ಎಚ್.ಬಿ.ಕಿರಣ್ ಕುಮಾರ್
ಹುಳಿಯಾರು:


ಯಾವ ಕ್ಷಣದಲ್ಲಿ ಬೇಕಾದರೂ ಕುಸಿದು ಬೀಳುವ ಕಟ್ಟಡದಲ್ಲಿ ಕಂದಮ್ಮಗಳ ಆಟ, ಪಾಠ, ಊಟ ನಡೆಯುತ್ತಿದೆ. ಸಂಪೂರ್ಣ ಶಿಥಿಲಾವಸ್ಥೆಯ ಕಟ್ಟಡ ಎಂಬ ಅರಿವಿದ್ದರೂ ಸಹ ಅದರಲ್ಲಿಯೇ ಅಂಗನವಾಡಿ ಕೇಂದ್ರ ನಡೆಸುವ ಮೂಲಕ ಮುಗ್ಧ ಮಕ್ಕಳ ಜೀವದ ಜೊತೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ.
ಹೌದು, ಇದು ಹುಳಿಯಾರು ಪಟ್ಟಣದ ಎ ಕೇಂದ್ರದ ಅಂಗನವಾಡಿ ಕಟ್ಟಡದ ದುಸ್ತಿತಿ. ೧೯೫೯ ರಲ್ಲಿ ಮೈಸೂರು ಸಂಸ್ಥಾನದ ನ್ಯಾಯಂಗ, ಕಾರ್ಮೀಕ ಮತ್ತು ಸ್ಥಳೀಯ ಸಂಸ್ಥೆಗಳ ಸಚಿವರಾದ ಸುಬ್ರಹ್ಮಣ್ಯ ಅವರು ಉದ್ಘಾಟಿಸಿದ ಶಿಶುವಿಹಾರದ ಕಟ್ಟಡದಲ್ಲಿ ೧೯೮೯ ರಿಂದ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಆದರೆ ಈಗ ಈ ಕಟ್ಟಡ ಸಂಪೂರ್ಣ ಹಾಳಾಗಿದ್ದು ದುರಸ್ಥಿ ಮಾಡಿಸುವುದಕ್ಕಿಂದ ಕೆಡುವುದೆ ಲೇಸು ಎನ್ನುವಂತಿದೆ.
ಕೇAದ್ರದ ಸುತ್ತ ಬಿರುಕು ಬಿಟ್ಟ ಗೋಡೆಗಳು, ಹೆಂಚುಗಳು ಮುರಿದಿವೆ, ತೀರುಗಳು ಗೆದ್ದಲು ಹಿಡಿದಿವೆ. ಪರಿಣಾಮ ಮಳೆ ಬಂದರೆ ಕಟ್ಟಡದ ತುಂಬೆಲ್ಲಾ ನೀರು ತುಂಬುತ್ತದೆ. ಗಾಳಿ ಬಂದರೆ ತುಂಡಾಗಿರುವ ಹೆಂಚುಗಳು ತಲೆ ಮೇಲೆ ಬೀಳುತ್ತವೆ. ಭಾರಿ ಮಳೆಗಾಳಿ ಬಂದರೆ ಗೋಡೆಗಳೇ ಕುಸಿಯುತ್ತವೆ. ಹೀಗೆ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲವಾಗಿದೆ. ಆದರೂ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅದರಡಿಯೇ ಪುಟಾಣಿಗಳು ಅಕ್ಷರಾಭ್ಯಾಸ ಮಾಡುವಂತಾಗಿದೆ. ಊಟದ ನಂತರ ಮಕ್ಕಳನ್ನು ಮಲಗಳು ಚಾಪೆ ಹಾಕಿ ಹೊರಗಡೆ ಮಲಗಿಸುವ ಪರಿಸ್ಥಿತಿ ಕೇಂದ್ರದಲ್ಲಿದೆ ಎಂದು ಮಕ್ಕಳ ಪೋಷಕರು ದೂರುತ್ತಾರೆ.
