ತುರುವೇಕೆರೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಗವಾಯಿ ಅವರ ಮೇಲೆ ಹಿರಿಯ ವಕೀಲನೊಬ್ಬ ಶೂ ಎಸೆದಿದ್ದು ಇದು ಸಂವಿಧಾನಕ್ಕೆ ಮಾಡಿದಂತ ಅಪಚಾರವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದದ ತಾಲೂಕು ಘಟಕದ ಅಧ್ಯಕ್ಷ ಬಾಣಸಂದ್ರ ಕೃಷ್ಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕೆ ಯೊಂದಿಗೆ ಮಾತನಾಡಿ ಅವರು ದಿನಾಂಕ ೧೩.೧೦:೨೫ ರಂದು ಸೋಮವಾರ ಬೆಳಗ್ಗೆ ೧೦ ಗಂಟೆಗೆ ಪ್ರವಾಸಿ ಮಂದಿರದಿ0ದ ತಾಲೂಕು ಕಚೇರಿ ವರೆವಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅವರು ಇದೊಂದು ಘೋರ ಕೃತ್ಯ ಖಂಡನೀಯವಾಗಿದ್ದು ಇದು ಸಮ ಸಮಾಜ ತಲೆ ತಗ್ಗಿಸುವಂತಹ ಹಾಗೂ ಸಂವಿಧಾನದ ಮೇಲೆ ಆದಂತಹ ದಾಳಿಯಾಗಿದ್ದು ೧೪೪ ಕೋಟಿ ಭಾರತೀಯರ ಮೇಲೆ ಆ ದಂತಹ ಅಪಮಾನ.ಸೂರ್ಯನ ಬೆಳಕು ಎಲ್ಲೆಲ್ಲಿ ಬೀಳುತ್ತದೆಯೋ ಅಲ್ಲಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಟ್ಟಂತಹ ಸಂವಿಧಾನದ ಅಡಿಯಲ್ಲಿ ಕಾನೂನು ಪ್ರಚಲಿತದಲ್ಲಿದೆ ಇಡೀ ಪ್ರಪಂಚದಲ್ಲಿಯೇ ಅತ್ಯುನ್ನತವಾದ ಸಂವಿಧಾನ ನಮ್ಮದು. ಆದರೆ ರಾಕೇಶ್ ಕಿಶೋರ್ ಎಂಬ ವಕೀಲ ನ್ಯಾಯಮೂರ್ತಿಗಳಿಗೆ ತನ್ನ ಮನಸ್ಸಿನ ವಿಕೃತಿ ಮೆರೆದಿದ್ದಾನೆ. ಈ ರಾಷ್ಟ್ರವನ್ನು ಜಪಾನ್, ಜರ್ಮನಿ, ಪಾಕಿಸ್ತಾನ,ದಕ್ಷಿಣ ಕೊರಿಯಾ ದಂತಹ ರಾಷ್ಟ್ರಗಳನ್ನಾಗಿ ಮಾಡುವಂತ ಹುನ್ನಾರ ನಡೆಯುತ್ತಿದೆಯೋ ಎಂಬ ಭೀತಿ ನಮ್ಮಲ್ಲಿ ಕಾಡುತ್ತಿದೆ. ಆದುದರಿಂದ ರಾಷ್ಟ್ರದ ಘನ ಸರ್ಕಾರವು ಇಂತಹ ವಕೀಲನನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಿ ಈ ದೇಶದಿಂದ ಗಡಿಪಾರು ಮಾಡಬೇಕು.ಇಲ್ಲದಿದ್ದರೆ ಇಂಥವರಿ0ದ ಒಡೆದು ಆಳುವ ನೀತಿ ಹೆಚ್ಚಾಗುತ್ತದೆ. ಆದ್ದರಿಂದ ಇದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳೊ0ದಿಗೆ ಸೋಮವಾರ ಮೆರವಣಿಗೆ ನಡೆಸಿ ತಾಸಿಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ತಾಲೂಕಿನ ಪ್ರಗತಿಪರರು ಸಂವಿಧಾನ ರಕ್ಷಕರು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇರುವ ತಾಲೂಕಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕುರುಬ ಸಮಾಜದ ಮುಖಂಡ ಕಲ್ಕೆರೆ ರಾಘು ಮಾತನಾಡಿ ರಾಷ್ಟ್ರದಲ್ಲಿ ಎಲ್ಲಾ ಜಾತಿ ವರ್ಗಗಳಲ್ಲಿಯೂ ತುಂಬಾ ಬಡವರು ಇದ್ದಾರೆ. ಅವರುಗಳಿಗೆ ಏನಾದರೂ ರಕ್ಷಣೆ ಸಿಗುತ್ತಿದೆ ಎಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದಂತ ಸಂವಿಧಾನದಿ0ದ ಮಾತ್ರ. ವಿಪರ್ಯಾಸವೆಂದರೆ ದೇಶದಲ್ಲಿ ಸಂವಿಧಾನಕ್ಕೆ ಅಪಾಯ ಬಂದಾಗ ದಲಿತರು ಮಾತ್ರ ಹೋರಾಟ ಮಾಡುತ್ತಾರೆ, ಅಪಾಯದ ಅಂಚಿನಲ್ಲಿ ಇರುವ ಸಂವಿಧಾನದ ರಕ್ಷಣೆಗೆ ಎಲ್ಲಾ ಭಾರತೀಯರು ಮುಂದಾಗಬೇಕು. ಹಿರಿಯ ವಕೀಲರಾಗಿ ಈ ವ್ಯಕ್ತಿ ಮಾಡಿರುವ ಕೃತ್ಯ ಖಂಡನೀಯವಾಗಿದ್ದು ನಾನು ಕೂಡಾ ನಮ್ಮ ಸಮಾಜದ ಪರವಾಗಿ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಎಸ್.ಎಸ್ ವಿವಿದ ಸಮಿತಿಯ ಮುಖಂಡರಾದ ಬೀಚನಹಳ್ಳಿ ರಾಮಕೃಷ್ಣ, ಡೊಂಕಿಹಳ್ಳಿ ರಾಮಣ್ಣ, ಬಡಾವಣೆ ಶಿವರಾಜ್, ಬಿಗನೇನಹಳ್ಳಿ ಪುಟ್ಟರಾಜು, ಪುರ ರಾಮಚಂದ್ರಯ್ಯ, ಜಯ ಕರ್ನಾಟಕ ವೇದಿಕೆಯ ವೆಂಕಟೇಶ್, ಆಟೋ ಸಂಘದ ಅಧ್ಯಕ್ಷ ಗಂಗಾಧರ್, ಬೀಚನಹಳ್ಳಿ ಮಹಾದೇವಯ್ಯ, ಹೆಗ್ಗೆರೆ ನರಸಿಂಹಯ್ಯ, ರಂಗನಾಥ್, ರವೀಶ್, ಮಾಚೇನಹಳ್ಳಿಮಂಜುಳಾ ,ನಂದಿನಿ, ಸಾವಿತ್ರಮ್ಮ, ವಸಂತ್ ಬೊಮ್ಮೇನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
(Visited 1 times, 1 visits today)