BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ
  • ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ
  • ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ
  • ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ
  • ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ
  • ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್
  • ಅಪ್ರತಿಮ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನ ಆಚರಣೆ
  • ನಾಡಕಚೇರಿಗಳಲ್ಲಿ ಕಂದಾಯ ವಿಷಯ ಕುರಿತ ಅರ್ಜಿಗಳ ಪರಿಹಾರಕ್ಕೆ ವಿಶೇಷ ಕ್ರಮ: ಡಿಸಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವಿದ್ಯಾರ್ಥಿಗಳ ಜನಿವಾರ ತೆರವು ಪ್ರಕರಣ
ತುಮಕೂರು

ವಿದ್ಯಾರ್ಥಿಗಳ ಜನಿವಾರ ತೆರವು ಪ್ರಕರಣ

ಜಿಲ್ಲಾ ಬ್ರಾಹ್ಮಣ ಸಭಾದಿಂದ ಖಂಡನಾ ನಿರ್ಣಯ
By News Desk BenkiyabaleUpdated:April 21, 2025 4:13 pm
oppo_2
oppo_2

ತುಮಕೂರು: ಸಿ.ಇ.ಟಿ. ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೋದ ಬ್ರಾಹ್ಮಣ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಘಟನೆಯ ವಿರುದ್ಧ ಜಿಲ್ಲಾ ಬ್ರಾಹ್ಮಣ ಸಭಾ ಖಂಡನಾ ನಿರ್ಣಯ ಅಂಗೀಕರಿಸಿತು.
ನಗರದ ಬಿ.ಹೆಚ್. ರಸ್ತೆಯ ಶಂಕರಮಠದಲ್ಲಿ ಜಿಲ್ಲಾ ಬಾಹ್ಮಣ ಸಭಾದ ನೇತೃತ್ವದಲ್ಲಿ ಸಮಾವೇಶಗೊಂಡ ಆರ್ಯವೈಶ್ಯ, ವಿಶ್ವಕರ್ಮ ಹಾಗೂ ಜೈನ ಸಮುದಾಯದ ಮುಖಂಡರು ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸುವ ಕುರಿತು ನಿರ್ಣಯ ಕೈಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆ ಮುಖಂಡ ಜಿ.ಎಸ್. ಬಸವ ರಾಜು ಸ್ವಾತಂತ್ರ‍್ಯ ಭಾರತದಲ್ಲಿ ಈ ರೀತಿಯ ಘಟನೆ ಎಂದೂ ಸಹ ನಡೆದಿರಲಿಲ್ಲ. ಈ ಘಟನೆ ಒಂದು ಸಮುದಾಯದ ಮೇಲೆ ನಡೆದ ದೌರ್ಜನ್ಯವಲ್ಲ, ಬದಲಾಗಿ ಸಂವಿಧಾನದ ಮೇಲೆ ನಡೆದ ದೌರ್ಜನ್ಯ. ಸಮಸ್ತ ಹಿಂದೂ ಸಮಾಜ ಇದನ್ನು ಖಂಡಿಸಬೇಕು ಎಂದರು.
ಆರ್ಯವೈಶ್ಯ ಸಮಾಜದ ಮುಖಂಡರಾದ ಡಾ. ರಮೇಶ್ ಬಾಬು ಮಾತನಾಡಿ, ನಿರಂತರವಾಗಿ ಬಹುಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸಂಘಟನೆಯ ಕೊರತೆ ಕಾರಣವಾಗಿದೆ. ಬೇರೆ ದೇಶದ ಜನರು ಇಂದು ಸನಾತನ ಧರ್ಮದ ಕಡೆಗೆ ಆಕರ್ಷಿತವಾಗುತ್ತಿರುವ ಸಂದರ್ಭದಲ್ಲಿ ನಮ್ಮಲ್ಲಿ ಧರ್ಮದ ಕುರಿತು ಆಸಕ್ತಿ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಆಲೋಚಿಸಬೇಕಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಂ.ಜಿ. ಸಿದ್ದರಾಮಯ್ಯ ಮಾತನಾಡಿ ಕಾಯಿಲೆ ಬಂದಾಗ ಕೂಡಲೇ ಅದಕ್ಕೆ ಮದ್ದು ತೆಗೆದು ಕೊಳ್ಳಬೇಕು. ಅದನ್ನು ನಿರ್ಲಕ್ಷಿಸಿದರೆ ಅದರಿಂದ ವ್ಯಕ್ತಿಯ ಸಾವು ಸಂಭವಿಸುತ್ತದೆ. ಆದ್ದರಿಂದ ವಿದ್ಯಾರ್ಥಿಯ ಜನಿವಾರ ತೆಗೆದು ಕ್ರೌರ್ಯ ಮೆರೆದ ಘಟನೆಗೆ ತುರ್ತು ಪ್ರತಿಭಟನೆ ಅಗತ್ಯ ಎಂದು ತಿಳಿಸಿದರು.
ವಿಶ್ವಕರ್ಮ ಸಮುದಾಯದ ಮುಖಂಡರಾದ ಚಂದ್ರಶೇಖರ ಆಚಾರ್ ಮಾತನಾಡಿ, ದೂರದ ಬೀದರ್ ಅಥವಾ ಶಿವಮೊಗ್ಗದಲ್ಲಿ ನಡೆದ ಘಟನೆ ತುಮಕೂರಿನಲ್ಲಿ ಕೂಡ ನಡೆಯಬಹುದು. ಹಾಗಾಗಿ ಘಟನೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕು. ಕೇವಲ ಇದು ಒಂದು ಸಮುದಾಯದ ಮೇಲಾಗಿರುವ ದೌರ್ಜನ್ಯವಲ್ಲ, ಸಮಸ್ತ ಹಿಂದೂ ಧರ್ಮದ ಮೇಲಿನ ದೌರ್ಜನ್ಯ ಎಂದರು.
