ತುಮಕೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ-೨೦೨೫ನ್ನು ವಿರೋಧಿಸಿ, ಮಸೂದೆಯನ್ನು ಹಿಂಪಡೆಯುವ0ತೆ ಆಗ್ರಹಿಸಿ ಶುಕ್ರವಾರ ನಗರದ ಬಾರ್‌ಲೈನ್ ರಸ್ತೆಯಲ್ಲಿರುವ ಮೆಕ್ಕಾ ಮಸೀದಿ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿ ತುಮಕೂರು ನಗರದ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದರು.
ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯ ನಂತರ ಮೆಕ್ಕಾ ಮಸೀದಿಯ ಮುತ್ತುವಲ್ಲಿಯವರ ನೇತೃತೃದಲ್ಲಿ ನೂರಾರು ಮುಸ್ಲಿಂ ಭಾಂಧವರು ಪ್ರತಿಭಟನಾ ಫಲಕಗಳನ್ನು ಪ್ರದರ್ಶಿಸುವ ಮೂಲಕ ಕೇಂದ್ರ ಸರಕಾರ ಜಾರಿಗೆ ತಂದಿರುವ, ಮುಸ್ಲಿಂ ಭಾಂಧವರಿಗೆ ಕಂಟಕವಾದ ವಕ್ಪ್ ಮಸೂಧೆಯನ್ನು ಹಿಂಪಡೆಯಬೇಕೆAದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ತಾಜುದ್ದೀನ್ ಷರೀಫ್, ಕರ್ನಾಟಕ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ನ ನಿರ್ದೇಶನದಂತೆ ರಾಜ್ಯದ ಪ್ರತಿ ಹಳ್ಳಿಗಳಲ್ಲಿಯೂ ಶುಕ್ರವಾರದ ನಮಾಜ ನಂತರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ತಿದ್ದುಪಡಿ ಮಸೂದೆ ಮುಸ್ಲಿಂ ವಿರೋಧಿ ಎನ್ನುವುದರ ಜೊತೆಗೆ, ಸಂವಿಧಾನ ವಿರೋಧಿಯೂ ಆಗಿದೆ.ಭಾರತೀಯ ಸಂವಿಧಾನದಲ್ಲಿಯೇ ಅವರವರ ಧರ್ಮ ಪಾಲನೆಗೆ ಅವಕಾಶವಿದೆ. ಅದು ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌಧ್ದ, ಪಾರ್ಸಿ ಎಲ್ಲರಿಗೂ ಅನ್ವಯಿಸುತ್ತದೆ.ಈ ಹಕ್ಕನ್ನೇ ಕಸಿಯುವ ಕೆಲಸವನ್ನು ಕೇಂದ್ರ ಸರಕಾರ ಮಾಡಲು ಹೊರಟಿದೆ. ಇದನ್ನು ಮುಸ್ಲಿಂ ಭಾಂಧವರು ಎಂದಿಗೂ ಒಪ್ಪಲು ಸಾಧ್ಯವಿಲ್ಲ.ಮುಂಬರುವ ದಿನಗಳಲ್ಲಿ ಪ್ರತಿಭಟನೆ ಮತ್ತಷ್ಟು ಉಗ್ರ ಸ್ವರೂಪ ತಾಳಲಿದೆ.ಕೇಂದ್ರದ ಯಾವ ಒತ್ತಡಕ್ಕೂ ನಾವು ಮಣಿಯುವುದಿಲ್ಲ ಎಂದರು.
ಇತ್ತೀಚಿನ ದಿನಗಳಲ್ಲಿ ಮುಸ್ಲಿಂರ ಮೇಲೆ ಸರಕಾರದ ದಬ್ಬಾಳಿಕೆ ಹೆಚ್ಚಾಗಿದೆ. ಇದುವರೆಗೂ ನಮ್ಮ ಶಿಕ್ಷಣ ಸಂಸ್ಥೆಗಳ ಮೇಲೆ ಇವರ ಕಣ್ಣಿತ್ತು. ಈಗ ಅದು ನಮ್ಮ ಸಮುದಾಯದ ಆಸ್ತಿಗಳ ಮೇಲೆ ಬಿದ್ದಿದೆ.ನಮ್ಮ ಪೂರ್ವಜರು ಸಮುದಾಯದ ಏಳಿಗೆಗಾಗಿ ಬಿಟ್ಟು ಹೋದ ಜಮೀನನನ್ನು ನಮ್ಮಿಂದು ಕಸಿದುಕೊಳ್ಳಲು ಈ ಹುನ್ನಾರ ನಡೆಸಿದೆ.ಇದಕ್ಕೆ ನಾವು ಎಂದು ಆಸ್ಪದ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಬುರಾನುದ್ದೀನ್ ಮಾತನಾಡಿ, ಕಳೆದ ಹತ್ತಾರು ದಿನಗಳಿಂದ ಮುಸ್ಲಿಂ ಪಸರ್ನಲ್ ಲಾ ಬೋರ್ಡ್ನ ನಿರ್ದೇಶನದಂತೆ ಮಾನವ ಸರಪಳಿ ನಿರ್ಮಿಸಲು ಇಲ್ಲಿನ ಆಡಳಿತ ಅವಕಾಶ ನೀಡುತ್ತಿಲ್ಲ.ಹಲವಾರು ಬಾರಿ ಮನವಿ ಮಾಡಿ, ಶಾಂತಿಯುತ ಪ್ರತಿಭಟನೆಗೆ ಅವಕಾಶ ಕೇಳಿದರೂ ನೀಡದೆ, ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನೂರಾರು ಮುಸ್ಲಿಂ ಭಾಂಧವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
(Visited 1 times, 1 visits today)