ಕೊರಟಗೆರೆ


ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ರಾಸುಗಳ ಜಾತ್ರೆಗೆ ರಾಜ್ಯದ ಮೂಲೆಮೂಲೆಯಿಂದ ಆಗಮಿಸಿದ ರೈತರು, ೮ ವರ್ಷಗಳ ನಂತರ ಮತ್ತೆ ರಾಸುಗಳ ಜಾತ್ರೆಗೆ ಅದ್ದೂರಿಯಾಗಿ ಪ್ರಾರಂಭವಾಗಿ ಭರ್ಜರಿಯಾಗಿ ವ್ಯಾಪಾರ ವಹಿವಾಟು ನಡೆಯುತ್ತಿದೆ.
ದಕ್ಷಿಣ ಭಾರತದ ಐತಿಹಾಸಿಕ ಕಮನೀಕ್ಷೇತ್ರ ಎಂದೇ ಪ್ರಸಿದ್ದಿ ಪಡೆದಿರುವ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಅವರಣದಲ್ಲಿ ಪ್ರತಿವರ್ಷದಂತೆ ಸಂಕ್ರಾAತಿ ಹಬ್ಬದ ಮಾರನೇ ದಿನದಿಂದ ರಾಸುಗಳ ಜಾತ್ರೆ ಪ್ರಾರಂಭವಾಗಿದ್ದು ರಾಸುಗಳನ್ನ ಕೊಳ್ಳಲು ಮಾರಲು ರಾಜ್ಯದ ಮೂಲೆ ಮೂಲೆಯಿಂದ ರೈತರು ಆಗಮಿಸಿ ಭರ್ಜರಿ ವಹಿವಾಟು ನಡೆಸುತ್ತಿದ್ದಾರೆ.
ಕಳೆದ ಎರಡು ಮೂರು ವರ್ಷಗಳಿಂದ ಕರೋನಾ ಹಾಗೂ ಕಾಳು ಬಾಯಿ ರೋಗದಿಂದ ಜಾತ್ರೆ ರಾಸುಗಳು ಬಾರದೆ ನೀರಸ ಪ್ರತಿಕ್ರಯೆ ವ್ಯಕ್ತವಾಗುತ್ತಿತ್ತು. ಅದರೆ ಈ ಬಾರಿ ಯಾವುದೆ ಅಂತಹ ತೊಂದರೆ ಇಲ್ಲದೆ ಇರುವ ಕಾರಣ ಜಾತ್ರೆ ಸುಗಮವಾಗಿ ನಡೆಯುತ್ತಿದೆ. ರಾಸುಗಳ ಜಾತ್ರೆಗೆ ೫೦ ಸಾವಿರದಿಂದ ೫ ಲಕ್ಷದವರೆಗೂ ವಿವಿಧ ತಳಿಯ ರಾಸುಗಳು ಆಗಮಿಸಿದ್ದು ವಿಶೇಷವಾಗಿದೆ.
ರಾಸುಗಳ ಜಾತ್ರೆಗೆ ವಿವಿಧ ತಳಿ ಆಗಮನ;
ಸಂಕ್ರಾAತಿ ಹಬ್ಬದಿಂದ ೮ ದಿನಗಳ ಕಾಲ ನಡೆಯುವ ರಾಸುಗಳ ಜಾತ್ರೆಗೆ ಹಳ್ಳಿಕಾರ್ ತಳಿ, ಅಮೃತಮಹಲ್, ಹಳ್ಳಿ, ರಾಣಿ, ಬಳಿ, ಕಪ್ಪು, ರೂಪಾಯಿ ಬಣ್ಣದ ಎತ್ತುಗಳು ಮಾರಾಟಕ್ಕೆ ಬೇಡಿಕೆಯಾಗಿದೆ. ಅತಿಹೆಚ್ಚು ಅಪ್ಪಟ ನಾಟಿ ಹಸುಗಳು, ಹಾಲು ಕೊಡುವ ಹಸು, ಹಾಗೂ ಹೊಲ ಉಳುವ ಎತ್ತುಗಳು ಹೆಚ್ಚು ಬೇಡಿಕೆಯ ರಾಸುಗಳಾಗಿ ಮಾರಾಟವಾಗುತ್ತಿವೆ ಎನ್ನಲಾಗುತ್ತಿದೆ.
ಫೆ.೧೬ರಂದು ಬ್ರಹ್ಮ ರಥೋತ್ಸವ:
ಸಂಕ್ರಾAತಿ ಹಬ್ಬದ ಮಾರನೇ ದಿನ ಪ್ರಾರಂಭವಾಗುವ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ರಾಸುಗಳ ಜಾತ್ರೆ ಪ್ರಾರಂಭ. ಫೆ.೧೪ ರಿಂದ ಫೆ.೨೫ರವರೆಗೂ ಸ್ವಾಮಿಗೆ ವಿಶೇಷ ಹೋಮ ಹವನ ಪೂಜೆಗಳು ನಡೆಯಲಿದ್ದು, ಫೆ.೧೬ರ ಶುಕ್ರವಾರ ಬ್ರಹ್ಮ ರಥೋತ್ಸವ ಜರುಗಲಿದೆ. ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಆಂಜನೇಯಸ್ವಾಮಿ ಭಕ್ತರು ಆಗಮಿಸಲಿದ್ದಾರೆ.

(Visited 1 times, 1 visits today)