BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ
  • ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ
  • ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ
  • ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ
  • ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ
  • ಸರ್ಕಾರದಿಂದ ಇಂಜಿನಿಯರ್ಸ್ ದಿನ ಆಚರಣೆ
  • ಉಪ ಮುಖ್ಯಮಂತ್ರಿಗಳಿ0ದ ತುಮಕೂರು ದಸರಾ-೨೦೨೬ ಲಾಂಛನ ಬಿಡುಗಡೆ
  • ಶಾಲಾ ಸಾಮಗ್ರಿಗಳಿಂದ ಅರಳಿದ ವಿದ್ಯಾ ಗಣಪತಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸಂಘಟಿತವಾಗಿ ನಡೆದ ಹೋರಾಟವೇ ಶರಣಚಳವಳಿ: ರಂಜಾನ್ ದರ್ಗಾ
news

ಸಂಘಟಿತವಾಗಿ ನಡೆದ ಹೋರಾಟವೇ ಶರಣಚಳವಳಿ: ರಂಜಾನ್ ದರ್ಗಾ

By News Desk BenkiyabaleUpdated:November 05, 2024 6:35 pm

ತುಮಕೂರು: ನಮ್ಮದೇ ಶ್ರೇಷ್ಠ ಎಂಬ ವಾದದ ಮೂಲಕ ಇತರೆಯವರನ್ನು ಹೊರ ಹಾಕುವ ಮನುವಾದದ ವಿರುದ್ದ ಅತ್ಯಂತ ಸಂಘಟಿತವಾಗಿ ನಡೆದ ಹೋರಾಟವೇ ಎಲ್ಲರನ್ನು ಒಳಗೊಳ್ಳುವ ಶರಣಚಳವಳಿ,ಅದು ಕಲ್ಯಾಣದ ಕ್ರಾಂತಿಯಲ್ಲ, ಪರಿವರ್ತನೆಯ ಚಳವಳಿ ಎಂದು ಹಿರಿಯ ಸಾಹಿತಿ ಮತ್ತು ಬಸವತತ್ವದ ಪ್ರತಿಪಾದಕರಾದ ರಂಜಾನ್ ದರ್ಗಾ ತಿಳಿಸಿದ್ದಾರೆ.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತುಮಕೂರು ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣ:ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಇಡೀ ಪ್ರಪಂಚದ ಮೊಟ್ಟ ಮೊದಲ ಒಳ್ಳಗೊಳ್ಳುವ ಸಂಸ್ಕೃತಿ ಎಂದರೆ ಅದು ಬಸವ ಸಂಸ್ಕೃತಿ. ಹಾಗಾಗಿಯೇ ಬಸವಣ್ಣನನ್ನು ಸಾಂಸ್ಕೃತಿಕ ನಾಯಕನೆಂದು ಕರೆಯಲಾಗುತ್ತದೆ ಎಂದರು.

ಬಸವ ಸಂಸ್ಕೃತಿ ಅಥವಾ ಶರಣ ಚಳವಳಿ ಎಂಬುದು ವೈದಿಕರ ವಿರುದ್ದ ಅವೈದಿಕರು,ವರ್ಣ ಭೇಧ,ವರ್ಗ ಭೇಧ, ಲಿಂಗಭೇಧವನ್ನು ದಿಕ್ಕರಿಸಿ ನಡೆಸಿದ ಸಂಘಟಿತ ಹೋರಾಟವಾಗಿದೆ.ಹಾಗಾಗಿಯೇ ಲೋಕಾಯುತರನ್ನ,ಚಾರ್ವಕರನ್ನು ಕೊಂದ ವೈದಿಕರೇ ಬಸವಣ್ಣ ಮತ್ತು ಆತನ ಅನುಯಾಯಿಗಳನ್ನು ಕಲ್ಯಾಣ ಕ್ರಾಂತಿಯ ಹೆಸರಿನಲ್ಲಿ ನಡೆಸಿದ ನರಮೇಧ. ಬಸವಣ್ಣ ಹಾಗೂ ಅವರ ಅನುಯಾಯಿಗಳನ್ನು ಕೊಲ್ಲುವ ಜೊತೆಗೆ, ಶರಣ ಸಾಹಿತ್ಯವನ್ನು ಸುಟ್ಟರು. ಇಂದು ನಾವು ಓದುತ್ತಿರುವುದು ತಿರುಚಲ್ಪಟ್ಟ ಶರಣ ಸಾಹಿತ್ಯ.ನಮಗೆ ಲಭ್ಯವಿರುವುದು ಶೇ10ರಷ್ಟು ಶರಣ ಸಾಹಿತ್ಯ ಮಾತ್ರ ಎಂದು ರಂಜಾನ್ ದರ್ಗಾ ನುಡಿದರು.

