BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಪಿಡಿಒಗಳಿಗೆ ಕೆಲಸದಲ್ಲಿ ಒತ್ತಡ ಏರದಂತೆ ಮನವಿ
  • ಹೇಮಾವತಿ ನೀರಿಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಶಾಸಕ ಭರವಸೆ
  • ಕೊಲೆ ಪ್ರಕರಣದ ಆರೋಪಿಗಳ ಬಂಧನ
  • ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆ ಆಚರಣೆ
  • ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಆಚರಣೆ
  • ಜಾನಪದವು ಕೇವಲ ಮನರಂಜನೆಯ ಸಾಧನವಲ್ಲ
  • ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಪೊಲೀಸರಿಂದ ಸಂಕಲ್ಪ
  • ವಿದ್ಯಾರ್ಥಿ ನಿಲಯದ ಮುಂಭಾಗ ಹರಿಯುತ್ತಿರುವ ಚರಂಡಿ ನೀರು: ಕ್ರಮಕ್ಕೆ ಸಾರ್ವಜನಿಕರ ಆಗ್ರಹ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಗದ್ದುಗೆಯಿಂದ ಮೋದಿ ಸರ್ಕಾರವನ್ನು ಉರುಳಿಸಿ : ಮಾಜಿ ಸಚಿವ ಟಿ.ಬಿ.ಜಯಚಂದ್ರ
ತುಮಕೂರು ಜಿಲ್ಲಾ ಸುದ್ಧಿಗಳು

ಗದ್ದುಗೆಯಿಂದ ಮೋದಿ ಸರ್ಕಾರವನ್ನು ಉರುಳಿಸಿ : ಮಾಜಿ ಸಚಿವ ಟಿ.ಬಿ.ಜಯಚಂದ್ರ

By News Desk BenkiyabaleUpdated:December 20, 2018 5:18 pm

ಚಿಕ್ಕನಾಯಕನಹಳ್ಳಿ :

      ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರು ಇದರ ಉಪಯೋಗ ಪಡೆದು ಪ್ರಧಾನಿ ಗದ್ದುಗೆಯಿಂದ ಮೋದಿ ಸರ್ಕಾರವನ್ನು ಉರುಳಿಸಿ ರಾಹುಲ್‍ಗಾಂಧಿಯವರನ್ನು ಪ್ರಧಾನಮಂತ್ರಿ ಮಾಡಲು ಇದು ಸಕಾಲ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

      ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆ ಮತ್ತು ಶಕ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ಗೆ ಭವಿಷ್ಯವಿಲ್ಲ ಎಂಬ ಸನ್ನಿವೇಶವನ್ನು ನಿರ್ಮಿಸಿದ್ದ ಮೋದಿ ಹೇಳಿಕೆ ಕೊಡುತ್ತಿದ್ದರು ಆದರೆ ಈಗ ಉತ್ತರ ಭಾರತದ 3 ರಾಜ್ಯಗಳಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿ ಅಧಿಕಾರದ ಗದ್ದುಗೆ ಹಿಡಿದಿದೆ, ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ಹಗಲು ಇರುಳು ದುಡಿದು ರಾಹುಲ್ ಗಾಂಧೀಯವರನ್ನು ಪ್ರಧಾನಮಂತ್ರಿ ಮಾಡಲು ಎಲ್ಲರೂ ಶ್ರಮಿಸುವಂತೆ ಕರೆ ನೀಡಿದರು.

