ಸಿದ್ದಗಂಗಾ ಶ್ರೀಗಳ ಶಸ್ತ್ರಚಿಕಿತ್ಸೆ ಯಶಸ್ವಿ

ಚೆನ್ನೈ:        ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಪ್ರತಿಷ್ಠಿತ ರೇಲಾ ಆಸ್ಪತ್ರೆಗೆ ದಾಖಲಾಗಿರುವ ತುಮಕೂರು ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ನಡೆಸಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.        ಚೆನ್ನೈನ ರೇಲಾ ಇನ್ ಸ್ಟಿಟ್ಯೂಟ್ ಅಂಡ್ ಮೆಡಿಕಲ್ ಸೆಂಟರ್ ನ ಪ್ರಖ್ಯಾತ ವೈದ್ಯರಾದ ಮಹಮ್ಮದ್ ರೇಲಾ ಅವರ ನೇತೃತ್ವದಲ್ಲಿ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆದಿದ್ದು, ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಿಜಿಎಸ್ ನ ಡಾ. ರವೀಂದ್ರ ಅವರ ಉಪಸ್ಥಿತಿಯಲ್ಲೇ ಶಸ್ತ್ರಚಿಕಿತ್ಸೆ ನಡೆದಿದೆ.       ಮೇದೋಜೀರಕ ಗ್ರಂಥಿಯಿಂದ ಪಿತ್ತಕೋಶಕ್ಕೆ ಹೋಗಬೇಕಾದ ನೀರಿನ ಅಂಶ ಸರಾಗವಾಗಿ ಹೋಗಲು 11 ಸ್ಟಂಟ್‍ಗಳನ್ನು ಅಳವಡಿಸಲಾಗಿದೆ. ಮೇದೋಜೀರಕ ಗ್ರಂಥಿಯಿಂದ ನೀರಿನ ಅಂಶ ಗಟ್ಟಿಯಾಗಿ ನಿಲ್ಲುತ್ತಿತ್ತು. ಪರಿಣಾಮವಾಗಿ ಈ ಭಾಗದಲ್ಲಿ ಸೋಂಕು ಕಾಣಿಸಿಕೊಂಡಿರು ವುದರಿಂದ ಸಣ್ಣ ಪ್ರಮಾಣದ ಸರ್ಜರಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು.    …

ಮುಂದೆ ಓದಿ...

ಸರ್ಕಾರ ಬೀಳಿಸಲು ಕಾಂಗ್ರೆಸಿಗರಿಂದ ಹುನ್ನಾರ…!

ತುಮಕೂರು:      ಮೈತ್ರಿ ಸರಕಾರದ ಮುಖ್ಯಮಂತ್ರಿ ಸ್ಥಾನದಿಂದ ಕುಮಾರಸ್ವಾಮಿಯನ್ನು ಕೆಳಗಿಳಿಸಲು ಕಾಂಗ್ರೆೆಸ್‌ನ ಮೂವರು ಹಿರಿಯ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂದು ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ  ಆರೋಪಿಸಿದ್ದಾರೆ.       ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೀಘ್ರವೇ ಸಿಎಂ ಗಾದಿಯಿಂದ ಕುಮಾರಸ್ವಾಮಿಯನ್ನು ಕೆಳಗಿಳಿಸಲು ಕಾಂಗ್ರೆೆಸ್‌ನ ಮೂವರು ಮಾಡುತ್ತಿರುವ ಹುನ್ನಾರಕ್ಕೆೆ ಶಾಸಕರು ಕೂಡ ಕೈ ಜೋಡಿಸಿದ್ದಾರೆ ಎಂದು ಹೇಳಿದರು. ಆ ಮೂವರು ಹಿರಿಯ ನಾಯಕರು ಯಾರು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಆಪರೇಷನ್ ಕಮಲ ಎಂಬ ಬೆದರುಬೊಂಬೆ ಇಟ್ಟುಕೊಂಡು ಹುನ್ನಾರ ನಡೆಸುತ್ತಿದ್ದು, ಜೆಡಿಎಸ್ ಮುಖಂಡರನ್ನು ಹೆದರಿಸುತ್ತಿದ್ದಾರೆ. ಮೂವರು ನಾಯಕರಲ್ಲಿ ಒಬ್ಬರು ಸಚಿವರು ಮತ್ತು ಇನ್ನಿಬ್ಬರು ಸಚಿವ ಸ್ಥಾನದ ಆಕಾಂಕ್ಷಿಗಳು ಎಂದರು. ಇವರು ಯಾರು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ವಿಜಯೇಂದ್ರ ತಿಳಿಸಿದರು.

