ಕೊರಟಗೆರೆ:

       ಕೊರೊನಾ ರೋಗ ಹರಡುವಿಕೆ ಭಯದ ನಡುವೆಯು ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಕೊರಟಗೆರೆ ತಾಲೂಕಿನ 2226ಜನ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಅದರಲ್ಲಿ 62ಜನ ವಿದ್ಯಾರ್ಥಿಗಳು ಮತ್ತೊಂದು ಪರೀಕ್ಷಾ ಕೇಂದ್ರ ವರ್ಗಾವಣೆ ಆದರೆ 88ಜನ ವಿದ್ಯಾರ್ಥಿಗಳು ಗೈರುಹಾಜರಾತಿಗೆ ಕಾರಣವೇ ಇಲ್ಲದಾಗಿದೆ.

      ಕೊರಟಗೆರೆ ತಾಲೂಕಿನಲ್ಲಿ ಒಟ್ಟು 12ಪರೀಕ್ಷಾ ಕೇಂದ್ರಗಳಿವೆ. ಪಟ್ಟಣದ ಪದವಿಪೂರ್ವ ಕಾಲೇಜು, ಕಾಳಿದಾಸ ಪ್ರೌಢಶಾಲೆ, ಬಾಲಕಿಯರ ಪ್ರೌಢಶಾಲೆ ಕೋಳಾಲ, ತೀತಾ, ಐ.ಕೆ.ಕಾಲೋನಿ, ಗೋಡ್ರಹಳ್ಳಿ, ಹೊಳವನಹಳ್ಳಿ, ಅಕ್ಕಿರಾಂಪುರ, ಬುಕ್ಕಾಪಟ್ಟಣ, ಮುಗ್ಗೊಂಡನಹಳ್ಳಿ ಮತ್ತು ತೋವಿನಕೆರೆ ಪ್ರೌಢಶಾಲೆಯಲ್ಲಿ 1076ಜನ ವಿದ್ಯಾರ್ಥಿಗಳು ದ್ವಿತೀಯ ಬಾಷೆಯ ಇಂಗ್ಲೀಷ್ ಪರೀಕ್ಷೆ ಬರೆದಿದ್ದಾರೆ.

       ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳುವ 12ಪರೀಕ್ಷಾ ಕೇಂದ್ರಗಳಿಗೆ ಪ್ರತಿನಿತ್ಯ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತೀದೆ. ವಿದ್ಯಾರ್ಥಿಗಳ ಸುಗಮ ಸಂಚಾರಕ್ಕಾಗಿ 4ಹೋಬಳಿಗಳಿಗೆ ಕೆಎಸ್‍ಆರ್‍ಟಿಸಿ ಬಸ್ಸಿನ ಮಾರ್ಗ ಇದೆ. ಖಾಸಗಿ ಶಾಲೆಗಳ ಸಹಬಾಗಿತ್ವದಿಂದ ಶಿಕ್ಷಣಾ ಇಲಾಖೆಯು 12ಮಾರ್ಗದಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳ ಕರೆತರುವ ವ್ಯವಸ್ಥೆ ಮಾಡಿದ್ದಾರೆ.
ಕೊರಟಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ್ ಮಾತನಾಡಿ ಪುಟ 2 ಕ್ಕೆ

(Visited 6 times, 1 visits today)