BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ
  • ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ
  • ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ
  • ಬೀದಿನಾಯಿಗಳ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ!
  • ಅಂ. ವಿಮಾನ ನಿಲ್ದಾಣ ಬೆಂಗಳೂರು-೨ ನಿರ್ಮಾಣ ಪ್ರಸ್ತಾವನೆ ಸ್ವಾಗಾತಾರ್ಹ
  • ೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ
  • ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ: ಸಮಸ್ಯೆ ಪರಿಹಾರಕ್ಕೆ ಕ್ರಮ
  • ಆರು ತಿಂಗಳ ಇಂಧನ ಬವಣೆಗೆ ಮುಕ್ತಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಗಂಬೀರ ಕಾಯಿಲೆಗಳಿಗೆ ವೈದ್ಯಕೀಯ ತಾಂತ್ರಿಕ ಸಂಶೋಧನೆಗಳು ಉತ್ತರ ನೀಡಿವೆ
ತುಮಕೂರು

ಗಂಬೀರ ಕಾಯಿಲೆಗಳಿಗೆ ವೈದ್ಯಕೀಯ ತಾಂತ್ರಿಕ ಸಂಶೋಧನೆಗಳು ಉತ್ತರ ನೀಡಿವೆ

ಆಧುನಿಕ ವೈದ್ಯಕೀಯ ಕೌಶಲ್ಯ ಪರಿಪಕ್ವತೆ ಸಂಶೋಧನಾ ವಿಧಾನಗಳ ಕುರಿತು ವಿಶೇಷ ಕಾರ್ಯಗಾರ
By News Desk BenkiyabaleUpdated:May 10, 2025 3:35 pm