ಮುಂದೆ ಓದಿ...

ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಬ್ರಹ್ಮ ರಥೋತ್ಸವ ಕಾರ್ಯಕ್ರಮ

 ಕೊರಟಗೆರೆ:       ಕರುನಾಡಿನ ಪುಣ್ಯಕ್ಷೇತ್ರ ಶ್ರೀಗೊರವನಹಳ್ಳಿ ಮಹಾಲಕ್ಷ್ಮೀ ದೇವಿಯ ಬ್ರಹ್ಮ ರಥೋತ್ಸವ ಮತ್ತು ಲಕ್ಷ ದಿಪೋತ್ಸವ ಕಾರ್ಯಕ್ರಮ ಕಾರ್ತಿಕ ಮಾಸದ ಕೊನೆಯ ಶುಕ್ರವಾರ ಬಹಳ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.       ಕಲ್ಪತರು ನಾಡು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸುಪ್ರಸಿದ್ದ ಪ್ರವಾಸಿ ಪುಣ್ಯಕ್ಷೇತ್ರ ಆಗಿರುವ ಗೊರವನಹಳ್ಳಿ ಮಹಾಲಕ್ಷ್ಮೀ ಸನ್ನಿದಾನಕ್ಕೆ ಶುಕ್ರವಾರ ಮುಂಜಾನೆಯಿಂದ ರಾತ್ರಿ 8ಗಂಟೆಯ ವರೇಗೂ ಸಾವಿರಾರು ಭಕ್ತಾಧಿಗಳು ಸರದಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆದರು.      ಶುಕ್ರವಾರ ಮುಂಜಾನೆ 8ಗಂಟೆಯಿಂದ ಪ್ರಾರಂಭವಾದ ವಿಶೇಷ ಪೂಜಾ ಕಾರ್ಯಕ್ರಮ, ಪಂಚಾಮೃತ ಅಭಿಷೇಕ, ಹೋಮ, ಹವನ ಹಾಗೂ ಭಕ್ತರಿಂದ ದೇವಾಲಯಕ್ಕೆ ಮತ್ತು ದೇವಿಗೆ ಹೂವಿನ ಅಲಂಕಾರ ಮಾಡಿಸಲಾಗಿತ್ತು. ಮಧ್ಯಾಹ್ನ 1ಗಂಟೆಗೆ ಬ್ರಹ್ಮ ರಥೋತ್ಸವ, ಸಂಜೆ ಲಕ್ಷ ದಿಪೋತ್ಸವ ಕಾರ್ಯಕ್ರಮ ಮತ್ತು ರಾತ್ರಿ 8ಗಂಟೆಗೆ ಮುತ್ತಿನ ಪಲ್ಲಕ್ಕಿ ಕಾರ್ಯಕ್ರಮ…

ಮುಂದೆ ಓದಿ...

ನಾವೂ ರೈತರು ಎಂದು ಹೇಳಿಕೊಳ್ಳಬೇಕು – ಇಲ್ಲದಿದ್ದರೆ ಉಳಿಗಾಲವಿಲ್ಲ :  ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಕಳವಳ

