BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ
  • ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಬಿ.ಕೆ.ಸಪ್ತಶ್ರೀ ಹೇಳಿಕೆ
  • ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ: ಶಾಸಕ ವೆಂಕಟೇಶ್
  • ಕಾಸ್ಮೋಪಾಲಿಟನ್ ಕ್ಲಬ್‌ವತಿಯಿಂದ ನಿವೃತ್ತ ಯೋಧರಿಗೆ ಸನ್ಮಾನ
  • ಕೇಂದ್ರದ ವಿಳಂಬ ನೀತಿಗೆ ಪ್ರತಿಭಟನೆ ಅನಿವಾರ್ಯ
  • ತೆಂಗು ಬೆಳೆ: ಜಾಗೃತಿ ಮೂಡಿಸುವ ಕಾರ್ಯಕ್ರಮದ ವಾಹನಕ್ಕೆ ಶಾಸಕರಿಂದ ಹಸಿರು ನಿಶಾನೆ
  • ಡಾ.ಶಿವಕುಮಾರ ಶ್ರೀಗಳ ಪುಣ್ಯಸಂಸ್ಮರಣೆ: ದಾಸೋಹದಿನ ಆಚರಣೆ
  • ರೇಷ್ಮೆ ಕೃಷಿ ಬೆಳಗಾರರ ಗುಂಪು ಸಭೆ ಕಾರ್ಯಕ್ರಮ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ರಾಜಕಾರಣದಲ್ಲಿ ಏರುವುದು ಕಷ್ಟ, ಇಳಿಯುವುದು ಸುಲಭ
ಇತರೆ ಸುದ್ಧಿಗಳು

