ತುಮಕೂರು

ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗುವುದು ವಿದ್ಯಾರ್ಜನೆಯ ಜೊತೆಗೆ ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆಗಳು ಮೇಳೈಸಿದಾಗಲೇ ಎಂಬುದು ಸರ್ವವಿದಿತ. ಜನ್ಮತಃ ಪ್ರತಿಯೊಂದು ಮಗುವೂ ಪ್ರತಿಭಾಶಾಲಿಯೇ. ಅವರಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಬೇಕಾದ ಮೆರುಗು ನೀಡಿ, ಸೂಕ್ತ ಅವಕಾಶಗಳನ್ನು ಒದಗಿಸಿದರೆ ಶಿಕ್ಷಣದ ಅರ್ಥವೂ ಪರಿಪೂರ್ಣವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕಪಟ್ಟಿಯಲ್ಲಿನ ಅತ್ಯುನ್ನತ ಶ್ರೇಣಿಯೊಂದೇ ಮಕ್ಕಳ ನಿಜವಾದ ಸಾಮರ್ಥ್ಯವನ್ನು ಬಿಂಬಿಸಲಾಗದು. ಅದರೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿನ ಅವರ ತೊಡಗಿಸಿಕೊಳ್ಳುವಿಕೆಯು ಬದುಕಿನ ಹಲವು ಮಜಲುಗಳನ್ನು ಗೆಲ್ಲಲು ಬೇಕಾದ ಆತ್ಮಸ್ಥೆöÊರ್ಯವನ್ನು ಅವರಲ್ಲಿ ತುಂಬುತ್ತದೆ.

ಈ ನಿಟ್ಟಿನಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಹೆಸರು ಮಾಡಿರುವ ವಿದ್ಯಾನಿಧಿ ಪದವಿಪೂರ್ವ ಕಾಲೇಜು ಡಿಸೆಂಬರ್ ೧೫ರಂದು ವೈಭವದ ಸಾಂಸ್ಕೃತಿಕ ಉತ್ಸವ ಅಮೇಜ್- ೨೦೨೩ನ್ನು ಹಮ್ಮಿಕೊಂಡಿದೆ. ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಂಜೆ ನಾಲ್ಕು ಗಂಟೆಗೆ ಅಮೇಜ್-೨೦೨೩ ಉದ್ಘಾಟನೆಗೊಳ್ಳುವುದಕ್ಕಿದೆ. ನಿವೃತ್ತ ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕರಾದ ಭಾಸ್ಕರ್ ರಾವ್, ಐಪಿಎಸ್., ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್, ತುಮಕೂರಿನ ಸೂಪರ್‌ಇಂಟೆAಡೆAಟ್ ಆಫ್ ಪೋಲೀಸ್ ಅಶೋಕ್ ಕೆ.ವಿ. ಐಪಿಎಸ್., ಬೆಂಗಳೂರಿನ ಆಕ್ಸ್ಫರ್ಡ್ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಆರ್. ಸುಪ್ರೀತ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಬಿ. ಜಯಣ್ಣನವರ ಗೌರವ ಉಪಸ್ಥಿತಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಲಿದೆ. ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಅಧ್ಯಕ್ಷೀಯ ನುಡಿಗಳನ್ನಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ವಿ-ಟೆಕ್ನೋ ನೀಟ್ ಅಕಾಡೆಮಿ ಶುಭಾರಂಭಗೊಳ್ಳಲಿದೆ.

