BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ
  • ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ
  • ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ
  • ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ
  • ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ
  • ಸರ್ಕಾರದಿಂದ ಇಂಜಿನಿಯರ್ಸ್ ದಿನ ಆಚರಣೆ
  • ಉಪ ಮುಖ್ಯಮಂತ್ರಿಗಳಿ0ದ ತುಮಕೂರು ದಸರಾ-೨೦೨೬ ಲಾಂಛನ ಬಿಡುಗಡೆ
  • ಶಾಲಾ ಸಾಮಗ್ರಿಗಳಿಂದ ಅರಳಿದ ವಿದ್ಯಾ ಗಣಪತಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ
news

ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ

ವಿಶ್ವಕರ್ಮ ಜಯಂತಿ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ
By News Desk BenkiyabaleUpdated:September 17, 2026 5:31 pm

ತುಮಕೂರು: ವಿಶ್ವಕರ್ಮ ಜನಾಂಗವು ಕಾಯಕ ಸಂಸ್ಕತಿ, ಶ್ರಮ ಸಂಸ್ಕತಿ ಹಾಗೂ ಬೆವರಿನ ಸಂಸ್ಕöÈತಿಯ ಸಂಕೇತ ಎಂದು ಕರ್ನಾಟಕ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ನಿವೃತ್ತ ಐಎಎಸ್ ಅಧಿಕಾರಿ ಡಾ: ಸಿ. ಸೋಮಶೇಖರ್ ಅಭಿಪ್ರಾಯಪಟ್ಟರು.
ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ವಿಶ್ವಕರ್ಮರಲ್ಲಿ ಕೌಶಲ್ಯ ಹಾಗೂ ಕಾಯಕದ ಶ್ರಮ ಸಂಸ್ಕöÈತಿಯನ್ನು ಕಾಣಬಹುದಾಗಿದೆ. ತ್ಯಾಗದಿಂದ ಆಭರಣಗಳನ್ನು ಮಾಡಿಕೊಡುತ್ತಾರೆ ಎಂದು ಅವರು ಹೇಳಿದರು.
ವಿಶ್ವ ಎಂದರೆ ಜಗತ್ತು, ಕರ್ಮ ಎಂದರೆ ಅದನ್ನು ಮುಂದುವರೆಸಿಕೊAಡು ಹೋಗುವಂತಹದ್ದು. ಸೃಷ್ಠಿ ಮಾಡಿದಂತಹ ಕರ್ತ. ಕರ್ತ ಎಂದರೆ ಕಮ್ಮಟ ಎಂದು ಹೇಳುತ್ತಾರೆ. ಪಂಚಭೂತಗಳು ಇಲ್ಲದೇ ಇದ್ದಂತಹ ಸಂದರ್ಭದಲ್ಲಿ ಇದ್ದಂತಹವರು ವಿಶ್ವಕರ್ಮರು ಎಂದರು.
ಸಮಾಜದಲ್ಲಿ ಆದಿ, ಅಸ್ತಿತ್ವ, ಅಂತ್ಯ ಎಲ್ಲವೂ ವಿಶ್ವಕರ್ಮರು. ವಿಶ್ವಕರ್ಮರಲ್ಲಿ ಜ್ಞಾನ, ವಿಜ್ಞಾನ, ತಂತ್ರಜ್ಞಾನವನ್ನು ಕಾಣಬಹುದಾಗಿದೆ. ವಿಶ್ವಕರ್ಮರ ಹಳೆಯ ತತ್ವ, ವಿಚಾರಧಾರೆಗಳು ಜ್ಞಾನದ ರೂಪದಲ್ಲಿ ಜಗತ್ತನ್ನು ಸಮೃದ್ಧಗೊಳಿಸಿವೆ ಎಂದರು.
ವಿಶ್ವಕರ್ಮರು ಇಲ್ಲದೇ ಇದ್ದರೆ ಜಗತ್ತು ಇಷ್ಟೊಂದು ಸುಂದರವಾಗಿರುತ್ತಿರಲಿಲ್ಲ, ಅನೇಕ ಸೌಲಭ್ಯಗಳು ರಚನೆಯಾಗುತ್ತಿರಲಿಲ್ಲ, ವಾಸ್ತುಶಿಲ್ಪ ಸುಧಾರಣೆಯಾಗುತ್ತಿರಲಿಲ್ಲ. ನಮ್ಮ ಬದುಕು ಆಭರಣಗಳ ರೂಪದಲ್ಲಿ ಸೌಂದರ್ಯೀಕರಣವಾಗುತ್ತಿರಲಿಲ್ಲ. ಸ್ವರ್ಗ ಲೋಕವನ್ನೇ ನಿರ್ಮಿಸಿದವರು ವಿಶ್ವಕರ್ಮರು ಎಂದು ಅವರು ಬಣ್ಣಿಸಿದರು.
