ಶಿರಾ : ಸದೃಢ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿಬಿ ಜಯಜಂದ್ರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮಂಗಳವಾರದ0ದು ಶಿರಾ ನಗರದ ವಿವೇಕಾ ನಂದ ಕ್ರೀಡಾಂಗಣದಲ್ಲಿರುವ ಗುರುಭವನದ ನಿವೇಶನದಲ್ಲಿ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ೧೩೮ ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.
ಈಗಾಗಲೇ ಬಿಸಿಲಿನ ತಾಪಕ್ಕೆ ರಾಗಿ ಹಾಗೂ ಕಡಲೆ ಬೀಜದ ಗಿಡಗಳು ಒಣಗುತ್ತಿವೆ. ಭೀಕರ ಬರಗಾಲ ಬರಬಹುದೆಂಬ ಭಯ ನನಗಿದೆ, ಶಿರಾ ತಾಲೂಕಿನಲ್ಲಿ ನೀರಿನ ಸಂರಕ್ಷಣೆಗಾಗಿ ೪೩ ಬ್ಯಾರೇಜ್ ಗಳನ್ನು ಸುಮಾರು ೫೩ ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದೇನೆ.
ಅಂತರ್ಜಲ ವೃದ್ಧಿ ಮಾಡುವುದು ನನ್ನ ಗುರಿಯಾಗಿದೆ, ಆ ಕಾರಣದಿಂದ ಶಿಕ್ಷಕರ ಭವನಕ್ಕೆ ಹೆಚ್ಚಿಗೆ ಹಣ ನೀಡಲಾಗುವುದಿಲ್ಲ, ನನ್ನ ಶಾಸಕರದ ಅನುದಾನದಲ್ಲಿ ೨೫ ಲಕ್ಷ ನೀಡುತ್ತೇನೆಂದು ಭರವಸೆ ನೀಡಿದರು. ತಂತ್ರಜ್ಞಾನ ಅಭಿವೃದ್ಧಿ ಹೊಂದಿದ0ತೆ, ಅದರಿಂದ ಆಗುವ ಪ್ರಯೋಜನಗಳು ಒಂದು ಕಡೆಯಾದರೆ, ಹಾನಿಯೂ ಉಂಟಾಗುತ್ತದೆ. ಈ ತಂತ್ರಜ್ಞಾನದ ಅಭಿವೃದ್ಧಿಯು ದೇಶದ ಒಳಿತಿಗಾಗಿ ಉಪಯೋಗವಾಗುವಂತೆ ಮಾಡುವ ಬಹುದೊಡ್ಡ ಪಾತ್ರ ಶಿಕ್ಷಕರ ದ್ದಾಗಿದೆ
ಮೊದಲೆಲ್ಲ ತಾಯಿಯೇ ಮೊದಲ ಗುರು ಎಂಬುದಿತ್ತು, ಆದರೆ ಈಗ ಮಕ್ಕಳಿಗೆ ಮೊಬೈಲ್ ಮೊದಲ ಗುರು ಆಗಿದೆ. ಮಕ್ಕಳ ಮನಸ್ಸು ಮತ್ತು ಬುದ್ಧಿ ವಿಕಾಸ ವಾಗುವ ಹಂತದಲ್ಲಿ ಮೌಲ್ಯ ದಾರಿತ, ಸಂಸ್ಕಾರ ಶಿಕ್ಷಣ ಶಿಕ್ಷಕರಿಂದ ದೊರಕ ಬೇಕು. ಆಗಲೇ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು.
ಪ್ರಸಕ್ತ ಸಾಲಿನಲ್ಲಿ ೬೦ಕ್ಕೂ ಹೆಚ್ಚು ಶಿಕ್ಷಕರು ನಿವೃತ್ತಿಯಾಗಿದ್ದಾರೆ. ಈಗಾಗಲೇ ನಮಗೆ ಶಿಕ್ಷಕರ ಕೊರತೆ ಇದೆ ಅದರಲ್ಲೂ ಶಿಕ್ಷಕರು ನಿವೃತ್ತಿಯಾದರೆ ಮತ್ತೆ ಶಿಕ್ಷಕರನ್ನು ಹೊಂದಿಸುವುದು ಎಂಬ ಕಷ್ಟ ನನಗೆಎಂದರು.
