ತುರುವೇಕೆರೆ:

      ಹೊಸ ವರ್ಷದ ಆಚರಣೆ ಸಲುವಾಗಿ ಇಡೀ ದಿನ ಕುಣಿದು ಕುಪ್ಪಳಿಸುವುದು. ಪಾನ ಗೋಷ್ಠಿ ನಡೆಸುವುದು. ಕೇಕ್ ಕಟ್ ಮಾಡುವುದು ಸೇರಿದಂತೆ ಇನ್ನಿತರ ವಿಧಾನಗಳಲ್ಲಿ ಆಚರಿಸುವುದು ಸಾಮಾನ್ಯ.

      ಆದರೆ ಇಲ್ಲಿಯ ಗ್ಲೋಬಲ್ ಎಂಬಸ್ಸಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಭೋಧಕ ವರ್ಗ ಇಲ್ಲಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಹಣ್ಣು, ಹಾಲು ವಿತರಣೆ ಮಾಡುವ ಮೂಲಕ ಹೊಸ ವರ್ಷದ ಆಚರಣೆಯನ್ನು ಬಹಳ ವಿಶೇಷವಾಗಿ ಆಚರಿಸಿ ಇತರರಿಗೆ ಮಾದರಿಯಾದರು.

      ಪ್ರಾಂಶುಪಾಲ ಗಂಗಾಧರ ದೇವರ ಮನೆ ನೇತೃತ್ವದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಆಸ್ಪತ್ರೆಯ ವಾರ್ಡ್‍ಗಳಲ್ಲಿದ್ದ ಹಲವಾರು ರೋಗಿಗಳಿಗೆ ಹೊಸ ವರ್ಷದ ಶುಭಾಶಯವನ್ನು ಕೋರಿ ಬೇಗನೇ ಗುಣಮುಖರಾಗಿ ಎಂದು ಹಾರೈಸಿ ಹಣ್ಣು ಮತ್ತು ಹಾಲನ್ನು ವಿತರಿಸಿದರು.

ಪುಟ್ಟಕಂದಮ್ಮಗಳು :

      ಹೊಸ ವರ್ಷದ ಆಚರಣೆಗೆ ಈಗಷ್ಠೇ ಕಣ್ಣು ಬಿಟ್ಟಿರುವ ಪುಟ್ಟ ಕಂದಮ್ಮಗಳಿಗೂ ವಿದ್ಯಾರ್ಥಿಗಳು ಶುಭ ಹಾರೈಸಿದರು. ಹಲವಾರು ವಿದ್ಯಾರ್ಥಿನಿಯರು ಪುಟ್ಟ ಕಂದಮ್ಮಗಳ ಕೈ ಬಾಯಿ, ಕಾಲುಗಳನ್ನು ಮುಟ್ಟಿ ಸಂತಸ ಪಟ್ಟರು. ಇದೇ ಸಂಧರ್ಭದಲ್ಲಿ ಹಲವಾರು ಗರ್ಭಿಣಿಯರು ಮತ್ತು ಬಾಣಂತಿಯರಿಗೂ ಹಣ್ಣು ವಿತರಿಸಲಾಯಿತು.

     ಮಾದರಿ :

      ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಶುಭ ಹಾರೈಸಿ ಹೊಸ ವರ್ಷದ ಕೊಡುಗೆಯಾಗಿ ಹಣ್ಣುಗಳನ್ನು ವಿತರಿಸಿದುದು ಶ್ಲಾಘನೀಯ ಕಾರ್ಯ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಧರ್ ಹೇಳಿದರು.
ಈ ವೇಳೆ ಉಪನ್ಯಾಸಕರಾದ ಡಾ||ಲೋಕೇಶ್, ಪ್ರೊ.ಸೌಭಾಗ್ಯಲಕ್ಷ್ಮಿ, ಪ್ರೊ.ಪ್ರಿಯಾಂಕ, ಪ್ರೊ.ರಮ್ಯಾ, ಪ್ರೊ.ಕಾರ್ತಿಕ್, ಪ್ರೊ.ಬಸವರಾಜು, ಡಾ||ನವೀನ್, ಡಾ||ಸುಪ್ರಿಯಾ, ಗೌರ್ನಿಂಗ್ ಕೌನ್ಸಿಲ್ ಸದಸ್ಯೆ ಉಷಾ ಶ್ರೀನಿವಾಸ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.

(Visited 33 times, 1 visits today)