
ಹುಳಿಯಾರು: ಹುಳಿಯಾರಿನ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಾಸ ಶ್ರೇಷ್ಠ ಕನಕ ಜಯಂತಿಯನ್ನು ಆ ಚರಿಸಲಾಯಿತು.
ರಾಜ್ಯಶಾಸ್ತç ಉಪನ್ಯಾಸಕರಾದ ತಿಪ್ಪೇಸ್ವಾಮಿ ಎಂ.ಕೆ ಮಾತ ನಾಡುತ್ತಾ ಕನಕದಾಸರು ಕರ್ನಾಟಕದಲ್ಲಿ ಹುಟ್ಟಿದ ದೈತ್ಯ ಪ್ರತಿಭೆ. ದಾಸ ಸಾಹಿತ್ಯದ ಪರಂಪರೆಯನ್ನು ಹರಡಿದ ಸಮಾಜ ಸುಧಾರಕ. ಮೋಹನ ತರಂಗಣಿ, ನಳಚರಿತ್ರೆ, ರಾಮಧಾನ್ಯ ಚರಿತ್ರೆ ಮುಂತಾದ ಕಾವ್ಯಗಳನ್ನು ರಚಿಸಿ ಧಾನ್ಯವನ್ನು ರೂಪಕವಾಗಿರಿಸಿಕೊಂಡು ವರ್ಗ ಸಂಘರ್ಷವನ್ನು ವಿವರಿಸಿ ಸಾಮಾಜಿಕ ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸಲು ಶ್ರಮಿಸಿದ ಸಂತ ಎಂದು ತಿಳಿಸಿದರು.
ಕವಿ ತಮ್ಮ ಕೀರ್ತನೆಗಳಾದ ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರಿಗೂ, ಕುಲಕುಲವೆಂದು ಹೊಡೆದಾಡದಿರಿ, ಜಪವ ಮಾಡಿದರೇನು? ತಪವ ಮಾಡಿದರೆ ಏನು ಕಪಟ ಗುಣ ವಿಪರೀತ ಕಲುಷಿತ ವಿದ್ದವರು, ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಎಂಬ ಕೀರ್ತನೆಗಳನ್ನು ಸಮಾಜಕ್ಕೆ ಅರ್ಪಿಸಿ ಆ ಮೂಲಕ ಸ್ವಸ್ಥ ಸಮಾಜವನ್ನ ಕಟ್ಟಲು ಹೊರಟವರು ಕನಕದಾಸರು ಎಂದು ತಿಳಿಸಿದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾದ ಸುಮಯ್ಯ ಮಾತನಾಡಿ ಕನಕದಾಸರ ಕುಟುಂಬಿಕ ಜೀವನ, ದಾಸರಾಗಿ ಬದಲಾದ ಸನ್ನಿವೇಶ, ನಳದಮಯಂತಿಯ ಪ್ರಣಯ ಪ್ರಸಂಗವನ್ನು ಸವಿವರವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ವಾಣಿಜ್ಯಶಾಸ್ತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರಮೇಶ್, ರಾಜ್ಯಶಾಸ್ತ ವಿಭಾಗದ ಮುಖ್ಯಸ್ಥರಾದ ಲಕ್ಷಿö್ಮ ಎಸ್, ಅಧೀಕ್ಷಕರಾದ ಮಂಜಯ್ಯ, ದ್ವಿತೀಯ ದರ್ಜೆ ಸಹಾಯಕರಾದ ರಮೇಶ್, ಪರಿಚಾರಕರಾದ ರಾಜಮ್ಮ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.





