BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ
  • ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯದ ವೇಳಾಪಟ್ಟಿ ಪ್ರಕಟ
  • ಅಂಗವಿಕಲತೆ ಶಾಪವೂ ಅಲ್ಲ-ವರವೂ ಅಲ್ಲ: ಡಾ: ಸಿದ್ದರಾಮಣ್ಣ
  • ದೇಶದಲ್ಲಿ ನ್ಯಾಯ ನೀಡುವಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಮಾನವೇ ಅಂತಿಮ: ಪ್ರೊ. ಡಾ. ವಿ. ಸುದೇಶ್ ಹೇಳಿಕೆ
  • ಗ್ರಾಮೀಣ ಪರಿಸರದಲ್ಲಿ ಬೆಳೆದ ಅಪ್ಪಟ ಕನ್ನಡ ಪ್ರತಿಭೆ
  • ಅರಸಾಪುರ ಗ್ರಾ.ಪಂ ನೂತನ ಅಧ್ಯಕ್ಷರ ಆಯ್ಕೆ
  • ಗುರಿ ಮತ್ತು ಪರಿಶ್ರಮದಿಂದಲೇ ಸಾಧನೆ ಸಾಧ್ಯ
  • ದೇಶದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಅತ್ಯವಶ್ಯ, ಅಂತಹ ಶಿಕ್ಷಣವನ್ನು ನೀಡುವವರೇ ಶಿಕ್ಷಕರು: ಶಾಸಕ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸರ್ಕಾರದ ವಿರುದ್ಧ ಮತ್ತೆ ಹೋರಾಟಕ್ಕೆ ಮುಂದಾದ ಆಶಾ ಕಾರ್ಯಕರ್ತೆಯರು
Trending

ಸರ್ಕಾರದ ವಿರುದ್ಧ ಮತ್ತೆ ಹೋರಾಟಕ್ಕೆ ಮುಂದಾದ ಆಶಾ ಕಾರ್ಯಕರ್ತೆಯರು

By News Desk BenkiyabaleUpdated:September 21, 2020 7:28 pm

ತುಮಕೂರು:

       ಕೊರೊನಾ ವಾರಿಯರ್ಸ್ ಎಂದೇ ಹೆಸರಾದ ರಾಜ್ಯದ 42,000 ಆಶಾ ಕಾರ್ಯಕರ್ತೆಯರು ಎರಡು ತಿಂಗಳ ಹಿಂದೆ 20 ದಿನಗಳ ನಿರಂತರ ಹೋರಾಟ ಮಾಡಿದ ಸಂದರ್ಭದಲ್ಲಿ ವೇತನ ಹೆಚ್ಚಳ ಮಾಡಲಾಗುವುದು ಎಂಬ ಭರವಸೆ ನೀಡಿ, ಇದೀಗ ಎರಡು ತಿಂಗಳು ತಾಳ್ಮೆಯಿಂದ ಕಾಯ್ದು ಕೊರೊನಾ ವಿರುದ್ಧದ ಹೋರಾಟದಲ್ಲಿ ಕರ್ತವ್ಯನಿರತರಾದ ಆಶಾಗಳಿಗೆ ಕೊಟ್ಟ ಮಾತಿಗೆ ತಪ್ಪಿದ ಸರ್ಕಾರದ ವಿರುದ್ಧ ಮತ್ತೇ ರಾಜ್ಯದಾದ್ಯಂತ ಆಶಾ ಕಾರ್ಯಕರ್ತೆಯರು ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಹೋರಾಟಕ್ಕಿಳಿಯಲು ನಿರ್ಧರಿಸಿದ್ದಾರೆ.

      ಅಂತೆಯೇ ರಾಜ್ಯದಾದ್ಯಂತ ಎಲ್ಲಾ ಶಾಸಕರು, ಸಂಸದರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಆಶಾ ಪರ ಧ್ವನಿಯೆತ್ತುವಂತೆ ಆಗ್ರಹಿಸಲಾಗುವುದು. ಹಾಗೆಯೇ ದಿನಾಂಕ 21 ರಿಂದ 10 ದಿನಗಳ ಕಾಲ ನಡೆಯುವ ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ವಿವಿಧ ರೀತಿಯ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು.

