
ತುಮಕೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಸಮುದಾಯ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಡಾ. ಕೆ.ಆರ್. ರಾಜ್‌ಕುಮಾರ್ ರವರನ್ನೇ ಪ್ರಭಾರವಾಗಿ ಮುಂದುವರೆಸುವAತೆ ರಾಜ್ಯ ವಾಲ್ಮೀಕಿ ಕ್ರಾಂತಿ ಸೇನೆ ವತಿಯಿಂದ ಮಾಜಿ ಸಹಕಾರ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ ರವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಕ್ಯಾತ್ಸಂದ್ರದಲ್ಲಿರುವ ಮಾಜಿ ಸಚಿವ ಕೆ.ಎನ್. ರಾಜಣ್ಣರವರ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ ಸೇನೆಯ ಪದಾಧಿಕಾರಿಗಳು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇ ಶಕರ ಹುದ್ದೆಯಲ್ಲಿ ಡಾ. ಕೆ.ಆರ್. ರಾಜ್‌ಕುಮಾರ್ ರವರನ್ನೆ ಪ್ರಭಾರವಾಗಿ ಮುಂದುವರೆಸುವ0ತೆ ಮನವಿ ಸಲ್ಲಿಸಿ ಕೋರಿದರು.
ಪ್ರಸ್ತುತ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಪರಿಶಿಷ್ಟ ವರ್ಗದ ಸಮಾಜ ನಲುಗಿ ಹೋಗಿತ್ತು. ಈ ಘಟನೆಯಿಂದ ಹಲವಾರು ತನಿಖೆ, ವಿಚಾರಣೆಯನ್ನು ಎದುರಿಸಬೇಕಾದ ಕಾರಣ ಅಧಿಕಾರಿಗಳು ಈ ಹುದ್ದೆಗೆ ಬರಲು ಹಿಂದೇಟು ಹಾಕುತ್ತಿದ್ದರು. ಆ ಸಂಧರ್ಭದಲ್ಲಿ ಹಾಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶನಾಲಯದ ಜಂಟಿ ನಿರ್ದೇಶಕರಾದ ಡಾ. ಕೆ.ಆರ್. ರಾಜ್‌ಕುಮಾರ್ ರವರನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ (ಪ್ರಭಾರ) ನಿಯೋಜನೆ ಮಾಡಲಾಗಿತ್ತು. ಅಂದಿನಿ0ದ ಇಂದಿನವರೆಗೆ ನಿಗಮದಲ್ಲಿ ಹಲವಾರು ಇಲಾಖೆಯ ವಿಚಾರಣೆ, ತನಿಖೆ ಐಟಿ, ಇಡಿ, ಎಸ್‌ಐಟಿ ತನಿಖೆಗಳಿಗೆ ಸ್ಪಂದಿಸುತ್ತಾ ನಿಗಮದಲ್ಲಿ ಪಾರದರ್ಶಕ ಆಡಳಿತ, ಸಿಬ್ಬಂದಿ ಸುಧಾರಣೆ, ಕಚೇರಿ ನಿರ್ವಹಣೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದು ಜನಸ್ನೇಹಿ ಅಧಿಕಾರಿ ಎನಿಸಿಕೊಂಡು ನಿಗಮವನ್ನು ಹತೋಟಿಗೆ ತರುವಲ್ಲಿ ಶ್ರಮ ವಹಿಸಿದ್ದಾರೆ ಎಂದು ಸೇನೆಯ ಪದಾಧಿಕಾರಿಗಳು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಹೀಗಿರುವಾಗ ಸದರಿ ಹುದ್ದೆಗೆ ಅಶೋಕ್ ದುಡಗುಂಟಿ, ಕೆಎಎಸ್ (ಸೂಪರ್ ಟೈಮ್ ಸ್ಕೇಲ್) ರವರನ್ನು ಸರ್ಕಾರ ವರ್ಗಾಯಿಸಿದ್ದು, ಈ ಆದೇಶವನ್ನು ಕೂಡಲೇ ಹಿಂಪಡೆದು ಡಾ. ಕೆ.ಆರ್. ರಾಜ್‌ಕುಮಾರ್ ರವರನ್ನೇ ಈ ಹುದ್ದೆಯಲ್ಲಿ ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ಕ್ರಾಂತಿ ಸೇನೆಯ ಪದಾಧಿಕಾರಿಗಳು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣನವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಸೇನೆಯ ಕುಪ್ಪೂರು ಶ್ರೀಧರ್, ಎಸ್.ಆರ್. ನಾಯಕ್, ನಾಗರಾಜು, ರಮೇಶ್ ಇದ್ದರು.





