BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ೯೩ ನಿವೇಶನ ರಹಿತ ಫಲಾನುಭವಿಗಳ ಆಯ್ಕೆಗೆ ವಿಶೇಷ ಗ್ರಾಮಸಭೆ
  • ಇನ್ನರ್ ವ್ಹೀಲ್‌ನಿಂದ ಶಾಲಾ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ
  • ವೀರ ವನಿತೆ ಝಾನ್ಸಿಯ ರಾಣಿ ಅವರ ಜಯಂತಿ ಆಚರಣೆ
  • ಕೊರಟಗೆರೆ ಜನರ ಆಶೀರ್ವಾದವೇ ನನ್ನ ಶಕ್ತಿ; ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಡಿಸಿಎಂ
  • ಬಸವಣ್ಣನವರ ಅವಹೇಳನ: ವೀರಶೈವ ಲಿಂಗಾಯತ ಮಹಾಸಭಾ ಆಕ್ರೋಶ
  • ನಾರಾಯಣಗುರು ನಿಗಮಕ್ಕೆ ಹಣಕೊಡಿ, ಪ್ರತಿಮೆ ಸ್ಥಾಪಿಸಿ
  • ಬಡವರಿಗೆ ನಿವೇಶನ ಹಂಚಿಕೆಗೆ ಒಕ್ಕೊರಲ ಆಗ್ರಹ
  • ಮೊಬೈಲ್ ಗುಲಾಮಗಿರಿ ಬಿಟ್ಟು, ಪುಸ್ತಕ, ಪ್ರಕೃತಿಯೊಂದಿಗೆ ಅನುಸಂಧಾನ ಬೆಳೆಸಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಪೇಟೆಂಟ್ ಪಡೆದ ಮೊದಲ ವ್ಯಕ್ತಿ ಸರ್‍ಎಂವಿ
ಇತರೆ ಸುದ್ಧಿಗಳು

