ಹೊಸ ದಾಖಲೆ ತಲುಪಿದ ವಿದ್ಯುತ್ ಬೇಡಿಕೆ!?

ರಾಯಚೂರು:

 

      ಈವರೆಗೆ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ 10 ಸಾವಿರ ಮೆಗಾ ವ್ಯಾಟ್ ಗಡಿ ದಾಟಿತ್ತು. ಆದರೆ ನ.6ರಂದು ವಿದ್ಯುತ್ ಬೇಡಿಕೆ 11,052 ಮೆಗಾ ವ್ಯಾಟ್ ತಲುಪಿರುವುದು ಈವರೆಗಿನ ದಾಖಲೆಯಾಗಿದೆ.

      ಈಗಾಗಲೇ ಕಲ್ಲಿದ್ದಲು ಕೊರತೆಯಿಂದ ಬಳಲುತ್ತಿರುವ ಮುಚ್ಚುವ ಹಂತದಲ್ಲಿರುವ ಶಾಖೋತ್ಪನ್ನ ಘಟಕಗಳಿಗೆ ಇದು ದೊಡ್ಡ ಹೊಡೆತವೆಂದೇ ಹೇಳಬಹುದು. ಅದರಲ್ಲೂ ಅಕ್ಟೋಬರ್ ಅಂತ್ಯ ನವೆಂಬರ್ ಆರಂಭದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.

      ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ 10,888 ಮೆಗಾ ವ್ಯಾಟ್ ಬೇಡಿಕಯೇ ಅತ್ಯಂತ ಗರಿಷ್ಠ ಮಟ್ಟದ್ದಾಗಿತ್ತು. ಈ ಸಾಲಿನಲ್ಲಿ ಚಳಿಗಾಲದಲ್ಲಿ ಹಗಲಿನಲ್ಲೇ ಬೇಡಿಕೆ 10 ಸಾವಿರ ಮೆಗಾ ವ್ಯಾಟ್ ಗಡಿ ದಾಟುತ್ತಿರುವುದು ಕೆಪಿಸಿಗೆ ತಲೆ ನೋವಾಗಿ ಪರಿಣಮಿಸಿದೆ.

      ದೀಪಾವಳಿ ಹಿನ್ನೆಲೆಯಲ್ಲಿ ವಿದ್ಯುತ್ ಅಲಂಕಾರ ಮಾಡಿರುವ ಕಾರಣಕ್ಕೆ ವಾಣಿಜ್ಯ ಬಳಕೆ ಮತ್ತು ಗೃಹ ಬಳಕೆ ಬೇಡಿಕೆಯಲ್ಲಿ ಹೆಚ್ಚಳವಾಗಿ ನವೆಂಬರ್ 6ರ ಬೆಳಗ್ಗೆ 10.45ಕ್ಕೆ ಗರಿಷ್ಠ 11.052 ಮಗೆ ವ್ಯಾಟ್ ಬೇಡಿಕೆ ತಲುಪಿದೆ.

      ಬುಧವಾರವೂ ಕೂಡ 10 ಸಾವಿರ ಮೆಗಾ ವ್ಯಾಟ್ ಗಡಿ ದಾಟಿತ್ತು ಇನ್ನು ಗುರುವಾರ ದೀಪಾವಳಿ ಆಚರಣೆ ಇರುವುದರಿಂದ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೊಸ ದಾಖಲೆ ಮಟ್ಟವನ್ನು ತಲುಪಿದಂತಾಗಿದೆ

(Visited 8 times, 1 visits today)

Related posts

Leave a Comment