BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ
  • ೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ
  • ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು
  • ಪಂಚಾಯತ್ ರಾಜ್ಯ ವ್ಯವಸ್ಥೆ ವಿಶ್ವಕ್ಕೆ ಮಾದರಿ: ಉಪ ಮುಖ್ಯಮಂತ್ರಿ
  • ರೈಫಲ್ ಶೂಟಿಂಗ್ ಕ್ರೀಡೆಯಲ್ಲಿ ತುಮಕೂರು ಜಿಲ್ಲೆಗೆ ೧೯ ಪದಕ
  • ಮೌಢ್ಯ ಬಿಟ್ಟು ವೈಜ್ಞಾನಿಕತೆ ಬೆಳೆಸಿಕೊಳ್ಳಿ: ಹುಲಿಕಲ್ ನಟರಾಜ್
  • ಬೂತ್ ಏಜೆಂಟ್ ನೇಮಿಸಿ ಮಾಹಿತಿ ನೀಡುವಂತೆ ರಾಜಕೀಯ ಪಕ್ಷಗಳಿಗೆ ಸೂಚನೆ
  • ಮೊಟ್ಟೆ ದರವನ್ನು ಪರಿಷ್ಕರಿಸುವಂತೆ ಮನವಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಆಚಾರ ವಿಚಾರಗಳು ಉಳಿಯಬೇಕಾದರೆ ಗ್ರಾಮದಲ್ಲಿ ದೇವಾಲಯ, ಧಾರ್ಮಿಕ ಕ್ಷೇತ್ರಗಳು ನಿರ್ಮಾಣಗೊಳ್ಳಬೇಕು
ತುಮಕೂರು

