BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಪ್ರಜಾಸೇವೆ ಆಂದೋಲನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರಿಶೀಲನೆ
  • ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಮಂಡಳಿ
  • ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ
  • ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ
  • ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ
  • ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು
  • ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ
  • ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕಾನೂನು ರೀತಿಯ ಮಾನದಂಡಗಳನ್ನು ಪಾಲಿಸಿ
ಇತರೆ ಸುದ್ಧಿಗಳು

ಕಾನೂನು ರೀತಿಯ ಮಾನದಂಡಗಳನ್ನು ಪಾಲಿಸಿ

ಕೆರೆಗಳಲ್ಲಿ ಮಣ್ಣು, ಮರಳು ತೆಗೆಯುತ್ತಿರುವ ಬಗ್ಗೆ ನಡೆದ ಸಭೆಯಲ್ಲಿ ಶಾಸಕ ಸೂಚನೆ
By News Desk BenkiyabaleUpdated:February 06, 2026 3:37 pm

ಚಿಕ್ಕನಾಯಕನಹಳ್ಳಿ: ಕೆರೆಗಳಲ್ಲಿ ತಮ್ಮ ಹೊಲ ತೋಟಗಳಿಗೆ ಮಣ್ಣು ಹೊಡೆದುಕೊಳ್ಳು ರೈತರು, ಗ್ರಾಮಸ್ಥರು, ಜೆಸಿಬಿ, ಟ್ರಾಕ್ಟರ್ ಮಾಲೀಕರುಗಳು ಸೇರಿ ಕೆರೆ ಅಭಿವೃದ್ದಿ ಸಮಿತಿ ಮಾಡಿಕೊಳ್ಳುವ ಮೂಲಕ ರೈತರು ಕಾನೂನು ರೀತಿಯಲ್ಲಿ ವೈಜ್ಞಾನಿಕವಾಗಿ ಎಷ್ಟು ಮಣ್ಣನ್ನು ತೆಗೆಯಬೇಕು ಎಂಬುದನ್ನು ಆ ಸಮಿತಿಯೊಂದಿಗೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ತೀರ್ಮಾನ ಮಾಡಿ ಕಾನೂನು ರೀತಿಯಲ್ಲಿ ಕೆರೆಯ ಮಣ್ಣನ್ನು ಹೊಡೆದುಕೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲ್ಲೂಕಿನ ಕೆರೆಗಳಲ್ಲಿ ಮಣ್ಣು ಮತ್ತು ಮರಳು ತೆಗೆಯುತ್ತಿರುವ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿರುವ ೩೮ ಕೆರೆಗಳಿಗೂ ಆಯಾ ಕೆರೆಗಳ ಗ್ರಾಮದ ಹಾಗೂ ಸುತ್ತಮುತ್ತಲ ರೈತರ ಮುಖಂಡರನ್ನೊಳಗೊ0ಡ ಕೆರೆ ಅಭಿವೃದ್ದಿ ಸಮಿತಿಯನ್ನು ಮಾಡಿಕೊಂಡು ರೈತರ ಹೊಲ ತೋಟಗಳಿಗೆ ಅಗತ್ಯವಿರುವಂತಹ ಮಣ್ಣನ್ನು ಹೊಡೆದುಕೊಳ್ಳಲು ನಿಮ್ಮಲ್ಲೇ ತೀರ್ಮಾನ ಮಾಡಿಕೊಳ್ಳಿ, ಕಾನೂನು ರೀತಿಯ ಮಾನದಂಡಗಳನ್ನು ಇಟ್ಟು ಕೊಂಡು ಮಣ್ಣನ್ನು ತೆಗೆಯಿರಿ ಇದಕ್ಕೆ ಸಂಬ0ಧ ಪಟ್ಟಂತೆ ರೈತರಿಗೆ ಅನುಕೂಲ ಮಾಡಿಕೊಡಿ ಎಂದ ಅವರು ಪ್ರತಿ ಕೆರೆಯ ಸಮಿತಿಯನ್ನು ಸಂಬ0ದ ಪಟ್ಟ ಸಣ್ಣ ನೀರಾವರಿ ಇಲಾಖೆಯವರು ಮಾಡುವ ಮೂಲಕ ಈ ಮಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದರು.