ವಿಶ್ವಕರ್ಮರು ನಿರ್ಮಾಣದ ಸಂಕೇತ, ಸೃಷ್ಠಿಯ ಸಂಕೇತ. ನೇಗಿಲನ್ನು ತಯಾರು ಮಾಡುವವರು, ಮನೆ ಕಟ್ಟುವವರು, ಲೋಹದ ಕೆಲಸ ಮಾಡುವವರು ವಿಶ್ವಕರ್ಮರು. ಶಿಲ್ಪಿಯ ಕೈಯಲ್ಲಿ ಅರಳುವ ಸೃಜನ ಶಕ್ತಿಯ ಸಂಕೇತವೂ ಕೂಡ ವಿಶ್ವಕರ್ಮರೇ ಎಂದರು.
ದೇಶವನ್ನು ಕಟ್ಟುವುದು ಕೇವಲ ಇಟ್ಟಿಗೆ ಸಿಮೆಂಟಿನಿAದಲ್ಲ, ವಿಶ್ವಕರ್ಮರ ಜ್ಞಾನ, ಕೌಶಲ್ಯ ಸೃಜನಶೀಲತೆಯಿಂದ ಎಂದು ಅವರು ತಿಳಿಸಿದರು.
ಪ್ರಪಂಚದಲ್ಲಿ ರಾಜರು ಅಳಿದಿದ್ದಾರೆ, ಸಾಮ್ರಾಜ್ಯಗಳು ಇಲ್ಲದಂತಾಗಿವೆ. ಆದರೆ ಆ ಕಾಲದಲ್ಲಿ ರಚಿತವಾದ ಕಲೆಗಳು ಇಂದಿಗೂ ಜೀವಂತವಾಗಿವೆ. ಇದಕ್ಕೆ ಕಾರಣ ಕಲೆಯನ್ನೇ ಜೀವನದ ಉಸಿರಾಗಿಸಿಕೊಂಡಿರುವ ವಿಶ್ವಕರ್ಮ ಜನಾಂಗ. ಇದಕ್ಕೆ ನಮ್ಮ ದೇಶದಲ್ಲಿರುವ ದೇವಾಲಯಗಳಲ್ಲಿರುವ ವಾಸ್ತುಶಿಲ್ಪ ಹಾಗೂ ಕೆತ್ತನೆಗಳೇ ಸಾಕ್ಷಿಯಾಗಿವೆ. ಸಮುದಾಯದವರು ತಮ್ಮಲ್ಲಿ ಅಜ್ಞಾತವಾಗಿರುವ ಕಲೆಯನ್ನು ಪ್ರಸ್ತುತ ಪಡಿಸುವ ಮೂಲಕ ಸಮಾಜದಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಬೇಕಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ, ವಿಶ್ವಕರ್ಮರು ಪ್ರಪಂಚಕ್ಕೆ ರಾಯಭಾರಿಗಳು. ಪ್ರಪಂಚದಲ್ಲಿ ಕೌಶಲ್ಯವನ್ನು ಕಾಣುವುದಾದರೆ ಅದು ವಿಶ್ವಕರ್ಮ ಜನಾಂಗದಿAದ ಮಾತ್ರ ಸಾಧ್ಯ. ೨೧ನೇ ಶತಮಾನದಲ್ಲಿ ವಿಶ್ವಕರ್ಮರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಹೊಸ-ಹೊಸ ತಂತ್ರಜ್ಞಾವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರಲ್ಲದೆ, ವಿಶ್ವಕರ್ಮ ಜನಾಂಗದವರು ಒಗ್ಗಟ್ಟನ್ನು ಕಾಪಾಡಿಕೊಂಡು ಸರ್ಕಾರದ ಸೌಲಭ್ಯವನ್ನು ಪಡೆಯಬೇಕು ಎಂದರು.
ಹರಿಕಥಾ ವಿದ್ವಾನ್ ಡಾ. ಲಕ್ಷ÷್ಮಣದಾಸ್ ಮಾತನಾಡಿ, ವಿಶ್ವಕರ್ಮ ಸಮಾಜದ ಇತಿಹಾಸ ದೊಡ್ಡದಿದೆ. ಕಲೆಗೆ ಮತ್ತೊಂದು ಹೆಸರೇ ವಿಶ್ವಕರ್ಮರು. ಸಮಾಜದ ಜಕಣಾಚಾರ್ಯರ ವಾಸ್ತುಶಿಲ್ಪ ಕಲೆಗಳು ಇಡೀ ಪ್ರಪಂಚಕ್ಕೆ ಹೆಸರುವಾಸಿಯಾಗಿದೆ. ಇಂತಹ ವಿಶ್ವಕರ್ಮ ಸಮಾಜ ಮತ್ತಷ್ಟು ಉತ್ತುಂಗಕ್ಕೇರಲಿ ಎಂದು ಆಶಿಸಿದರು.
ಜಿಲ್ಲಾ ಬಿಸಿಎಂ ಅಧಿಕಾರಿ ಸೋನಿಯಾ ವರ್ಣೇಕರ್ ಮಾತನಾಡಿ, ವಿಶ್ವಕರ್ಮ ಸಮುದಾಯದಲ್ಲಿ ಬಹಳಷ್ಟು ಪ್ರತಿಭಾವಂತ ಮಕ್ಕಳಿದ್ದಾರೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಿಕ್ಷಣದಿಂದ ಇಡೀ ಸಮುದಾಯ ಅಭಿವೃದ್ಧಿ ಹೊಂದುತ್ತದೆ. ಹಾಗಾಗಿ ಪೋಷಕರು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ನಗರ ಶಾಸಕ ಜಿ.