ಬಸವ ಧರ್ಮ ಅಥವಾ ಶರಣ ಧರ್ಮದಲ್ಲಿ ಎಲ್ಲವೂ ಹೊಸತನದಿಂದ ಕೂಡಿತ್ತು.ಮಠಗಳಿಗೆ ಬದಲಾಗಿ ಮಹಾಮನೆ, ಗಣಚಾರಕೆಕ ಬದಲಾಗಿ ಲಿಂಗಾಚಾರ, ಎಲ್ಲರನ್ನು ಒಳಗೊಳ್ಳುವ ಸಂಕುಲ ಪ್ರಜ್ಞೆ, ವರ್ಗ ಪ್ರಜ್ಞೆ ಜಾರಿಯಲ್ಲಿತ್ತು.ಇಡೀ ಪ್ರಪಂಚದ ಮೊಟ್ಟ ಮೊದಲ ದುಡಿಯುವ ವರ್ಗದ ನಾಯಕ,ಸ್ತಿçÃವಾದಿ ಎಂದರೆ ಅದು ಬಸವಣ್ಣ.ಮನುವಾದ ಧರ್ಮದ ಮೂಲ ಬ್ರಾಹ್ಮಣನೆಂದರೆ, ಬಸವ ಸಂಸ್ಕೃತಿಕ ದಯೆಯೇ ಧರ್ಮದ ಮೂಲ ಎಂದರು.ಸಕಲ ಚರಾಚರ ವಸ್ತುಗಳಿಗೂ ಜೀವವಿದೆ ಎಂದು ಪ್ರತಿಪಾದಿಸಿದವರು ಬಸವಣ್ಣ, ಹಾಗಾಗಿ ಬಸವಣ್ಣ ಮಹಿಳೆಯರ, ಬಡವರ, ಶ್ರಮಿಕವರ್ಗದ ಸಾಂಸ್ಕೃತಿಕ ನಾಯಕರಾಗಿದ್ದಾರೆ ಎಂದು ರಂಜಾನ್ ದರ್ಗಾ ತಿಳಿಸಿದರು.
ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆAಕಟೇಶ್ವರಲು ಮಾತನಾಡಿ,12ಶತಮಾನದ ಬಸವಣ್ಣನವರನ್ನು 21ನೇ ಶತಮಾನದ ಯುವಜನತೆಗೆ ಪರಿಚಯಿಸುತ್ತಿರುವುದು ಅವರು ಇಂದಿಗೂ ಪ್ರಸ್ತುತ ಎಂಬುದನ್ನು ತೋರಿಸುತ್ತದೆ.ಕರ್ನಾಟಕ ಇಡೀ ಪ್ರಪಂಚಕ್ಕೆ ಅನೇಕ ಮಾದರಿ ನಾಯಕರನ್ನು ಕೊಡುಗೆಯಾಗಿ ನೀಡಿದೆ.ಅವರಲ್ಲಿ ಬಸವಣ್ಣ ಯಾವುದೇ ಡಿಗ್ರಿ ಪಡೆಯದ ವರ್ಗ, ವರ್ಣ, ಲಿಂಗ ಸಮಾನತೆ, ಸಮ ಸಮಾಜದ ಕನಸು ಕಂಡ ನಾಯಕ. ಇದನ್ನು ಇಂದಿನ ಯುವಜನತೆ ಅರ್ಥ ಮಾಡಿಕೊಳ್ಳಬೇಕು. ಇಂತಹವರನ್ನು ತಮ್ಮ ನಾಯಕರಾಗಿ ಆಯ್ಕೆ ಮಾಡಿಕೊಳ್ಳಬೇಕೆಂದರು.

ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಮಾತನಾಡಿ,ಬಸವಣ್ಣನನ್ನು ಸಾಂಸ್ಕೃತಿಕ ನಾಯಕನೆಂದಾಕ್ಷಣ ಚಪ್ಪಾಳೆ ತೊಟ್ಟುವುದರಿಂದ ಪ್ರಯೋಜನವಿಲ್ಲ.ಬಸವಣ್ಣ ಪ್ರತಿಪಾದಿಸಿದ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು,ನಾವೆಲ್ಲರೂ ಸಾಂಸ್ಕೃತಿಕ ನಾಯಕರಾಗಬೇಕು.ಬಸವಣ್ಣನನ್ನು ಒಂದು ಧರ್ಮದ ಚೌಕಟ್ಟಿಗೆ ಒಳಪಡಿಸಿದ್ದು ದೊಡ್ಡ ಅನಾಹುತ.ಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಬಸವಣ್ಣನ ರೀತಿ ನಾವೆಲ್ಲರೂ ಬಾಳಬೇಕಿದೆ.ಇಂತಹ ಕಾರ್ಯಕ್ರಮಗಳ ವಿವಿಗಳಲ್ಲಿ ನಡೆದರೇ ಬಸವಣ್ಣ ಯುವಜನರ ಮನಸ್ಸಿನಲ್ಲಿ ಬೇರೂರಲು ಸಾಧ್ಯ ಎಂದರು.

ಶರಣರು ಮತ್ತು ಸ್ತಿçà ಸಮಾನತೆಯ ಮಾನವೀಯ ನೆಲೆಗಳು ಎಂಬ ವಿಚಾರವಾಗಿ ಮಾತನಾಡಿದ ಹಿರಿಯ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ,ಇAದಿನ ಕಾಲ ಕಡು ಕಷ್ಟದ ಕಾಲ.ಧರ್ಮ, ಜಾತಿ, ಭಾಷೆಯ ಹೆಸರಿನಲ್ಲಿ ಜನರ ನಡುವೆ ವಿಷ ಬೀಜ ಬಿತ್ತುತ್ತಿರುವ ಈ ಕಾಲದಲ್ಲಿ ಎಲ್ಲರನ್ನು ಒಳಗೊಳ್ಳುವ ಬಸವಣ್ಣನಂತಹ ಸಾಂಸ್ಕೃತಿಕ ನಾಯಕನ ಅಗತ್ಯತೆ ಇದೆ.ರಾಜಕೀಯ ನಾಯಕರಿಂದಾಗಲಿ, ಸಾಮಾಜಿಕ ನಾಯಕರಿಂದಾಗಲಿ ಸಮಸ್ಯೆಗೆ ಪರಿಹಾರ ಕಷ್ಟ ಸಾಧ್ಯವಾಗಿದೆ.ಹೆಣ್ಣು ಮಕ್ಕಳ ಮಾತುಗಳಿಗೆ ಮೊದಲು ಕಿವಿಯಾಗಿದ್ದ ಶರಣ ಸಂಸ್ಕೃತಿ.ಹೆಣ್ಣು ದೇವಿ, ಇಲ್ಲ ದೆವ್ವ ಎಂಬ ತಪ್ಪು ಕಲ್ಪನೆಗಳ ವಿರುದ್ದ ಮಹಿಳೆಯ ಹೋರಾಡಲು ಶಕ್ತಿ ತುಂಬಿದ್ದೇ ಶರಣ ಸಂಸ್ಕೃತಿ.ಈ ವೇಳೆ ಶರಣೆಯರಿಂದ ನಡೆದಿದ್ದು ಒಂದು ಮಹತ್ವದ ಚಳವಳಿ.ಹೆಣ್ಣು ಮಾಯೆಯಲ್ಲ ಎಂಬ ಅಲ್ಲಮ ಪ್ರಭುವಿನ ವಚನ,ಸೂಳೆ ಸಂಕವ್ವನ ವಚನಗಳು,ಹೆಣ್ಣು ಒಂದು ಸ್ವಾಯತ್ತ ನೆಲೆಯನ್ನು ಕಂಡುಕೊಳ್ಳಲು ಸಾಧ್ಯವಾಯಿತು ಎಂದರು.

