BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ
  • ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ
  • ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ
  • ಪುಟ್ಟ ಮನೆ ಬೆಂಕಿಗೆ ಆಹುತಿ
  • ಬೆಳೆ ಹಾನಿ, ಆಶ್ರಯ ನಿವೇಶನಗಳ ಸ್ಥಳ ಪರಿಶೀಲನೆ
  • ಪೌರಕಾರ್ಮಿಕರ ರೀತಿ ನೇರ ನೇಮಕಾತಿ ಮಾಡಬೇಕೆಂದು ಬೃಹತ್ ಪಾದಯಾತ್ರೆ
  • ಜನ ಮೆಚ್ಚಿದ ಅಧಿಕಾರಿಗೆ ಜನರಿಂದಲೇ ಅದ್ದೂರಿ ಸೀಮಂತ
  • ನೈಸ್ ವಿಷಯದಲ್ಲಿ ಹೈಕೋರ್ಟ್ ತೀರ್ಪು ಜಾರಿಗೆ ಒತ್ತಾಯಿಸಿದ ಮುಖಂಡರ ಬಂಧನ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ದಿವ್ಯಾಂಗರಿಗೂ ಭವ್ಯ ಭವಿಷ್ಯವಿದೆ: ಕಾವ್ಯ
ಇತರೆ ಸುದ್ಧಿಗಳು

ದಿವ್ಯಾಂಗರಿಗೂ ಭವ್ಯ ಭವಿಷ್ಯವಿದೆ: ಕಾವ್ಯ

ಅಂಧ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಆಟಗಾರ್ತಿಗೆ ವಾರ್ತಾ ಗೌರವ
By News Desk BenkiyabaleUpdated:December 04, 2025 4:18 pm

 

