BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ
  • ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ
  • ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ ಸಹಕಾರಿ: ಹೇಮಂತ್
  • ರೈತರು ಜೀವಿತಾವಧಿಯಲ್ಲಿ ೫ ಲಕ್ಷದವರೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಿ: ಪಿಡಿಒ
  • ಸೇವಾ ಕಾರ್ಯಗಳೇ ರೋಟರಿ ಕ್ಲಬ್‌ನ ಮೂಲ ದ್ಯೇಯೊದ್ದೇಶ
  • ಲೋಪವಿಲ್ಲದಂತೆ ನಡೆಸಲು ಜಿಲ್ಲಾಧಿಕಾರಿ ಸೂಚನೆ
  • ಜಾಬ್ ಕಾರ್ಡ್ ಪಡೆಯಲು ಗ್ರಾಮಸ್ಥರಿಗೆ ಕರೆ
  • ಸೆ.೫ ರಿಂದ ಜಿಲ್ಲಾದ್ಯಂತ “ಪ್ರಜಾಸೇವೆ ಆಂದೋಲನ”- ಜಿಲ್ಲಾಧಿಕಾರಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ರಾಜ್ಯದಲ್ಲಿ ಮೈನಿಂಗ್ ಲಾಭಿ ಎಗ್ಗಿಲ್ಲದೆ ನಡೆಯುತ್ತಿದೆ
ತುಮಕೂರು

ರಾಜ್ಯದಲ್ಲಿ ಮೈನಿಂಗ್ ಲಾಭಿ ಎಗ್ಗಿಲ್ಲದೆ ನಡೆಯುತ್ತಿದೆ

ಕರ್ನಾಟಕ ರಾಜ್ಯ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪ
By News Desk BenkiyabaleUpdated:May 15, 2025 4:14 pm