ಬಿ. ಜೋತಿಗಣೇಶ್ ಮಾತನಾಡಿ, ವಿಶ್ವಕರ್ಮ ಜನಾಂಗ ನಾವೀನ್ಯತೆಗೆ ಹೆಸರಾದ ಸಮುದಾಯ. ವಿಶ್ವಕರ್ಮ ಜಯಂತೋತ್ಸವ ಮತ್ತು ಪ್ರಧಾನಿ ಮೋದಿ ಅವರ ಜನ್ಮ ದಿನ ಒಂದೇ ದಿನವಾಗಿರುವುದು ಸಂತೋಷದ ವಿಚಾರ. ವಿಶ್ವಕರ್ಮ ಸಮುದಾಯದವರನ್ನು ಸೇರಿದಂತೆ ವಿವಿಧ ಕೌಶಲ್ಯ ಹೊಂದಿರುವ ಜನರಿಗಾಗಿ ವಿಶ್ವಕರ್ಮ ಯೋಜನೆಯನ್ನು ಪ್ರಧಾನಮಂತ್ರಿಗಳು ಘೋಷಣೆ ಮಾಡಿದ್ದು, ಅರ್ಥಿಕ, ಸಾಮಾಜಿಕವಾಗಿ ಬೆಳೆಯಲು ಸಹಕಾರಿಯಾಗಿದೆ ಎಂದರು. ಕುಲಕಸುಬಿಗೆ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ, ಪೈಪೋಟಿಯುತ ಸಮಾಜದಲ್ಲಿ ವಿಶ್ವಕರ್ಮ ಜನಾಂಗ ಉನ್ನತಿಗೆ ತಲುಪಲು ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ನಿಟ್ಟರಹಳ್ಳಿ ಮಠದ ಶ್ರೀ ನೀಲಕಂಠಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ವಿಶ್ವಕರ್ಮ ಸಮುದಾಯ ಸದಾ ಒಗ್ಗಟ್ಟಾಗಿರಬೇಕು. ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸುವ ಮೂಲಕ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದಿರುವ ಸಮುದಾಯದ ವರದರಾಜಾಚಾರ್, ವರಲಕ್ಷ÷್ಮಮ್ಮ, ಡಾ: ಧರ್ಮೇಂದ್ರ, ಟಿ.ಸಿ. ಡಮರುಗೇಶ್, ಬಿ.ಕೆ. ರವಿ, ಡಿ.ಜಿ. ಚಂದ್ರಾಚಾರ್, ಕೆ.ಎಸ್. ಶಂಕರಾಚಾರ್, ಜಿ.ಎಸ್. ಅಶ್ವತ್ಥಾಚಾರ್, ಎಸ್.ಆರ್. ಚಂದ್ರಶೇಖರ್, ಟಿ.ಆರ್. ಸುರೇಶಾಚಾರ್, ಜಗದಾಂಬ ನಂಜಪ್ಪ, ಟಿ.ಹೆಚ್. ಸುರೇಶ್, ವೆಂಕಟೇಶಾಚಾರ್, ನಾಗಲಿಂಗಾಚಾರ್, ನಂಜುAಡಸ್ವಾಮಿಚಾರ್ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ ೨೮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ಸಮಾರಂಭದಲ್ಲಿ ವಿಶ್ವಕರ್ಮ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಹೆಚ್.ಪಿ.ನಾಗರಾಜು, ಹಿರಿಯ ಪತ್ರಕರ್ತ ಎಸ್. ನಾಗಣ್ಣ, ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಟಿ.ಎ. ರವಿಕುಮಾರ್, ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್. ಹರೀಶಾಚಾರ್ಯ, ಟಿ.ಎನ್. ಗುರುರಾಜು, ಡಮರುಗೇಶ್, ಕೆ.ಆರ್. ಪ್ರಕಾಶ್, ರಾಮಲಿಂಗಾಚಾರ್, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಮೇಲ್ವಿಚಾರಕ ಸುರೇಶ್‌ಕುಮಾರ್, ಪತ್ರಕರ್ತರಾದ ಚಿ.ನಿ. ಪುರುಷೋತ್ತಮ್, ಅನು ಶಾಂತರಾಜು, ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)
kannada news karnataka local news tumakur tumkur Tumkur mahanagara palike tumkur news vishwakarma jayanthi ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು:
