ತುಮಕೂರು :

     ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ನೀಡಲು ಹೆಚ್ಚು ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿಯಲ್ಲಿಂದು ಎಸ್‍ಬಿಐ ಪ್ರಾಯೋಜಿಸಲ್ಪಟ್ಟ ಗ್ರಾಮೀಣ ಅಭಿವೃದ್ಧಿ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ನಡೆದ ಲೋಕಲ್ ಅಡ್ವೈಸರಿ ಕಮಿಟಿ ಮೀಟಿಂಗ್‍ನ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ವಿವಿಧ ವಾಹನಗಳಿಗೆ ಮಹಿಳಾ ಚಾಲಕಿಯರನ್ನು ನೇಮಿಸುವ ಸಲುವಾಗಿ ಜಿಲ್ಲಾ ಪಂಚಾಯತ್‍ನಿಂದ ಮಹಿಳಾ ಅಭ್ಯರ್ಥಿಗಳನ್ನು ಗುರುತಿಸಲಾಗಿದೆ. ಈ ಅಭ್ಯರ್ಥಿಗಳಿಗೆ ಸೂಕ್ತ ಚಾಲನಾ ತರಬೇತಿ ನೀಡಬೇಕು ಎಂದು ನಿರ್zೀಶಿಸಿದರು.
ತರಬೇತಿ ಸಂಸ್ಥೆಯಿಂದ ಕೌಶಲ್ಯ ಪಡೆದ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ಜೊತೆಗೆ ಮಾರುಕಟ್ಟೆ, ಬ್ರಾಂಡಿಂಗ್ ಮತ್ತು ಲೇಬಲಿಂಗ್ ಕೌಶಲ್ಯತೆಯ ಬಗ್ಗೆಯೂ ತರಬೇತಿ ನೀಡಬೇಕು. ತರಬೇತಿ ಪಡೆದ ಬಳಿಕ ಅವರು ಸ್ವಯಂ ಉದ್ಯೋಗ ಕಟ್ಟಿಕೊಳ್ಳಲು ಸಾಧ್ಯವಾದಷ್ಟು ಸಹಕಾರ ನೀಡಬೇಕು. ತರಬೇತಿ ಪಡೆದ ಬಳಿಕ ಅವರು ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆಂಬುದನ್ನೂ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಶಾಲಾ-ಕಾಲೇಜು ಬಿಟ್ಟಿರುವವರಿಗೆ ತರಬೇತಿ ನೀಡಲು ಹೆಚ್ಚು ಒತ್ತು ಕೊಡಬೇಕು. ದಾಖಲಾತಿಗಳನ್ನು ಸಮರ್ಪಕವಾಗಿ ಪರಿಶೀಲನೆ ನಡೆಸಿ ಬಳಿಕ ತರಬೇತಿ ನೀಡಬೇಕು. ಅನರ್ಹ ಫಲಾನುಭವಿಗಳಿಗೆ ತರಬೇತಿ ನೀಡಬಾರದು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಎಲ್‍ಡಿಎಂ ಬಿ.ಡಿ. ಯಲ್ಲೂರ್‍ಕರ್, ಎಸ್‍ಬಿಐ ಆರ್‍ಎಸ್‍ಇಟಿಐ ನಿರ್ದೇಶಕ ರಾಮಚಂದ್ರಪ್ಪ, ನಬಾರ್ಡ್ ಡಿಎಂ ಕೀರ್ತಿ ಪ್ರಭಾ, ಜಿಲ್ಲಾ ಉದ್ಯೋಗಾಧಿಕಾರಿ ಎಸ್. ಕವಿತಾ ಶ್ರೀನಿವಾಸ್, ಪ್ರಾಜೆಕ್ಟ್ ಮ್ಯಾನೇಜರ್ ಅಶೋಕ್ ಎಂ.ಪಿ. ಸೇರಿದಂತೆ ತೇಜಸ್ವಿನಿ, ಅಶೋಕ್, ರಮ್ಯಾ ಇತರರು ಉಪಸ್ಥಿತರಿದ್ದರು.

 

(Visited 9 times, 1 visits today)