ತುಮಕೂರು: ಕರ್ನಾಟಕದಲ್ಲಿ ಮೈನಿಂಗ್ ಲಾಭಿ ಎಗ್ಗಿಲ್ಲದೆ ನಡೆಯುತ್ತಿದ್ದು, ಆಂಧ್ರ ಸರಕಾರ ಒಬಳಾಪುರಂ ಗಣಿಗಾರಿಕೆ ನಡೆದಿರುವ ಕರ್ನಾಟಕದಲ್ಲಿ ಎಂದು ಸ್ಪಷ್ಟಪಡಿಸಿದರೂ, ಇದುವರೆಗೂ ಕರ್ನಾಟಕ ಸರಕಾರ ಮೌನಕ್ಕೆ ಶರಣಾಗಿರುವುದನ್ನು ನೋಡಿದರೆ, ಸರಕಾರ, ವಿರೋಧಪಕ್ಷಗಳೆಲ್ಲವೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಗಣಿಗಾರಿಕೆ ವಿರೋಧಿಸಿ ಚಾಮರಾಜನಗರದಿಂದ ಬಳ್ಳಾರಿಯವರೆಗೂ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ,ಈಗ ಕಣ್ಣುಮುಚ್ಚಿ ಕುಳಿತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಗಣಿಗಾರಿಕೆಗೆ ಚೌಕಟ್ಟು ವಿಧಿಸಬೇಕಿದ್ದ ಸರಕಾರ, ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಲು ಮುಂದಾದAತೆ ಕಾಣುತ್ತಿದೆ. ಅಕ್ರಮ ಗಣಿಗಾರಿಕೆಯಲ್ಲಿ ಪೊಲೀಸ್,ಅರಣ್ಯ,ಕಂದಾಯ ಪರಿಸರ ಇಲಾಖೆಗಳು ಶಾಮೀಲಾಗಿವೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಚಳವಳಿಗೆ ಅವಕಾಶವಿದೆ.ಆದರೆ ತುಮಕೂರು ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ಪ್ರತಿಭಟನೆ, ಚಳುವಳಿಗಳಿಗೆ ನಿಷೇಧ ವಿಧಿಸಿರುವುದನ್ನು ನೋಡಿದರೆ, ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆಯೇ ಇಲ್ಲ, ಸರ್ವಾಧಿಕಾರಿ ಆಡಳಿತದಲ್ಲಿ ಇದ್ದೇವೆಯೇ ಎಂಬ ಅನುಮಾನ ಮೂಡುತ್ತಿದೆ.ಸಾರ್ವಜನಿಕರ ಸೇವಕರಾದ ಅಧಿಕಾರಿಗಳು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡುವ ವೇಳೆ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಒದಗಿಸಬೇಕಾದ್ದು ಅವರ ಕರ್ತವ್ಯ.ಆದರೆ ಪ್ರತಿಭಟನೆ ನಡೆಸದಂತೆ ನಿರ್ಭಂಧ ವಿಧಿಸುವುದು ಪ್ರಜಾಪ್ರಭುತ್ವವೇ ಎಂದು ಪ್ರಶ್ನಿಸಿದ ಅವರು, ಕೂಡಲೇ ಜಿಲ್ಲಾಧಿಕಾರಿಗಳು ತಾವು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ಗಣಿಗಾರಿಕೆ ನಡೆಸಲು ಅದರದ್ದೇ ಆದ ನಿಯಮಗಳಿವೆ.ಅವುಗಳ ಪ್ರಕಾರವೇ ಗಣಿಗಾರಿಕೆಗೆ ಅವಕಾಶ ನೀಡಬೇಕು.ರೈತರಿಗೊಂದು ನ್ಯಾಯ,ಗಣಿ ಮಾಲೀಕರಿಗೆ ಒಂದು ನ್ಯಾಯವಲ್ಲ, ಈ ವಿಚಾರದಲ್ಲಿ ಡಿಸಿಯವರಿಗೆ ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ.ಅಲ್ಲದೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುವುದು.೨೦೧೪ ರಲ್ಲಿ ತುಮಕೂರು ನಗರದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಬಹಳ ವಿಜೃಂಭಣೆಯಿAದ ಪುಡ್‌ಪಾರ್ಕ್ ಆರಂಭ ಮಾಡಲಾಯಿತು. ಆರಂಭವಾದ ಒಂದೇ ವರ್ಷಕ್ಕೆ ಮುಚ್ಚಿ, ೧೦೦ ಎಕರೆ ಜಾಗವನ್ನು ಸಣ್ಣ ಸಣ್ಣ ತುಂಡು ಮಾಡಿ, ಮಾರಾಟ ಮಾಡಲಾಗಿದೆ.ಸ್ವತಹಃ ಪ್ರಧಾನ ಮಂತ್ರಿ,ಮುಖ್ಯಮAತ್ರಿಗಳ ಅಧ್ಯಕ್ಷತೆಯಲ್ಲಿಯೇ ಇತಂಹ ಹಗಲು ದರೋಡೆ ನಡೆದರೂ ಇದುವರೆಗೂ ಯಾರ ವಿರುದ್ದವೂ ಕ್ರಮವಿಲ್ಲ.ವಿರೋಧ ಪಕ್ಷ ಸಹ ಸಂಪೂರ್ಣ ನಿಷ್ಕಿçÃಯವಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಧನಂಜಯ ಆರಾಧ್ಯ ಮಾತನಾಡಿ,ತುರುವೇಕೆರೆ ತಾಲೂಕು ಕೋಳಗಟ್ಟ ಗ್ರಾಮದ ಸರ್ವೆ ನಂಬರ್ ೬೫ ರಲ್ಲಿ ರಾಜೀವ್ ಎಂಬ ವ್ಯಕ್ತಿ ೨ ಎಕೆರೆ ಜಾಗವನ್ನು ಕ್ರಷರ್‌ಗೆ ಲೀಸ್ ಪಡೆದು, ಅಕ್ಕಪಕ್ಕದಲ್ಲಿದ್ದ ಸುಮಾರು ೦೮ ಎಕೆರೆ ಸರಕಾರಿ ಗೋಮಾಳ, ಅರಣ್ಯ ಇಲಾಖೆಯ ಜಾಗವನ್ನು ಒತ್ತುವರಿ ಮಾಡಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ.ಗಣಿಗಾರಿಕೆಯಿಂದ ಧೂಳಿನ ಕಣಗಳು ತೆಂಗು ಮತ್ತು ಅಡಿಕೆ ಇನ್ನಿತರ ಆಹಾರ ಬೆಳೆಗಳ ಮೇಲೆ ಕುಳಿತು, ಇಡೀ ಬೆಳೆ ನಾಶವಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಮನವಿ ನೀಡಿದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಜಿಲ್ಲಾಡಳಿತ ಮತ್ತು ಅಕ್ರಮ ಗಣಿಗಾರಿಕೆ ವಿರುದ್ದ ಮೇ.೦೫ ರಿಂದ ಗ್ರಾಮದಲ್ಲಿ ಆಹೋರಾತ್ರಿ ಧರಣಿ ನಡೆದಿದೆ.ಆದರೆ ಗಣಿಮಾಲೀಕರು ಪ್ರತಿಭಟನಾ ನಿರತರ ಮೇಲೆ ಹಲ್ಲೆ ನಡೆಸಿ, ಅವರ ವಿರುದ್ದವೇ ಕೇಸು ದಾಖಲು ಮಾಡಿ,ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ.ಅಲ್ಲದೆ ನನ್ನಗೂ ದೂರವಾಣಿ ಕೆರೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ. ದಂಡಿನಶಿವ ಪೊಲೀಸರು ರೈತರು ನೀಡಿದ ದೂರುಗಳಿಗೆ ಎನ್.ಸಿ ನೀಡಿ, ಗಣಿ ಮಾಲೀಕರು ನೀಡಿದ ದೂರುಗಳಿಗೆ ಎಫ್.ಐ.ಆರ್. ದಾಖಲಿಸಿ ಪರೋಕ್ಷವಾಗಿ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಈಲ್ಲಾಡಳಿತ ಕೂಡಲೇ ಅಕ್ರಮ ಗಣಿಗಾರಿಕೆಗೆ ತಡೆಯೊಡ್ಡಬೇಕು. ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಒತ್ತಾಯವಾಗಿದೆ.ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆಗೆ ಪೂರ್ವಾನುಮತಿ ಅಗತ್ಯ ಎಂಬ ಜಿಲ್ಲಾಧಿಕಾರಿಗಳ ಆದೇಶವನ್ನು ಹಿಂಪಡೆಯಬೇಕೆAದು ಆಗ್ರಹಿಸಿದರು.
ಈ ಸಂಬAಧ ಮನವಿಯನ್ನು ಅಪರ ಜಿಲ್ಲಾಧಿಕಾರಿಗಳ ಡಾ.ಎಸ್.ತಿಪ್ಪೇಸ್ವಾಮಿ ಅವರಿಗೆ ಸಲ್ಲಿಸಿದರು. ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ತುರುವೇಕೆರೆ ತಾಲೂಕು ಅಧ್ಯಕ್ಷ ಗಂಗಾಧರಪ್ಪ, ಚಿಕ್ಕನಾಯಕನಹಳ್ಳಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್,ತುಮಕೂರು ಜಿಲ್ಲಾ ಮಹಿಳಾ ಘಟಕದ ಶಶಿಕಲ, ಗುಬ್ಬಿ ಮಹಿಳಾ ಘಟಕದ ಎಸ್.ಕಲ್ಪನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