ರಾಜಕಾರಣದಲ್ಲಿ ಏರುವುದು ಕಷ್ಟ, ಇಳಿಯುವುದು ಸುಲಭ

By News Desk BenkiyabaleUpdated:November 07, 2022 4:33 pm

ತುಮಕೂರು


ಮಾಜಿ ಲೋಕಸಭಾ ಉಪಸಭಾಪತಿ,ದಿವಂಗತ ಎಸ್.ಮಲ್ಲಿಕಾರ್ಜುನಯ್ಯ ಅವರ 92ನೇ ಹುಟ್ಟು ಹಬ್ಬದ ಅಂಗವಾಗಿ ಇಂದು ಬಾಲಭವನದಲ್ಲಿ ರಾಷ್ಟ್ರಸೇವಕ ಮಲ್ಲಿಕ್ ಎಂಬ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಎಸ್.ಮಲ್ಲಿಕಾರ್ಜುನಯ್ಯ ಅವರ 92ನೇ ಜನ್ಮ ದಿನೋತ್ಸವ ಸಮಿತಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಸಮಾರಂಭ ಉದ್ಘಾಟಿಸುವುದರ ಜೊತೆಗೆ,ರಾಷ್ಟ್ರ ಸೇವಕ ಮಲ್ಲಿಕ್ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು,ಜನಸಂಘದ ಕಾಲಘಟ್ಟದಲ್ಲಿ ಕೆಲಸ ಮಾಡುವುದಕ್ಕೂ,ಭಾಜಪ ಕಾಲದಲ್ಲಿ ಕೆಲಸ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಜನಸಂಘದ ಕಾಲದಲ್ಲಿ ಜನರು ನಮ್ಮನ್ನು ಅಪಹಾಸ್ಯದಿಂದ ನೋಡುತ್ತಿದ್ದರು. ಜೈಲಿಗೋದವರೇ ಹೆಚ್ಚು ಜನ ಜನಸಂಘದಲ್ಲಿದ್ದರು.1972ರ ಜನಸಂಘದ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನಯ್ಯ,ಆವಾಗ ನಾನಿನ್ನು ಹಸುಗೂಸು.1992ರಲ್ಲಿ ಅವರು ಉಪಸಭಾಪತಿಯಾಗಿದ್ದಾಗ ಅವರನ್ನು ಭೇಟಿಯಾದಾಗ,ರಾಜಕಾರಣ ಜಾರು ಬಂಡೆ ಇದ್ದಂತೆ,ಎರುವುದು ಕಷ್ಟ,ಆದರೆ ಇಳಿಯುವುದು ಅತಿ ಸುಲಭ ಎಂಬ ಕಿವಿ ಮಾತು ಹೇಳಿದ್ದರು.ಅಂತಹವರ ಕಾರ್ಯಕ್ರಮಕ್ಕೆ ನನ್ನನ್ನು ಕರೆಸಿ,ಉದ್ಘಾಟಿಸಲು ಕರೆಸಿರುವುದು,ಅವರಲ್ಲಿಯ ಕೆಲ ಗುಣಗಳು ನನಗೆ ಬರಲಿ ಎಂಬುದು ಇರಬೇಕು ಎಂದರು.
ಜನಸಂಘದ ಕಾಲದಲ್ಲಿ ಒಂದು ಸಿದ್ದಾಂತಕ್ಕೆ ಕಟ್ಟಿ ಬದ್ದವಾದ ನಂಬಿಕೆ ಹೊಂದಿದ್ದ ಕಾರ್ಯಕರ್ತರೇ ಸಂಪತ್ತು. ಇಂದು ಕಾಲ ಬದಲಾಗಿದೆ. ಬಿಜೆಪಿಗೆ ಅಪಾರವಾದ ಜನಮನ್ನಣೆ ದೊರೆತಿದೆ.ಜಗತ್ತು ಗುರುತಿಸುವಂತಹ ರಾಜಕೀಯ ನೇತೃತ್ವವೂ ಕೂಡ ನಮ್ಮದಾಗಿದೆ.ಇಂದು ಪಕ್ಷಕ್ಕಾಗಿ ಕೆಲಸ ಮಾಡುವುದು ಕಷ್ಟವಲ್ಲ.ವಿರೋಧಪಕ್ಷವಾಗಿ ಕೆಲಸ ಮಾಡುವುದು ಕಷ್ಟವಿದ್ದ ಕಾಲದಲ್ಲಿ ಒಂದು ಪಕ್ಷವನ್ನು ಮುನ್ನಡೆಸಿದ ಮಲ್ಲಿಕಾರ್ಜುನಯ್ಯ ನಮಗೆಲ್ಲಾ ಮಾದರಿ.ಇಂದು ಪಕ್ಷ ಇಷ್ಟು ಬೆಳೆದಿದೆ ಎಂದರೆ ಮಲ್ಲಿಕಾರ್ಜುನಯ್ಯ ಅಂತಹ ಹಲವರ ಶ್ರಮವಿದೆ ಎಂದು ಸಿ.ಟಿ.ರವಿ ಅಭಿಪ್ರಾಯಪಟ್ಟರು.
ಹಿರಿಯ ಮುಖಂಡ ರಾಮಚಂದ್ರಗೌಡ ಮಾತನಾಡಿ,ನನ್ನ ಅವರ ಸಂಬಂಧ ಸುಮಾರು 62 ವರ್ಷದ್ದು,ನಾನು ಶಾಸಕ, ಸಭಾಪತಿ,ಉಪಸಭಾಪತಿ ಎಂಬ ಅಹಂನ್ನು ಹೊಂದಿದವರಲ್ಲ.ಬಸವಣ್ಣನವರ ಕಲ ಬೇಡ,ಕೊಲಬೇಡ,ಹುಸಿಯ ನುಡಿಯ ಬೇಡ ಎಂಬ ನುಡಿಯಂತೆ ಬದುಕಿದವರು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಮಲ್ಲಿಕ್ ಅಭಿನಂದನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎಸ್.ನಿರಂಜನ್,ಸಜ್ಜನ ರಾಜಕಾರಣಿಯಾಗಿದ್ದ ಮಲ್ಲಿಕಾರ್ಜುನಯ್ಯ ಅವರ ಹೆಸರಿನಲ್ಲಿ ಅಭಿನಂದನಾ ಗ್ರಂಥವೊಂದನ್ನು ತಂದು, ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕೆಂಬ ಹಲವರ ಸಲಹೆಯ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಶ್ರಮ ಪಟ್ಟು ರಾಷ್ಟ್ರಸೇವಕ ಮಲ್ಲಿಕ್ ಎಂಬ ಅಭಿನಂದನಾ ಗ್ರಂಥವನ್ನು ಹೊರತರಲಾಗಿದೆ.ರಾಜಕಾರಣಿಗಳು,ಪತ್ರಕರ್ತರು,ಜನಸಾಮಾ ನ್ಯರುಗಳು ತಾವು ಮಲ್ಲಿಕಾರ್ಜುನಯ್ಯ ಅವರನ್ನು ಹೇಗೆ ಕಂಡಿದ್ದರೋ,ಅದೇ ರೀತಿ ತಮ್ಮ ಲೇಖನಗಳಲ್ಲಿ ಚಿತ್ರಿಸಿದ್ದಾರೆ. ಜಿಲ್ಲೆಯ ರಾಜಕಾರಣವನ್ನು ಅಧ್ಯಯನ ಮಾಡಲು ಇದೊಂದು ಉತ್ತಮ ಅಕರ ಗ್ರಂಥವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನಯ್ಯ ಅಭಿನಂದನಾ ಸಮಿತಿಯ ಅಧ್ಯಕ್ಷ ಡಾ.ಹುಲಿನಾಯ್ಕರ್,ಗೌರವಾಧ್ಯಕ್ಷ ಹೆಚ್.ಜಿ.ಚಂದ್ರಶೇಖರ್,ಮಲ್ಲಿಕಾರ್ಜುನಯ್ಯ ಅವರ ಪತ್ನಿ,ಜಯದೇವಮ್ಮ ಮಲ್ಲಿಕಾರ್ಜುನಯ್ಯ, ಸಂಸದ ಜಿ.ಎಸ್.ಬಸವರಾಜು,ಹಿರಿಯ ಮುಖಂಡ ರಾಮಚಂದ್ರಗೌಡ,ಶಾಸಕ ಜೋತಿಗಣೇಶ್, ಅಭಿನಂದನಾ ಸಮಿತಿಯ ಮುರುಳೀಧರ ಹಾಲಪ್ಪ,ಅಯಾಜ್ ಅಹಮದ್,ಎಸ್.ಪಿ.ಚಿದಾನಂದ್,ಮಾಜಿ ಶಾಸಕರಾದ ಸೊಗಡು ಶಿವಣ್ಣ,ಗಂಗಹನುಮಯ್ಯ .ಎಸ್.ಅರ್.ಪಾಟೀಲ್,ಮತ್ತಿತರರು ಉಪಸ್ಥಿತರಿದ್ದರು.

