ಹುಳಿಯಾರು: ವಾರದ ಸಂತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ ಎಂದು ಆರೋಪಿಸಿ, ಕರ್ನಾಟಕ ರಾಜ್ಯ ರೈತ ಸಂಘದ ಹೊಸಹಳ್ಳಿ ಚಂದ್ರಣ್ಣ ಬಣದ ವತಿಯಿಂದ ಹುಳಿಯಾರು ಪಟ್ಟಣದಲ್ಲಿ ತೆರಿಗೆ ನಿರಾಕರಣೆ ಚಳುವಳಿಗೆ ಗುರುವಾರ ಚಾಲನೆ ನೀಡಲಾಯಿತು.
ಕಳೆದ ಎರಡ್ಮೂರು ದಶಕಗಳಿಂದಲೂ ಸುಂಕ ವಸೂಲಿ ಮಾಡುವ ಪಟ್ಟಣ ಪಂಚಾಯ್ತಿ ನೀರು, ನೆರಳು, ಶೌಚಾಲಯ ನೀಡುವಂತೆ ಕೇಳಿಕೊಂಡು ಬಂದಿದ್ದೇವೆ. ತಿಂಗಳಿ0ದ ೨ ಹಂತದ ಚಳುವಳಿ ಮಾಡಿದ್ದೇವೆ. ಆದರೂ ಪಂಚಾಯ್ತಿ ಧೋರಣೆ ತಾಳಿದ್ದು ತಮ್ಮ ಬೇಡಿಕೆಗಳು ಈಡೇರು ವವರೆಗೂ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ೩ ನೇ ಹಂತದ ಅಹೋರಾತ್ರಿ ಧರಣಿ ನಡೆಸುವುದಾಗಿ ರೈತ ಸಂಘದ ಕಾರ್ಯಕರ್ತರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಚಂದ್ರಪ್ಪ ತಾವು ನಿಯಮಿತವಾಗಿ ತೆರಿಗೆ ಕಟ್ಟುತ್ತಿದ್ದರೂ ಪಟ್ಟಣ ಪಂಚಾಯಿತಿಯು ಕನಿಷ್ಠ ಮೂಲಭೂತ ಸೌಕರ್ಯಗಳನ್ನೂ ಒದಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಪಟ್ಟಣದ ಬೆಳಗಿನ ರೈತ ಸಂತೆ, ವಾರದಸಂತೆ, ವ್ಯಾಪಾರಸ್ಥರು ಪಟ್ಟಣ ಪಂಚಾಯಿತಿಗೆ ಸಂತೆ ಶುಲ್ಕ ಪಾವತಿಸುವುದನ್ನು ನಿಲ್ಲಿಸಬೇಕು ಎಂದು ಸಂಘವು ಕರೆ ನೀಡಿದರು.
ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕರಿಯಪ್ಪ, ಹುಳಿಯಾರು ಹೋಬಳಿ ಅಧ್ಯಕ್ಷ ಕೆಂಕೆರೆ ಬಸವರಾಜು, ಟಿ.ಎಸ್.ಪ್ರಶಾಂತ್, ನೀರಾ ಈರಣ್ಣ, ಮೆಕಾನಿಕ್ ಜಗದೀಶ್, , ಮಂಜುನಾಥ್, ರೇವಣ್ಣ, ನಿಂಗಪ್ಪ, ಹನುಮಂತರಾಜ್ ಅರಸ್, ಪೆದ್ದಾಬೋವಿ, ಬಸವರಾಜು, ಮಂಜನಾಯ್ಕ, ಲಕ್ಷö್ಮಮ್ಮ, ಯಶೋದಮ್ಮ, ಆಶಾ ಮತ್ತಿತರರು ಇದ್ದರು.