
ತುಮಕೂರು: ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕದಲ್ಲಿ ಇರುವುದನ್ನು ಯಥಾವತ್ತಾಗಿ ತಿಳಿಸುವುದಷ್ಟೇ ಅಲ್ಲ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಿ ಆ ಮಗುವನ್ನು ಸಮಾಜದ ಆಸ್ತಿಯನ್ನಾಗಿ ಮಾಡುವುದೇ ಆಗಿದೆ ಎಂದು ಶ್ರೀ ಅಯ್ಯ ಆಂಜನೇಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ರಂಗನಾಥ್ ಜೆ ರವರು ತಿಳಿಸಿದರು.
ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಹುಯಿಲ್ ದೊರೆ ಶ್ರೀ ಶಾರದಾ ಇಂಟರ್ನ್ಯಾಷನಲ್ ಕೇಂಬ್ರಿಡ್ಜ್ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು ಕೇವಲ ಪಠ್ಯಪುಸ್ತಕದಲ್ಲಿ ಇರುವ ಪಠ್ಯ ವಸ್ತುವನ್ನು ಯಥಾವತ್ತಾಗಿ ತಿಳಿಸಿ ಕೇವಲ ಅಂಕ ಗಳಿಕೆಗೆ ಮಾತ್ರ ಶಿಕ್ಷಣ ಸೀಮಿತವಲ್ಲ ಮಗುವಿನಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತಂದು ಅವುಗಳಿಗೆ ಪ್ರೋತ್ಸಾಹ ನೀಡಿ ಅದಕ್ಕೊಂದು ವೇದಿಕೆ ನೀಡಿ ಆ ಮಗುವಿನ ಯಶಸ್ಸಿಗೆ ಪರಿಶ್ರಮ ನೀಡುವುದು ಆಗಿದೆ ಆ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ಸಹ ಕೈಜೋಡಿಸಬೇಕು ಯಾವ ಮಕ್ಕಳು ಸಹ ದಡ್ಡರಲ್ಲ ಎಲ್ಲರೂ ಸಹ ಒಂದಲ್ಲ ಒಂದು ರೀತಿಯ ಕೌಶಲ್ಯವನ್ನು ಹೊಂದಿರುತ್ತಾರೆ ಕಲೆ ವಿಜ್ಞಾನ ಕ್ರೀಡೆ ಲಲಿತ ಕಲೆ ಜಾನಪದ ಕಲೆ ಸಂಶೋಧನೆ ಹೀಗೆ ಎಲ್ಲಾ ವಿಷಯಗಳಲ್ಲಿ ಸಹ ವಿಶೇಷ ಆಸಕ್ತಿ ಹೊಂದುತ್ತಾರೆ ಅವುಗಳಿಗೆ ಸೂಕ್ತ ವೇದಿಕೆಯನ್ನು ಒದಗಿಸಬೇಕು ಯಾವ ಮಗು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವುದು, ಅದನ್ನು ತಿಳಿದು ಆ ವಿಷಯದಲ್ಲಿ ಮಗುವಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ಶಿಕ್ಷಕರು ಮತ್ತು ಪೋಷಕರು ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು ಎಂದು ತಿಳಿಸಿದರು ಕನ್ನಡ ಭಾಷೆ ಎರಡು ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ ಹೊಂದಿದೆ ಲಿಪಿಗಳ ರಾಣಿ ಎಂದೇ ಕರೆಯುವ ಕನ್ನಡ ಭಾಷೆ ಸಾಹಿತ್ಯ ಪುಸ್ತಕಗಳನ್ನು ಓದುವ ಅಭ್ಯಾಸಗಳನ್ನು ಮಕ್ಕಳಿಗೆ ಕಲಿಸಬೇಕು ಎಂದರು
ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಬಾಲಕೃಷ್ಣ, ಉಪಕಾರ್ಯದರ್ಶಿ ರಮ್ಯ ರಂಗನಾಥ್ ಪವಿತ್ರ ಬಾಲಕೃಷ್ಣ ಪ್ರಾಂಶುಪಾಲ ನವೀನ್ ಕುಮಾರ್ ಬಾಲೋಧ್ಯಾನ ಮುಖ್ಯ ಶಿಕ್ಷಕಿ ಕಾವ್ಯ ಮಹೇಶ್ ಸೇರಿದಂತೆ ಸಹ ಶಿಕ್ಷಕರು ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು.





