BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ
  • ಪಾವಗಡ ಕ್ಷೇತ್ರದಲ್ಲಿ ೧೧ ಹೊಸ ಮತಗಟ್ಟೆ
  • ಪರಿಸರ ಸಂರಕ್ಷಣೆ ನಮ್ಮೆಲ್ಲರ ಜೀವನ ಶೈಲಿಯಾಗಲಿ
  • ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತಿರುವ ಶಿರಾ ಜನತೆ
  • ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಡಿಸಿ ಕಚೇರಿಗೆ ಮುತ್ತಿಗೆ ಯತ್ನ
  • ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ
  • ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ
  • ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬಸವಣ್ಣನ ನೀರಾವರಿ ಯೋಜನೆ ಇಂದಿಗೂ ಮಾದರಿ
ತುಮಕೂರು

ಬಸವಣ್ಣನ ನೀರಾವರಿ ಯೋಜನೆ ಇಂದಿಗೂ ಮಾದರಿ

By News Desk BenkiyabaleUpdated:May 03, 2022 5:24 pm

ತುಮಕೂರು:
ಜಗತ್ತಿಗೆ ಬೇಕಾದ ಇಬ್ಬರು ಮಹಾನ್ ದಾರ್ಶನಿಕರು ಬಸವಣ್ಣ, ಸಿದ್ದರಾಮೇಶ್ವರರು, ಕೆರೆಕಟ್ಟೆಗಳನ್ನು ಕಟ್ಟಿಸಿ ನೀರಾವರಿ ಯೋಜನೆ ಮಾಡಿದರು, ಅದೇ ಇಂದಿಗೂ ಮಾದರಿಯಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.
ನಗರದ ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಿಂದ ಹಮ್ಮಿಕೊಂಡಿದ್ದ ಜಗಜ್ಜ್ಯೋತಿ ಬಸವವೇಶ್ವರ ಮತ್ತು ಕಾಯಕಯೋಗಿ ಸಿದ್ದರಾಮೇಶ್ವರರ ಜಯಂತಿಯಲ್ಲಿ ಅವರು ಮಾತನಾಡಿದರು.
ಸಮಾಜದ ಋಣ ತೀರಿಸುವ ನಿಟ್ಟಿನಲ್ಲಿ ಎಲ್ಲರು ಚಿಂತಿಸಬೇಕಿದೆ, ಇರುವುದರಲ್ಲಿಯೇ ಸಮಾಜಕ್ಕೆ ಒಳಿತನ್ನೇ ಮಾಡುವ ಮನೋಭಾವನೆಯನ್ನು ರೂಢಿಸಿಕೊಂಡಾಗ ಮಾತ್ರ ಸಮುದಾಯ ಶಕ್ತವಾಗಲಿದೆ, ಸಮುದಾಯಕ್ಕೆ ಕೊಡುವ ನಿಟ್ಟಿನಲ್ಲಿ ಸಮುದಾಯ ಮುಖಂಡರು ಚಿಂತಿಸಬೇಕಿದೆ ಎಂದು ಹೇಳಿದರು.
