BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ
  • ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ
  • ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ
  • ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ
  • ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು
  • ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ
  • ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಈಗ ಟಾಪರ್!
  • ಕಾರ್ಮಿಕ ಇಲಾಖೆ ಯೋಜನೆಗೆ ಸಂಘದ ನೆರವು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮೈಸೂರು ವಿಭಾಗ ಅನುಮತಿಸಿದರೆ ಮಂಗಳೂರಿಗೆ ನೇರ ರೈಲು: ಭರವಸೆ
ಇತರೆ ಸುದ್ಧಿಗಳು

ಮೈಸೂರು ವಿಭಾಗ ಅನುಮತಿಸಿದರೆ ಮಂಗಳೂರಿಗೆ ನೇರ ರೈಲು: ಭರವಸೆ

By News Desk BenkiyabaleUpdated:November 28, 2025 3:45 pm

ತುಮಕೂರು: ತುಮಕೂರು, ತಿಪಟೂರು ಮಾರ್ಗವಾಗಿ ಮಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸಲು ಮೈಸೂರು ವಿಭಾಗದವರು ಒಪ್ಪಿಗೆ ಕೊಡಬೇಕಿದೆ. ಮಂಗಳೂರು-ಹಾಸನ-ಯಶವ0ತಪುರ ಮಾರ್ಗದಲ್ಲಿ ಸಾಗುವ ರೈಲುಗಳ ಒತ್ತಡದ ನಡುವೆ ತುಮಕೂರು ಮೂಲಕ ತೆರಳುವ ರೈಲಿಗೆ ಅನುವು ಮಾಡಿಕೊಡುವುದಾದರೆ ರೈಲು ಓಡಿಸಲು ಸಾಧ್ಯವಿದೆ ಎಂದು ನೈಋತ್ಯ ರೈಲ್ವೇ ಬೆಂಗಳೂರು ವಿಭಾಗದ ಹಿರಿಯ ಅಧಿಕಾರಿಗಳು ಭರವಸೆ ನೀಡಿದರು.
ಬೆಂಗಳೂರಿನ ಡಿಆರ್‌ಎಂ ಕಚೇರಿಯಲ್ಲಿ ಬುಧವಾರ ನಡೆದ ನೈಋತ್ಯ ರೈಲ್ವೇ ಬೆಂಗಳೂರು ವಿಭಾಗದ ರೈಲು ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಸಮಿತಿ ಸದಸ್ಯ, ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್, ತುಮಕೂರು, ತಿಪಟೂರು ಮೂಲಕ ಮಂಗಳೂರಿಗೆ ತೆರಳಲು ಅನುಕೂಲವಾಗುವಂತೆ ಯಶವಂತಪುರ-ಹಾಸನ-ಮ0ಗಳೂರು ರೈಲಿಗೆ ಸಂಪರ್ಕ ಕಲ್ಪಿಸುವಂತೆ ತುಮಕೂರಿನಿಂದ ಹಾಸನಕ್ಕೆ ರೈಲು ಸಂಪರ್ಕ ಕಲ್ಪಿಸಬೇಕೆಂದು ಮಾಡಿದ ಮನವಿಗೆ ಅಧಿಕಾರಿಗಳು ಪ್ರತಿಕ್ರಿಯಿಸಿದರು.
ಈ ವಿಷಯಕ್ಕೆ ಸ್ಪಂದಿಸಿದ ಸೀನಿಯರ್ ಡಿಓಎಂ ಪ್ರಿಯಾ ಅವರು, ಪ್ರಸ್ತುತ ಸಂಚರಿಸುತ್ತಿರುವ ಯಶವಂತಪುರ-ಹಾಸನ-ಮ0ಗಳೂರು ರೈಲಿಗೆ ಈಗಾಗಲೇ ಶೇ. ೧೫೦ರಷ್ಟು ಪ್ರಯಾಣಿಕರ ಒತ್ತಡವಿದ್ದು, ಅದೇ ರೈಲಿಗೆ ಸಂಪರ್ಕ ಕಲ್ಪಿಸಿದರೆ ಸೀಟು ದೊರೆಯುವುದು ಕಷ್ಟವಾಗಿ ತೊಂದ ರೆಯಾಗಲಿದೆ. ಅದರ ಬಲಿಗೆ ಮೈಸೂರು ವಿಭಾಗದವರು ಆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅನುಕೂಲ ಎಂದು ತಿಳಿಸಿದರೆ ಹೊಸ ರೈಲು ಓಡಿಸಲು ಅವಕಾಶವಿದೆ. ಈ ಬಗ್ಗೆ ಮಾನ್ಯ ರೈಲ್ವೇ ಖಾತೆ ರಾಜ್ಯ ಸಚಿವರಲ್ಲಿ ಮನವಿ ಮಾಡಿ ಎಂದು ಸಲಹೆ ನೀಡದರು. ಸಚಿವರ ಅನುಮತಿ ಮೇರೆಗೆ ಇದರ ಬಗ್ಗೆ ಚಿಂತಿಸಬಹುದು ಎಂದು ಹೇಳಿದರು.
