ತುಮಕೂರು:

      ತುಮಕೂರು ನಗರದ ಭಾರತಿನಗರದ ವಾಸಿ ನರಸಿಂಹಮೂರ್ತಿ ಎನ್ನುವವರ ಮೇಲೆ ಹಲ್ಲೆಯಾಗಿದ್ದು, ಯಾವುದೆ ರೀತಿಯ ಪ್ರಾಣಾಪಾಯವಿರುವುದಿಲ್ಲ ಎಂದು ತಿಳಿದುಬಂದಿದೆ.

      ಹಲ್ಲೆಗೊಳಗಾದ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೊಳಗಾದ ನರಸಿಂಹ ಮೂರ್ತಿ ರವರು ಚಿಕ್ಕಪೇಟೆಯ ಬ್ರಾಹ್ಮಣರ ಬೀದಿಯಲ್ಲಿರುವ ರತ್ನಮ್ಮನವರ ಮನೆಯ ಒಳಗಿನಿಂದ ಆಚೆ ಬರುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ಅಪರಿಚಿತ ವ್ಯಕ್ತಿಗಳು ಮನೆಯ ಮುಂಬಾಗದಲ್ಲಿಯೇ ಹಲ್ಲೆ ಮಾಡಿರುವುದಾಗಿ ತಿಳಿದುಬಂದಿದೆ.

      ಹಲ್ಲೆಗೊಳಗಾಗಿರುವ ನರಸಿಂಹ ಮೂರ್ತಿ ಮತ್ತು ಆತನ ಮಕ್ಕಳಿಬ್ಬರ ಮೇಲೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಮಕ್ಕಳನ್ನ ಹತ್ಯೆಗೈಯಲು 15 ದಿನದ ಹಿಂದೆ ಪುಂಡರ ಗುಂಪು ಪ್ರಯತ್ನ ನಡೆಸಿತ್ತು ಅವರ ಪ್ರಯತ್ನ ವಿಫಲವಾಗಿತ್ತು ಎನ್ನಲಾಗಿದೆ. ಮಕ್ಕಳಿಬ್ಬರು ಸದರಿ ಪ್ರಕರಣದಲ್ಲಿ ಜೈಲುಸೇರಿದ್ದರು. ಇವರು ಮತ್ತು ಇವರ ಕುಟುಂಬಕ್ಕೆ ಹಗೆತನ ಅತ್ಯಧಿಕವಾಗಿತ್ತು ಎನ್ನಲಾಗುತ್ತಿದೆ
ಹಲ್ಲೆಯ ಸಂಬಂಧ ಜಿಲ್ಲಾ ಆಸ್ಪತ್ರೆಗೆ ಅಡಿಷನಲ್ ಎಸ್ಪಿ ಟಿ ಉದೇಶ್, ಡಿವೈಎಸ್ಪಿ ತಿಪ್ಪೆಸ್ವಾಮಿಬೇಟಿ ಮಾಡಿ ವಿವರಣೆ ಪಡೆದಿರುತ್ತಾರೆ.

      ಇನ್ಸ್ಪೆಕ್ಟರ್ ನವೀನ್ ನಿರ್ದೇಶನದ ಮೇರೆಗೆ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪಿಎಸೈ ಮಂಜುನಾಥ್ ಪ್ರಕರಣ ದಾಖಲು ಮಾಡಿದ್ದು ಹಲ್ಲೆಕೋರರ ಬಂಧನಕ್ಕೆ ತೀವ್ರ ಶೋಧ ನಡೆಯುತ್ತಿದೆ ಎನ್ನಲಾಗಿದೆ.

 

(Visited 10 times, 1 visits today)