
ತುಮಕೂರು: ತುಮಕೂರಿನ ಶ್ರೀ ರಂಗರAಗ ಹವ್ಯಾಸಿ ಕಲಾವೃಂದ ಟ್ರಸ್ಟ್, ತನ್ನ ೩೯ನೇ ರಾಜ್ಯ ಮಟ್ಟದ ಮಕ್ಕಳ ನಾಟಕೋತ್ಸವವನ್ನು “ಚಿಲಿಪಿಲಿ” ಶೀರ್ಷಿಕೆಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ನವದೆಹಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ನ.೧೨ ಮತ್ತು ೧೩ ನವೆಂಬರ್ ೨೦೨೫ರ ಸಂಜೆ ೪-೦೦ ಗಂಟೆಯಿ0ದ ೭-೩೦ ಗಂಟೆವರೆಗೆ ತುಮಕೂರು ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಏರ್ಪಡಿಸಿದೆ. ೧೯೮೭ರಲ್ಲಿ ರಿಚರ್ಡ್ ಜಿ. ಲೂಯೀಸ್ ಅವರ ಮಾರ್ಗದರ್ಶದಲ್ಲಿ ಆರಂಭವಾಗಿ ನವೆಂಬರ್ ೧೨ ಮತ್ತು ೧೩ ೨೦೨೫ ರಂದು ಅದೇ ರಂಗಶಕ್ತಿ ರಿಚರ್ಡ್ ಜಿ. ಲೂಯೀಸ್ ಅವರಿಂದ ಉದ್ಘಾಟನೆಯಾಗುತ್ತಿದೆ. ಅಧಕ್ಷತೆಯನ್ನು ಕಲಾವೃಂದದ ಬೆನ್ನೆಲುಬಾಗಿರುವ ಪತ್ರಿಕಾ ಕ್ಷೇತ್ರದ ಡಾ. ಎಸ್. ನಾಗಣ್ಣನವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿಕ್ಷಣ ಮತ್ತು ಸಹಕಾರಿ ಕ್ಷೇತ್ರದ ರೂವಾರಿ ಡಾ. ಲ್ಯಾನ್ಸಿ ಹೆಚ್. ಪಾಯಸ್ ಆಗಮಿಸುವರು.
ಜೊತೆಯಲ್ಲಿ ಬೆಂಗಳೂರಿನ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಮಾಲಿನಿ ಎಸ್, ತುಮಕೂರು ವಿಶ್ವವಿದ್ಯಾಲಯ ಮತ್ತು ಜಿಲ್ಲಾ ಪಂಚಾಯತ್‌ನ ಲೆಕ್ಕ ಪರಿಶೋಧಕರು, ಕಲಾವಿದರೂ ಆಗಿರುವ ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ ಕೆ. ಮಿರ್ಜಿ, ಬೆಂಗಳೂರಿನ ರಾಜ್ಯ ಕ್ರೀಡಾ ಕಾರ್ಯದರ್ಶಿಗಳಾಗಿರುವ ಕೆ.ವಿ. ಮೋಹನ್ ಕುಮಾರ್ ಮತ್ತು ಮೊದಲಿನಿಂದಲೂ ಕಲಾವೃಂದದ ಜೊತೆಯಾಗಿರುವ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್, ಜಿಲ್ಲಾಧ್ಯಕ್ಷರು, ರಾಜ್ಯ ಇಂಜಿನಿರ‍್ಸ್ ಸೇವಾ ಸಂಘದ ಜಿ.ಎನ್. ರಾಧಾಕೃಷ್ಣ ರವರು ಭಾಗವಹಿಸುವರು.
ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಬೆಂಗಳೂರಿನ ಅಂತರರಾಷ್ಟç ಖ್ಯಾತ ಹಾಸ್ಯ ಕಲಾವಿದರಾದ ರಿಚರ್ಡ್ ಜಿ. ಲೂಯೀಸ್ ಮತ್ತು ತಂಡದವರಿ0ದ ಹಾಸ್ಯಮಿಶ್ರಿತ ರಂಗಗೀತೆಗಳ ಕಾರ್ಯಕ್ರಮವನ್ನು ೧೨-೧೧-೨೦೨೫ ಸಂಜೆ ೪-೦೦ ಗಂಟೆಗೆ ಏರ್ಪಡಿಸಿದೆ. ಅಂದು ಬೆಂಗಳೂರಿನ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಸಂಜೆ ೫-೩೦ ಗಂಟೆಗೆ ಉನ್ನಿಕೃಷ್ಣನ್ ಅವರು ಪ್ರಸ್ತುತ ಪಡಿಸುವ ಡಾ. ಆರ್.ವಿ ಭಂಡಾರಿ ರಚಿತ ಈರಪ್ಪ ಮಹಾಲಿಂಗಪೂರ ನಿರ್ದೇಶನದಲ್ಲಿ ಅಭಿನಯಿಸುವ ನಾಟಕ “ಬೆಳಕು ಹಂಚಿದ ಬಾಲಕ”, ಮತ್ತು ೬-೩೦ ಗಂಟೆಗೆ ಅಕ್ಷತ ಸಿ. ಅವರು ಪ್ರಸ್ತುತ ಪಡಿಸುವ ಡಾ. ಶ್ರೀಪಾದ ಭಟ್ ಅವರ ಆರ್. ದಿವ್ಯ ನಿರ್ದೇಶನದಲ್ಲಿ “ಬಲಿ” ನಾಟಕಗಳು ಪ್ರಯೋಗಿಸಲ್ಪಡುತ್ತಿವೆ.
೧೩-೧೧-೨೦೨೫ ರಂದು ಸಂಜೆ ೫-೩೦ ಗಂಟೆಗೆ ಸವಿತಾ, ಶ್ರೀರಂಗರAಗ ಹವ್ಯಾಸಿ ಕಲಾವೃಂದದ ಮಕ್ಕಳ ತಂಡ ಪ್ರಸ್ತುತ ಪಡಿಸುವ ಆರ್.ಕೆ. ಶಿವಕುಮಾರ್ ರಚನೆಯ ಹೆಚ್.ಎಂ. ರಂಗಯ್ಯ ನಿರ್ದೇಶನದ “ಪ್ರೀತಿಯ ಕಾಳು” ನಾಟಕವು, ಸಂಜೆ ೬-೩೦ ಗಂಟೆಗೆ ಕಾರವಾರ ಜಿಲ್ಲೆಯ ಶಿರಸಿಯ ರಂಗಚಿತ್ರದ ಅಖಿಲೇಶ್ ಪ್ರಸ್ತುತ ಪಡಿಸುವ ಹೆಚ್.ಎಸ್. ವೆಂಕಟೇಶ್‌ಮೂರ್ತಿ ಅವರ ಆರ್.ಕೆ. ಶಿವಕುಮಾರ್ ನಿರ್ದೇಶನದಲ್ಲಿ “ಕಂಸಾಯಣ” ನಾಟಕವು ಪ್ರಯೋಗಿಸಲ್ಪಡುತ್ತಿದೆ.
ಅಂದು ಸಂಜೆ ೪-೦೦ ಗಂಟೆಗೆ ಮಕ್ಕಳ ನಾಟಕೋತ್ಸವದ ಸಮಾರೋಪ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಜಿ. ವೆಂಕಟೇಶಲು ಮಾತನಾಡವುವರು, ಮುಖ್ಯ ಅತಿಥಿಗಳಾಗಿ ಸಿರಾ ತಾಲ್ಲೂಕಿನ ಚಿಕ್ಕನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಜಗದೀಶ ಕಣಕಾಲ, ಅಧ್ಯಾಪಕ ಈರಪ್ಪ ಮಹಾಲಿಂಗಪೂರ, ಹೆಚ್.ಎಂ.ರ0ಗಯ್ಯ, ಆರ್.ಕೆ. ಶಿವಕುಮಾರ್ ಮತ್ತು ಶ್ರೀರಾಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ತುಮಕೂರು ನಗರದ ಸಾರ್ವಜನಿಕ ಬಂಧುಗಳು, ಕಲಾಪೋಷಕರು, ತಮ್ಮ ಮಕ್ಕಳಿಗೆ ಸದರಿ ನಾಟಕಗಳನ್ನು ತೋರಿಸುವುದರ ಮೂಲಕ ಮಕ್ಕಳ ಕಲಾಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕೆಂದು ಈ ಮೂಲಕ ಮನವಿ ಮಾಡಿದ್ದಾರೆ.