ತುಮಕೂರು: ಮನುಷ್ಯನನ್ನು ಕಾಡುತ್ತಿರುವ ಅನೇಕ ಗಂಬೀರ ಕಾಯಿಲೆಗಳಿಗೆ ಇಂದಿನ ತಾಂತ್ರಿಕ ನಡೆಯುತ್ತಿರುವ ವೈದ್ಯಕೀಯ ಸಂಶೋಧನೆಗಳು ಉತ್ತರ ನೀಡಿವೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ.ಬಿ.ಲಿಂಗೇಗೌಡ ಅವರು ತಿಳಿಸಿದರು.
ನಗರದ ಸಮೀಪದ ನೆಲಮಂಗಲ ಸಮೀಪದ ಟಿ.ಬೇಗೂರಿನ ಶ್ರೀ ಸಿದ್ದಾರ್ಥ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್‌ನಲ್ಲಿ ಇಂದು (ಮೇ.೯)ಸಾಹೇ ವಿಶ್ವವಿದ್ಯಾಲಯ, ಕಾಲೇಜಿನ ಆತಂರಿಕ ಗುಣಮಟ್ಟ ಘಟಕ ಹಾಗೂ ಕರ್ನಾಟಕ ಆರೋಗ್ಯ ಇಲಾಖೆ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ‘ನಿರಂತರ ವೈದ್ಯಕೀಯ ಶಿಕ್ಷಣ’ ಎಂಬ ಘೋಷ ವಾಕ್ಯದೊಂದಿಗೆ ‘ಆಧುನಿಕ ವೈದ್ಯಕೀಯ ಕೌಶಲ್ಯ ಪರಿಪಕ್ವತೆ ಸಂಶೋಧನಾ ವಿಧಾನಗಳು’ ವಿಷಯ ಕುರಿತು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಶಿಕ್ಷಣ ನೀಡಬೇಕು ಎಂಬ ಎಪ್ಪತ್ತರ ದಶಕದ ಕನಸು ಕಂಡಿದ್ದ ಓರ್ವ ಸಾಮಾನ್ಯ ಶಾಲಾ ಶಿಕ್ಷಕ ಗಂಗಾಧರಯ್ಯನವರು ಕನಸಿನಂತೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಯನ್ನು ಮುಗಿಲು ಎತ್ತರಕ್ಕೆ ಕಟ್ಟಿ ಬೆಳೆಸಿರುವ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಜಿ ಪರಮೇಶ್ವರ್ ಅವರು ಉತ್ತಮವಾದ ಗುಣಾತ್ಮಕ ಮತ್ತು ಸಂಶೋಧನಾತ್ಮಕ ಅಂತರಾಷ್ಟ್ರೀಯ ಮಟ್ಟದಲ್ಲಿ ನೀಡುವ ಶಿಕ್ಷಣವನ್ನು ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕೊಡಬೇಕು ಎಂಬ ದೆಸೆಯಿಂದ ಅನೇಕ ವಿಚಾರ ಸಂಕಿರಣ, ಕಾರ್ಯಗಾರಗಳು ಸೇರಿದಂತೆ ಅತ್ಯಾವಶ್ಯಕವಾಗಿರುವ ಸಂಪನ್ಮೂಲಗಳನ್ನು ನೀಡುತ್ತಿದ್ದು ಇದರ ಸದುಪಯೋಗವನ್ನ ಬಳಸಿಕೊಂಡು ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಡಾ. ಕೆ.ಬಿ.ಲಿಂಗೇಗೌಡ ಕರೆ ಕೊಟ್ಟರು.
ಮನುಷ್ಯನಿಗೆ ೧೦೦೦ ಸಮಸ್ಯೆಗಳಲ್ಲಿ ಆರೋಗ್ಯ ಸಮಸ್ಯೆಯು ಒಂದಾಗಿದ್ದು, ಅದೆಷ್ಟು ಕಾಯಿಲೆಗಳು ಮಾನವನ ಕಾಡುತ್ತಿವೆ. ಇದಕ್ಕೆ ಇಂದಿನ ವೈದ್ಯರು ತಾಂತ್ರಿಕವಾಗಿ ವೈದ್ಯಕೀಯ ಸಂಶೋಧನೆಗಳೊAದಿಗೆ ಉತ್ತರ ಕಂಡುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧನಾತ್ಮಕವಾಗಿ ಅಧ್ಯಯನ ನಡೆಸಿದಾಗ ಉನ್ನತವಾದ ಗುರಿಯನ್ನು ಮುಟ್ಟಬಹುದು ಎಂದು ಸಾಹೇ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಅಶೋಕ್ ಕೆ ಮೆಹ್ತಾ ಅವರು ತಿಳಿಸಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಮಹತ್ತರವಾದ ಸಾಧನೆಗಳಾಗುತ್ತಿದ್ದು ಇಂದಿನ ಯುವ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳು ಸಂಶೋಧನಾತ್ಮಕ ಯೋಜನೆಗಳನ್ನು ಕೈಗೊಂಡು ಕಾರ್ಯಗಾರಗಳಲ್ಲಿ ಮೂಡಿ ಬರುವ ವಿವಿಧ ಅಂಶಗಳನ್ನು ಅಧ್ಯಯನ ನಡೆಸಿ ಸಂಪನ್ಮೂಲ ವ್ಯಕ್ತಿಗಳಿಂದ ತಿಳಿದುಕೊಂಡು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳನ್ನು ತರಬೇಕಾಗಿದೆ ಎಂದು ಅವರು ಹೇಳಿದರು.