ದಿಗAಬರ ಜೈನ ಸಮಾಜದ ಮುಖಂಡರಾದ ಶೀತಲ್ ಜೈನ್ ಮಾತನಾಡಿ, ಜೈನ ಧರ್ಮದಲ್ಲಿ ಜನಿವಾರ ಧಾರಣೆ ಮಾಡುವ ಸಂಸ್ಕೃತಿ ಪ್ರ ಥಮ ತೀರ್ಥಂಕರರಾದ ಭರತ ಚಕ್ರವರ್ತಿಯಿಂದ ಪ್ರಾರಂಭಗೊAಡು ಇದಕ್ಕೆ ಈಗ ಅಪಮಾನ ಮಾಡಿರುವುದು ಅಕ್ಷಮ್ಯ. ಜನಿವಾರಕ್ಕೆ ಧಕ್ಕೆ ತರುವವರ ವಿರುದ್ಧ ಜೈನರೂ ಸಹ ಪ್ರತಿರೋಧ ವ್ಯಕ್ತಪಡಿಸಿದ್ದಾರೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಹೆಚ್.ಎನ್. ಚಂದ್ರಶೇಖರ್ ಮಾತನಾಡಿ, ಜನಿವಾರ ತೆಗೆಸಿದ ಘಟನೆ ಸಣ್ಣ ವಿಷಯವೆಂದು ಭಾವಿಸಬಾರದು. ಘಟನೆ ಚಿಕ್ಕದಾಗಿರುವಾಗಲೇ ಹೊಸಕಿ ಹಾಕುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ವಿವಿಧ ಸಮುದಾಯಗಳ ಬೆಂಬಲದೊAದಿಗೆ ತುಮಕೂರಿನಲ್ಲಿ ಏ. ೨೮ ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಬಿ.ಜಿ.ಎಸ್. ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಜಿಲ್ಲಾ ಪ್ರತಿನಿಧಿ ಡಾ. ಹರೀಶ್ ಹಿರಣ್ಣಯ್ಯ, ಆರ್ಯವೈಶ್ಯ ಸಮುದಾಯದ ಹಿರಿಯ ಮುಖಂಡ ನಟರಾಜಶೆಟ್ಟಿ, ಶಂಕರ ಸೇವಾ ಸಮಿತಿ ಉಪಾಧ್ಯಕ್ಷ ಹೆಚ್.ಕೆ. ರಮೇಶ್, ಕಾರ್ಯದರ್ಶಿ ಮಂಜುನಾಥ್, ಹಿಂದೂಪರ ಸಂಘಟನೆ ಮುಖಂಡರಾದ ಜಿ.ಕೆ. ಶ್ರೀನಿವಾಸ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂ ಡರು ಭಾಗಿಯಾಗಿದ್ದರು.

(Visited 1 times, 1 visits today)
tumkur
Previous Articleಕೊರಟಗೆರೆ ಕ್ಷೇತ್ರದಲ್ಲಿ ನೀರಾವರಿ ಜಲಕ್ರಾಂತಿ
Next Article ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣ
News Desk Benkiyabale

Related Posts

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm news

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm news

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm news
ತಾಜಾ ಸುದ್ಧಿಗಳು
news

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm
news

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm
news

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm
news

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm
news

ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ

October 01, 2026 5:25 pm
news

ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್

September 30, 2026 6:04 pm
Our Youtube Channel
Our Picks

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm

ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ

October 01, 2026 5:25 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

By News Desk BenkiyabaleOctober 01, 2026 5:34 pm

ತುಮಕೂರು: ಪ್ರವಾದಿ ಮುಹಮ್ಮದ್(ಸ) ರವರ ಜೀವನ ಮತ್ತು ಸಂದೇಶಗಳನ್ನು ಯುವಜನತೆಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಜಮಾಆತೆ ಇಸ್ಲಾಮಿಕ್ ಹಿಂದ್ ಆಯೋಜಿಸಿರುವ…

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.