ತುಮಕೂರು: ವಿವಿಧ ಅಂಗವೈಕಲ್ಯತೆಯಿ0ದ ಸಮಾಜದ ಮುಖ್ಯವಾಹಿನಿಗೆ ಬರದೆ ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ದಿವ್ಯಾಂಗರಿಗೂ ಭವ್ಯ ಭವಿಷ್ಯವಿದೆ ಎಂಬುದನ್ನು ತಾವು ಸಾಬೀತು ಮಾಡಿರುವುದಾಗಿ ಅಂಧ ಮಹಿಳೆಯರ ಭಾರತ ಕ್ರಿಕೆಟ್ ತಂಡದ ಆಟಗಾರ್ತಿ ತುಮಕೂರು ಜಿಲ್ಲೆಯ ಕಾವ್ಯ ಎನ್.ಆರ್. ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ತುಮಕೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಹುಟ್ಟಿನಿಂದ ಅಥವಾ ಬೇರೆ ಯಾವುದೇ ಸಂದರ್ಭದಲ್ಲಿ ಅಂಗವೈಕಲ್ಯ ರಾಗುವುದರಿಂದ ಧೃತಿಗೆಡುವ ಅವಶ್ಯಕತೆಯಿಲ್ಲ. ಅಂಗವೈಕಲ್ಯವನ್ನು ಮೆಟ್ಟಿನಿಂತು ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ ಎಂದು ಅವರು ಹೇಳಿದರು.
ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಅಂಧ ಮಹಿಳೆಯರ ಟಿ-೨೦ ವಿಶ್ವಕಪ್ ಚಾಂಪಿಯನ್ ಶಿಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ ತಂಡದಲ್ಲಿದ್ದ ಕಾವ್ಯ ಅವರು, ಅಂತರರಾಷ್ಟ್ರೀಯ ಭಾರತ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮುನ್ನರಾಷ್ಟ್ರೀಯ  ಮಟ್ಟದಲ್ಲಿಯೂ ಕೂಡ ಕ್ರಿಕೆಟ್ ಆಡಿದ್ದು, ಇದೀಗ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡದಲ್ಲಿ ಆಡಿರುವುದು ಅತ್ಯಂತ ಖುಷಿ ತಂದಿದೆ ಎಂದರು.
ಟಿ-೨೦ ವಿಶ್ವಕಪ್ ಪ್ರಶಸ್ತಿ ಗೆದ್ದು ಭಾರತಕ್ಕೆ ಮರಳಿದ ಬಳಿಕ ದೇಶದಾದ್ಯಂತ ಎಲ್ಲರಿಂದ ಪ್ರಶಂಸೆ ಸಿಗುತ್ತಿದೆ. ದೇಶದ ಪ್ರಧಾ ನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ದೇಶಾದ್ಯಂತ ಎಲ್ಲರೂ ಅಭಿನಂದಿಸುತ್ತಿದ್ದಾರೆ ಎಂದ ಅವರು, ವಿಶೇಷಚೇತನರಿಗೆ ಬೆಂಬಲ ಅವಶ್ಯ. ಅದರಿಂದ ಯಾವು ದೇ ಸಾಧನೆ ಮಾಡಲು ಸಾಧ್ಯ ಎಂಬ ಅರಿವು ತಮಗಾಗಿದೆ ಎಂದರು.
ಬಾಲ್ಯದಲ್ಲಿ ಆಟವಾಡುತ್ತಿರುವಾಗ ಕಲ್ಲು ಸಿಡಿದು ಒಂದು ಕಣ್ಣು ಕಳೆದುಕೊಂಡೆ. ನಂತರ ತಮ್ಮ ಪೋಷಕರು ತೀವ್ರ ಸಂಕಟದಿ0ದ ಬಡತನದಲ್ಲಿ ಜೀವನ ಸಾಗಿಸುವ ಸ್ಥಿತಿಯಲ್ಲಿದ್ದುದರಿಂದ ಎಸ್‌ಎಸ್‌ಎಲ್‌ಸಿ ಹಂತದಲ್ಲಿ ಶಾಲೆ ಬಿಡಬೇಕಾಯಿತು. ನಂತರ ಸಮರ್ಥನಂ ಸಂಸ್ಥೆ ಅಂಧ ಮಕ್ಕಳಿಗೆ ಸೌಲಭ್ಯದೊಂದಿಗೆ ತರ ಬೇತಿ ನೀಡುವ ವಿಷಯ ತಿಳಿದು ಪೋಷಕರು ಸಮರ್ಥನಂಗೆ ಕಳುಹಿಸಿದ್ದರಿಂದ ಇಂತಹ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿ ಸಲು ಕಾರಣವಾಯಿತು ಎಂದು ಸಮರ್ಥನಂ ಸಂಸ್ಥೆಯನ್ನು ಕಾವ್ಯ ಸ್ಮರಿಸುತ್ತಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ನಾಯಕನ ಪಾಳ್ಯದ ರಮೇಶ್ ಅವರ ಮಗಳಾದ ಕಾವ್ಯ ಎನ್.ಆರ್. ಅವರು ಸದ್ಯ ಸಮರ್ಥನಂ ಟ್ರಸ್ಟ್ನಲ್ಲಿ ಬಿ.ಎ. ಅಂತಿಮ ವರ್ಷದ ತರಗತಿಯಲ್ಲಿ ಓದುತ್ತಿದ್ದು, ಅಂಧರ ಕ್ರಿಕೆಟ್ ಸಂಸ್ಥೆಯಲ್ಲಿ ಕ್ರಿಕೆಟ್ ತರಬೇತಿ ಮುಂದುವರೆಸಿದ್ದಾರೆ.
ಬುದ್ಧಿಮಾಂದ್ಯರಾಗಿದ್ದ ಸಹೋದರ ಇತ್ತೀಚೆಗಷ್ಟೇ ಮೃತರಾ ಗಿದ್ದು, ಬಡತನದಲ್ಲಿ ಬದುಕು ಸಾಧಿಸುತ್ತಿರುವ ತಂದೆ-ತಾಯಿಗೆ ನೆರವಾಗಬೇಕೆಂಬ ಮಹದಾಸೆ ಹೊಂದಿದ್ದಾರೆ.
ಅಂಧ ಮಹಿಳೆಯರ ಟಿ-೨೦ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಭಾರತ ತಂಡದಲ್ಲಿದ್ದ ಕರ್ನಾಟಕದ ಮೂವರು ಕ್ರೀಡಾಪಟುಗಳಿಗೆ ತಲಾ ೧೦ಲಕ್ಷ ರೂ.ಗಳ ಬಹುಮಾನ ಹಾಗೂ ಉದ್ಯೋಗ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದು, ತಮ್ಮಂತಹ ಅಂಧರ ಬದುಕಿಗೆ ಈ ಭರವಸೆ ಬೆಳಕಾಗಿದೆ ಎಂದು ಅವರು ಕರ್ನಾಟಕ ಸರ್ಕಾರವನ್ನು ಸ್ಮರಿಸಿದರು.
ಅಂಧತ್ವ ಅಥವಾ ಇತರೆ ವಿಕಲಾಂಗರ ಶ್ರೇಯೋಭಿವೃದ್ಧಿಗಾಗಿ ಸಮರ್ಥನಂ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ದಿವ್ಯಚೇತನರು ಈ ಸಂಸ್ಥೆಯ ಪ್ರಯೋಜನವನ್ನು ಪಡೆದು ತಮ್ಮಂತೆ ದೇಶಕ್ಕೆ ಕೀರ್ತಿವಂತರಾಗಬಹುದು ಎಂದು ಕಾವ್ಯ ಅವರು ಆಶಾಭಾವನೆ ವ್ಯಕ್ತಪಡಿಸಿದರು.

