ತುರುವೇಕೆರೆ: ೨೦೨೮ರ ವಿಧಾನಸಬಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಭ್ಯರ್ಥಿ ನಾನೇ ಕಾರ್ಯಕರ್ತರು, ಮುಖಂಡರಿಗೆ ಗೊಂದಲ ಬೇಡ ಎಂದು ಮಾಜಿ ಶಾಸಕ ಮಸಾಲ ಜಯರಾಮ್ ಸ್ಪಷ್ಟಪಡಿಸಿದರು.
ಪಟ್ಟಣದ ಸಮೀಪದ ತಮ್ಮ ತೋಟದ ಮನೆಯಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಬಿಜೆಪಿ ಹೈಕಮಾಂಡ್ ನಿಂದ ಸ್ಫಷ್ಟ ಸಂದೇಶ ಬಂದಿದ್ದು ನಾನೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದೇ ಮಾಡುತ್ತೇನೆ. ಮುಂದಿನ ೨೦೨೮ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ೧೫೦ ಹೆಚ್ಚು ಸೀಟ್ ಬರಲಿವೆ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಯಾಗಿ ಚುನಾವಣೆ ಎದುರಿಸಲಾಗಿತ್ತು. ತದ ನಂತರ ರಾಜ್ಯ ಸರ್ಕಾರದ ವಿರುದ್ದ ಹಲವು ಹೋರಾಟಗಳನ್ನು ಎರಡು ಪಕ್ಷಗಳು ಜೊತೆಯಾಗಿ ಮಾಡಲಾಗಿದೆ. ಆದರೆ ಕೆಲವು ದಿನಗಳಿಂದ ಬೇರೆ ಪಕ್ಷದವರು ನಾನೇ ಎನ್.ಡಿ.ಎ ಅಭ್ಯರ್ಥಿ ಎಂದು ಹಲವು ಗೊಂದಲಗಳನ್ನು ಸೃಷ್ಟಿ ಮಾಡಿದ್ದಾರೆ. ಬೇರೆ ಪಕ್ಷದ ಅಭ್ಯರ್ಥಿ ಬಗ್ಗೆ ನಾನು ಮಾತನಾಡುವುದಿಲ್ಲ ಆದರೆ ಬಿಜೆಪಿ ಪಕ್ಷದಿಂದ ಚುನಾವಣೆಗೆ ಅಭ್ಯರ್ಥಿಯಾಗುವುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಸ್ಪಷ್ಟಪಡಿಸಿದರು.
ಮುಂದಿನ ವಿಧಾನಸಬಾ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ಬಗ್ಗೆ ಹೈಕಮಾಂಡ್ ಚರ್ಚೆ ನೆಡೆದಿಲ್ಲ ಅಂತಹ ಹೇಳಿಕೆ ನೀಡಿಲ್ಲ. ಆದರೆ ಕೆಲವರು ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಯಾಗಿದ್ದು ತುರುವೇಕೆರೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಾನೇ ಎಂಬ ಹೇಳಿಕೆ ನೀಡಿ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ನಾನು ಈ ಹಿಂದೆ ಬಿಜೆಪಿ ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದು ಈಗಲೂ ಸಹ ತಾಲೂಕಿನಲ್ಲಿ ಬಿಜೆಪಿ ಪಕ್ಷ ಸದೃಡವಾಗಿದ್ದು ೨೦೨೩ ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದ ನನಗೆ ಸುಮಾರು ೬೦ ಸಾವಿರ ಮತಗಳನ್ನು ನೀಡಿದ್ದರು. ವಿಧಾನ ಸಭಾ ಚುನಾವಣೆ ಯಾವಾಗಬೇಕಾದರೂ ಬರಬಹುದು ಪಕ್ಷವನ್ನು ಸಂಘಟನೆ ಮಾಡುವಂತೆ ಪಕ್ಷದ ವರಿಷ್ಟರ ಸೂಚನೆ ನೀಡಿದ್ದಾರೆ. ಮುಂಬರುವ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಸ್ಪರ್ದಿಸಿ ಗೆಲ್ಲಿಸಿಬೇಕಿದೆ. ಬಿಜೆಪಿ ಕಾರ್ಯಕರ್ತರು ಯಾವುದೇ ಗೊಂದಲ ಮಾಡಿಕೊಳ್ಳದೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲು ಮನವಿ ಮಾಡಿದರು.
ಬಿಜೆಪಿ ಬಿಡಲ್ಲ ಕಾಂಗ್ರೇಸ್ ಸೇರಲ್ಲ: ಮಾಜಿ ಶಾಸಕ ಮಸಾಲ ಜಯರಾಮ್ ಕಾಂಗ್ರೇಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಕೆಲವು ವಿರೋಧ ಪಕ್ಷದವರು ಸುಳ್ಳು ಅಪಪ್ರಚಾರ ಮಾಡುತಿದ್ದಾರೆ. ನನ್ನ ಬಿಜೆಪಿ ಪಕ್ಷದಲ್ಲಿ ಶಾಸಕರಾಗಿ ಎರಡು ಬಾರಿ ನಿಗಮ ಮಂಡಳಿ ಅದ್ಯಕ್ಷರನ್ನಾಗಿ ಕೆಲಸ ಮಾಡಲು ಪಕ್ಷ ಅವಕಾಶ ನೀಡಿದೆ. ನಾನು ರಾಜಕೀಯದಲ್ಲಿ ಇರುವರೆವಿಗೂ ಬಿಜೆಪಿ ಪಕ್ಷದಲ್ಲಿ ಇರುತ್ತೇನೆ ಎಂದು ಸ್ಪಷ್ಟ ಪಡಿಸಿದರು.
ಗೋಷ್ಟಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಮುತೃಂಜಯ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಸ್ವಪ್ನ ನಟೇಶ್, ಉಪಾದ್ಯಕ್ಷೆ ಬಾಗ್ಯಮ್ಮ, ಸದಸ್ಯರಾದ ಚಿದಾನಂದ್, ಆಶಾರಾಜಶೇಖರ್, ಶೀಲಾ ಶಿವಪ್ಪ, ಮುಖಂಡರಾದ ಅರಳಿಕೆರೆ ಶಿವಯ್ಯ, ಉಗ್ರಯ್ಯ, ಹರಿಕಾರನಹಳ್ಳಿಪ್ರಸಾದ್, ಜಗದೀಶ್, ಪ್ರಕಾಶ್, ಮಹೇಶ್, ಚೂಡಾಮಣಿ, ಕೃಷ್ಣಮೂರ್ತಿ, ಬಿಗನೇನಹಳ್ಳಿರವಿಕುಮಾರ್, ನವೀನ್, ಸೋಮಶೇಖರ್, ಶೋಭಾ, ಉಮಾ ಸೇರಿದಂತೆ ಇತರರು ಇದ್ದರು.
೨ಪೋಟೋ ಶಿರ್ಷಿಕೆ೦೧ ಪಟ್ಟಣದ ಸಮೀಪದ ತಮ್ಮ ತೋಟದ ಮನೆಯಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಶಾಸಕ ಮಸಾಲಜಯರಾಮ್ ಮಾತನಾಡಿದರು.
(Visited 1 times, 1 visits today)