ಹುಳಿಯಾರು: ಬ್ಯಾಂಕುಗಳಲ್ಲಿ ವ್ಯವಹರಿಸಲೆಂದು ಉಳಿತಾಯ ಖಾತೆ ತೆರೆದಿರುವ ಕೆಲವು ಗ್ರಾಹಕರು, ಖಾತೆಗಳಿಗೆ ಹಣ ಕಟ್ಟುವುದಾಗಲಿ ತೆಗೆಯುವುದಾಗಲಿ ಮಾಡದೇ ಇದ್ದಲ್ಲಿ ಆ ಉಳಿತಾಯ ಖಾತೆಯು ನಿಸ್ಕಿçಯವಾಗುತ್ತದೆ, ಆದ್ದರಿಂದ ಗ್ರಾಹಕರು ಕೆವೈಸಿ ದಾಖಲೆಗಳಾದ ಆಧಾರ್ ಕಾರ್ಡ್, ಪಾನ್ ಕಾರ್ಡ್ ವಿಳಾಸ ಅಥವಾ ಮೊಬೈಲ್ ನಂಬರ್ ಬದಲಾವಣೆಯಾದಲ್ಲಿ ವಿವರಗಳನ್ನು ಬ್ಯಾಂಕಿಗೆ ನೇರವಾಗಿ ಒದಗಿಸಿ ಆ ಖಾತೆಗಳನ್ನು ಸಕ್ರಿಯ ಮಾಡಿಕೊಳ್ಳಬಹುದು ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ತುಮಕೂರು ಪ್ರಾದೇಶಿಕ ಕಚೇರಿಯ ಆರ್ಥಿಕ ಸೇರ್ಪಡೆ ವಿಭಾಗದ ವ್ಯವಸ್ಥಾಪಕರಾದ ದಿವ್ಯಶ್ರೀ ತಿಳಿಸಿದರು.
ಹುಳಿಯಾರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ತಿಮ್ಲಾಪುರ ಗ್ರಾಮ ಪಂಚಾಯಿತಿ ಮಟ್ಟದ ವಿನಾಯಕ ಸಂಜೀವಿನಿ ಒಕ್ಕೂಟ ಜಂಟಿಯಾಗಿ ತಿಮ್ಲಾಪುರ ಚಂದ್ರಮೌಳೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಜನ ಸುರಕ್ಷಾ ಶಿಬಿರದ ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿ ಎನ್.ಆರ್.ಎಲ್.ಎಮ್ ಒಕ್ಕೂಟದ ಮೆನೇಜರ್ ಕಿಶೋರ್ ಮಾತನಾಡುತ್ತಾ ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಹಾಗೂ ಸಾಲ ಸೌಲಭ್ಯಗಳನ್ನು ಬ್ಯಾಂಕುಗಳ ಮುಖಾಂತರ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ಕರೆ ನೀಡಿದರು.
ತಿಮ್ಲಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಚಿಕ್ಕಣ್ಣ ಮಾತನಾಡುತ್ತಾ ಬ್ಯಾಂಕುಗಳೆ ಹಳ್ಳಿಗಳಿಗೆ ಬಂದು ಜನರ ಸಮಸ್ಯೆಯನ್ನು ಆಲಿಸಿ ಪರಿಹರಿಸುವಲ್ಲಿ ಯಶಸ್ವಿಯಾಗಿರುವುದು ತುಂಬಾ ಸಂತೋಷದ ವಿಷಯ ಎಂದು ತಿಳಿಸಿದರು.
ಭಾರತೀಯ ಸ್ಟೇಟ್ ಬ್ಯಾಂಕ್ ಹುಳಿಯಾರು ಶಾಖೆಯ ಮೆನೇಜರ್ ಸುರೇಶ್ ಬಾಬು, ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರರಾದ ಆರ್.ಎಂ.ಕುಮಾರಸ್ವಾಮಿ, ವಿನಾಯಕ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ರಾಜಮ್ಮ, ಕಾರ್ಯದರ್ಶಿ ಸುಮಾ, ಖಜಾಂಚಿ ಕುಸುಮ, ಎಂಬಿಕೆ ಪ್ರೇಮ, ಎಲ್‌ಸಿಆರ್‌ಪಿಗಳಾದ ಕವಿರತ್ನ, ಮಂಜುಳಾ, ದ್ರಾಕ್ಷಾಯಿಣಿ, ಪಶುಸಖಿ ನಾಗರತ್ನ, ಕೃಷಿ ಸಖಿ ಶೈಲಾ ಹಾಗೂ ಬಿಸಿ ಸಖಿ ಲತಾಮಣಿ ಮುಂತಾದವರು ಉಪಸ್ಥಿತರಿದ್ದರು.
ಹೊಸಳ್ಳಿ, ಹೊಸಳ್ಳಿ ಪಾಳ್ಯ ಸೀಗೆಬಾಗಿ ನಂದಿಹಳ್ಳಿ, ತೊರೆಮನೆ, ತೊರೆ ಸೂರಗೊಂಡನಹಳ್ಳಿ, ತಿಮ್ಲಾಪುರ, ಗ್ರಾಮಗಳ ಸಂಜೀವಿನಿ ಒಕ್ಕೂಟದ ಎಲ್ಲ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
(Visited 1 times, 1 visits today)