
ತುಮಕೂರು: ರಾಮಕೃಷ್ಣ ನಗರದ ರಾಮಕೃಷ್ಣ ವಿವೇಕಾ ನಂದ ಆಶ್ರಮ 1992ರಲ್ಲಿ ಸ್ಥಾಪನೆಗೊಂಡು ಇದೀಗ ತನ್ನ 33ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಗೆ ಸನ್ನದ್ದಗೊಂಡಿದ್ದು ಜ.10 ಮತ್ತು 11 ರಂದು ಆಶ್ರಮದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಕಾರ್ಯ ಕ್ರಮ ಆಯೋಜನೆಗೊಂಡಿರುವುದಾಗಿ ಅಧ್ಯಕ್ಷರಾದ ಡಾ. ಶ್ರೀ ವಿರೇಶಾನಂದಸರಸ್ವತಿ ಸ್ವಾಮೀಜಿಗಳು ತಿಳಿಸಿದರು.
ಆಶ್ರಮದಲ್ಲಿ ಇಂದು ಬೆಳಿಗ್ಗೆ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ, ಜ.10 ರಂದು ಬೆಳಿಗ್ಗೆ 10:30ಕ್ಕೆ ಶ್ರೀಮಾತೆ ಶಾರದಾದೇವಿ ಜನ್ಮದಿನೋತ್ಸವದ ಅಂಗವಾಗಿ 26ನೇ ವರ್ಷದ ಜೀವಂತ ದುರ್ಗಪೂಜೆ ಕಾರ್ಯ ಕ್ರಮ ಏರ್ಪಟಿದ್ದು ೨೦೦ ಅಶಕ್ತ ತಾಯಂದಿ ರಿಗೆ ಅನ್ನದಾನ, ಧಾನ್ಯ ದಾನ, ವಸ್ತçದಾನಗಳಿಂದ ಸತ್ಕರಿಸಲಾಗುವುದು ಎಂದರು.
ಹೆಸರಾAತ ಕ್ಯಾನ್ಸರ್ ಚಿಕಿತ್ಸಕರಾದ ಡಾ. ವಿಜಯಲಕ್ಷಿö?ಮ ದೇಶಮಾನೆ ಕಾರ್ಯ ಕ್ರಮ ಉದ್ಘಾಟಿಸುವರು. ಹೆಸರಾಂತ ಅರ್ಥ ತಜ್ಞ ಮೂಕನಹಳ್ಳಿ ರಂಗಸ್ವಾಮಿ, ಹೆಸರಾಂತ ಉದ್ಯಮಿ ವೀರಭದ್ರ ಬ್ಯಾಡಗಿ, ಸಮಾಜ ಸೇವಕಿ ಶಿಲ್ಪ ಬ್ಯಾಡಗಿ ಭಾಗವಹಿಸುವರು. ಅಂದು ಸಂಜೆ ೫.೩೦ಕ್ಕೆ ಆಶ್ರಮದ ಶ್ರೇಯಸ್ಸಿಗೆ ಶ್ರಮಿಸಿದ ಸೇವಾಕರ್ತರಿಗೆ ಪುರಸ್ಕಾರ ನೀಡಲಾಗುವುದು.
ಜ.11 ರಂದು ಬೆಳಿಗ್ಗೆ 10 ಗಂಟೆಗೆ ರಾಜ್ಮಮಟ್ಟದ ಯುವ ಸಮ್ಮೇಳನ ಆಯೋಜಿಸಲಾಗಿದ್ದು, ಕರ್ನಾಟಕ ಉಚ್ಛನ್ಯಾ ಯಾಲಯದ ವಿ±ಶ್ರಾಂತ ನ್ಯಾಯಮೂರ್ತಿ ಪಿ.ಕೃಷ್ಣಭಟ್ ಉದ್ಘಾಟಿಸಿ, ಬಲಿಷ್ಠ ಭಾರತ ನಿರ್ಮಾತೃಗಳಾಗಿ ಯುವಜನತೆ ಎಂಬ ವಿಷಯ ಕುರಿತು ದಿಕ್ಸೂಚಿ ಭಾಷಣ ಮಾಡುವರು. ರಾಜ್ಯ ಆರೋಗ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಕೆ.ಹೆಚ್.ಗೋಪಾಲಕೃಷ್ಣೇಗೌಡ ಭಾಗವಹಿಸುವರು. ಇದೇ ಸಂದರ್ಭದಲ್ಲಿ ವಿವೇಕಾ ವಿದ್ಯಾರ್ಥಿ ಲಿಖಿತ ಪರೀಕ್ಷೆಯಲ್ಲಿ ರ‍್ಯಾಂಕ್ ವಿಜೇತರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.
ಸ್ವಾಮಿ ಧೀರಾನಂದಜೀ, ಸ್ವಾಮಿ ಪರಮಾ ನಂದಜೀ, ಕುಮಾರಸ್ವಾಮಿ, ಪ್ರಸನ್ನ ಮುಂತಾ ದವರು ಸುದ್ದಿಗೋಷ್ಠಿಯಲ್ಲಿದ್ದರು.