ವಿದ್ಯಾವಾಹಿನಿಯ ಪ್ರದೀಪಕುಮಾರ್,ವೀರಶೈವ ಲಿಂಗಾಯಿತ ಮಹಾಸಭಾದ ಡಾ.ಪರಮೇಶ್,ಬಾ.ಹ.ರಮಾಕುಮಾರಿ ಅವರುಗಳು ಮಾತನಾಡಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ವಹಿಸಿದ್ದರು.ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಎಲ್.ಎನ್.ಮುಕುಂದರಾಜ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ,ಸAಶೋಧಕ ಡಾ.ಬಿ.ನಂಜುAಡಸ್ವಾಮಿ,ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು, ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳಾದ ಡಾ.ಡಿ.ಎನ್.ಯೋಗೀಶ್ವರಪ್ಪ, ಡಾ.ಕಂಟಲಗೆರೆ ಸಣ್ಣ ಹೊನ್ನಯ್ಯ,ಎಂ.ಹೆಚ್.ನಾಗರಾಜು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸಂಘಟನಾ ಸಂಚಾಲಕಿ ಶ್ರೀಮತಿ ಸುಮಾ ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)
ಕರ್ನಾಟಕ ಸಾಹಿತ್ಯ ಅಕಾಡೆಮಿ ತುಮಕೂರು: ಬಸವ ಸಮಿತಿ ಬಸವಣ್ಣ ರಂಜಾನ್ ದರ್ಗಾ ಶರಣಚಳವಳಿ
Previous Articleಕುಲಾಂತರಿ ಬೀಜ ನಿಯಮ ಜಾರಿಗೆ ವಿರೋಧಿಸಿ ಪ್ರತಿಭಟನೆ
Next Article ಅವಕಾಶಗಳನ್ನು ಬಳಸಿಕೊಂಡು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು
News Desk Benkiyabale

Related Posts

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

September 17, 2026 5:39 pm news

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm news

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm news
ತಾಜಾ ಸುದ್ಧಿಗಳು
news

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

September 17, 2026 5:39 pm
news

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm
news

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm
news

ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ

September 17, 2026 5:33 pm
news

ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ

September 17, 2026 5:31 pm
news

ಸರ್ಕಾರದಿಂದ ಇಂಜಿನಿಯರ್ಸ್ ದಿನ ಆಚರಣೆ

September 16, 2026 5:32 pm
Our Youtube Channel
Our Picks

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

September 17, 2026 5:39 pm

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm

ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ

September 17, 2026 5:33 pm

ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ

September 17, 2026 5:31 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

By News Desk BenkiyabaleSeptember 17, 2026 5:39 pm

ಹುಳಿಯಾರು “ಗ್ರಾಮೀಣ ಪ್ರದೇಶದ ಕೂಲಿಕಾರರ ಗುಳೆ ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ವಿಬಿ ಜಿ ರಾಮ್ ಜಿ ಯೋಜನೆಯಡಿ ೧೨೫…

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm

ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ

September 17, 2026 5:33 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.