ಪೇಟೆಂಟ್ ಪಡೆದ ಮೊದಲ ವ್ಯಕ್ತಿ ಸರ್‍ಎಂವಿ

By News Desk BenkiyabaleUpdated:September 16, 2022 6:05 pm

ತುಮಕೂರು


ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ಜಲಾಶಯದಲ್ಲಿ ಸ್ವಯಂ ಚಾಲಿತ ವೇರ್‍ವಾಟರ್ ಫ್ಲಡ್‍ಗೇಟ್ ವಿನ್ಯಾಸಕ್ಕೆ ಪೇಟೆಂಟ್ ಪಡೆದ ಮೊದಲ ವ್ಯಕ್ತಿಯಾಗಿದ್ದರು ಎಂದು ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಗಂಗಾಧರ ಕೊಡ್ಲಿಯವರ ಅವರು ತಿಳಿಸಿದರು.
ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಅಂಗವಾಗಿ ಲೋಕೋಪಯೋಗಿ ಇಲಾಖೆ ವಿಭಾಗೀಯ ಕಚೇರಿ ಆವರಣದಲ್ಲಿಂದು ಆಯೋಜಿಸಿದ್ದ “ಇಂಜಿನಿಯರ್ಸ್ ದಿನಾಚರಣೆ” ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಅವರ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದ ಅವರು, ನಾಡಿನಲ್ಲಿ ಜಲಾಶಯಗಳಿಗೆ ಅಣೆಕಟ್ಟು ನಿರ್ಮಾಣ, ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ಪ್ರವಾಹ ರಕ್ಷಣೆ ವ್ಯವಸ್ಥೆಯೊಂದಿಗೆ ಕೈಗಾರಿಕೆಗಳ ಸ್ಥಾಪನೆಯಲ್ಲಿ ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ವಿಶ್ವೇಶ್ವರಯ್ಯ ಅವರು ಬಡತನದಲ್ಲಿ ಜನಿಸಿದರೂ ಲಭ್ಯವಿರುವ ಸೌಲಭ್ಯದಲ್ಲಿಯೇ ಹಲವಾರು ಉನ್ನತ ಸ್ಥಾನಗಳನ್ನು ಅಲಂಕರಿಸಿ ನಾಡಿಗೆ ಕೀರ್ತಿ ತಂದಿದ್ದರು. ತಾವು ಬದುಕಿದ 101 ವರ್ಷಗಳ ಕಾಲ ಜನಾನುಕೂಲಕ್ಕಾಗಿಯೇ ವಿನೂತನ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿದ್ದರು. ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿಯಲ್ಲಿ 1861ರ ಸೆಪ್ಟೆಂಬರ್ 15ರಂದು ಜನಿಸಿದ ಇವರು ಇಂಜಿನಿಯರ್ ಪದವಿ ಗಳಿಸಿ ಮುಂಬೈ ನಗರದ ಲೋಕೋಪಯೋಗಿ ಇಲಾಖೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಉತ್ತಮ ಗುಣ ನಿಯಂತ್ರಕರಾಗಿ, ವಿನ್ಯಾಸಗಾರರಾಗಿ, ದಿವಾನರಾಗಿ, ಆಡಳಿತಗಾರರಾಗಿ, ಲೇಖಕರಾಗಿ, ಆರ್ಥಿಕ ತಜ್ಞರಾಗಿ ಜನಮಾನಸದಲ್ಲಿ ಉಳಿಯುವಂತೆ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಮುಂಬೈನ ವೃತ್ತಿ ಜೀವನದ ನಂತರ ಮೈಸೂರು ಸಂಸ್ಥಾನದ ಮಹಾರಾಜರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಮಂತ್ರಣದ ಮೇರೆಗೆ ಮೈಸೂರು ಸಂಸ್ಥಾನದಲ್ಲಿ ಮುಖ್ಯ ಇಂಜಿನಿಯರ್, ದಿವಾನರಾಗಿ ವಿಶ್ವೇಶ್ವರಯ್ಯ ಅವರು ಸೇವೆ ಆರಂಭಿಸಿದರು. ತಮ್ಮ ಸೇವೆಯಲ್ಲಿ
ಕೈಗಾರಿಕೀಕರಣದ ಪಿತಾಮಹ, ನೀರಾವರಿ ಕ್ಷೇತ್ರದ ಅಪ್ರತಿಮ ಸಾಧಕ, ಉತ್ತಮ ಸಾಮಾಜಿಕ ಚಿಂತಕರೆನಿಸಿಕೊಂಡಿದ್ದರು ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎನ್.ಶಿವಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಇಂಜಿನಿಯರ್‍ಗಳು ವಿಶ್ವೇಶ್ವರಯ್ಯ ಅವರ ಪ್ರಾಮಾಣಿಕತೆ, ಇಚ್ಛಾಶಕ್ತಿ,
ಆದರ್ಶ, ದೂರದರ್ಶಿತ್ವವನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರಲ್ಲದೆ, ಇಂಜಿನಿಯರ್‍ಗಳು ಎಷ್ಟೇ ಕಾರ್ಯದ ಒತ್ತಡವಿದ್ದರೂ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸುವುದರ ಜೊತೆಗೆ ನಿರ್ವಹಣೆಯನ್ನೂ ಸಹ ಮಾಡಬೇಕೆಂದು ಸಲಹೆ ನೀಡಿದರು.