ಔಪಚಾರಿಕ ಸಮಾರಂಭದ ನಂತರ ನಡೆಯಲಿರುವ ಸಾಂಸ್ಕೃತಿಕ ವೈಭವದಲ್ಲಿ ಭರತನಾಟ್ಯ, ಯಕ್ಷಗಾನ ನೃತ್ಯ, ಛತ್ರಪತಿ ಶಿವಾಜಿ, ಹನುಮಾನ್ ಚಾಲಿಸಾ, ರಾಮಾಯಣ, ಸೈನಿಕರಿಗೆ ನಮನ, ಕರ್ನಾಟಕ ಪೋಲೀಸ್, ಕೇರಳ, ರಾಜಸ್ಥಾನ, ಗುಜರಾತಿ, ಮರಾಠಿ ವಿಶೇಷ ನೃತ್ಯಗಳು, ನವಿಲನೃತ್ಯ, ನವದುರ್ಗಾ, ಕಂಸಾಳೆ, ನಮ್ಮ ತುಮಕೂರು-ನಮ್ಮ ಹೆಮ್ಮೆ, ಪ್ರೆöÊಡ್ ಇಂಡಿಯಾ, ಮೈಮ್ ಶೋ, ದೇಶಪ್ರೇಮದ ಪಿರಮಿಡ್, ಕನ್ನಡದ ವೈಭವ, ಶಿವ ತಾಂಡವ, ಅಘೋರಿ, ಒರಿಜಿನಲ್ ಗ್ಯಾಂಗ್‌ಸ್ಟರ್, ಹುಲಿಕುಣಿತ, ಹೆತ್ತವರು-ಮಕ್ಕಳ ಭಾವನಾತ್ಮಕ ಬಂಧವನ್ನು ಒಳಗೊಂಡAತೆ ಅರುವತ್ತಕ್ಕೂ ಹೆಚ್ಚಿನ ನೃತ್ಯ ವೈವಿಧ್ಯಗಳು ಪ್ರೇಕ್ಷಕರನ್ನು ರಂಜಿಸಲಿವೆ. ಕಾಲೇಜು ವಿದ್ಯಾರ್ಥಿಗಳ ಮ್ಯೂಸಿಕ್ ಬ್ಯಾಂಡ್ ಕುತೂಹಲ ಅರಳಿಸಿದೆ.

‘ನಮ್ಮ ವಿದ್ಯಾರ್ಥಿಗಳು ಅತ್ಯಂತ ಸಂಭ್ರಮದಿAದ ಅಮೇಜ್-೨೦೨೩ಕ್ಕೆ ಸಜ್ಜಾಗಿದ್ದಾರೆ. ಕಡಿಮೆ ಅವಧಿಯಲ್ಲಿಯೂ ಪಠ್ಯ, ಪರೀಕ್ಷೆಗಳ ಜೊತೆಜೊತೆಗೆ ಶ್ರದ್ಧೆಯಿಂದ ನೃತ್ಯಗಳನ್ನು ಕಲಿತು ಸಿದ್ಧರಾಗಿದ್ದಾರೆ. ಇದೊಂದು ಬಗೆಯಲ್ಲಿ ಮಕ್ಕಳಿಗೆ ಒತ್ತಡ ನಿವಾರಣಾ ಚಟುವಟಿಕೆಯೂ ಹೌದು. ಇದು ಅವರ ಕಲಿಕೆಗೆ ಉತ್ತೇಜನಕಾರಿಯಾಗಲಿ ಎಂಬ ಸದುದ್ದೇಶದಿಂದ ವೈಭವೋಪೇತವಾಗಿ ಸಿದ್ಧತೆ ಮಾಡಿಕೊಂಡಿದ್ದೇವೆ. ಬಹಳ ನಿರೀಕ್ಷೆಯಿದೆ.’- ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಹೇಳಿದ್ದಾರೆ.

‘ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವದ ಗುಣವಿದೆ. ತಂತ್ರಜ್ಞಾನಗಳ ಬಳಕೆ, ಸಾಮಾಜಿಕ ಜಾಲತಾಣಗಳ ಸದ್ಬಳಕೆಯನ್ನು ಅವರು ತಿಳಿದಿದ್ದಾರೆ. ಸ್ವತಃ ಉತ್ಸಾಹದಿಂದ ಅಮೇಜ್-೨೦೨೩ ಕುರಿತ ಹಲವು ರೀಲ್ಸ್ಗಳನ್ನು ರೂಪಿಸಿ ಪ್ರಸಾರ ಮಾಡಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ಸಂಯೋಜನೆ ಮಾಡುವಲ್ಲಿ ವಿದ್ಯಾರ್ಥಿಗಳೇ ಮುತುವರ್ಜಿ ವಹಿಸಿದ್ದಾರೆ. ಉಪನ್ಯಾಸಕರ ಸಮರ್ಪಕ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ಅಮೇಜ್-೨೦೨೩ರ ಯಶಸ್ಸಿಗಾಗಿ ಅವಿರತ ಶ್ರಮಿಸುತ್ತಿದ್ದಾರೆ’ ಎಂದು ಪ್ರಾಂಶುಪಾಲ ಸಿದ್ಧೇಶ್ವರಸ್ವಾಮಿ ಎಸ್.ಆರ್. ತಿಳಿಸಿದ್ದಾರೆ.

(Visited 1 times, 1 visits today)