
ತುಮಕೂರು: ಸ್ವಾತಂತ್ರö್ಯ ಪೂರ್ವದ ಇತಿಹಾಸವುಳ್ಳ ತುಮಕೂರು ನಗರದ ಎಂಪ್ರೆಸ್ ಪದವಿ ಪೂರ್ವ ಕಾಲೇಜಿಗೆ ನಗರ ಮಾತ್ರವಲ್ಲದೆ ಜಿಲ್ಲೆಯ ವಿವಿಧ ಗ್ರಾಮೀಣ ಭಾಗದಿಂದ ಬಡ-ಮಧ್ಯಮ ವರ್ಗದ ವಿದ್ಯಾರ್ಥಿನಿಯರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯಲು ಆಗಮಿಸುತ್ತಿರುವುದು ತಮಗೆಲ್ಲ ತಿಳಿದಿರುವ ಸಂಗತಿ. ಈ ಪೈಕಿ ನೂರಾರು ಮಂದಿ ಬೆಳಗಿನ ಉಪಾಹಾರವನ್ನೇ ಮಾಡದೆ ಬರುತ್ತಿರುವ ಕಾರಣ ಅಪೌಷ್ಠಿಕತೆಗೆ ತುತ್ತಾಗುತ್ತಿದ್ದು, ಇದು ಅವರ ಶೈಕ್ಷಣಿಕ ಪ್ರಗತಿ ಮೇಲೂ ಪರಿಣಾಮ ಬೀರುತ್ತಿದೆ.
ಈ ಗಂಭೀರ ಸಂಗತಿಯನ್ನು ಮನಗಂಡ ತುಮಕೂರಿನ ‘ಕಲ್ಪಾಮೃತ’ ಸಂಸ್ಥೆ ಅಮೃತ ಆಹಾರ, ದಾನಿಗಳ ಸಹಕಾರದೊಂದಿಗೆ ಮಧ್ಯಾಹ್ನದ ಬಿಸಿಯೂಟ ವಿತರಣಾ ಯೋಜನೆಯನ್ನು ‘ಪೌಷ್ಠಿಕಾಮೃತ’ ಹೆಸರಿನಲ್ಲಿ ಜುಲೈ ೨ರಿಂದ ಜಾರಿಗೊಳಿಸುತ್ತಿದ್ದು, ಸುಮಾರು ೧೦೦೦ ವಿದ್ಯಾರ್ಥಿನಿಯರಿಗೆ ಕಲಿಕಾ ವರ್ಷದ ಹತ್ತು ತಿಂಗಳು ಅವಧಿಪೂರ್ಣ ಯೋಜನೆಯ ಪ್ರಯೋಜನ ದೊರೆಯಲಿದೆ. ಪೂಜ್ಯ ಸ್ವಾಮಿ ಜಪಾನಂದಜೀ ಅವರ ಮಾರ್ಗದರ್ಶನದಲ್ಲಿ ತುಮಕೂರು ವಿವಿ ಹಾಗೂ ಸರ್ಕಾರಿ ಪ.ಪೂ ಕಾಲೇಜಿನಲ್ಲಿ ಅನ್ನಪೂರ್ಣೇಶ್ವರಿ ಆಹಾರ ಸಮಿತಿಯವರು ಅನುಷ್ಠಾನಗೊಳಿಸಿರುವ ಬಿಸಿಯೂಟ ಯೋಜನೆಯನ್ನು ಮಾದರಿಯಾಗಿಸಿಕೊಂಡು ಎಂಪ್ರೆಸ್‌ನಲ್ಲಿಯೂ ಅನುಷ್ಠಾನಗೊಳಿಸಲಾಗುತ್ತಿದೆ. ಈ ಸತ್ಕಾರ್ಯಕ್ಕೆ ಕಾಲೇಜು ಅಭಿವೃದ್ಧಿ ಸಮಿತಿಯು ಅಧ್ಯಕ್ಷರೂ ಆಗಿರುವ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಆಹಾರ ವಿತರಣಾ ಕೇಂದ್ರವನ್ನು ನಿರ್ಮಿಸಿಕೊಟ್ಟಿದ್ದು ಸಹಕಾರಿಯೆನಿಸಿದೆ. ಕಲ್ಪಾಮೃತ ಟ್ರಸ್ಟ್ನ ಅಧ್ಯಕ್ಷರಾದ ಟಿ.ಎನ್.ಮಧುಕರ್ ನೇತೃತ್ವದಲ್ಲಿ ಉಪಾಧ್ಯಕ್ಷೆ ಶ್ರೀಮತಿ ಅಂಬಿಕಾ ಹುಲಿನಾಯ್ಕರ್, ಕಾರ್ಯದರ್ಶಿ ಬಿ.ಆರ್.ಉಮೇಶ್, ಖಜಾಂಚಿ ಸ್ಪೂರ್ತಿ ಚಿದಾನಂದ್, ಟಸ್ಟ್ರಿ ಡಾ.ಬಿ.ಎನ್.