ತುಮಕೂರಿನಿಂದ ಬೆಳಗ್ಗೆ ೮ ಗಂಟೆಗೆ ಹೊರಡುವ ಮೆಮು ರೈಲನ್ನು ಕೆಎಸ್‌ಆರ್‌ಗೆ ಓಡಿಸಬೇಕೆಂದು ಸದಸ್ಯ ಟಿ.ಜಿ. ಗಿರೀಶ್ ಅವರ ಬೇಡಿಕೆಯನ್ನು ವಿಸ್ತರಿಸಿ ವಿವರಿಸಿ ಮಾತನಾಡಿದ ಕರಣಂ ರಮೇಶ್, ಈ ರೈಲು ಉದ್ಯೋಗಿಗಳಿಗಾಗಿಯೇ ಆರಂಭಿಸಲಾಗಿದ್ದು ಇದರಲ್ಲಿ ಸುಮಾರು ೨ ಸಾವಿರಕ್ಕೂ ಹೆಚ್ಚು ಉದ್ಯೋಗಿ ಪ್ರಯಾಣಿಕರು ಸಂಚರಿಸುತ್ತಾರೆ. ಅವರಲ್ಲಿ ಶೇ. ೭೦ ರಷ್ಟು ಜನರು ಮಲ್ಲೇಶ್ವರ ಮತ್ತು ಕೆಎಸ್‌ಆರ್‌ಗೆ ಹೋಗುವವರಾಗಿರುತ್ತಾರೆ. ಆದರೆ ಯಶವಂಪುರದಲ್ಲೇ ರೈಲು ಕೊನೆಯಾಗುತ್ತಿರುವುದರಿಂದ ಅವರು ತಮ್ಮ ಉದ್ಯೋಗ ಕೇಂದ್ರಗಳಿಗೆ ತೆರಳಲು ಸುಮಾರು ಒಂದು ಗಂಟೆ ಬೇಕಾಗುತ್ತಿದ್ದು ಇದರಿಂದ ಅತೀವ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಗೆ ರೈಲು ವಿಸ್ತರಿಸುವುದು ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿ ಯಿಸಿದ ಅಧಿಕಾರಿಗಳು, ಬೆಂಗಳೂರು ನಿಲ್ದಾಣದಲ್ಲಿ ಇನ್ನೂ ಎರಡು ಪ್ಲಾಟ್‌ಫಾರಂಗಳು ನಿರ್ಮಾಣವಾಗಲಿದ್ದು, ನಂತರ ರೈಲನ್ನು ಕೆಎಸ್‌ಆರ್‌ಗೆ ವಿಸ್ತರಿಸಬಹುದು ಎಂದು ಭರವಸೆ ನೀಡಿದರು.
ಭಾನುವಾರ ಸಂಜೆ ತುಮಕೂರಿನಿಂದ ಯಶವಂತಪುರಕ್ಕೆ ವಿಶೇಷ ರೈಲು ಸಂಚಾರ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಬಾಣಸವಾಡಿಯಲ್ಲಿ ಹಲವು ಮೆಮು ರೈಲುಗಳ ನಿರ್ವಹಣೆ ಕಾರ್ಯ ಆಗಬೇಕಿರುವುದರಿಂದ ಸಾಧ್ಯವಾದಷ್ಟೂ ಪ್ರಯತ್ನಿಸಿ ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದರು.
ಮತ್ತೊಬ್ಬ ಸದಸ್ಯ ಧನಿಯಾಕುಮಾರ್ ಮತ್ತು ಗಿರೀಶ್ ಅವರು ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ನಡೆಸಿದ ಚರ್ಚೆಯನ್ನು ಮುಂದುವರಿಸಿದ ಕರಣಂ ರಮೇಶ್, ಆರ್‌ಎಂಎಸ್ ಕಚೇರಿ ಎದುರಿಗೆ ಸಾಕಷ್ಟು ಸ್ಥಳವಿದ್ದು, ಇದನ್ನು ಹಿಂದೆ ಪಾರ್ಕ್ ಮಾಡಲಾಗಿತ್ತು. ಈಗ ಅದು ನಿರುಪಯುಕ್ತವಾಗಿದ್ದು, ವ್ಯವಸ್ಥಿತ ವಾಹನ ಪಾರ್ಕಿಂಗ್ ನಿರ್ಮಾಣವಾಗುವವರೆಗೆ ಈ ಜಾಗವನ್ನು ತಾತ್ಕಾಲಿಕವಾಗಿ ಬಳಸಬಹುದಾಗಿದೆ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೀನಿಯರ್ ಡಿಸಿಎಂ ಚೈತನ್ಯ ಅವರು, ಸದರಿ ಜಾಗವನ್ನು ಆರ್‌ಎಲ್‌ಡಿಎಗೆ ನೀಡಲಾಗಿದೆ. ಅವರಿನ್ನೂ ಕಟ್ಟಡ ನಿರ್ಮಾಣಕಾರ್ಯ ಆರಂಭಿಸಿಲ್ಲ. ಅವರೊಂದಿಗೆ ಸಮಾಲೋಚಿಸಿ ಅವರು ಕೆಲಸ ಶುರುಮಾಡುವವರೆಗೆ ಈ ಜಾಗವನ್ನು ಬಳಸಿಕೊಳ್ಳಬಹುದಾಗಿದೆ. ಈ ಬಗ್ಗೆ ಗಮನಿಸುವುದಾಗಿ ಭರವಸೆ ನೀಡಿದರು.
ಚಾಮರಾಜನಗರ-ತುಮಕೂರು ರೈಲನ್ನು ತುಮಕೂರು-ಯಶವಂತ ಪುರ ನಡುವೆ ಸಂಚರಿಸಿ ಸಂಜೆ ೪.೩೦ ಅಥವಾ ೪.೪೫ರ ವೇಳೆಗೆ ಯಶವಂತಪುರದಿ0ದ ತುಮಕೂರಿಗೆ ಓಡಿಸುವಂತೆ ಕರಣಂ ರಮೇಶ್ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಸದರಿ ರೈಲು ಮೆಮುವಾಗಿ ಬದಲಾಗಲಿದೆ. ಮೆಮು ಆಗಿ ಪರಿವರ್ತನೆಯಾದ ನಂತರ ಈ ಬಗ್ಗೆ ಪರಿಶೀಲಿಸಬಹುದು ಎಂದು ತಿಳಿಸಿದರು.
ಎಡಿಆರ್‌ಎಂ (ಆಪರೇಷನ್ಸ್) ಪರೀಕ್ಷಿತ್ ಮೋಹನ್‌ಪುರಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಡಿಆರ್‌ಯುಸಿಸಿ ಸಭೆಯಲ್ಲಿ ತುಮಕೂರಿನ ಪ್ರತಿನಿಧಿಗಳಾದ ಸತೀಶ್ ಮತ್ತು ಶಿವಣ್ಣ ಅವರು ಕೂಡಾ ಭಾಗವಹಿಸಿದ್ದರು.