ತಹಸೀಲ್ದಾರ್ ಮಮತಾ ಎಂ ಮಾತನಾಡಿ ಕೆರೆಯ ಮಣ್ಣನ್ನು ಹೊಲ ತೋಟಗಳಿಗೆ ಕಾನೂನು ರೀತಿಯಲ್ಲಿ ನೀವು ಸಂಬ0ಧ ಪಟ್ಟ ಇಲಾಖೆಯು ತಿಳಿಸಿದಂತೆ ಮಣ್ಣನ್ನು ತೆಗೆಯಲು ರೈತರಿಗೆ ಅವಕಾಶವಿದ್ದು ಅದು ಸಹ ನಿಮ್ಮ ಸಮಿತಿಯನ್ನು ಮಾಡಿ ತೀರ್ಮಾನ ಮಾಡಿ ಅದನ್ನು ಹೊರತು ಪಡಿಸಿ ಗೋಮಾಳ, ಖರಾಬು ಜಾಗದಲ್ಲಿ ಯಾವುದೇ ಕಾರಣಕ್ಕು ಮಣ್ಣನ್ನು ತೆಗೆಯಲು ಅವಕಾಶವಿಲ್ಲ ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಈಗಾಗಲೇ ಇಲಾಖೆಯವರು ತಿಳಿಸಿದಂತೆ ಕೇವಲ ಮೂರು ಅಡಿಗಳಷ್ಟು ಮಾತ್ರ ತೆಗೆಯಬೇಕು. ಅದರಿಂದ ಕೆಳಗೆ ತೆಗೆಯುವುದಾಗಲಿ ಅಥವ ಮರಳನ್ನು ತೆಗೆಯುವುದಾಗಲಿ ಮಾಡಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ರೇಷ್ಮಾಭಾನು ಮಾತನಾಡಿ ಮಣ್ಣಿನಲ್ಲಿ ೩ಎಎ ಇದ್ದು ಇದರಲ್ಲಿ ನೀವು ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಮಣ್ಣನ್ನು ಹೊಡೆದುಕೊಳ್ಳಲು ಇಲಾಖೆಯ ಅನುಮತಿ ಪಡೆಯಬೇಕು ಹಾಗೂ ಸ್ಥಳೀಯ ಆಡಳಿತದ ಅನುಮತಿಯನ್ನು ಪಡೆಯಬೇಕು ಮಣ್ಣಿನ ಅಗತ್ಯತೆಗೆ ತಕ್ಕಂತೆ ರಾಯಧನವನ್ನು ಪಾವತಿಸಬೇಕಾಗುತ್ತದೆ ಅದರಲ್ಲೂ ವೈಜ್ಞಾನಿಕ ರೀತಿಯಲ್ಲಿ ಮೇಲ್ಪದರದ ಮಣ್ಣನ್ನು ಮಾತ್ರ ಸೂಕ್ತ ಆಳತೆಯಲ್ಲಿ ನೀಡಲಾಗುವುದು ಎಂದರು.
ವಕೀಲ ಶ್ರೀಧರ್ ಮಾತನಾಡಿ ಎಲ್ಲಾ ಭಾಗದ ಕೆರೆಗಳ ಮಣ್ಣು ಒಂದೇ ರೀತಿಯಲ್ಲಿರುವುದಿಲ್ಲ ಅದ್ದರಿಂದ ಆಯಾ ಕೆರೆಯಲ್ಲಿನ ಯಾವ ಮಣ್ಣು ರೈತರಿಗೆ ಅನುಕೂಲ ಎಷ್ಟು ತೆಗೆಯ ಬೇಕು ಎಂಬುದರ ಬಗ್ಗೆ ಸರಿಯಾದ ರೀತಿಯಲ್ಲಿ ಇಲಾಖೆಯ ಅಧಿಕಾರಿಗಳು ತಿಳಿಸಬೇಕು. ಅದರಂತೆ ರೈತರು ಅಗತ್ಯಕ್ಕೆ ತಕ್ಕಂತೆ ತಮ್ಮ ಜಮೀನುಗಳಿಗೆ ಮಾತ್ರ ಮಣ್ಣನ್ನು ಹಾಕಿಕೊಳ್ಳಬೇಕು ಎಂದರು.
ತಿಮ್ಮನಹಳ್ಳಿಯ ಜೆಸಿಬಿ ಮಾಲೀಕ ಶ್ರೀಹರ್ಷ ಮಾತನಾಡಿ, ನಮ್ಮ ಜಮೀನಿನ ಮಣ್ಣನ್ನು ನಾವೇ ಬೇರೆ ಜಮೀನಿಗೆ ಹೊಡೆದುಕೊಳ್ಳಲು ಅನುಮತಿ ಬೇಕಾಗಿದೆ ಎಂದು ಪ್ರಶ್ನೆಮಾಡಿದರು.
ಇದಕ್ಕೆ ಉತ್ತರಿಸಿದ ಗಣಿ ಇಲಾಖೆಯ ಅಧಿಕಾರಿಗಳು ನಿಮ್ಮ ಭೂಮಿಯಲ್ಲಿನ ಮಣ್ಣನ್ನು ಅಲ್ಲೇ ತೆಗೆದು ನೀವೆ ಬಳಸಿಕೊಳ್ಳಬಹುದು ಅದರೆ ಬೇರೆ ಕಡೆ ಸಾಗಿಸಿದರೆ ಅದಕ್ಕೆ ಇಲಾಖೆಗೆ ಹಣ ಸಂದಾಯ ಮಾಡಬೇಕು ಅನುಮತಿ ಪಡೆಯಬೇಕು ಎಂದರು.
ಜೆಸಿಬಿ ಮಾಲೀಕ ರಮೇಶ್ ಮಾತನಾಡಿ ತಾಲ್ಲೂಕಿನಲ್ಲಿ ಸುಮಾರು ೧೫೦ ರಿಂದ ೨೦೦ ಜೆಸಿಬಿ ಮಾಲೀಕರು ಇದ್ದು ರೈತರು ತಮ್ಮ ಕೆಲಸಗಳಿಗೆ ಮಣ್ಣನ್ನು ಹೊಡೆಸಿಕೊಳ್ಳುತ್ತಾರೆ ಇದರಲ್ಲಿ ನಾವು ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಮಣ್ಣನ್ನು ತೆಗೆಯುವುದಿಲ್ಲ ಅದ್ದರಿಂದ ನಮ್ಮ ಮೇಲೆ ಅನಗತ್ಯ ಪ್ರಕರಣಗಳನ್ನು ಹಾಕದೇ ಸ್ಥಳದಲ್ಲಿನ ವಾಸ್ತವತೆಯನ್ನು ತಿಳಿದು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಜೆಸಿಬಿ, ಟ್ರಾಕ್ಟರ್ ಗಳಿಗೆ ವಿಮೆ, ಪರವಾನಗಿ, ಚಾಲಕರ ಪರವಾನಗಿ ಸಂಬAದ ಪಟ್ಟ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ಪೊಲೀಸ್ ಸಬ್ ಇನ್ಸೆಪೆಕ್ಟರ್ ಹೇಮಂತ್ ತಿಳಿಸಿದರೆ ಕೃಷಿಗೆ, ತೋಟಗಳಿಗೆ ಯಾವ ರೀತಿಯಲ್ಲಿ ಎಷ್ಟು ಮಣ್ಣನ್ನು ನೀಡಬೇಕು. ಎಂತಹ ಮಣ್ಣನ್ನು ನೀಡಬೇಕು ಎಂಬುದನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಜಕುಮಾರ್, ತೋಟಗಾರಿಕೆ ಇಲಾಖೆಯ ಅಧಿಕಾರಿ ರಾಜಪ್ಪ ತಿಳಿಸಿದರು.
ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಚಿತ್ತಪ್ಪ, ರೈತ ಮುಖಂಡರುಗಳಾದ ರಾಮಚಂದ್ರಯ್ಯ, ರಮೇಶ್, ಮಧು, ಷಡಾಕ್ಷರಿ, ನಾಗೇಶ ಸೇರಿದಂತೆ ಮತ್ತಿತರರು ಇದ್ದರು.

