ತುಮಕೂರು


ಪಂಚರತ್ನ ಯಾತ್ರೆ ಸಂದರ್ಭವೇ ಜೆಡಿಎಸ್ ಮುಖಭಂಗ ಅನುಭವಿಸಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಕಣಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿದ್ದ ಜೆಡಿಎಸ್ ಬೆಂಬಲಿತ ಸದಸ್ಯರಿಗೆ ಸೋಲಾಗಿದೆ.
ಒಟ್ಟು 21 ಸದಸ್ಯ ಬಲದ ಗ್ರಾಮ ಪಂಚಾಯತಿ ಯಲ್ಲಿ ಬಿಜೆಪಿ ಬೆಂಬಲಿತ ಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಬಿಜೆಪಿ ಕೈಯಿಂದ ಅಧಿಕಾರ ಕಸಿಯಲು ಯತ್ನಿಸಿದ್ದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಅವರೀಗ ಮುಖಭಂಗ ಅನುಭವಿಸುವಂತಾಗಿದೆ.
ಬಿಜೆಪಿ ಯನ್ನು ಅಧಿಕಾರದಿಂದ ಕೆಳಗಿಳಿಸಲು ಜೆಡಿಎಸ್ ಮಾಡಿದ ತಂತ್ರಕ್ಕೆ ಮನ್ನಣೆ ಸಿಗಲಿಲ್ಲ.
ಅಭಿವೃದ್ಧಿಗೆ ಸಂದ ಜಯ ಇದಾಗಿದೆ. ಬರದಲ್ಲಿ ಬೇಯುತ್ತಿದ್ದ ಕಣಕುಪ್ಪೆ ಕೆರೆಗೆ ಹೇಮಾವತಿ ನೀರನ್ನು ಹರಿಸಿದೆ. ಅಭಿವೃದ್ಧಿಯನ್ನು ಅಲ್ಲಿನ ಸದಸ್ಯರು ಬೆಂಬಲಿಸಿದ್ದಾರೆ. ಇಡೀ ಕಣಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಹೆಂಡ, ಹಣಕ್ಕೆ ಜನರು ಬೆಲೆ ಕೊಡುವುದಿಲ್ಲ ಎಂಬುದನ್ನು ಅವಿಶ್ವಾಸ ಸೋಲಿಸುವ ಮೂಲಕ ನೀಡಿದ್ದಾರೆ ಎಂದು ಮಾಜಿ ಶಾಸಕ ಬಿ.ಸುರೇಶಗೌಡರು ತಿಳಿಸಿದ್ದಾರೆ.

(Visited 1 times, 1 visits today)