(Visited 1 times, 1 visits today)
Previous Articleಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು
Next Article ಅಂಬೇಡ್ಕರ್ ವಿಚಾರಧಾರೆಗಳನ್ನು ಅನುಸರಿಸಿ
News Desk Benkiyabale

Related Posts

ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ

September 22, 2026 5:12 pm news

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

September 22, 2026 5:09 pm Trending

ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ

September 22, 2026 5:05 pm news
ತಾಜಾ ಸುದ್ಧಿಗಳು
news

ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ

September 22, 2026 5:12 pm
Trending

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

September 22, 2026 5:09 pm
news

ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ

September 22, 2026 5:05 pm
ಇತರೆ ಸುದ್ಧಿಗಳು

ಪುಟ್ಟ ಮನೆ ಬೆಂಕಿಗೆ ಆಹುತಿ

September 22, 2026 5:01 pm
Trending

ಬೆಳೆ ಹಾನಿ, ಆಶ್ರಯ ನಿವೇಶನಗಳ ಸ್ಥಳ ಪರಿಶೀಲನೆ

September 22, 2026 4:57 pm
news

ಪೌರಕಾರ್ಮಿಕರ ರೀತಿ ನೇರ ನೇಮಕಾತಿ ಮಾಡಬೇಕೆಂದು ಬೃಹತ್ ಪಾದಯಾತ್ರೆ

September 21, 2026 5:56 pm
Our Youtube Channel
Our Picks

ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ

September 22, 2026 5:12 pm

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

September 22, 2026 5:09 pm

ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ

September 22, 2026 5:05 pm

ಪುಟ್ಟ ಮನೆ ಬೆಂಕಿಗೆ ಆಹುತಿ

September 22, 2026 5:01 pm

ಬೆಳೆ ಹಾನಿ, ಆಶ್ರಯ ನಿವೇಶನಗಳ ಸ್ಥಳ ಪರಿಶೀಲನೆ

September 22, 2026 4:57 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ

By News Desk BenkiyabaleSeptember 22, 2026 5:12 pm

ತುಮಕೂರು ಅತಿ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಸ್ಥಳೀಯ ಸಂಸ್ಥೆಗಳ ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು. ಪೌರಕಾರ್ಮಿಕರ ರೀತಿ…

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

September 22, 2026 5:09 pm

ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ

September 22, 2026 5:05 pm

ಪುಟ್ಟ ಮನೆ ಬೆಂಕಿಗೆ ಆಹುತಿ

September 22, 2026 5:01 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.