(Visited 15 times, 1 visits today)
tumkur
Previous Articleಸ್ತನ ಕ್ಯಾನ್ಸರ್ ಜಾಗೃತಿ ಜಾಥಾ
Next Article ಜೆ.ಇ.ಲಸಿಕಾ ಅಭಿಯಾನದ ಅರಿವು ಮೂಡಿಸಿ
News Desk Benkiyabale

Related Posts

ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ

January 27, 2026 4:05 pm ಇತರೆ ಸುದ್ಧಿಗಳು

ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಬಿ.ಕೆ.ಸಪ್ತಶ್ರೀ ಹೇಳಿಕೆ

January 27, 2026 4:02 pm ಇತರೆ ಸುದ್ಧಿಗಳು

ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ: ಶಾಸಕ ವೆಂಕಟೇಶ್

January 27, 2026 3:59 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ

January 27, 2026 4:05 pm
ಇತರೆ ಸುದ್ಧಿಗಳು

ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಬಿ.ಕೆ.ಸಪ್ತಶ್ರೀ ಹೇಳಿಕೆ

January 27, 2026 4:02 pm
ಇತರೆ ಸುದ್ಧಿಗಳು

ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ: ಶಾಸಕ ವೆಂಕಟೇಶ್

January 27, 2026 3:59 pm
ಇತರೆ ಸುದ್ಧಿಗಳು

ಕಾಸ್ಮೋಪಾಲಿಟನ್ ಕ್ಲಬ್‌ವತಿಯಿಂದ ನಿವೃತ್ತ ಯೋಧರಿಗೆ ಸನ್ಮಾನ

January 27, 2026 3:57 pm
ಇತರೆ ಸುದ್ಧಿಗಳು

ಕೇಂದ್ರದ ವಿಳಂಬ ನೀತಿಗೆ ಪ್ರತಿಭಟನೆ ಅನಿವಾರ್ಯ

January 27, 2026 3:55 pm
ಇತರೆ ಸುದ್ಧಿಗಳು

ತೆಂಗು ಬೆಳೆ: ಜಾಗೃತಿ ಮೂಡಿಸುವ ಕಾರ್ಯಕ್ರಮದ ವಾಹನಕ್ಕೆ ಶಾಸಕರಿಂದ ಹಸಿರು ನಿಶಾನೆ

January 22, 2026 4:20 pm
Our Youtube Channel
Our Picks

ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ

January 27, 2026 4:05 pm

ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಬಿ.ಕೆ.ಸಪ್ತಶ್ರೀ ಹೇಳಿಕೆ

January 27, 2026 4:02 pm

ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ: ಶಾಸಕ ವೆಂಕಟೇಶ್

January 27, 2026 3:59 pm

ಕಾಸ್ಮೋಪಾಲಿಟನ್ ಕ್ಲಬ್‌ವತಿಯಿಂದ ನಿವೃತ್ತ ಯೋಧರಿಗೆ ಸನ್ಮಾನ

January 27, 2026 3:57 pm

ಕೇಂದ್ರದ ವಿಳಂಬ ನೀತಿಗೆ ಪ್ರತಿಭಟನೆ ಅನಿವಾರ್ಯ

January 27, 2026 3:55 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ

By News Desk BenkiyabaleJanuary 27, 2026 4:05 pm

ತುಮಕೂರು: ಜಿಲ್ಲೆಯಾದ್ಯಂತ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಸಂದರ್ಭದಲ್ಲಿ ಗ್ರಾಮೀಣಭಾಗದ ಕಾರ್ಯ ನಿರತ ಪತ್ರಕರ್ತರನ್ನು ಪರಿಗಣಿಸುವಂತೆ ಜಿಲ್ಲಾಧಿಕಾರಿಗೆ ಜಿಲ್ಲಾ ಉಸ್ತುವಾರಿ…

ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಬಿ.ಕೆ.ಸಪ್ತಶ್ರೀ ಹೇಳಿಕೆ

January 27, 2026 4:02 pm

ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ: ಶಾಸಕ ವೆಂಕಟೇಶ್

January 27, 2026 3:59 pm

ಕಾಸ್ಮೋಪಾಲಿಟನ್ ಕ್ಲಬ್‌ವತಿಯಿಂದ ನಿವೃತ್ತ ಯೋಧರಿಗೆ ಸನ್ಮಾನ

January 27, 2026 3:57 pm
News by Date
February 2026
M T W T F S S
 1
2345678
9101112131415
16171819202122
232425262728  
« Jan    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.