(Visited 1 times, 1 visits today)
Previous Articleಅರಣ್ಯ ಇಲಾಖೆಯ ಅಧಿಕಾರಿಗಳ ಕ್ರಮ ಖಂಡಿಸಿ ರೈತರು, ಮಹಿಳೆಯರಿಂದ ಪ್ರತಿಭಟನೆ
Next Article ಜಿಲ್ಲೆಯಲ್ಲಿ 40ಸಾವಿರಕ್ಕೂ ಹೆಚ್ಚು ಆಗ್ನೇಯ ಪದವೀಧರರು ಮತದಾರರ ಪಟ್ಟಿಗೆ ಸೇರ್ಪಡೆ: ಜಿಲ್ಲಾಧಿಕಾರಿ ಹೇಳಿಕೆ
News Desk Benkiyabale

Related Posts

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm news

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm news

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm news
ತಾಜಾ ಸುದ್ಧಿಗಳು

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm

ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು

June 22, 2026 5:12 pm

ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ

June 20, 2026 5:11 pm
Our Youtube Channel
Our Picks

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm

ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು

June 22, 2026 5:12 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

By News Desk BenkiyabaleJune 22, 2026 5:23 pm

ತುಮಕೂರು: ರೈಲ್ವೆ ಇಲಾಖೆಯ ಕನ್ನಡ ಕಡೆಗಣನೆ ಮುಂದುವರೆದಿದೆ. ಈ ತಿಂಗಳ ೨೫ರಂದು ಕರ್ನಾಟಕದಲ್ಲಿಯೇ ನಡೆಯುವ ನೈರುತ್ಯ ರೈಲ್ವೆಯ ಗೂಡ್ಸ್ ಟ್ರೇನ್…

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.