      ಕಳೆದ ಸುಮಾರು 10-11 ವರ್ಗಗಳಿಂದ ಆಶಾ ಕಾರ್ಯಕರ್ತೆಯರು ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನತೆಯ ಆರೋಗ್ಯ ಯೋಜನೆಗಳನ್ನು ಕಾಯಾ ವಾಚಾ ಮನಸಾ ಜಾರಿಗೊಳಿಸುತ್ತ ಬಂದಿದ್ದಾರೆ. ಸಧ್ಯದ ಕೋವಿಡ್ ಹೆಮ್ಮಾರಿಯ ಪಿಡುಗಿನ ಕಾಲದಲ್ಲಂತೂ ಅವರ ಅವಿರತ ಶ್ರಮದ ಸೇವೆಯನ್ನು ಪ್ರಶಂಸೆ ಮಾಡದವರೆ ಇಲ್ಲ. ಆದರೆ ಇಂತಹ ಅಸಾಮಾನ್ಯ ಸೇವೆಗಾಗಿ ಅವರಿಗೆ ದೊರಕುವ ಸಂಭಾವನೆಯಂತೂ ಅತಿ ನಿಕೃಷ್ಟ. ಅಲ್ಲದೆ, ಕಾರ್ಯಕರ್ತೆಯರ ಚಟುವಟಿಕೆಗಳನ್ನು ಆನ್ ಲೈನ್ ಪೋರ್ಟಲ್‍ನಲ್ಲಿ ದಾಖಲಿಸಲು ಇರುವ ಅಸಂಖ್ಯಾತ ಲೋಪದೋಷಗಳನ್ನು ಸರಿಪಡಿಸುವ ಹೆಸರಿನಲ್ಲಿ ಕಾಲ ವಿಳಂಬ ನೀತಿಯಿಂದಾಗಿ 2018 ಮತ್ತು 2019 ರ ನಡುವೆ 15 ತಿಂಗಳುಗಳಲ್ಲಿ ಪ್ರತಿ ಆಶಾ ಕಾರ್ಯಕರ್ತೆಯರಿಗೆ ಬರಬೇಕಾಗಿದ್ದ 15-25 ಸಾವಿರ ದಷ್ಟು ಹಣ ಬರದೇ ನಷ್ಟ ವಾಗಿರುವುದು ಇನ್ನೂ ಆಶಾಗಳಿಗೆ ಅದನ್ನು ಕೊಡುವ ವ್ಯವಸ್ಥೆ ಆಗಿಲ್ಲ. ಈಗಲೂ ತಿಂಗಳ ಕೆಲಸಕ್ಕೆ ತಕ್ಕಷ್ಟ್ಟು ಹಣ ಅವರಿಗೆ ಸಿಗುತ್ತಿಲ್ಲ. ಆದರೆ ದಿನೇ ದಿನೇ ದುಡಿತ ಹೆಚ್ಚಿದೇ ಹೊರತು ದುಡಿದ ಹಣ ಮಾತ್ರ ಕೈಗೆ ಬರುತ್ತಿಲ್ಲ. ಇದರಿಂದಾಗಿ ಮುಂದುವರಿದ ಈ ಅನ್ಯಾಯದಿಂದ ಕಾರ್ಯಕರ್ತೆಯರ ಕುಟುಂಬಗಳು ತೀವ್ರ ಆರ್ಥಿಕ ತೊಂದರೆಗಳನ್ನು ಎದುರಿಸುವಂತಾಗಿದೆ. ಹಲವು ತಿಂಗಳುಗಳಿಂದ ಕೋವಿಡ್ ಕೆಲಸದಲ್ಲಿ ನಿಷ್ಠೆಯಿಂದ ತೊಡಗಿರುವುದು ತಮಗೆ ತಿಳಿದ ವಿಷಯವಾಗಿದೆ. ಆದರೆ ಆಶಾಕಾರ್ಯಕರ್ತೆಯರಿಗೆ ದುಡಿಮೆಗೆ ತಕ್ಕ ವೇತನ ಮಾತ್ರ ಸಿಗುತ್ತಿಲ್ಲ. 12,000 ರೂ ಬೇಡಿಕೆ ಸಹ ವಾಸ್ತವಿಕವಾಗಿದ್ದು, ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುವುದಿಲ್ಲವೆಂದೂ ಸಂಘವು ಪದೇ ಪದೇ ಪ್ರಸ್ತಾಪಿಸುತ್ತಾ ಬಂದಿದೆ. ಏಕೆಂದರೆ ನಮ್ಮ ರಾಜ್ಯದಲ್ಲಿ, ರೂ.4000 ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ಕೇಂದ್ರ ಸರ್ಕಾರದಿಂದ ಚಟುವಟಿಕೆಗಳನ್ನು ಆಧರಿಸಿ ನೀಡುವ ಪ್ರೋತ್ಸಾಹಧನ ಸರಾಸರಿ ರೂ. 6000, ಎರಡೂ ಸೇರಿ ಸುಮಾರು ರೂ. 10,000 ಪಡೆಯುವಂತೆ ಯೋಜನೆ ಇದೆ. ಮತ್ತು ಇದಕ್ಕೆ ಸರ್ಕಾರದ ಅನುದಾನವೂ ಇದೆ. ಆದರೆ ಅದು ಇದುವರೆಗೂ ಸರಿಯಾಗಿ ತಲುಪುತ್ತಿಲ್ಲ. ಅಂತೆಯೇ ಇದಕ್ಕೆ ಇನ್ನೊಂದಿಷ್ಟು ಹಣವನ್ನು ಸೇರಿಸಿ ರೂ 12,000 ನಿಗದಿಯಾಗಿ ಕೊಡುವುದು ಸರ್ಕಾರಕ್ಕೆ ಕಷ್ಟವಾಗಲಾರದೆಂದೂ ತಿಳಿಸಿದ್ದೇವೆ.