ಆಚಾರ ವಿಚಾರಗಳು ಉಳಿಯಬೇಕಾದರೆ ಗ್ರಾಮದಲ್ಲಿ ದೇವಾಲಯ, ಧಾರ್ಮಿಕ ಕ್ಷೇತ್ರಗಳು ನಿರ್ಮಾಣಗೊಳ್ಳಬೇಕು

By News Desk BenkiyabaleUpdated:August 30, 2025 2:39 pm

ಕೊರಟಗೆರೆ: ಸನಾತನ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳು ಉಳಿಯಬೇಕಾದರೆ ಪ್ರತಿಯೊಂದು ಗ್ರಾಮದಲ್ಲಿ ದೇವಾಲಯ, ಧಾರ್ಮಿಕ ಕ್ಷೇತ್ರಗಳು ನಿರ್ಮಾಣಗೊಳ್ಳಬೇಕು. ವರ್ಣರಹಿತವಾಗಿ ಬದುಕು ಕಟ್ಟಿಕೊಳ್ಳಬೇಕಾದರೆ ಇಂತಹ ಹಬ್ಬಗಳು, ಜಾತ್ರೆಗಳು ಅವಕಾಶ ಮಾಡಿಕೊಡುತ್ತವೆ ಎಂದು ಎಲೆರಾಂಪುರ ನರಸಿಂಹಗಿರಿ ಸುಕ್ಷೇತ್ರ ಶ್ರೀಮಠದ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ಕರಿದುಗ್ಗನಹಳ್ಳಿ ಮತ್ತು ಹನುಮಂತಯ್ಯನಪಾಳ್ಯ ಗ್ರಾಮದೇವತೆ ಶ್ರೀದೊಡ್ಡಮ್ಮ ದೇವಿ ದೇವಾಲಯದ ಆವರಣದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ೧ ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾದ ಶ್ರೀದೊಡ್ಡಮ್ಮದೇವಿಯ ಸ್ಥಿರಬಿಂಬ ಪ್ರತಿಷ್ಠಾಪನಾ ಕುಂಭಾಭಿಷೇಕ ಮಹೋತ್ಸವ ಹಾಗೂ ಚಂಡಿಕಾ ಹೋಮ ಧಾರ್ಮಿಕ ಕಾರ್ಯಕ್ರಮವು ಆ.೨೯ ರಿಂದ ೩೧ ರವರೆಗೆ ನಡೆಯಲಿದೆ ಎಂದು ಹೇಳಿದರು.
ದೇವಾಲಯದ ಧಾರ್ಮಿಕ ಕಾರ್ಯಕ್ರಮ ಸಿಂಹಪಾಲು ಉದ್ಯಮಿ ನಿಲೇಶ್‌ಗೆ ಸಲ್ಲಬೇಕು. ರಸ್ತೆ ಮತ್ತು ಮೂಲಭೂತ ಸೌಕರ್ಯದಿಂದ ವಂಚಿತಗೊAಡ ಈ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಿದ್ದಾರೆ. ಆ.೩೧ಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಮತ್ತು ಗೃಹ ಸಚಿವ ಡಾ.ಜಿ ಪರಮೇಶ್ವರ್‌ರವರು ಆಗಮಿಸಲಿದ್ದು, ತುಮಕೂರಿನ ಸಿದ್ದಗಂಗಾ ಮಠದ ಶ್ರೀಗಳು ಸೇರಿದಂತೆ ರಾಜ್ಯದ ಹಲವು ಭಾಗದ ಶ್ರೀಮಠದ ಶ್ರೀಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ, ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ೨ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದರು.
ಉದ್ಯಮಿ ನಿಲೇಶ್ ಮಾತನಾಡಿ, ಕರಿದುಗ್ಗನಹಳ್ಳಿ ಮತ್ತು ಹನುಮಂತಯ್ಯನಪಾಳ್ಯ ಗ್ರಾಮದೇವತೆ ಶ್ರೀದೊಡ್ಡಮ್ಮ ದೇವಿ ದೇವಾಲಯದಲ್ಲಿ ಆ.೨೯ರಿಂದ ೩೧ರವೆರೆಗೆ ವಿಶೇಷ ಧಾರ್ಮಿಕ ಪೂಜೆಗಳು ನಡೆಯಲಿದ್ದು, ಧಾರ್ಮಿಕ ಕಾರ್ಯಕ್ರಮವು ಎಲೆರಾಂಪುರ ಶ್ರೀಗಳ ಆಶೀರ್ವಾದದಿಂದ ಸಿದ್ದತೆಗೊಂಡಿದೆ. ಇದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ಹೇಳಿದರು.
ಈ ವೇಳೆ ಮತ್ತೋರ್ವ ಉದ್ಯಮಿ ವಿಜಯ್, ಹಿರಿಯ ಮುಖಂಡ ಹನುಮಂತರಾಯಪ್ಪ ಸೇರಿದಂತೆ ಇತರರು ಇದ್ದರು.

೩ದಿನದ ಧಾರ್ಮಿಕ ಕಾರ್ಯಕ್ರಮ:
ದೊಡ್ಡಮ್ಮ ದೇವಿಯ ಪ್ರತಿಷ್ಠಾಪನಾ ಮಹೋತ್ಸವ ಪೂಜಾ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದ್ದು, ಆ.೨೯ರ ಸಂಜೆ.೪ಕ್ಕೆ ಗಂಗಾಪೂಜೆ, ಗುರುಗಣಪತಿ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ದೇವನಾಂದಿ, ಪಂಚಗವ್ಯ, ಆಚಾರ್ಯಾದಿ ಋತ್ವಿಕ್‌ವರುಣ, ರಕ್ಷಾಸೂತ್ರಾ ಪೂಜೆ, ಮೃತ್ಯುಗ್ರಹಣ, ಮಹಾಮಂಗಳಾರತಿ, ಆ.೩೦ರಂದು ಯಾಗಾಶಾಲಾ ಪ್ರವೇಶ, ಕಲಶಾಸ್ಥಾಪನೆ, ನವಗ್ರಹ, ಮೃತ್ಯುಂಜಯ, ಆ.೩೧ರಂದು ಪ್ರಾತಕಾಲದಲ್ಲಿ ನೇತ್ರೋಲನ, ಪ್ರಾಣ ಪ್ರತಿಷ್ಠಾಪನೆ, ಕಲಶ ಪೂಜೆ, ಮಹಾ ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ಚಂಡಿಕಾಹೋಮ, ತೀರ್ಥ ಪ್ರಸಾದ ವಿನಿಯೋಗವಿದೆ ಎಂದು ಎಲೆರಾಂಪುರ ಶ್ರೀಮಠದ ಶ್ರೀಗಳು ತಿಳಿಸಿದರು.