ತುಮಕೂರು:        ದೇಶದಲ್ಲಿರುವ ಎಲ್ಲ ವರ್ಗದ ಜನರೂ ನಾವೆಲ್ಲ ರೈತರು ಎಂದು ಹೇಳಿಕೊಳ್ಳಬೇಕಾದ ಅಗತ್ಯ ಒದಗಿಬಂದಿದೆ. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲವಾಗಿದೆ ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.       ಬಂಡಾಯ ಸಾಹಿತ್ಯ ಸಂಘಟನೆ ಕರ್ನಾಟಕ ವತಿಯಿಂದ ತುಮಕೂರು ನಗರದ ಮಾಕಂ ಕಲ್ಯಾಣ ಮಂದಿರದಲ್ಲಿ ಡಿಸೆಂಬರ್ 8ರಂದು ನಡೆದ ಸಮೂಹ ಮಾಧ್ಯಮ ಮತ್ತು ಬಂಡಾಯ ಪ್ರಜ್ಞೆ ವಿಷಯ ಕುರಿತು ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.      ರೈತ ವರ್ಗವನ್ನು ವಿಸ್ತರಿಸಬೇಕಾಗಿದೆ. ರೈತರು ಎಂಬ ಪದದ ವ್ಯಾಪ್ತಿಯಲ್ಲಿ ಭೂರಹಿತರೈತರು, ಗೇಣಿರೈತರು, ಭೂಮಿ ಇರುವ ರೈತರು, ರೈತ ಮಹಿಳೆಯರು, ಆದಿವಾಸಿ ರೈತರು, ಕೂಲಿ ಮಾಡುವ ರೈತರು ಹೀಗೆ ರೈತರ ನೆಲೆಯನ್ನು ವಿಸ್ತರಿಸುತ್ತ ಹೋಗಬೇಕು. ಆಮೂಲಕ ರೈತರಿಗೆ ಬೆಂಬಲಕ್ಕೆ ನಿಲ್ಲಬೇಕಾಗಿದೆ ಎಂದು ತಿಳಿಸಿದರು.       ವಿದ್ಯಾರ್ಥಿಗಳು ಬರಹಗಾರರು, ವೈದ್ಯರು ಸಾಹಿತಿಗಳ…

ಮುಂದೆ ಓದಿ...

ಕನ್ನಡದಂತಹ ಸುಂದರ ಭಾಷೆ ಮತ್ತೊಂದಿಲ್ಲ – ನಾಡೋಜ ಪಾಟೀಲಪುಟ್ಟಪ್ಪ ನುಡಿ

ತುಮಕೂರು:       ಕನ್ನಡದಂತಹ ಸುಂದರ ಲಿಪಿಯುಳ್ಳ ಭಾಷೆ ಇನ್ನೊಂದಿಲ್ಲ. ಇಂಗ್ಲೀಷ್ ಎಂಬುದು ಕೇವಲ ಮೋಹಕ ಭಾಷೆಯಾಗಿದೆ. ಪ್ರಪಂಚದ ಸುಮಾರು ದೇಶಗಳಲ್ಲಿ ಇಂಗ್ಲಿಷ್ ಎಂಬ ಪದವೇ ತಿಳಿದಿಲ್ಲ. ಇಂಗ್ಲಿಷ್ ಕಲಿತರೆ ಪ್ರಪಂಚದ ಎಲ್ಲಾ ದೇಶಗಳನ್ನು ಸುತ್ತಿಬರಬಹುದು ಎಂಬ ಜನರ ನಂಬಿಕೆ ಸುಳ್ಳು ಎಂದು ನಾಡೋಜ ಪಾಟೀಲ ಪುಟ್ಟಪ್ಪ ಅಭಿಪ್ರಾಯಪಟ್ಟರು.       ನಗರದ ರವೀಂದ್ರ ಕಲಾನಿಕೇತನ ಸಭಾಂಗಣದಲ್ಲಿ ಬಾಪೂಜಿ ವಿದ್ಯಾಸಂಸ್ಥೆ, ಜಿಲ್ಲಾ ಸರ್ವೋದಯ ಮಂಡಲ, ಚಿಕ್ಕನಾಯಕನಹಳ್ಳಿಯ ಶೃಂಗಾರ ಪ್ರಕಾಶನ ಪ್ರತಿಷ್ಠಾನ ವತಿಯಿಂದ ಬಾ,ಬಾಪೂ 150ನೇ ವರ್ಷಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ನನ್ನ ಕನಸಿನ ಭಾರತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾತನಾಡಿದರು.       ಇಂದು ಪ್ರತಿಯೊಬ್ಬರಲ್ಲೂ ಆಂಗ್ಲಭಾಷೆ ಕಲಿಯಬೇಕು. ಅದನ್ನು ಕಲಿತರೆ ಪ್ರಪಂಚದ ಯಾವುದೇ ಮೂಲೆಗೋದರೂ ಜೀವನ ಮಾಡಬಹುದು ಎಂದುಕೊಂಡಿದ್ದಾರೆ. ಅದು ಶುದ್ಧ ಸುಳ್ಳು, ಜಪಾನ್, ಫ್ರಾನ್ಸ್ ನಂತರ ಸುಮಾರು ದೇಶಗಳಲ್ಲಿ…

