ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗವಲ್ಲಿ ಗ್ರಾಮದ ಕೆರೆ ಕೋಡಿಯ ಅಂಚಿನಲ್ಲಿ ವಾಸವಿದ್ದ ಸುಡುಗಾಡು ಸಿದ್ದ ಸಮುದಾಯದ ೧೯ ಕುಟುಂಬಗಳನ್ನು ಬಳ್ಳಗೆರೆ ಗ್ರಾಮ ಪಂಚಾಯಿತಿ ಹನುಮಂತನಗರಕ್ಕೆ ಸ್ಥಳಾಂತರಿಸಲಾಗಿದ್ದು ಈ ಕೂಡಲೇ ಅವರಿಗೆ ನಿವೇಶನದ ಹಕ್ಕುಪತ್ರ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಳೆಗೆರೆ ಗ್ರಾಮ ಪಂಚಾಯಿತಿ ಹನುಮಂತನಗರಕ್ಕೆ ಸಮಾಜ ಕಲ್ಯಾಣ ಯಾಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ನಿವೇಶನ ನೀಡುವ ಜಾಗವನ್ನು ಶಾಸಕರು ಪರಿಶೀಲಿಸಿದರು.
ಸ್ವಾತಂತ್ರ‍್ಯ ಬಂದು ೭೫ ವರ್ಷಗಳು ಕಳೆದರೂ ಇಂದಿಗೂ ಗುಡಿಸಲಿ ನಲ್ಲಿ ವಾಸ ಮಾಡುತ್ತಿರುವುದು ನಮಗೆಲ್ಲ ಅವಮಾನ ಮತ್ತು ಅಪಮಾನ ಎಂದು ಶಾಸಕ ಬಿ ಸುರೇಶ್ ಗೌಡ ಹೇಳಿದರು.
ರಾಜ್ಯದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇರುವ ಈ ಸಮುದಾಯವು ಅಳಿವಿನ ಅಂಚಿನಲ್ಲಿ ಇದಾವೆ. ಇಂತಹ ಜನ ಸಮುದಾಯದ ಉಳಿವಿಗಾಗಿ ಅವರಿಗೆ ಉತ್ತಮ ಶಿಕ್ಷಣ ಉತ್ತಮ ಅರೋಗ್ಯ ಹಾಗೂ ಉತ್ತಮ ಜನ ವಸತಿ ಪ್ರದೇಶ ನಿರ್ಮಾಣ ಮಾಡಿಕೊಡಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಕೇವಲ ಗಂಗಾ ಕಲ್ಯಾಣ ಸಾಲ ಸೌಲಭ್ಯ ನೀಡಿದರೆ ಅಷ್ಟೇ ಸಾಲದು ಈ ರೀತಿಯ ಜನರಿಗೆ ಸಹಾಯ ಮಾಡಿ ನಿಮಗೂ ಭಗವಂತ ಒಳ್ಳೆಯದು ಮಾಡುತ್ತಾನೆ ಎಂದರು.
ಜನ ಸೇವೆಯೇ ಜನಾರ್ಧನ ಸೇವೆ ಎಂದರೆ ಈ ರೀತಿಯ ಬಡವರ ಬದುಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಭಗವಂತನನ್ನು ಕಾಣಿರಿ ಎಂದು ಹೇಳಿದರು.
ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರವಣಿಗೆಯಲ್ಲಿ ಇದ್ದರೆ ಸಾಲದು ಬರುವಂತ ಒಂದು ತಿಂಗಳೊಳಗೆ ೧೯ ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕು ಎಂದರು
ಮನೆ ಮಂಜೂರಾತಿ ಮಾಡಿಕೊಡುವ ಕೆಲಸ ನಾನು ಮಾಡುತ್ತೇನೆ ಎಂದರು. ಈ ಕೂಡಲೇ ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರು ಒದಗಿಸುವಂತೆ ಗ್ರಾಮ ಪಂಚಾಯಿತಿ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಈ ಸಂದರ್ಭದಲ್ಲಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಶಿವಣ್ಣ ಹೆಬ್ಬೂರು ಕಂದಾಯ ಅಧಿಕಾರಿ ಮಂಜುನಾಥ್ ಸೇರಿದಂತೆ ಗ್ರಾಮ ಪಂಚಾಯಿತಿ ಹಾಗೂ ಬೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.
(Visited 1 times, 1 visits today)