      ದೇಶದಲ್ಲಿ ಆಗುತ್ತಿರುವ ಪರಿವರ್ತನೆಯನ್ನು ತಿಳಿದು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಶಕ್ತಿ ಕಾರ್ಯಕ್ರಮದ ಮೂಲಕ ಗ್ರಾಮೀಣ ಯುವಕರನ್ನು ಕಾಂಗ್ರೆಸ್ಸಿಗೆ ಸೆಳೆಯಲು ಕಾರ್ಯಕರ್ತರು ಶ್ರಮಿಸಿ ಎಂದ ಅವರು, ರಾಫೇಲ್ ಯುದ್ದ ಸಾಮಾಗ್ರಿಗಳಲ್ಲಿ ಕೇಂದ್ರ ಸರಕಾರ ಸುಪ್ರಿಂ ಕೋರ್ಟಿಗೆ ತಪ್ಪು ವರದಿ ನೀಡಿ ವಂಚಿಸಿದ್ದಾರೆ, ಕೇಂದ್ರ ಸರಕಾರ ಪಬ್ಲಿಕ್ ಅಕೌಂಟ್ ಮುಂದೆ ಹೋಗದೇ ರಾಫೇಲ್ ಹಗರಣದಲ್ಲಿ ಸುಪ್ರಿಂ ಕೋರ್ಟಿಗೆ ಸುಳ್ಳು ಅಫಿಡೇವಿಟ್ ಹಾಕಲು ಹೊರಟಿದೆ ಎಂದ ಅವರು ಹೇಮಾವತಿ ಅಪ್ಪರ್ ಭದ್ರ ಯೋಜನೆ ಎತ್ತಿನ ಹೊಳೆ ಯೋಜನೆ ಸಹಕಾರಗೊಂಡಾಗ ಮಾತ್ರ ಜಿಲ್ಲೆ ಬರದಿಂದ ಹೊರ ಬರಲು ಸಾಧ್ಯ, ಈಗಾಗಲೇ 100 ತಾಲ್ಲೂಕುಗಳು ಬರಪ್ರದೇಶವೆಂದು ಸರಕಾರ ಘೋಷಿಸಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಬರ ಬರುವ ಮೊದಲೇ ಸರಕಾರ ಎತ್ತೇಚ್ಚೆಕೊಂಡು ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಮುಂದಿನ ವರ್ಷ ನಡೆಯುವ ಪಾರ್ಲಿಮೆಂಟ್ ಚುನಾವಣೆಗೆ ಈಗಿನಿಂದಲೇ ಕಾರ್ಯಕರ್ತರು ತಯಾರಾಗಬೇಕು ಎಂದರು.

      ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, 23 ರಂದು ನಡೆಯುವ ಶಕ್ತಿ ಕಾರ್ಯಕ್ರಮ ಪಟ್ಟಣದಲ್ಲಿ ನಡೆಯುತ್ತಿದ್ದು, ಶಕ್ತಿ ಕಾರ್ಯಕ್ರಮದ ಮೂಲಕ ಹಳ್ಳಿಯ ಜನರನ್ನು ಸೆಳೆದು ಅವರನ್ನು ನೊಂದಾವಣಿ ಮಾಡಿಕೊಳ್ಳಲು ಅವರ ಮೊಬೈಲ್ ಮೂಲಕ ಸದಸ್ಯತ್ವ ಪಡೆಯಬಹುದು ಎಂದ ಅವರು, ಯು.ಪಿ.ಎ ಅಧಿಕಾರವಧಿಯಲ್ಲಿ 82 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದರು, ಮೋದಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಸಾರ್ವಜನಿಕ ಸಭೆಗಳಲ್ಲಿ ಹೇಳುತ್ತಿದ್ದರು ಈಗ ದೇಶದಲ್ಲಿ ಮೋದಿ ಮುಕ್ತ ರಾಜ್ಯವಾಗುತ್ತಿದೆ ಇದಕ್ಕೆ ಸಾಕ್ಷಿ ಈಗ ನಡೆದ 3 ರಾಜ್ಯಗಳ ಚುನಾವಣೆ ಎಂದರು.

      ಕೆ.ಪಿ.ಸಿ.ಸಿ ವಕ್ತಾರ ಮರುಳೀಧರ ಹಾಲಪ್ಪ ಮಾತನಾಡಿ, ಮೋದಿ ಸರಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಂಡರು ಅದು ರಾತ್ರಿ ವೇಳೆ, ನಾಲ್ಕುವರೆ ವರ್ಷಗಳಿಂದ ಕೇಂದ್ರ ಸರ್ಕಾರ ದೇಶದ ಜನತೆಗೆ ಸುಳ್ಳು ಹೇಳುತ್ತಾ ವಂಚಿಸಿದೆ, ಸಿ.ಬಿ.ಐ ಕಛೇರಿ, ನೋಟ್ ಅಮಾನಿಕರಣ, ಆರ್.ಬಿ.ಐ ಊರ್ಜಿತ ಪಟೇಲ್‍ರವರ ರಾಜೀನಾಮೆ ಸೇರಿದಂತೆ ಅನೇಕ ಯೋಜನೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ, ರಾಮಜನ್ಮ ಭೂಮಿ ವಿಚಾರದಿಂದ ಅಧಿಕಾರಕ್ಕೆ ಬಂದ ಮೋದಿ ಸರಕಾರ ಅದರಲ್ಲಿ ಭಾಗವಹಿಸಿದ ಹಿರಿಯರನ್ನು ಕಡೆಗಣಿಸಿ ಸರ್ವಾಧೀಕಾರಿಯಂತೆ ವರ್ತಿಸುತ್ತಿದ್ದಾರೆ ಆರೋಪಿಸಿದರು.

      ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಹನುಮಂತಪ್ಪ, ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ, ಮಾಜಿ ಶಾಸಕ ಬಿ.ಲಕ್ಕಪ್ಪ, ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಉಪಾಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕಾರ್ಯದರ್ಶಿ ಬ್ರಹ್ಮಾನಂದ, ವಕ್ತಾರ ಕೆ.ಜಿ.ಕೃಷ್ಣೇಗೌಡ, ಹೊಯ್ಸಳಕಟ್ಟೇ ಗಿರೀಶ್, ತಾ.ಪಂ.ಸದಸ್ಯೆ ಕಲಾವತಿ, ಪುರಸಭಾ ಸದಸ್ಯೆ ಉಮಾಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.

(Visited 28 times, 1 visits today)
Previous Articleಜಿಲ್ಲೆಯಲ್ಲಿ ಹೆಚ್ಚಿದ ಪರಿತ್ಯಕ್ತ ಮಕ್ಕಳ ಪ್ರಕರಣ : ನೋವಿನ ಸಂಗತಿ – ಸಿ.ಇ.ಓ. ಅನೀಸ್ ಕಣ್ಮಣಿ ಜಾಯ್.
Next Article ಜಿಲ್ಲೆ ಪೌರಾಣಿಕ ನಾಟಕಗಳ ತವರೂರು: ಶಿವಾನಂದಶ್ರೀ
News Desk Benkiyabale

Related Posts

ಪಿಡಿಒಗಳಿಗೆ ಕೆಲಸದಲ್ಲಿ ಒತ್ತಡ ಏರದಂತೆ ಮನವಿ

July 29, 2026 4:22 pm news

ಹೇಮಾವತಿ ನೀರಿಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಶಾಸಕ ಭರವಸೆ

July 29, 2026 4:20 pm news

ಕೊಲೆ ಪ್ರಕರಣದ ಆರೋಪಿಗಳ ಬಂಧನ

July 29, 2026 4:19 pm news
ತಾಜಾ ಸುದ್ಧಿಗಳು
news

ಪಿಡಿಒಗಳಿಗೆ ಕೆಲಸದಲ್ಲಿ ಒತ್ತಡ ಏರದಂತೆ ಮನವಿ

July 29, 2026 4:22 pm
news

ಹೇಮಾವತಿ ನೀರಿಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಶಾಸಕ ಭರವಸೆ

July 29, 2026 4:20 pm
news

ಕೊಲೆ ಪ್ರಕರಣದ ಆರೋಪಿಗಳ ಬಂಧನ

July 29, 2026 4:19 pm
news

ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆ ಆಚರಣೆ

July 29, 2026 4:17 pm
news

ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಆಚರಣೆ

July 29, 2026 4:15 pm
news

ಜಾನಪದವು ಕೇವಲ ಮನರಂಜನೆಯ ಸಾಧನವಲ್ಲ

July 29, 2026 4:13 pm
Our Youtube Channel
Our Picks

ಪಿಡಿಒಗಳಿಗೆ ಕೆಲಸದಲ್ಲಿ ಒತ್ತಡ ಏರದಂತೆ ಮನವಿ

July 29, 2026 4:22 pm

ಹೇಮಾವತಿ ನೀರಿಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಶಾಸಕ ಭರವಸೆ

July 29, 2026 4:20 pm

ಕೊಲೆ ಪ್ರಕರಣದ ಆರೋಪಿಗಳ ಬಂಧನ

July 29, 2026 4:19 pm

ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆ ಆಚರಣೆ

July 29, 2026 4:17 pm

ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಆಚರಣೆ

July 29, 2026 4:15 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಪಿಡಿಒಗಳಿಗೆ ಕೆಲಸದಲ್ಲಿ ಒತ್ತಡ ಏರದಂತೆ ಮನವಿ

By News Desk BenkiyabaleJuly 29, 2026 4:22 pm

ತುಮಕೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಬಿ ಜಿ ರಾಮ್ ಜಿ ಯೋಜನೆಯು ಬೇಡಿಕೆ ಆಧಾರಿತ ಕಾರ್ಯಕ್ರಮವಾಗಿದ್ದು, ಗುರಿ ಆಧಾರಿತ…

ಹೇಮಾವತಿ ನೀರಿಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಶಾಸಕ ಭರವಸೆ

July 29, 2026 4:20 pm

ಕೊಲೆ ಪ್ರಕರಣದ ಆರೋಪಿಗಳ ಬಂಧನ

July 29, 2026 4:19 pm

ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆ ಆಚರಣೆ

July 29, 2026 4:17 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.