ಮುಂದೆ ಓದಿ...

ರಾಜ್ಯ ಮಟ್ಟದ ಯುವಜನೋತ್ಸವ : ಕಣ್ಮನ ಸೆಳೆದ ಆಳ್ವಾಸ್ ಸಾಂಸ್ಕೃತಿಕ ವೈಭವ

 ತುಮಕೂರು :       ಶುಕ್ರವಾರ ಸಂಜೆ ನಗರದ ಗಾಜಿನ ಮನೆಯಲ್ಲಿ ಅದ್ದೂರಿಯಾಗಿ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಆಳ್ವಾಸ್ ಪ್ರತಿಷ್ಠಾನ ಕಲಾತಂಡಗಳು ಪ್ರಸ್ತುತಪಡಿಸಿದ ಸಾಂಸ್ಕøತಿಕ ವೈಭವವು ಪ್ರೇಕ್ಷಕನ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಯುವ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಈ ಯುವಜನೋತ್ಸವ ಕಾರ್ಯಕ್ರಮವನ್ನು ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ ಉದ್ಘಾಟಿಸಿದ ನಂತರ ಜರುಗಿದ ಮೂಡಬಿದರೆಯ ಆಳ್ವಾಸ್ ಪ್ರತಿಷ್ಠಾನದ ಸಾಂಸ್ಕøತಿಕ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಪ್ರೇಕ್ಷಕನನ್ನು ಮೈಮರೆಯುವಂತೆ ಮಾಡಿದವು.       ದೇಶದ ವಿವಿಧ ರಾಜ್ಯಗಳಲ್ಲದೆ ದೂರದ ಶ್ರೀಲಂಕಾ ದೇಶದ ನೃತ್ಯ ಪರಂಪರೆಗಳ ಮಿಳಿತವಾಗಿದ್ದ ಈ ಸಾಂಸ್ಕತಿಕ ವೈಭವದದಲ್ಲಿ ಉತ್ತರ ಭಾರತದ “ಕಥಕ್”ನಿಂದ ಹಿಡಿದು ದಕ್ಷಿಣ ಭಾರತದ “ಮೋಹಿನಿ ಅಟ್ಟಂ” ಹಾಗೂ ಪೂರ್ವದ ಗುಜರಾತಿನ “ದಾಂಡಿಯಾ ನೃತ್ಯ”ದಿಂದ…

ಮುಂದೆ ಓದಿ...