 

(Visited 1 times, 1 visits today)
tumkur
Previous Articleನೀರಿನ ರಕ್ಷಣಾ ಕ್ರಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
Next Article ಬಿ-ಖಾತೆ: ೩ ತಿಂಗಳ ಕಾಲಾವಧಿ ವಿಸ್ತರಣೆ
News Desk Benkiyabale

Related Posts

ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ

September 04, 2026 4:26 pm news

ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ

September 04, 2026 3:59 pm news

ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ ಸಹಕಾರಿ: ಹೇಮಂತ್

September 04, 2026 2:52 pm news
ತಾಜಾ ಸುದ್ಧಿಗಳು
news

ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ

September 04, 2026 4:26 pm
news

ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ

September 04, 2026 3:59 pm
news

ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ ಸಹಕಾರಿ: ಹೇಮಂತ್

September 04, 2026 2:52 pm
news

ರೈತರು ಜೀವಿತಾವಧಿಯಲ್ಲಿ ೫ ಲಕ್ಷದವರೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಿ: ಪಿಡಿಒ

September 04, 2026 2:44 pm
news

ಸೇವಾ ಕಾರ್ಯಗಳೇ ರೋಟರಿ ಕ್ಲಬ್‌ನ ಮೂಲ ದ್ಯೇಯೊದ್ದೇಶ

September 04, 2026 2:42 pm
news

ಲೋಪವಿಲ್ಲದಂತೆ ನಡೆಸಲು ಜಿಲ್ಲಾಧಿಕಾರಿ ಸೂಚನೆ

September 04, 2026 2:40 pm
Our Youtube Channel
Our Picks

ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ

September 04, 2026 4:26 pm

ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ

September 04, 2026 3:59 pm

ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ ಸಹಕಾರಿ: ಹೇಮಂತ್

September 04, 2026 2:52 pm

ರೈತರು ಜೀವಿತಾವಧಿಯಲ್ಲಿ ೫ ಲಕ್ಷದವರೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಿ: ಪಿಡಿಒ

September 04, 2026 2:44 pm

ಸೇವಾ ಕಾರ್ಯಗಳೇ ರೋಟರಿ ಕ್ಲಬ್‌ನ ಮೂಲ ದ್ಯೇಯೊದ್ದೇಶ

September 04, 2026 2:42 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ

By News Desk BenkiyabaleSeptember 04, 2026 4:26 pm

ತುಮಕೂರು: ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ತುಮಕೂರು ವಿಶ್ವವಿದ್ಯಾನಿಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ…

ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ

September 04, 2026 3:59 pm

ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ ಸಹಕಾರಿ: ಹೇಮಂತ್

September 04, 2026 2:52 pm

ರೈತರು ಜೀವಿತಾವಧಿಯಲ್ಲಿ ೫ ಲಕ್ಷದವರೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಿ: ಪಿಡಿಒ

September 04, 2026 2:44 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.