ಮಧುಗಿರಿ ತಾಲ್ಲೂಕು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಹೆಚ್.ಎಸ್. ನಿರಂಜನಮೂರ್ತಿ ಮಾತನಾಡುತ್ತಾ, ವಿಶ್ವೇಶ್ವರಯ್ಯ ಅವರು ರೂಪಿಸಿರುವ ಯೋಜನೆಗಳು ಶಾಶ್ವತ ಎನಿಸಿಕೊಂಡಿವೆ. ಅವರ ದೂರದರ್ಶಿತ್ವ ನೀರಾವರಿ ಯೋಜನೆಗಳಿಂದ ರೈತರಿಗೆ ಅನುಕೂಲವಾಗಿದೆ ಎಂದು ತಿಳಿಸಿದರಲ್ಲದೆ, ಮೈಸೂರು ಸಂಸ್ಥಾನವನ್ನು ಮಾದರಿಯನ್ನಾಗಿ ಮಾಡಿದ ಕೀರ್ತಿ ವಿಶ್ವೇಶ್ವರಯ್ಯ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಡಿ. ರಾಜಶೇಖರ್ ಮಾತನಾಡುತ್ತಾ, ಜಿಲ್ಲೆಯಲ್ಲಿರುವ ಎಲ್ಲಾ ಇಲಾಖೆಗಳ ಇಂಜಿನಿಯರ್‍ಗಳು ಸೇರಿ ಪ್ರತಿ ವರ್ಷ ಜಿಲ್ಲಾ ಮಟ್ಟದಲ್ಲಿ ಇಂಜಿನಿಯರ್‍ಗಳ ದಿನಾಚರಣೆಯನ್ನು ಆಚರಿಸಬೇಕು ಎಂದು ಸಲಹೆ ನೀಡಿದರು.
ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ಎನ್.ವಿ. ರಾಮಮೂರ್ತಿ ಮಾತನಾಡಿ, ವಿಶ್ವೇಶ್ವರಯ್ಯ ಅವರು ಮೈಸೂರು ರಾಜ್ಯದ ಶಕ್ತಿಯಾಗಿದ್ದರು. ತಮ್ಮ ದೈತ್ಯ ಪ್ರತಿಭೆಯಿಂದ ವಿಶ್ವದ ಗಮನ ಸೆಳೆದಿದ್ದರು. ವಿಶ್ವೇಶ್ವರಯ್ಯ ಅವರ ಧ್ಯೇಯೋದ್ದೇಶಗಳಲ್ಲಿ ಒಂದನ್ನಾದರೂ ನಾವು ಅಳವಡಿಸಿಕೊಂಡಲ್ಲಿ ದಿನಾಚರಣೆ ಸಾರ್ಥಕವಾಗುತ್ತದೆ ಎಂದರು.
ಜಿಲ್ಲಾ ಗುತ್ತಿಗೆದಾರರ ಸಂಘದ ಎ.ಡಿ. ಬಲರಾಮಯ್ಯ ಮಾತನಾಡಿ, ವಿಶ್ವೇಶ್ವರಯ್ಯ ಅವರು ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರಲ್ಲದೆ, ಸಹಕಾರ, ನೀರಾವರಿ, ಕೈಗಾರಿಕೆ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸಿದ್ದರು. ನಾಡಿನ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಿದರು ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ ವಿಭಾಗೀಯ
ಕಚೇರಿಯ ಕಾರ್ಯಪಾಲಕ ಅಭಿಯಂತರರಾದ ಡಾ. ಆರ್. ಹೇಮಲತಾ ಮಾತನಾಡಿ, ಎಲ್ಲರ ಬೇಡಿಕೆಯಂತೆ 2023ರ ಜನವರಿ 1ರಂದು ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿ ವಿಶ್ವೇಶ್ವರಯ್ಯ ಅವರ ಪ್ರತಿಮೆ ಅನಾವರಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಸೌಜನ್ಯ ಪ್ರಾರ್ಥಿಸಿದರು. ಲೋಕೋಪಯೋಗಿ ಇಲಾಖೆ ಗುಣಭರವಸೆ ವಿಭಾಗದ ಎಇಇ ಜಿ.ಆರ್.ಸುರೇಶ್ ಸ್ವಾಗತಿಸಿದರು. ಪಾಲಿಕೆ ಇಂಜಿನಿಯರ್ ವನಿತಾ ಅವರು ‘ಸರ್ ಎಂ.ವಿ. ನೆನಪು’ ಕುರಿತು ಕವನ ವಾಚನ ಮಾಡಿದರು. ಸಹಾಯಕ ಇಂಜಿನಿಯರ್ ರಾಧಾಕೃಷ್ಣ ನಿರೂಪಿಸಿದರು.
ಇದಕ್ಕೂ ಮುನ್ನ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಸಿ.ಎಸ್. ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್‍ಗಳಾದ ಎಂ. ಚಿದಾನಂದ್, ಮಲ್ಲೇಶ್, ಪ್ರಭಾಕರ್, ಕೆ.ಜಿ. ರವಿಚಂದ್ರ ಕುಮಾರ್, ಬಿ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಲೋಕೋಪಯೋಗಿ ಇಲಾಖೆ ಮಧುಗಿರಿ ಉಪವಿಭಾಗದ ಜಿ.ಸುರೇಶ್, ತಾಂತ್ರಿಕ ಸಹಾಯಕ ಸಿ.ಎಸ್. ಮಲ್ಲಿಕಾರ್ಜುನ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‍ಗಳಾದ ಎಸ್.ಆರ್. ಹರೀಶ್, ಸಿ. ವಿಜಯ ಕುಮಾರ್, ವಿ.ಪ್ರಭಾಕರ್, ಗುರುಸಿದ್ದಪ್ಪ, ಎಚ್.ಎನ್.ಹೊನ್ನೇಶಪ್ಪ, ಜಿ.ಆರ್.ಸುರೇಶ್, ಸಿದ್ದಪ್ಪ, ರೇಣುಕಾಪ್ರಸಾದ್, ಹರೀಶ್, ಕೊಟ್ರೇಶ್, ರಾಮಕೃಷ್ಣ ಉಪಸ್ಥಿತರಿದ್ದರು.

