಿ ನಾಲೆಯ ಎರಡೂ ಬದಿಯಲ್ಲಿ ಜಂಗಲ್ ಕಟಿಂಗ್ ಹಾಗೂ ಊಳೆತ್ತುವ ಕಾಮಗಾರಿಯನ್ನು ಬೇಕಾಬಿಟ್ಟಿಯಾಗಿ ನಿರ್ವಹಿಸಿದ್ದು, ಕಾಮಗಾರಿಯನ್ನು ಪೂರ್ಣಗೊಳೆಸದೆ ಅರ್ಧಂಭರ್ಧ ಮಾಡಿದ್ದಾರೆ ಹಾಗೂ ನಾಲೆಯ ಎರಡೂ ಬದಿಯಲ್ಲಿದ್ದ ಮರಗಳ ರಂಬೆ ಕೊಂಬೆಗಳನ್ನು ನಾಲೆಯಲ್ಲಿ ಬಿಸಾಡಿ ಹೋಗಿದ್ದರಿಂದ ತಾಲೂಕಿನ ಡಿ-10ಬಳಿಯಿರುವ ಹೇಮಾವತಿ ಸೇತುವೆಯಲ್ಲಿ ನೀರು ಬ್ಲಾಕ್ ಆಗಿ ನಾಲೆ ಹೊಡೆಯುವ ಹಂತಕ್ಕೆ ತಲುಪಿತ್ತು, ರೈತರು ಆತಂಕದಿಂದ ನನಗೆ ತಿಳಿಸಿದ ಸಂಧರ್ಭದಲ್ಲಿ ನಾನೆ ಖುದ್ದು ಸ್ಥಳಪರಿಶೀಲನೆ ಮಾಡಿ ಕೂಡಲೇ ನಾಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಪೊದೆಗಳು ಹಾಗೂ ಮರದ ರಂಬೆಗಳನ್ನು ಹೊರತೆಗೆಸುವಲ್ಲಿ ಹರ ಸಾಹಸ ಪಡಬೇಕಾಯಿತು.

      ಹೇಮಾವತಿ ನಾಲೆಯ ಉದ್ದಕ್ಕೂ ಜಂಗಲ್ ಕ್ಲೀನ್ ಮಾಡದೆ ಊಳೆತ್ತದೆ ಅರ್ಧಂಭರ್ಧ ಕಾಮಗಾರಿಮಾಡಿದ್ದಾರೆ, ಆದರೂ ಗುತ್ತಿಗೆದಾರರೊಂದಿಗೆ ಶಾಮೀಲಾದ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಬಿಲ್ ಮಾಡಿಕೊಟ್ಟು ಸರ್ಕಾರದ ಹಣ ದುರುಪಯೋಗಗೊಳಿಸಿದ್ದಾರೆ, ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಎಸಗಿರುವ ಅಧಿಕಾರಿಗಳು ಅಮಾನತ್ತಾಗಬೇಕು ಹಾಗೂ ಗುತ್ತಿಗೆದಾರನ್ನು ಕಪ್ಪುಪಟ್ಟಿಗೆ ಸೇರಿಸುವುದಲ್ಲದೆ, ನಾಲೆ ಒಡೆಯುವ ಅಂತಕ್ಕೆ ತಲುಪಿ ರೈತರಲ್ಲಿ ಆತಂಕಕ್ಕೆ ಕಾರಣನಾದವನ ಮೇಲೆ ಕ್ರಿಮಿನಲ್ ಕೇಸ್ ಧಾಖಲಿಸಬೇಕು ಇಲ್ಲದಿದ್ದರೆ ಹೇಮಾವತಿ ಕಚೇರಿ ಎದುರು ಭೃಹತ್ ಫ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

      ಸುದ್ದಿಗೋಷ್ಟಿಯಲ್ಲಿ ಪಕ್ಷದ ಅಧ್ಯಕ್ಷ ದುಂಡಾರೇಣುಕಯ್ಯ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಬಿ.ಎಸ್.ದೇವರಾಜ್, ಮುಖಂಡರುಗಳಾದ ವಿ.ಟಿ.ವೆಂಕಟರಾಮಯ್ಯ, ವಿ.ಬಿ.ಸುರೇಶ್, ಅಬಲಕಟ್ಟೆರಾಮಣ್ಣ ಇತರರು ಇದ್ದರು.

(Visited 13 times, 1 visits today)

Related posts

Leave a Comment