      ಆದ್ದರಿಂದ ತಮ್ಮ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳಲು ಅವರು ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದಾರೆ. ಕಳೆದ ಜನವರಿ ತಿಂಗಳಲ್ಲಿ ಜರುಗಿದ ರಾಜ್ಯ ಮಟ್ಟದ ಚಳುವಳಿಯನ್ನು ಆರೋಗ್ಯ ಮಂತ್ರಿಗಳ ಆಶ್ವಾಸನೆಯೊಂದಿಗೆ ಹಿಂಪಡೆಯಲಾಗಿತ್ತು. ಆದರೆ ಈ ಭರವಸೆ ಭರವಸೆಯಾಗಿಯೇ ಉಳಿಯಿತು.

      ನಂತರದ ದಿನಗಳಲ್ಲಿ ಕೋವಿಡ್ ಹೆಮ್ಮಾರಿಯ ವಿರುದ್ಧ ಆಶಾ ಕಾರ್ಯಕರ್ತೆಯರು ಕಾರ್ಯಪ್ರವೃತ್ತರಾದರು. ಈ ಹಿನ್ನೆಲೆಯಲ್ಲಿ ಕಳೆದ ಜುಲೈ 10 ರಿಂದ 29 ರವರೆಗೆ ರಾಜ್ಯದ ಆಶಾ ಕಾರ್ಯಕರ್ತೆಯರು ತಮ್ಮ ಕನಿಷ್ಟ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ್ದುದು ಇಡೀ ರಾಜ್ಯದ ಜನತೆಗೆ ತಿಳಿದಿರುವ ವಿಷಯ. ಕೋವಿಡ್ ವಿರುದ್ಧದ ಹೋರಾಟದಲ್ಲಿ “ಮುಂಚೂಣಿ ಯೋಧ” ರೆಂದು ಕರೆಯಿಸಿಕೊಂಡ ಇವರ ಕನಿಷ್ಟ ಬೇಡಿಕೆಗಳ ಬಗ್ಗೆ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿತು.