(Visited 1 times, 1 visits today)
tumkur
Previous Articleಹೆಚ್ಚಿನ ತೆರಿಗೆಯಿಂದ ಬದುಕು ಕಷ್ಟ….!
Next Article ಎ.ಎಂ.ಬಾಬು ರಾಜೇಂದ್ರ ಪ್ರಸಾದ್ ನಿಧನ
News Desk Benkiyabale

Related Posts

೯೩ ನಿವೇಶನ ರಹಿತ ಫಲಾನುಭವಿಗಳ ಆಯ್ಕೆಗೆ ವಿಶೇಷ ಗ್ರಾಮಸಭೆ

November 21, 2026 5:36 pm news

ಇನ್ನರ್ ವ್ಹೀಲ್‌ನಿಂದ ಶಾಲಾ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ

November 21, 2026 5:34 pm news

ವೀರ ವನಿತೆ ಝಾನ್ಸಿಯ ರಾಣಿ ಅವರ ಜಯಂತಿ ಆಚರಣೆ

November 21, 2026 5:33 pm news
ತಾಜಾ ಸುದ್ಧಿಗಳು
news

೯೩ ನಿವೇಶನ ರಹಿತ ಫಲಾನುಭವಿಗಳ ಆಯ್ಕೆಗೆ ವಿಶೇಷ ಗ್ರಾಮಸಭೆ

November 21, 2026 5:36 pm
news

ಇನ್ನರ್ ವ್ಹೀಲ್‌ನಿಂದ ಶಾಲಾ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ

November 21, 2026 5:34 pm
news

ವೀರ ವನಿತೆ ಝಾನ್ಸಿಯ ರಾಣಿ ಅವರ ಜಯಂತಿ ಆಚರಣೆ

November 21, 2026 5:33 pm
news

ಕೊರಟಗೆರೆ ಜನರ ಆಶೀರ್ವಾದವೇ ನನ್ನ ಶಕ್ತಿ; ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಡಿಸಿಎಂ

November 21, 2026 5:32 pm
news

ಬಸವಣ್ಣನವರ ಅವಹೇಳನ: ವೀರಶೈವ ಲಿಂಗಾಯತ ಮಹಾಸಭಾ ಆಕ್ರೋಶ

November 20, 2026 5:32 pm
news

ನಾರಾಯಣಗುರು ನಿಗಮಕ್ಕೆ ಹಣಕೊಡಿ, ಪ್ರತಿಮೆ ಸ್ಥಾಪಿಸಿ

November 20, 2026 5:31 pm
Our Youtube Channel
Our Picks

೯೩ ನಿವೇಶನ ರಹಿತ ಫಲಾನುಭವಿಗಳ ಆಯ್ಕೆಗೆ ವಿಶೇಷ ಗ್ರಾಮಸಭೆ

November 21, 2026 5:36 pm

ಇನ್ನರ್ ವ್ಹೀಲ್‌ನಿಂದ ಶಾಲಾ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ

November 21, 2026 5:34 pm

ವೀರ ವನಿತೆ ಝಾನ್ಸಿಯ ರಾಣಿ ಅವರ ಜಯಂತಿ ಆಚರಣೆ

November 21, 2026 5:33 pm

ಕೊರಟಗೆರೆ ಜನರ ಆಶೀರ್ವಾದವೇ ನನ್ನ ಶಕ್ತಿ; ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಡಿಸಿಎಂ

November 21, 2026 5:32 pm

ಬಸವಣ್ಣನವರ ಅವಹೇಳನ: ವೀರಶೈವ ಲಿಂಗಾಯತ ಮಹಾಸಭಾ ಆಕ್ರೋಶ

November 20, 2026 5:32 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

೯೩ ನಿವೇಶನ ರಹಿತ ಫಲಾನುಭವಿಗಳ ಆಯ್ಕೆಗೆ ವಿಶೇಷ ಗ್ರಾಮಸಭೆ

By News Desk BenkiyabaleNovember 21, 2026 5:36 pm

ತುಮಕೂರು: ತಾಲ್ಲೂಕಿನ ಊರ್ಡಿಗೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿಂದು ಜರುಗಿದ ವಿಶೇಷ ಗ್ರಾಮಸಭೆಯಲ್ಲಿ ಸರ್ಕಾರಿ ವಸತಿ ಆಶ್ರಯ ಯೋಜನೆಯಡಿ ನಿವೇಶನ ರಹಿತ…

ಇನ್ನರ್ ವ್ಹೀಲ್‌ನಿಂದ ಶಾಲಾ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ

November 21, 2026 5:34 pm

ವೀರ ವನಿತೆ ಝಾನ್ಸಿಯ ರಾಣಿ ಅವರ ಜಯಂತಿ ಆಚರಣೆ

November 21, 2026 5:33 pm

ಕೊರಟಗೆರೆ ಜನರ ಆಶೀರ್ವಾದವೇ ನನ್ನ ಶಕ್ತಿ; ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಡಿಸಿಎಂ

November 21, 2026 5:32 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.