
ತುಮಕೂರು: ಮಹಿಳೆಯರು ಸಂಘ,ಸ0ಸ್ಥೆಗಳನ್ನು ಆರಂಭಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ಮಹಿಳಾ ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮದ ಅಭಿವೃದ್ಧಿ ಅಧಿಕಾರಿ ಜಾನವಿ ತಿಳಿಸಿದರು.
ಗ್ರಾಮಾಂತರದ ಕೋರ ಹೋಬಳಿಯ ಮೇಳೆಹಳ್ಳಿಯ ಆಹಾರೋತ್ಪನ್ನಗಳ ಮಾರಾಟ ಮಹಿಳಾ ಸಹಕಾರ ಸಂಘದ ಕಚೇರಿಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಆಹಾರೋತ್ಪನ್ನಗಳ ಮಾರಾಟ ಮಹಿಳಾ ಸಹಕಾರ ಸಂಘದ ಸರ್ವ ಸದಸ್ಯರಸಭೆ ಹಾಗೂ ಫಲಾನುಭವಿಗಳಿಗೆ ಸಾಲ ನೀಡಲು ಅರ್ಜಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಮಹಿಳೆಯರು ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಅದರಿಂದ ಸಾಲ ಸೌಲಭ್ಯ ಪಡೆದು ತಮ್ಮ ಕುಟುಂಬದ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಮತ್ತು ಸಣ್ಣ,ಸಣ್ಣ ಉದ್ಯಮಗಳನ್ನು ಆರಂ ಭಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಇನ್ನು ಅನೇಕ ಮಹಿಳೆಯರು ಸಂಘ, ಸಂಸ್ಥೆಗಳಿ0ದ ದೂರ ಉಳಿದಿದ್ದಾರೆ. ಆರ್ಥಿ ಕವಾಗಿ ಸಂಕಷ್ಟವನ್ನು ಎದರಿಸುತ್ತಿರುವ ಮಹಿಳೆಯರು ಸಂಘ, ಸಂಸ್ಥೆಗಳನ್ನು ಆರಂಭಿಸಿ ಅದರಿಂದ ಬರುವ ಸೌಲಭ್ಯಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದರು.
ಆಹಾರೋತ್ಪನ್ನಗಳ ಮಾರಾಟ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಚಂದ್ರಕಲಾ ಮಾತನಾಡಿ, ಮಹಿಳೆಯರು ಸ್ವಾವ ಲಂಭಿಯಾಗಿ ಬದುಕು ಸಾಗಿಸಲು ಈ ಹಿಂದೆಆಹಾರೋತ್ಪನ್ನಗಳ ಮಾರಾಟ ಸಂಘದ ಕಟ್ಟಲಾಗಿತ್ತು, ಇದರಿಂದ ಸಿರಿದಾನ್ಯಗಳಿಂದ ಹಲವಾರು ರೀತಿಯ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ.ಜೊತೆಗೆ ಕರಕುಶಲ ವಸ್ತುಗಳು, ಎಲಕ್ಕಿ,ಕೊಬ್ಬರಿ,ಅಡಿಕೆ, ಎಲಕ್ಕಿ ಸೇರಿದಂತೆ ಹಲವಾರು ಕೃಷಿ ಉತ್ಪನ್ನಗಳಿಂದ ಹಾರಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ.ಇದರಿಂದ ಸಂಘದ ಸದಸ್ಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ ಎಂದರು.
ಹೊಸದಾಗಿ ಆಹಾರೋತ್ಪನ್ನಗಳ ಮಾರಾಟ ಮಹಿಳಾ ಸಹಕಾರ ಸಂಘದಿAದ ಸಾಲವನ್ನು ನೀಡಲಾಗುತ್ತಿದೆ. ಸಂಘದ ಸದಸ್ಯರು ಸಂಘದಿAದ ಸಿಗುವ ಸಾಲವನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ0ತೆ ಸೂಚಿಸಿ ದರು. ಹೋಬಳಿಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆ ಯರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆಯಲ್ಲಿ ಆಶಾ ಕಾರ್ಯಕರ್ತೆಯರನ್ನು, ವಿವಿಧ ಕ್ಷೇತ್ರ ದಲ್ಲಿ ಸಾಧನೆ ಮಾಡಿದ ಮಹಿಳೆಯರ ಸೇವಾ ಕಾರ್ಯ ಗುರ್ತಿಸಿ ಅಭಿನಂದಿಸಲಾಯಿತು. ಸಂಘದ ಸದಸ್ಯರಿಗೆ ಸಾಲ ನೀಡಲು ಅರ್ಜಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಚಿರಂಜೀವಿ ಸೌಹಾರ್ಧ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ, ಪಾರ್ವತಮ್ಮ, ಸಂಘದ ಪದಾಧಿಕಾರಿಗಳಾದ ರಾಧಮ್ಮ,ಶಾಂತಲ ಎಂ.ಎಸ್, ಮಮತ ಕೆ.ಬಿ, ಮಧು, ಅನಿತಾ ಟಿ.ಕೆ, ಪೂರ್ಣಿಮಾ, ರಾಧ,ವನಿತ ಎಂ.ಆರ್, ಜಯಮಂಗಳ,ಭಾಗ್ಯಮ್ಮ,ಹೆಚ್.ಸಿ ರತ್ನಮ್ಮ, ಸವಿತ,ಡಿ, ಸಂಘದ ಕಾರ್ಯದರ್ಶಿ ಪವಿತ್ರ ಮುಂತಾದವರು ಭಾಗವಹಿಸಿದ್ದರು.