ವೀರಶೈವ ಬ್ಯಾಂಕ್ ಮಾಜಿ ನಿರ್ದೇಶಕ ಹೆಚ್.ಜಿ.ಬಸವರಾಜು ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರು ದೇಶದ ಸಮಾನತೆಯ ಆಶಯಗಳು, ಭಗವಾನ್ ಬುದ್ಧ ವೈಚಾರಿಕ ವಿಚಾರಗಳನ್ನು ತಿಳಿಸಿದರೆ ಅಣ್ಣ ಬಸವಣ್ಣ ಅದಕ್ಕೆ ಸ್ಥಿತಪ್ರಜ್ಞೆಯನ್ನು ಮೂಡಿಸಿದರು, ಅಂಬೇಡ್ಕರ್ ಅದಕ್ಕೊಂದು ಚೌಕಟ್ಟು ನೀಡಿದರು ಅದನ್ನು ಪಾಲಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕಿದೆ, ದೇಶ ಇರುವವರೆಗೆ ಬುದ್ಧ, ಬಸವ, ಅಂಬೇಡ್ಕರ್ ಪ್ರಾಂತಸ್ಮರಣೀಯರು ಎಂದು ಹೇಳಿದರು.
ಯುವ ಪೀಳಿಗೆಗೆ ಮಾರ್ಗದರ್ಶನ ಮಾಡುವ ಹೊಣೆಗಾರಿಕೆ ಪೋಷಕರ ಮೇಲಿದೆ, 12ನೇ ಶತಮಾನದಲ್ಲಿಯೇ ವಚನಗಳ ಮೂಲಕ ಕ್ರಾಂತಿ ಮಾಡಿದರು, ವಚನ ಎಂದರೆ ಮಾತು, ಮಾತಿಗೆ ಬೆಲೆ ಕಟ್ಟಲಾಗುವುದಿಲ್ಲ, ಜಾತಿಗೆ ಹೊರತಾದ ವ್ಯವಸ್ಥೆ ತುಮಕೂರಿನಲ್ಲಿದೆ, ಭಾವನಾತ್ಮಕ ಸಂಬಂಧ ಎಲ್ಲರೊಳಗೆ ಒಂದಾಗಿದೆ ಎಂದು ಹೇಳಿದರು.
ಕಾಯಕಯೋಗಿ ಸಿದ್ದರಾಮೇಶ್ವರರು ಕಾಯಕವನ್ನು ಮಾಡಲು ಉತ್ತೇಜಿಸಿದರು, ಬಸವಣ್ಣ ಅದರಲ್ಲಿಯೇ ಕೈಲಾಸವನ್ನು ಕಾಣುವಂತೆ ಹೇಳಿದರು, ಪ್ರಪಂಚದ ಎಲ್ಲ ದಾರ್ಶನಿಕರಲ್ಲಿಯೂ ಬಸವಣ್ಣನವರ ಕೊಡುಗೆಯೇ ಹೆಚ್ಚಿದೆ, ಅವರು ನಮ್ಮವರು ಎಂಬ ಹೆಮ್ಮೆ ಇದ್ದರಷ್ಟೇ ಸಾಲದು, ಅವರ ಆದರ್ಶಗಳನ್ನು ಪಾಲಿಸಬೇಕೆಂದು ಹೇಳಿದರು.
ಸಮಾಜ ಬದಲಾಗುತ್ತಿದೆ ಆದರೆ ಮನಸ್ಸು ಬದಲಾಗುವುದು ಬೇಡ, ತುಮಕೂರು ವೀರಶೈವ ಸಮಾಜ ಇಡೀ ರಾಜ್ಯದಲ್ಲಿಯೇ ಉತ್ತಮ ಸೇವೆಯನ್ನು ಮಾಡಿದೆ, ಡಾ.ಶಿವಕುಮಾರಸ್ವಾಮೀಜಿ ಪ್ರಭಾವದಿಂದ ಉತ್ತಮ ಸಂಸ್ಕಾರವನ್ನು ವೀರಶೈವ ಸಮಾಜ ಅಳವಡಿಸಿಕೊಂಡಿದೆ, ಸಮಾಜದ ಸೇವೆಯನ್ನು ನಿಷ್ಕಳಂಕದಿಂದ ಮಾಡುತ್ತಿರುವ ಬಾವಿಕಟ್ಟೆ ಮಂಜಣ್ಣ ಅವರ ಬ್ಯಾಂಕ್ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಆಶಿಸಿದರು.
ಟಿ.ಆರ್.ಲೋಕೇಶ್ ಅವರು ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಹಣಕಾಸು ಸಂಸ್ಥೆಗಳನ್ನು ನಡೆಸುವುದು ಸುಲಭದ ವಿಚಾರವಲ್ಲ, ಹಣಕಾಸು ಸಂಸ್ಥೆಗಳು ದಾಸೋಹ, ಉತ್ಸವ ನಡೆಸುವುದರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ, ಸಮುದಾಯದಲ್ಲಿರುವ ಬಡವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸುವ ಮೂಲಕ ಸಮುದಾಯವನ್ನು ಬಲಿಷ್ಠಗೊಳಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿ ಆರ್ಶೀವಚನ ನೀಡಿದ ಕಾರದಮಠದ ಸ್ವಾಮೀಜಿ, 12ನೇ ಶತಮಾನದಲ್ಲಿಯೇ ಎರಡು ಮಾತಿನಲ್ಲೇ ಬಸವಣ್ಣ ಸಮಾಜದ ಒಳಿತು, ಕೆಡತನ್ನು ಹೇಳಿದ್ದಾರೆ, ಒಳಿತನ್ನು ಪಾಲಿಸುವ ಸಂಕಲ್ಪವನ್ನು ಎಲ್ಲರು ಮಾಡಬೇಕಿದೆ, ದೀಪದಂತಹ ಭಾವೈಕ್ಯತೆಯನ್ನು ರೂಢಿಸಿಕೊಳ್ಳಬೇಕಿದೆ ಎಂದರು.
ಬಸವಣ್ಣ, ಡಾ.ಶಿವಕುಮಾರಸ್ವಾಮೀಜಿ ಹೇಳಿದ್ದು ದಾಸೋಹ ಮಾಡಿ ಎಂದದರು, ಅವರು ಹೇಳಿದಂತೆ ದಾಸೋಹದ ನಗರಿ ತುಮಕೂರಿನಲ್ಲಿ ಇಂದು ಎಲ್ಲೆಡೆ ದಾಸೋಹ ನಡೆಯುತ್ತಿದೆ ಇದೇ ನಮ್ಮ ಸಮುದಾಯದ ಆಶಯ, ನಮ್ಮ ಸಂಸ್ಕಾರ ಎಂದು ಹೇಳಿದ ಅವರು, 889 ವರ್ಷಗಳಾದರೂ ಬಸವಣ್ಣನವರ ಜಯಂತಿ ಮಾಡುತ್ತಿದ್ದೇವೆ ಎಂದರೆ ಬಸವಣ್ಣನವರು ಸಮುದಾಯಕ್ಕೆ ನೀಡಿರುವುದು ಎಂತಹ ಕೊಡುಗೆ ಎಂಬುದನ್ನು ಸ್ಮರಿಸಬೇಕು ಎಂದು ಹೇಳಿದರು.
ಬಸವಣ್ಣನವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ಸಾಗುವ ನಿಟ್ಟಿನಲ್ಲಿ ಜಯಂತಿಗಳನ್ನು ಮಾಡುತ್ತೇವೆ, ಜಯಂತಿಗಳನ್ನು ಮಾಡಿ, ದಾಸೋಹ ಮಾಡಿ ಸುಮ್ಮನಾಗದೇ ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.
ಈ ವೇಳೆ ಮೈತ್ರಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಹೇಮಾ ಪಂಚಾಕ್ಷರಿ,ಸ್ನೇಹ ಸಂಗಮ ಸೌಹಾರ್ದ ಸಹಕಾರಿಯ ಅಧ್ಯಕ್ಷ ಬಾವಿಕಟ್ಟೆ ಮಂಜುನಾಥ್, ಉಪಾಧ್ಯಕ್ಷ ನಾಗೇಶ್,ಕೊಪ್ಪಳ್ ನಾಗರಾಜು, ಉಪಾಧ್ಯಕ್ಷ ನಾಗೇಶ್ ಹೆಚ್.ಆರ್, ನಿರ್ದೇಶಕರಾದ ನಳಿನಾ ಟಿ.ಎಸ್, ಮೃತ್ಯುಂಜಯ ಟಿ.ಬಿ, ಶಾಂತಕುಮಾರಿ ಟಿ.ಎಸ್, ಹೆಚ್.ಎನ್.ಶಿವಕುಮಾರ್, ಪ್ರವೀಣ್ ಪ್ರಸಾದ್, ಪ್ರಭಾಕರ್, ಅರುಣ್ ಕುಮಾರ್, ಟಿ.ಎಸ್.ಚಿದಾನಂದ, ಲೋಕೇಶ್ ಕುಮಾರ್, ಜಗದೀಶ್ ಟಿ.ಎಸ್, ಸಿದ್ದರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಇತರರಿದ್ದರು.ಇದೇ ವೇಳೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ವಿಶ್ವರಾಧ್ಯ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಉದ್ಯಮಿ ಹೆಚ್.ಕೆ.ನಟೇಶ್, ಮೈತ್ರಿ ಮಹಿಳಾ ಸಂಘದ ಹೇಮಾ ಪಂಚಾಕ್ಷರಿ ಅವರನ್ನು ಸನ್ಮಾನಿಸಲಾಯಿತು.

