ಮಧುಗಿರಿ:
      ತಾಲೂಕಿನ ಕಸಬಾ ಹೋಬಳಿ ಸಿದ್ದಾಪುರ ಗ್ರಾಮದ ಕೆರೆಯ ಅಭಿವೃದ್ಧಿ ಕೆಲಸದಲ್ಲಿ ಅಕ್ರಮವಾಗಿರುವ ಬಗ್ಗೆ ಸಿದ್ದಾಪುರ ಕೆರೆ ಹಿಂಭಾಗದಲ್ಲಿನ ಅಚ್ಚುಕಟ್ಟುದಾರರು ಪತ್ರಿಕಾ ಹೇಳಿಕೆಯಲ್ಲಿ ಅರೋಪಿಸಿದ್ದಾರೆ.
     ಸಿದ್ದಾಪುರ ಕೆರೆಯನ್ನು ಸುಮಾರು ಹತ್ತು ತಿಂಗಳ ಹಿಂದೆಯ ಬಯಲುಸೀಮೆ ಅಭಿವೃದ್ಧಿ ಮಂಡಳಿ ಅನುದಾನದಿಂದ ಜಂಗಲ್ ಕ್ಲಿಯರ್ ಆಗಿದ್ದು ಪುನಹ ಜಂಗಲ್ ಕ್ಲಿಯರ್ ಮಾಡುವ ಆವಶ್ಯಕತೆ ಏನಿತ್ತು ,  ಸಿದ್ದಾಪುರ ಕೆರೆ ಏರಿಯು ಈ ಹಿಂದೆ ಮಂಗೆ ಬಿದ್ದು ಸುಮಾರು ಅಡಿಕೆ ತೋಟಗಳು ಹಾಳಾಗಿದ್ದು ಇದರಿಂದ ರೈತರಿಗೆ ಸುಮಾರು ನಷ್ಟವಾಗಿರುತ್ತದೆ.ಈ ಮಂಗೆಯನ್ನು ಸರ್ಕಾರದ ಕಡೆಯಿಂದ ಮುಚ್ಚಿ ರಿಪೇರಿ ಮಾಡಿ ಕೊಟ್ಟಿರುತ್ತಾರೆ. ಈ ರಿಪೇರಿ ಆದಂತಹ ಕೆರೆಯ ಏರಿಯ ಮೇಲೆಯ ಹೊಸ ಮಣ್ಣು ಹಾಕದೆ ಅದೇ ಏರಿಯ ಮಣ್ಣನ್ನು ಜೆಸಿಬಿ , ಮತ್ತು ಹಿಟಾಚಿ ಗಳಿಂದ ಕೆದಕಿ ಹೊಸ ಮಣ್ಣನ್ನು ತೋರಿಸಿರುತ್ತಾರೆ. ಇದರಿಂದ ಎರಿಯ ಕಟ್ಟಡ ಸಡಿಲವಾಗಿರುತ್ತದೆ.
      ಸಿದ್ದಾಪುರ ಗ್ರಾಮದ ರೈತರು ತಮ್ಮ ತೋಟಗಳಿಗೆ ಹಾಗು ಹೊಲ ಗಳಿಗೆ ಒಡೆದು ಕೊಂಡಿರುವ ಮಣ್ಣಿನ ಗುಂಡಿಗಳನ್ನು ಪುನಹ ಇವರು ಸಾಕ್ಷಿ ಗುಡ್ಡೆಗಳಾಗಿ ನಿರ್ಮಿಸಿ ತೋರಿಸಲು ಇರಿಸಿ  ತಮ್ಮ ಕೆಲಸವನ್ನು ಮುಗಿಸಿಕೊಂಡು ಈ ಕೆರೆ ಏರಿಗೆ ಯಾವುದೇ ಹೊಸ ಮಣ್ಣು ಹಾಕದೆ ತಮ್ಮ ಕೆಲಸವನ್ನು ಮುಗಿಸಿದ್ದಾರೆ.ಇದರಿಂದ ಈ ಮಳೆಗಾಲದಲ್ಲಿ ಕೆರೆ ತುಂಬಿದರೆ ಈ ಕೆರೆ ಏರಿಗೆ ಅಪಾಯ ಕಟ್ಟಿಟ್ಟ ಬುತ್ತಿ ತಪ್ಪಿದಲ್ಲ ,ಈ ತರಹ ಎನಾದರು ತೊಂದರೆ ಸಂಭವಿಸಿದರೆ ಈ ಕೆರೆಯ ಮುಂಭಾಗದಲ್ಲಿರುವ ನೂರಾರು ಎಕರೆ ಅಡಿಕೆ ತೋಟ ಹಾಗು ತೆಂಗಿನ ತೋಟಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಕೊಂಡು ಹೋಗುತ್ತದೆ.
      ಇದರ ಪರಿಣಾಮದಿಂದ ಗ್ರಾಮದ ರೈತರು ವಿಷ ಕುಡಿದು ಸಾಯುವ ಪರಿಸ್ಥಿತಿ ನಿರ್ಮಣಾವಾಗುತ್ತದೆ. ಆದ್ದರಿಂದ ತಾವುಗಳು ಈ ಕೆಲಸವನ್ನು ವೀಕ್ಷಿಸಿ , ಮತ್ತು ಪರೀಕ್ಷಿಸಿ ಕೆಲಸ ಸಮರ್ಪಕವಾಗಿ ಇದೆ ಎಂದು ತೀರ್ಮಾನಕ್ಕೆ ಬಂದ ನಂತರವಷ್ಟೇ ಗುತ್ತಿಗೆದಾರನಿಗೆ ಬಿಲ್ ಪಾವತಿಸಬೇಕೆಂದು ಮನವಿ ಮಾಡಿಕೊಳ್ಳುತ್ತವೆ. ಹಾಗೂ ಇದೆ ಕೆರೆಯನ್ನು ನಂಬಿ ಬದುಕುತ್ತಿರುವ ಊರಿನ ರೈತರಿಗೆ ಆನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ಪ್ರಾರ್ಥಿಸಿ ಕೊಳ್ಳುತ್ತೇವೆಂದು ತುಮಕೂರಿನ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಕಾರ್ಯಪಾಲಕ ಇಂಜಿನೀಯರ್ ಗೆ,ಮಧುಗಿರಿ ಉಪವಿಭಾಗ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು,ತುಮಕೂರು ಸಂಸದರು ಮತ್ತು ಜಿಲ್ಲಾಧಿಕಾರಿ ಗಳಿಗೆ ಮನವಿ ಮಾಡಿದ್ದಾರೆ.
      ಕಸಭಾ ವಿಎಸ್ಎಸ್ಎನ್ ನ ಅಧ್ಯಕ್ಷ ಸಿದ್ದಾಪುರ ವೀರಣ್ಣ, ಅಚ್ಚುಕಟ್ಟು ದಾರರಾದ ಮಂಜುನಾಥ್,ಚಿನ್ನವೆಂಕಟಪ್ಪ,ಹನುಮಂತರಾಯಪ್ಪ,ನಾಗೇಂದ್ರಪ್ಪ,ಗ್ರಾ.ಪಂ.ಸದಸ್ಯರು ಗಳಾದ ಅಂಜನಮೂರ್ತಿ,ರಂಗಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
(Visited 23 times, 1 visits today)