ಪ್ರಶಾಂತ್ ಹಾಗೂ ಇತರ ಸಹೃದಯರು ಯೋಜನೆ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿನಿಯರ ಮೇಲಿನ ಕಾಳಜಿಯಿಂದ ಎಂಪ್ರೆಸ್ ಕಾಲೇಜು ಎಸ್‌ಡಿಎಂಸಿ ಸಮಿತಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವರ್ಗದವರು ಯೋಜನೆ ಸಾಕಾರಕ್ಕೆ ಪೂರಕ ಸಹಕಾರ ನೀಡುತ್ತಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ವಿವರ; ನಗರದ ಎಂಪ್ರೆಸ್ ಕಾಲೇಜಿನ ಸಭಾಂಗಣದಲ್ಲಿ ಜುಲೈ ೨ರಂದು ಬುಧವಾರ ಬೆಳಿಗ್ಗೆ ೧೦.೩೦ಕ್ಕೆ ಪೌಷ್ಠಿಕಾಮೃತ ಯೋಜನೆಯ ಉದ್ಘಾಟನಾ ಸಮಾರಂಭ ಜರುಗಲಿದ್ದು, ಪಾವಗಡ ರಾಮಕೃಷ್ಣ ಸೇವಾಶ್ರಮದ ಮುಖ್ಯಸ್ಥರಾದ ಶ್ರೀ ಸ್ವಾಮಿ ಜಪಾನಂದಜೀ ಮಹಾರಾಜ್ ಅವರ ಸಾನಿಧ್ಯದಲ್ಲಿ ಮಾನ್ಯ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಸಮಾರಂಭ ಉದ್ಘಾಟಿಸುವರು. ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶ್ರೀಮತಿ ರತ್ನಕಲಾ ಅವರು ವಿದ್ಯಾರ್ಥಿನಿಯರಿಗೆ ಊಟ ವಿತರಣೆಗೆ ಚಾಲನೆ ನೀಡಲಿದ್ದು, ನಗರ ಶಾಸPರು ಹಾಗೂ ಎಂಪ್ರೆಸ್ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಶ್ರೀಮತಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಎಂ.ವೆAಕಟೇಶ್ವರಲು ಆಗಮಿಸುವರು. ವಿಶೇಷ ಆಹ್ವಾನಿತರಾಗಿ ಹೆಸರಾಂತ ಉದ್ಯಮಿ ಟೂಡಾಮಾಜಿ ಅಧ್ಯಕ್ಷ ಡಾ.ಎಚ್.ಜಿ.ಚಂದ್ರಶೇಖರ್, ಪ್ರಜಾಪ್ರಗತಿ ಸಂಪಾದಕ ಶ್ರೀಎಸ್.ನಾಗಣ್ಣ, ತುಮಕೂರು ಜಿಲ್ಲಾ ರೈಸ್‌ಮಿಲ್ ಅಸೋಸಿಯೇಷನ್ ಅಧ್ಯಕ್ಷ ಡಾ.ಆರ್.ಎಲ್.ರಮೇಶ್‌ಬಾಬು, ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್ನ ಮುಖ್ಯಸ್ಥರಾದ ಶ್ರೀ ಬಿ.ಆರ್.ನಟರಾಜಶೆಟ್ಟಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ, ಕಾಲೇಜಿನ ಪ್ರಿನ್ಸಿಪಾಲ್ ಶ್ರೀಮತಿ ಬಿ.ಆರ್.ಅನ್ನಪೂರ್ಣ, ಪಾವಗಡದ ದಾನಿಗಳಾದ ಶ್ರೀ ತಲ್ಲಂ ವೆಂಕಟರಾಮುಬಾಬು ಹಾಗೂ ಶ್ರೀಮತಿ ತಲ್ಲಂ ಲಕ್ಷಿö್ಮÃ ವೆಂಕಟರಾಮಣ ಬಾಬು ಹಾಗೂ ಅಧ್ಯಕ್ಷರು, ಸದಸ್ಯರು ಪ್ರಸನ್ನ ಗಣಪತಿ ಸೇವಾ ಸಮಿತಿ ತುಮಕೂರು ಅವರುಗಳು ಪಾಲ್ಗೊಳ್ಳುವರು.