(Visited 21 times, 1 visits today)
Basavajayanti tumkur
Previous Articleರಂಜಾನ್ ಉಪವಾಸ ಸೌಹಾರ್ದತೆಯ ಬದುಕಿನ ಸಂದೇಶ
Next Article ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಂದ ರಂಜಾನ್ ಸಡಗರ
News Desk Benkiyabale

Related Posts

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ

August 24, 2026 5:49 pm news

ಪಾವಗಡ ಕ್ಷೇತ್ರದಲ್ಲಿ ೧೧ ಹೊಸ ಮತಗಟ್ಟೆ

August 24, 2026 5:47 pm news

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜೀವನ ಶೈಲಿಯಾಗಲಿ

August 24, 2026 5:46 pm news
ತಾಜಾ ಸುದ್ಧಿಗಳು
news

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ

August 24, 2026 5:49 pm
news

ಪಾವಗಡ ಕ್ಷೇತ್ರದಲ್ಲಿ ೧೧ ಹೊಸ ಮತಗಟ್ಟೆ

August 24, 2026 5:47 pm
news

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜೀವನ ಶೈಲಿಯಾಗಲಿ

August 24, 2026 5:46 pm
news

ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತಿರುವ ಶಿರಾ ಜನತೆ

August 24, 2026 5:45 pm
news

ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಡಿಸಿ ಕಚೇರಿಗೆ ಮುತ್ತಿಗೆ ಯತ್ನ

August 24, 2026 5:43 pm
news

ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ

August 21, 2026 7:05 pm
Our Youtube Channel
Our Picks

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ

August 24, 2026 5:49 pm

ಪಾವಗಡ ಕ್ಷೇತ್ರದಲ್ಲಿ ೧೧ ಹೊಸ ಮತಗಟ್ಟೆ

August 24, 2026 5:47 pm

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜೀವನ ಶೈಲಿಯಾಗಲಿ

August 24, 2026 5:46 pm

ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತಿರುವ ಶಿರಾ ಜನತೆ

August 24, 2026 5:45 pm

ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಡಿಸಿ ಕಚೇರಿಗೆ ಮುತ್ತಿಗೆ ಯತ್ನ

August 24, 2026 5:43 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ

By News Desk BenkiyabaleAugust 24, 2026 5:49 pm

ಯುಪಿಎಸ್ ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ – ಶಿಸ್ತು ಅಗತ್ಯ. ಕೆಲಸ ಮಾಡುವಾಗ ಸಣ್ಣಪುಟ್ಟ ತಪುö್ಪಗಳು ಆಗುವುದು ಸಹಜ. ಆದರೆ,…

ಪಾವಗಡ ಕ್ಷೇತ್ರದಲ್ಲಿ ೧೧ ಹೊಸ ಮತಗಟ್ಟೆ

August 24, 2026 5:47 pm

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜೀವನ ಶೈಲಿಯಾಗಲಿ

August 24, 2026 5:46 pm

ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತಿರುವ ಶಿರಾ ಜನತೆ

August 24, 2026 5:45 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.