ಸಾಹೇ ವಿವಿಯ ಕುಲಾಧಿಪತಿಗಳ ಆಡಳಿತ ಸಲಹೆಗಾರರಾದ ಡಾ. ವಿವೇಕ್ ವೀರಯ್ಯ ಅವರು ಮಾತನಾಡಿ, ಶೈಕ್ಷಣಿಕವಾಗಿ ಪ್ರಾಯೋಗಿಕ ಸಂಶೋಧನೆಗಳು ಸಂಪೂರ್ಣವಾದಾಗ ನಮ್ಮ ಸಾಧನೆಯ ಗುರಿ ಮುಟ್ಟಬಹುದು. ಇದಕ್ಕೆ ಸಹಾಯಕವಾಗಲೆಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯು ವಿವಿಧ ರೀತಿಯ ಶೈಕ್ಷಣಿಕ ಸಂಸ್ಥೆಗಳನ್ನು ತೆರೆದು ಆಯಾ ಕ್ಷೇತ್ರದ ನುರಿತ ಸಾಧಕರೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡುವ ಸಲುವಾಗಿ ಅನೇಕ ವ್ಯವಸ್ಥೆಯನ್ನು ಮಾಡಿದ್ದು ,ವಿದ್ಯಾರ್ಥಿಗಳು ತಾಂತ್ರಿಕವಾಗಿ ಬೆಳೆಯುತ್ತಿರುವ ಜಾಗತಿಕ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಸಾಧನೆ ಮಾಡಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಾಗಾರದ ಆಯೋಜಕ ಮುಖ್ಯಸ್ಥರಾದ ಡಾ.ಲೋಹಿತ್ ಕೆ. ಅವರು ಮಾತನಾಡಿ, ಇಂದಿನ ವೇಗವಾಗಿ ಮುಂದುವರಿಯುತ್ತಿರುವ ವೈದ್ಯಕೀಯ ಕ್ಷೇತ್ರದಲ್ಲಿ, ವೈಜ್ಞಾನಿಕ ಸಾಹಿತ್ಯವನ್ನು ನ್ಯಾವಿಗೇಟ್ ಮಾಡುವ ಮತ್ತು ಕೊಡುಗೆ ನೀಡುವ ಸಾಮರ್ಥ್ಯವು ಸಂಶೋಧಕರು, ವೈದ್ಯರು ಮತ್ತು ಆರೋಗ್ಯ ವೃತ್ತಿಪರರಿಗೆ ನಿರ್ಣಾಯಕ ಕೌಶಲ್ಯವಾಗಿದೆ. ಈ ಅಧಿವೇಶನವು ಭಾಗವಹಿಸುವವರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸಂಶೋಧನಾ ಪ್ರಬಂಧಗಳನ್ನು ಅರ್ಥಮಾಡಿಕೊಳ್ಳಲು, ಮೌಲ್ಯಮಾಪನ ಮಾಡಲು ಮತ್ತು ಬರೆಯಲು ಅಗತ್ಯವಾದ ಅಗತ್ಯ ಪರಿಕರಗಳು ಮತ್ತು ಜ್ಞಾನವನ್ನು ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾಗಿದೆ ಎಂದರು.
ಕ್ಷೇತ್ರದ ತಜ್ಞರಿಂದ ಕಲಿಯಲು ಮತ್ತು ನಿಮ್ಮ ಸಂಶೋಧನಾ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ನಿಮ್ಮ ಸಂಶೋಧನೆಗಳನ್ನು ಸ್ಪಷ್ಟತೆ ಮತ್ತು ನಿಖರತೆಯೊಂದಿಗೆ ಸಂವಹನ ಮಾಡಲು ನಿಮಗೆ ಅಗತ್ಯವಿರುವ ಪ್ರಾಯೋಗಿಕ ಒಳನೋಟಗಳನ್ನು ಪಡೆಯಲು ಈ ಕಾರ್ಯಗಾರ ಸಹಾಯವಾಗಲಿದ್ದು ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಅವರು ತಿಳಿಸಿದರು.
ಇದೇ ವೇಳೆ ವೈದ್ಯಕೀಯ ಸಾಹಿತ್ಯದ ವಿಮರ್ಶಾತ್ಮಕ ಮೌಲ್ಯಮಾಪನ ಕುರಿತಾಗಿ ಅಬಾಟ್ ಇಂಡಿಯಾ ಕಾರ್ಡಿಯೋ ಮೆಟಾಬಾಲಿಕ್ ವಿಭಾಗದ ಹಿರಿಯ ವೈದ್ಯಕೀಯ ಸಲಹೆಗಾರ ಡಾ.ನಿಖೀಲ್ ಭಟ್, ಡಾ.ಮಂಗಳ ರಾಂ, ಡಾ.ಐಶ್ವರ್ಯ, ಡಾ.ವಿದ್ಯಾ ಸೇರಿದಂತೆ ಇತರೆ ನುರಿತ ವೈದ್ಯಕೀಯ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರದಲ್ಲಿ ವಿಷಯ ಮಂಡಿಸಿದರು.
ಈ ಸಂದರ್ಭದಲ್ಲಿ ಸಾಯಿ ವಿಶ್ವವಿದ್ಯಾಲಯದ ಉಪಕುಲ ಸಚಿವರಾದ ಡಾ.ಸುದೀಪ್ ಕುಮಾರ್, ಎಸ್ ಎಸ್‌ಆg ಸಿ ಮೆಡಿಕಲ್‌ಸೂಪರ್ ಡಾ. ಮನೋಹರ್, ಸಂಘಟನಾ ಕಾರ್ಯದರ್ಶಿ ಡಾ. ತೇಜಸ್ವಿನಿ, ಡಾ. ನಿಶ್ಚಿತ , ಡಾ. ಜೈರಾಮ್, ಅನಿತಾ , ಸತೀಶ್ , ಶಶಿಕಲಾ ಆದರ್ಶ ರೂಪ ಇತರರು ಉಪಸ್ಥಿತರಿದ್ದರು.