 

(Visited 1 times, 1 visits today)
tumkur
Previous Articleಭಾರತ ಅದರಲ್ಲೂ ಕರ್ನಾಟಕದಲ್ಲಿ ಇರುವಂತಹ ಪ್ರತಿಭಾನ್ವಿತರು ಬೇರೆಲ್ಲಿಯೂ ಸಹ ನೋಡಲು ಸಾಧ್ಯವಿಲ್ಲ – ಶಾಸಕ ಟಿ.ಬಿ. ಜಯಚಂದ್ರ.
Next Article ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಿದ್ಯುತ್ ಅವಶ್ಯಕ
News Desk Benkiyabale

Related Posts

ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ

July 09, 2026 4:59 pm news

೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ

July 09, 2026 4:35 pm news

ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು

July 09, 2026 2:53 pm news
ತಾಜಾ ಸುದ್ಧಿಗಳು

ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ

July 09, 2026 4:59 pm

೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ

July 09, 2026 4:35 pm

ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು

July 09, 2026 2:53 pm

ಪಂಚಾಯತ್ ರಾಜ್ಯ ವ್ಯವಸ್ಥೆ ವಿಶ್ವಕ್ಕೆ ಮಾದರಿ: ಉಪ ಮುಖ್ಯಮಂತ್ರಿ

July 09, 2026 2:37 pm

ರೈಫಲ್ ಶೂಟಿಂಗ್ ಕ್ರೀಡೆಯಲ್ಲಿ ತುಮಕೂರು ಜಿಲ್ಲೆಗೆ ೧೯ ಪದಕ

July 09, 2026 2:34 pm

ಮೌಢ್ಯ ಬಿಟ್ಟು ವೈಜ್ಞಾನಿಕತೆ ಬೆಳೆಸಿಕೊಳ್ಳಿ: ಹುಲಿಕಲ್ ನಟರಾಜ್

July 09, 2026 2:32 pm
Our Youtube Channel
Our Picks

ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ

July 09, 2026 4:59 pm

೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ

July 09, 2026 4:35 pm

ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು

July 09, 2026 2:53 pm

ಪಂಚಾಯತ್ ರಾಜ್ಯ ವ್ಯವಸ್ಥೆ ವಿಶ್ವಕ್ಕೆ ಮಾದರಿ: ಉಪ ಮುಖ್ಯಮಂತ್ರಿ

July 09, 2026 2:37 pm

ರೈಫಲ್ ಶೂಟಿಂಗ್ ಕ್ರೀಡೆಯಲ್ಲಿ ತುಮಕೂರು ಜಿಲ್ಲೆಗೆ ೧೯ ಪದಕ

July 09, 2026 2:34 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ

By News Desk BenkiyabaleJuly 09, 2026 4:59 pm

ಪಾವಗಡ: ಬಡ ಜನರಿಗಾಗಿ ಸರ್ಕಾರ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆ ಹಾಗೂ ನೆರೆಯ ರಾಜ್ಯಕ್ಕೆ ಸಾಗಿಸುತ್ತಿದ್ದ ಬೃಹತ್ ಜಾಲವನ್ನು…

೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ

July 09, 2026 4:35 pm

ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು

July 09, 2026 2:53 pm

ಪಂಚಾಯತ್ ರಾಜ್ಯ ವ್ಯವಸ್ಥೆ ವಿಶ್ವಕ್ಕೆ ಮಾದರಿ: ಉಪ ಮುಖ್ಯಮಂತ್ರಿ

July 09, 2026 2:37 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.