     ಇಂತಹ ಸನ್ನಿವೇಶದಲ್ಲಿ ಆಶಾ ಸೋದರಿಯರ ದಿಟ್ಟ ಹೋರಾಟಕ್ಕೆ ಇಡೀ ರಾಜ್ಯದ ಜನತೆಯೇ ಸ್ಪಂದಿಸಿತು. ರೈತ ಕಾರ್ಮಿಕರಾದಿಯಾಗಿ ಸಮಸ್ತ ಜನತೆ ಇವರ ಬೇಡಿಕೆಗಳನ್ನು ಬೆಂಬಲಿಸಿದರು. ಆಡಳಿತ ಪಕ್ಷದ ಮಂತ್ರಿವರ್ಯರು, ನಾಯಕರು, ವಿರೋಧ ಪಕ್ಷಗಳ ಮುಖಂಡರುಗಳು ಸಹ ಬೇಡಿಕೆಗಳ ಪರವಾಗಿ ತಮ್ಮ ಧ್ವನಿ ಎತ್ತಿದರು. ರಾಜ್ಯದ ಸಾಕ್ಷಿ ಪ್ರಜ್ಞೆಯರಾದ ಶ್ರೀಯುತ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ಡಾ. ಸಿದ್ದಲಿಂಗಯ್ಯ, ರೂಪ ಹಾಸನ, ಡಾ. ನಂಜರಾಜೇ ಅರಸ್, ಮುಂತಾದವರು ತಾವಾಗಿಯೇ ಆಶಾಗಳ ಬೆನ್ನೆಲುಬಾಗಿ ನಿಂತರು. ತಮ್ಮ ನಿಷ್ಠಾವಂತ ದುಡಿಮೆಯ ನಡುವೆಯೇ ಹೋರಾಟನಿರತರಾದ ಈ ಮಹಿಳಾಮಣಿಗಳ ಕೆಚ್ಚಿಗೆ ಅಧಿಕಾರಿಗಳು, ಪೊಲೀಸರು, ಮಾಧ್ಯಮದವರು, ಎಲ್ಲರೂ ತಲೆತೂಗಿದರು. ಹಲವಾರು ಹಿರಿಯಮಂತ್ರಿಗಳು ಸಹ ಬೇಡಿಕೆಗಳಿಗೆ ಸರ್ಕಾರವು ಸ್ಪಂದಿಸಿದೆ ಹಾಗೂ ಸಧ್ಯದಲ್ಲೇ ಸಿಹಿ ಸುದ್ದಿ ಪ್ರಕಟವಾಗುವುದಾಗಿ ವಚನವಿತ್ತರು. ಕೊನೆಗೂ ಆಗಸ್ಟ್ 29 ರಂದು ರಾಜ್ಯಾದ್ಯಂತ ಮುತ್ತಿಗೆ ಕಾರ್ಯಕ್ರಮ ಜರುಗಿದಾಗ ಮುಖ್ಯಮಂತ್ರಿಗಳು ಸಹ ಆಶಾ ಮುಖಂಡರಿಗೆ ಸರ್ಕಾರ ಆಶಾ ಜೊತೆಗಿದೆ, ಶೀಘ್ರ ವೇತನ ಹೆಚ್ಚಿಸುವುದಾಗಿ ಭರವಸೆ ನೀಡಿ, ಸಚಿವರಿಗೆ ಹಾಗೂ ಅಧಿಕಾರಿಗಳಿಗೂ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಆಗ ಬೆಂಗಳೂರಿನಲ್ಲಿ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಸಚಿವರಾದ ಶ್ರೀ ಶ್ರೀರಾಮುಲುರವರು 2-3 ದಿನಗಳಲ್ಲೇ ಬೇಡಿಕೆಗಳನ್ನು ಈಡೇರಿಸುವುದಾಗಿ ವಚನವಿತ್ತ ನಂತರ ಆಶಾ ಕಾರ್ಯಕರ್ತೆಯರು ತಮ್ಮ 20 ದಿನಗಳ ಐತಿಹಾಸಿಕ ಹೋರಾಟವನ್ನು ತತ್ ಕ್ಷಣಕ್ಕೆ ಸ್ಥಗಿತಗೊಳಿಸಿದರು.

      ಆದ್ದರಿಂದಲೇ ಇದೀಗ ಅನಿವಾರ್ಯವಾಗಿ ಆಶಾ ಕಾರ್ಯಕರ್ತೆಯರು ಮತ್ತೊಮ್ಮೆ ಹೋರಾಟಕ್ಕಿಳಿಯುವುದು ಅನಿವಾರ್ಯವಾಗಿದೆ. ಮಾತಿನಂತೆ ನಡೆಯದ ಸರ್ಕಾರದ ಅಲಕ್ಷ ಧೋರಣೆ ವಿರುದ್ಧ ಬಲಿಷ್ಠ ಹೋರಾಟವನ್ನು ಕೈಗೊಳ್ಳಬೇಕಾಗಿ ಬಂದಿದೆ. ಆಶಾ ಕಾರ್ಯಕರ್ತೆಯರ ಈ ನ್ಯಾಯೋಚಿತ ಹೋರಾಟವನ್ನು ಎಲ್ಲಾ ಜನರು ಬೆಂಬಲಿಸಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಮನವಿ ಮಾಡುತ್ತದೆ.