(Visited 1 times, 1 visits today)
tumkur
Previous Articleಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತರಿಂದ ಆಹೋ ರಾತ್ರಿ ಪ್ರತಿಭಟನೆ
Next Article ಮೇ ೨೫ ಸ್ಲಂ ಜನರ ಹಬ್ಬ, ಸಮಾವೇಶ
News Desk Benkiyabale

Related Posts

ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

July 21, 2026 5:46 pm news

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ

July 21, 2026 5:42 pm news

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ

July 21, 2026 5:40 pm news
ತಾಜಾ ಸುದ್ಧಿಗಳು
news

ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

July 21, 2026 5:46 pm
news

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ

July 21, 2026 5:42 pm
news

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ

July 21, 2026 5:40 pm
news

ಬೀದಿನಾಯಿಗಳ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ!

July 21, 2026 5:38 pm
news

ಅಂ. ವಿಮಾನ ನಿಲ್ದಾಣ ಬೆಂಗಳೂರು-೨ ನಿರ್ಮಾಣ ಪ್ರಸ್ತಾವನೆ ಸ್ವಾಗಾತಾರ್ಹ

July 21, 2026 5:36 pm
news

೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ

July 20, 2026 5:26 pm
Our Youtube Channel
Our Picks

ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

July 21, 2026 5:46 pm

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ

July 21, 2026 5:42 pm

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ

July 21, 2026 5:40 pm

ಬೀದಿನಾಯಿಗಳ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ!

July 21, 2026 5:38 pm

ಅಂ. ವಿಮಾನ ನಿಲ್ದಾಣ ಬೆಂಗಳೂರು-೨ ನಿರ್ಮಾಣ ಪ್ರಸ್ತಾವನೆ ಸ್ವಾಗಾತಾರ್ಹ

July 21, 2026 5:36 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

By News Desk BenkiyabaleJuly 21, 2026 5:46 pm

ತುಮಕುರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟಿಯ ಹೆದ್ದಾರಿ (ಎನ್‌ಹೆಚ್)-೨೦೬ ನಾಲ್ಕು ಪಥಗಳ ರಸ್ತೆ ಕಾಮಗಾರಿ, ಕೆಪಿಟಿಸಿಎಲ್ ವಿದ್ಯುತ್…

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ

July 21, 2026 5:42 pm

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ

July 21, 2026 5:40 pm

ಬೀದಿನಾಯಿಗಳ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ!

July 21, 2026 5:38 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.