BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ
  • ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ
  • ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ
  • ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ
  • ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ
  • ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್
  • ಅಪ್ರತಿಮ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನ ಆಚರಣೆ
  • ನಾಡಕಚೇರಿಗಳಲ್ಲಿ ಕಂದಾಯ ವಿಷಯ ಕುರಿತ ಅರ್ಜಿಗಳ ಪರಿಹಾರಕ್ಕೆ ವಿಶೇಷ ಕ್ರಮ: ಡಿಸಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ
ಇತರೆ ಸುದ್ಧಿಗಳು

ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ

ಅನ್ನದಾಸೋಹ ಶ್ರೇಷ್ಠ ಸೇವೆ: ಕಾರದ ವೀರಬಸವ ಸ್ವಾಮೀಜಿ
By News Desk BenkiyabaleUpdated:March 03, 2026 2:52 pm

ತುಮಕೂರು: ತಾಲ್ಲೂಕಿನ ಬೆಳ್ಳಾವಿಯಲ್ಲಿ ಸೋಮವಾರ ಇತಿಹಾಸ ಪ್ರಸಿದ್ಧ ಪ್ರಸನ್ನ ಜಗದಾಂಬ ಸಮೇತ ಸೋಮೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ವೈಭವದಿಂದ ನೆರವೇರಿತು. ಅಲಂಕೃತ ರಥದಲ್ಲಿ ದೇವರುಗಳನ್ನು ಪ್ರಷ್ಠಾಪಿಸಿ, ಪೂಜೆ ಸಲ್ಲಿಸಿ ಮಂಗಳವಾದ್ಯಗಳೊ0ದಿಗೆ ರಥೋತ್ಸವ ನೆರವೇರಿತು. ಭಕ್ತರು ರಥ ಎಳೆದು ಭಕ್ತಿ ಸಮರ್ಪಿಸಿದರು. ಬೆಳ್ಳಾವಿ ಹಾಗೂ ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ರಥೋತ್ಸವದ ಅಂಗವಾಗಿ ಬೆಳ್ಳಾವಿಯ ವಿವಿಧೆಡೆ ಕೊಪ್ಪಲುಗಳಲ್ಲಿ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಟಿ.ಸಿ.ಪ್ರಭಾಕರ್ ಅವರು ಇಲ್ಲಿನ ನಿಧಿಶ್ರೀ ಫಾರಂನಲ್ಲಿ ಏರ್ಪಡಿಸಿದ್ದ ಅನ್ನದಾಸೋಹ ಸೇವೆಯನ್ನು ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಉದ್ಘಾಟಿಸಿದರು.
ಈ ವೇಳೆ ಮಾತಾಡಿದ ಸ್ವಾಮೀಜಿ, ಅನ್ನದಾಸೋಹ ಶೇಷ್ಠ ಸೇವೆ. ಹಸಿದವರಿಗೆ ಅನ್ನ ನೀಡುವುದು ನಮ್ಮ ಸಂಸ್ಕೃತಿ. ಮಠಮಾನ್ಯಗಳನ್ನು ಆಗಿನಿಂದಲೂ ದಾಸೋಹ ಪರಂಪರೆ ಅನುಸರಿಸಿಕೊಂಡು ಸಮಾಜಕ್ಕೆ ಮಾದರಿಯಾಗಿವೆ. ಸಿದ್ಧಗಂಗಾ ಮಠದಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳು ಆರಂಭಿಸಿದ ಅಕ್ಷರ, ಅನ್ನ, ಆಶ್ರಯದ ತ್ರಿವಿಧ ದಾಸೋಹ ಆದರ್ಶವಾಗಿದೆ. ಸರ್ಕಾರ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತರಲು ಸಿದ್ಧಗಂಗಾ ಮಠದ ಅನ್ನದಾಸೋಹ ಸೇವೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಪ್ರತಿವರ್ಷದ ಜಾತ್ರೆ ಸಂದರ್ಭದಲ್ಲಿ ಟಿ.ಸಿ.ಪ್ರಭಾಕರ್ ಕುಟುಂಬದವರು ದಾಸೋಹ ವ್ಯವಸ್ಥೆ ಮಾಡಿ ರಥೋತ್ಸವಕ್ಕೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ಮಾಡುತ್ತಿದ್ದಾರೆ. ಇಂದು ಕೂಡಾ ಸಾವಿರಾರು ಭಕ್ತರು ಊಟ ಮಾಡಿದರು. ಇದು ಕೂಡಾ ದೇವರಿಗೆ ಸಲ್ಲಿಸುವ ಭಕ್ತಿ. ಮನುಷ್ಯನಿಗೆ ಬೇರೆ ಏನು ಕೊಟ್ಟರೂ ತೃಪ್ತಿ ಆಗಲಾರದು, ಹಸಿದವರಿಗೆ ಹೊಟ್ಟೆ ತುಂಬಾ ಊಟ ಹಾಕಿ ಅವರನ್ನು ಸಂತೃಪ್ತಿ ಪಡಿಸಬಹುದು. ಅಂತಹ ಕಾರ್ಯವನ್ನು ಪ್ರಭಾಕರ್ ಮಾಡುತ್ತಾ ಬಂದಿದ್ದಾರೆ ಎಂದು ಸ್ವಾಮೀಜಿ ಶ್ಲಾಘಿಸಿದರು.
ದಾಸೋಹ ವ್ಯವಸ್ಥೆ ