ತುಮಕೂರು


ಕುವೆಂಪುರವರ ವೈಚಾರಿಕತೆ ಮತ್ತು ಸಂದೇಶವನ್ನು ಎಲ್ಲೆಡೆ ನಾಟಕಗಳ ಮೂಲಕ ಸಾರುವುದು ಸುಲಭದ ಮಾತಲ್ಲ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು ಹೇಳಿದರು.
ನಗರದ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ರಂಗಕಹಳೆ, ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕುವೆಂಪುರವರ ಜನ್ಮದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 21ನೇ ಕುವೆಂಪು ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕುವೆಂಪು ಅವರ ಸಂದೇಶವನ್ನೊಳಗೊಂಡ ನಾಟಕವನ್ನು ಜನಭರಿತವಾಗಿ ಎಲ್ಲಾ ಜಿಲ್ಲೆಗಳಲ್ಲಿ ಹಮ್ಮಿಕೊಂಡು ಯಶಸ್ವಿಯಾಗಿ ಆಯೋಜಿಸಿದ ರಂಗಕಹಳೆ ಸಂಸ್ಥೆಯ ಸಂಚಾಲಕ ಓಹಿಲೇಶ ಲಕ್ಷ್ಮಣ ಕಾರ್ಯ ಶ್ಲಾಘನೀಯ ಎಂದರು.
ಹಿರಿಯ ಸಂಸ್ಕೃತಿ ಚಿಂತಕ ಡಾ. ನಟರಾಜ್ ಬೂದಾಳ್ ಮಾತನಾಡಿದರು.
ಪ್ರಗತಿಪರ ಚಿಂತಕ ಕೆ. ದೊರೈರಾಜ್ ಮಾತನಾಡಿ, ಮನಸ್ಸಿನ ಅಂತರಾಳದಲ್ಲಿ ಹೊಕ್ಕ ಕುವೆಂಪುರವರ ತತ್ವ ಹಾಗೂ ಅವರ ಪ್ರಕೃತಿಯ ಕಾಳಜಿ ಮತ್ತು ವೈಚಾರಿಕತೆ ಎಂದೆಂದಿಗೂ ಮುಂದಿನ ಪೀಳಿಗೆಗೆ ಪ್ರಸ್ತುತ. ಪ್ರತಿದಿನ ನಾನು ನಾಟಕ ವೀಕ್ಷಿಸಿದ್ದೇನೆ. ಕುವೆಂಪುರವರ ನಾಟಕಗಳು ಮನಃಕದಡಿದೆ. ಒಂದೊಂದು ನಾಟಕವೂ ವಿಭಿನ್ನ ಮತ್ತು ಮಕ್ಕಳು ನೋಡಲೇಬೇಕಾದ ನಾಟಕ. ಇದರಿಂದ ಮುಂದಿನ ಸಮಾಜ ಬದಲಾವಣೆ ಕಾಣುತ್ತದೆ ಎಂದರು.
ಹಿರಿಯ ಪತ್ರಕರ್ತ ಉಗಮ ಶ್ರೀನಿವಾಸ್, ರಂಗಕರ್ಮಿ ಮೆಳೇಹಳ್ಳಿ ದೇವರಾಜ್, ನಾಟಕೋತ್ಸವ ಸಂಚಾಲಕ ಓಹಿಲೇಶ ಲಕ್ಷ್ಮಣ, ಹಿರಿಯ ಕಲಾವಿದರಾದ ಡಾ. ಲಕ್ಷ್ಮಣ್‍ದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ಎಂ. ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)