Previous Articleಸರ್ಕಾರದಿಂದ ಇಂಜಿನಿಯರ್ಸ್ ದಿನ ಆಚರಣೆ
Next Article ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ
News Desk Benkiyabale

Related Posts

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

September 17, 2026 5:39 pm news

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm news

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm news
ತಾಜಾ ಸುದ್ಧಿಗಳು
news

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

September 17, 2026 5:39 pm
news

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm
news

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm
news

ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ

September 17, 2026 5:33 pm
news

ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ

September 17, 2026 5:31 pm
news

ಸರ್ಕಾರದಿಂದ ಇಂಜಿನಿಯರ್ಸ್ ದಿನ ಆಚರಣೆ

September 16, 2026 5:32 pm
Our Youtube Channel
Our Picks

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

September 17, 2026 5:39 pm

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm

ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ

September 17, 2026 5:33 pm

ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ

September 17, 2026 5:31 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

By News Desk BenkiyabaleSeptember 17, 2026 5:39 pm

ಹುಳಿಯಾರು “ಗ್ರಾಮೀಣ ಪ್ರದೇಶದ ಕೂಲಿಕಾರರ ಗುಳೆ ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ವಿಬಿ ಜಿ ರಾಮ್ ಜಿ ಯೋಜನೆಯಡಿ ೧೨೫…

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm

ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ

September 17, 2026 5:33 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.