ಅಲ್ಲದೇ, ದಾಸ್ತಾನಿರುವ ಆಹಾರ ಪದಾರ್ಥಗಳ ಚೀಲದ ಮೇಲೂ ಮಳೆ ನೀರು ಸೋರುತ್ತಿದ್ದು, ಅದನ್ನು ಸುರಕ್ಷಿತವಾಗಿಡುವುದೇ ಕಷ್ಟವಾಗಿದೆ. ಅಡುಗೆ ಮಾಡುವಾಗ ಗಾಳಿ ಬಂದರAತೂ ಹೊಡೆದಿರುವ ಹೆಂಚಿನ ಸಂದಿಯಿAದ ಉದುರುವ ಮರದ ಎಲೆಗಳನ್ನು ಪಾತ್ರೆಯಲ್ಲಿ ಬೀಳದಂತೆ ಕಾಪಾಡುವುದು ಸವಾಲಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಆಟ – ಪಾಠ ಕಲಿಕೆಯ ಪುಟ್ಟಮಕ್ಕಳ ಜೊತೆ ಕಾರ್ಯಕರ್ತೆ ಹಾಗೂ ಅಡುಗೆಯವರಿಗೆ ಅಭದ್ರತೆ ಕಾಡುತ್ತಿದೆ. ಇದು ಅಧಿಕಾರಿಗಳ, ಜನಪ್ರತಿನಿಧಿಗಳ ಕಣ್ಣಿಗೆ ಬಿದ್ದರೂ ಇದರ ನಿರ್ವಹಣೆಯತ್ತ ಆಸಕ್ತಿ ವಹಿಸುತ್ತಿಲ್ಲ ಎಂಬುದು ಸ್ಥಳೀಯರು ಆರೋಪವಾಗಿದೆ.
ಅಂಗನವಾಡಿ ನಡೆಯುತ್ತಿರುವ ಕಟ್ಟಡ ಗ್ರಾಮ ಪಂಚಾಯ್ತಿಗೆ ಸೇರಿದ್ದಾದ್ದರಿಂದ ಮಕ್ಕಳ ಕಲ್ಯಾಣ ಇಲಾಖೆಯಿಂದ ದುರಸ್ತಿಗೆ ಹಣ ಹಾಕಲು ಬರುವುದಿಲ್ಲವೆಂಬುದು ಶಿಶುಅಭಿವೃದ್ಧಿ ಅಧಿಕಾರಿಗಳದ್ದಾಗಿದೆ. ಖಾಸಗಿಯವರ ಕಟ್ಟಡದಲ್ಲಿ ಕೇಂದ್ರ ನಡೆಸಿದರೆ ಬಾಡಿಗೆ ಕೊಡಬೇಕಾಗುತ್ತದೆ. ಆದರೆ ಬಾಡಿಗೆ ಇಲ್ಲದೆ ಉಚಿತವಾಗಿ ಕೇಂದ್ರ ನಡೆಸಲು ಕಟ್ಟಡ ಕೊಟ್ಟಿರುವುದರಿಂದ ಇಲಾಖೆಯವರೆ ದುರಸ್ತಿ ಮಾಡಿಸಿಕೊಳ್ಳಲಿ ಎಂಬುದು ಪಂಚಾಯ್ತಿ ಅಧಿಕಾರಿಗಳದ್ದಾಗಿದೆ.
ಗಂಡ ಹೆಂಡತಿ ಜಗಳ ಕೂಸು ಬಡವಾಯ್ತು ಎನ್ನುವಂತೆ ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪಂಚಾಯ್ತಿಯ ಜಗಳದಿಂದ ಅಂಗನವಾಡಿ ಕೇಂದ್ರ ಸಂಪೂರ್ಣ ಶಿಥಿಲವಾಗಿದೆ. ಇಂದು-ನಾಳೆ ಬೀಳುವಂತಹ ಸ್ಥಿತಿಯಲ್ಲಿದ್ದು, ಮಕ್ಕಳು ಭಯದಲ್ಲೇ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ಅಂಗನವಾಡಿಯು ಸಂಪೂರ್ಣ ಹಳೆಯದಾಗಿದ್ದು ಹೊಸ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಿ ಅಲಿಯವರೆವಿಗೂ ಬಾಡಿಗೆ ಪಡೆದು ಕೇಂದ್ರ ನಡೆಸಿ ಎಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಪೋಷಕರು ಹೇಳುತ್ತಾರೆ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ತಕ್ಷಣ ಕಟ್ಟಡ ಬದಲಾಯಿಸಿ ಪುಟ್ಟಾಣಿಗಳನ್ನು ಪ್ರಾಣಭಯದಿಂದ ಪಾರು ಮಾಡಬೇಕಿದೆ.

(Visited 1 times, 1 visits today)