ವಿಧಾನ ಪರಿಷತ್ ಶಾಸಕ ಚಿದಾನಂದ ಎಂ ಗೌಡ ಮಾತನಾಡಿ ನಿಸ್ವಾರ್ಥವಾಗಿ ಆರೋಗ್ಯವಂತ, ವಿದ್ಯಾವಂತ, ಹಾಗೂ ಗುಣವಂತ ಸಮಾಜ ನಿರ್ಮಾಣ ಮಾಡುವವರು ಶಿಕ್ಷಕರು. ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದೇ ಕಷ್ಟ ಸಾಧ್ಯ ಅನ್ನುವಂತಹ ಕಾಲಘಟ್ಟದಲ್ಲಿ ಸಾವಿತ್ರಿಬಾಯಿ ಬೋಪಲೆ ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಅತ್ಯವಶ್ಯಕ ಎಂದು ಸಮಾಜದ ವಿರೋಧದ ನಡುವೆ ಎಲ್ಲಾ ಕಷ್ಟಗಳನ್ನು ಆ ಕಾಲದಲ್ಲಿ ಸಹಿಸಿಕೊಂಡು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮುಂದಾಗಿದ್ದರ ಪರಿಣಾಮ ಪ್ರಸಕ್ತ ದಿನಗಳಲ್ಲಿ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಕರ್ನಾಟಕ ಸರ್ಕಾರ ನೌಕರರಿಗೆ ಕಣ್ಣೊರಿಸುವ ತಂತ್ರ ಮಾಡದೆ ಏನ್ ಪಿ ಎಸ್ ತೆಗೆದು ಓಪಿಎಸ್ ಅನ್ನು ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು
ಈಗಾಗಲೇ ಖಾಸಗಿ ಶಾಲೆಯಲ್ಲಿದೆ ಕಾರ್ಯನಿರ್ವಹಿಸುವ ಶಿಕ್ಷಕರು ಐದು ವರ್ಷ ಮೇಲ್ಪಟ್ಟು ಕೆಲಸ ಮಾಡಿದರೆ ಅಂತವರಿಗೆ ಗ್ರಾಜುಟಿ ನೀಡಬೇಕೆಂಬ ಆದೇಶವಾಗಿದೆ ಇದರಿಂದ ಖಾಸಗಿ ಶಿಕ್ಷಕರಿಗೂ ಅನುಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ, ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತುಮಲ್ ನಿರ್ದೇಶಕ ಎಸ್ .ಆರ್. ಗೌಡ, ನಗರ ಸಭೆ ಅಧ್ಯಕ್ಷ ಜಿಷಾನ್ ಮಹಮ್ಮದ್, ಸ್ಥಾಯಿ ಸಮಿತಿಯ ಅಧ್ಯಕ್ಷ ಅಜಯ್ ಕುಮಾರ್, ನಗರಸಭೆ ಉಪಾಧ್ಯಕ್ಷ ಲಕ್ಷ್ಮಿಕಾಂತ್, ತಾಲೂಕ ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಶಿರಾ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ್, ಸಮನ್ವಯ ಅಧಿಕಾರಿ ರಂಗಪ್ಪ ,ನಗರಸಭೆ ಆಯುಕ್ತರುದ್ರೇಶ್, ಅಕ್ಷರ ದಾಸೋಹ ರಾಮಚಂದ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷ ಹನುಮಂತರಾಜು, ಕಾರ್ಯದರ್ಶಿ ಗೀತಾ. ಸೇರಿದಂತೆ ತಾಲೂಕಿನ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.
(Visited 1 times, 1 visits today)