ಡೊಳ್ಳುಕುಣಿತ ಜೋರು; ಯುವಜನೋತ್ಸವದಲ್ಲಿ ಜನಪದ ಕುಣಿತ

 ತುಮಕೂರು:       ನಗರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಯುವಜನೋತ್ಸವದ 2ನೇ ದಿನವಾದ ಶನಿವಾರ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಮೂಲ ಜನಪದ ಕುಣಿತ, ಸ್ಥಳೀಯ ಕಲೆ ಹಾಗೂ ಶಾಸ್ತ್ರೀಯ ನೃತ್ಯ ಪ್ರದರ್ಶನ ನಡೆಯಿತು. ರಾಜ್ಯದ 30 ಜಿಲ್ಲೆಗಳ ತಂಡಗಳು ಕಲಾ ಪ್ರದರ್ಶನ ನೀಡಿದವು.       ಸೋಮನಕುಣಿತ, ಡೊಳ್ಳುಕುಣಿತ, ಪಟ ಕುಣಿತ, ವೀರಗಾಸೆ, ಕುದುರೆ ಕೋಲು, ನಂದಿ ಕುಣಿತದ ಪ್ರಕಾರಗಳನ್ನು ಯುವಜನೋತ್ಸವದಲ್ಲಿ ತಂಡಗಳು ಪ್ರದರ್ಶಿಸಿದವು. ಚಾಮರಾಜನಗರ ಜಿಲ್ಲೆಯ ತಂಡ ಪ್ರದರ್ಶಿಸಿದ ನೃತ್ಯ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಡೊಳ್ಳುಕುಣಿತದಲ್ಲಿ ಒಬ್ಬರ ಮೇಲೆ ಒಬ್ಬರು ನಿಂತು ನೃತ್ಯ ಪ್ರದರ್ಶಿಸಿದ್ದು, ನೋಡುಗರ ಕಣ್ಮನ ಸೆಳೆಯಿತು.       ಗಾಜಿನ ಮನೆಯಲ್ಲಿ ನಡೆಯುತ್ತಿರುವ ಜನಪದ ಕುಣಿತ ಸ್ಪರ್ಧೆಯಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾದ ತಂಡಗಳು ಭಾನುವಾರ ತಮ್ಮ ಪ್ರದರ್ಶನವನ್ನು ನೀಡಲಿದ್ದು, ಭಾನುವಾರ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಜೇತರಾದ ತಂಡವನ್ನು…

ಮುಂದೆ ಓದಿ...

ಅಪಘಾತದಿಂದ ಶಾಲಾಬಾಲಕ ಸಾವು : ಶಿಕ್ಷಕರ ವಿರುದ್ಧ ಪೋಷಕರ ಪ್ರತಿಭಟನೆ

ತುಮಕೂರು:       ಶಾಲೆ ಮುಗಿಸಿ, ರಸ್ತೆ ದಾಟುತಿದ್ದ ಶಾಲಾ ಬಾಲಕನಿಗೆ ಕಾರು ಡಿಕ್ಕಿ ಹೊಡೆದು 9ನೇ ತರಗತಿಯ ಬಾಲಕ ಸ್ಥಳದಲ್ಲಿಯ ಸಾವನ್ನಪ್ಪಿದ ಘಟನೆ ನಡೆದಿದ್ದು, ಇದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರ ನಿರ್ಲಕ್ಷವೇ ಕಾರಣ ಎಂದು ಶಿಕ್ಷಕರ ವಿರುದ್ದ ಬಾಲಕನ ಪೋಷಕರು ಹಾಗೂ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.       ಹೊನ್ನುಡಿಕೆ ಹ್ಯಾಂಡ್‍ಪೋಸ್ಟ್ ಬಳಿ ಇರುವ ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಧನುಷ್ ಇಂದು ಶನಿವಾರದ ಶಾಲೆ ಮುಗಿಸಿಕೊಂಡು ರಸ್ತೆ ದಾಟುವ ವೇಳೆ ತುಮಕೂರು ಕಡೆಯಿಂದ ಬಂದ ಕಾರೊಂದು ಸೈಕಲ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇದೇ ಜಾಗದಲ್ಲಿ ನಡೆಯುತ್ತಿರುವ ಮೂರನೇ ಅಪಘಾತ ಇದಾಗಿದ್ದು, ಪದೇ ಪದೇ ಅಪಘಾತವಾಗಲು ಶಾಲೆಯ ಮುಖ್ಯೋಪಾಧ್ಯಾಯರ ನಿರ್ಲಕ್ಷವೇ ಕಾರಣ ಎಂದು ಮೃತ ಬಾಲಕನ ಪೋಷಕರು ಹಾಗೂ…

ಮುಂದೆ ಓದಿ...