(Visited 1 times, 1 visits today)
Previous Articleಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ
Next Article ಕಾರ್ಪೊರೇಟ್ ಕಣ್ಣೆಗೆ ಬೆಣ್ಣೆ, ಶ್ರಮಜೀವಿಗಳ ಕಣ್ಣೆಗೆ ಸುಣ್ಣ
News Desk Benkiyabale

Related Posts

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm news

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm news

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm news
ತಾಜಾ ಸುದ್ಧಿಗಳು
ಕರ್ನಾಟಕ ಸುದ್ಧಿಗಳು

ಪ್ರಜಾಸೇವೆ ಆಂದೋಲನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರಿಶೀಲನೆ

September 11, 2026 4:32 pm
ತುಮಕೂರು

ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಮಂಡಳಿ

September 11, 2026 4:09 pm
news

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm
news

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm
news

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm
news

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm
Our Youtube Channel
Our Picks

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm

ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ

September 09, 2026 5:34 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
ಕರ್ನಾಟಕ ಸುದ್ಧಿಗಳು

ಪ್ರಜಾಸೇವೆ ಆಂದೋಲನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರಿಶೀಲನೆ

By News Desk BenkiyabaleSeptember 11, 2026 4:32 pm

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ನಡೆದ ಪ್ರಜಾಸೇವೆ ಆಂದೋಲನದಡಿ ಸಾರ್ವಜನಿಕರಿಂದ ಸ್ವೀಕರಿಸಲಾದ ಅಹವಾಲುಗಳ ವಿಲೇವಾರಿ ಪ್ರಗತಿಯನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು…

ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಮಂಡಳಿ

September 11, 2026 4:09 pm

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.