(Visited 15 times, 1 visits today)
Previous Articleಕೆ.ಆರ್.ಪೇಟೆಯಲ್ಲಿ ವಿಜಯ ಸಾಧಿಸಿದಂತೆ ಶಿರಾದಲ್ಲೂ ಖಾತೆ ತೆರೆಯಲಿದ್ದೇವೆ
Next Article ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ
News Desk Benkiyabale

Related Posts

ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ

September 12, 2025 4:13 pm ಕಲೆ-ಸಾಹಿತ್ಯ

ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯದ ವೇಳಾಪಟ್ಟಿ ಪ್ರಕಟ

September 12, 2025 3:50 pm ತುಮಕೂರು

ಅಂಗವಿಕಲತೆ ಶಾಪವೂ ಅಲ್ಲ-ವರವೂ ಅಲ್ಲ: ಡಾ: ಸಿದ್ದರಾಮಣ್ಣ

September 12, 2025 3:49 pm ತುಮಕೂರು
ತಾಜಾ ಸುದ್ಧಿಗಳು
ಕಲೆ-ಸಾಹಿತ್ಯ

ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ

September 12, 2025 4:13 pm

ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯದ ವೇಳಾಪಟ್ಟಿ ಪ್ರಕಟ

September 12, 2025 3:50 pm
ತುಮಕೂರು

ಅಂಗವಿಕಲತೆ ಶಾಪವೂ ಅಲ್ಲ-ವರವೂ ಅಲ್ಲ: ಡಾ: ಸಿದ್ದರಾಮಣ್ಣ

September 12, 2025 3:49 pm
ತುಮಕೂರು

ದೇಶದಲ್ಲಿ ನ್ಯಾಯ ನೀಡುವಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಮಾನವೇ ಅಂತಿಮ: ಪ್ರೊ. ಡಾ. ವಿ. ಸುದೇಶ್ ಹೇಳಿಕೆ

September 12, 2025 3:47 pm
ತುಮಕೂರು

ಗ್ರಾಮೀಣ ಪರಿಸರದಲ್ಲಿ ಬೆಳೆದ ಅಪ್ಪಟ ಕನ್ನಡ ಪ್ರತಿಭೆ

September 12, 2025 3:45 pm
ತುಮಕೂರು

ಅರಸಾಪುರ ಗ್ರಾ.ಪಂ ನೂತನ ಅಧ್ಯಕ್ಷರ ಆಯ್ಕೆ

September 12, 2025 3:44 pm
Our Youtube Channel
Our Picks

ದೇಶದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಅತ್ಯವಶ್ಯ, ಅಂತಹ ಶಿಕ್ಷಣವನ್ನು ನೀಡುವವರೇ ಶಿಕ್ಷಕರು: ಶಾಸಕ

September 10, 2025 3:26 pm

ಸಮ ಸಮಾಜದ ಕನಸು ಹೊತ್ತು ದುಡಿದವರು ಬ್ರಹ್ಮರ್ಷಿ ನಾರಾಯಣಗುರುಗಳು: ಅಪರ ಜಿಲ್ಲಾಧಿಕಾರಿ ಹೇಳಿಕೆ

September 08, 2025 3:08 pm

ಮುಸ್ಲಿಮರನ್ನು ತಪ್ಪು ದಾರಿಗೆಳೆಯುವ, ಭದ್ರತಾ ಆತಂಕ

August 25, 2025 2:24 pm

ಕೆ.ಎನ್.ರಾಜಣ್ಣ ವಜಾ ಖಂಡಿಸಿ ಧರಣಿ ಸತ್ಯಾಗ್ರಹ

August 25, 2025 2:14 pm

ಸೆ.೨೨ ರಿಂದ ದಸರಾ ಉತ್ಸವ

August 20, 2025 3:26 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಕಲೆ-ಸಾಹಿತ್ಯ

ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ

By News Desk BenkiyabaleSeptember 12, 2025 4:13 pm

ತುಮಕೂರು: ನಗರದ ಭದ್ರಮ್ಮ ವೃತ್ತದ ಬಳಿಯ ಸೋಮೇಕಟ್ಟೆ ಮಠದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ವಿಶ್ವ ಹಿಂದೂ ಪರಿಷದ್, ಬಜರಂಗದಳದ ೮ನೇ ವರ್ಷದ…

ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯದ ವೇಳಾಪಟ್ಟಿ ಪ್ರಕಟ

September 12, 2025 3:50 pm

ಅಂಗವಿಕಲತೆ ಶಾಪವೂ ಅಲ್ಲ-ವರವೂ ಅಲ್ಲ: ಡಾ: ಸಿದ್ದರಾಮಣ್ಣ

September 12, 2025 3:49 pm

ದೇಶದಲ್ಲಿ ನ್ಯಾಯ ನೀಡುವಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಮಾನವೇ ಅಂತಿಮ: ಪ್ರೊ. ಡಾ. ವಿ. ಸುದೇಶ್ ಹೇಳಿಕೆ

September 12, 2025 3:47 pm
News by Date
September 2025
M T W T F S S
1234567
891011121314
15161718192021
22232425262728
2930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.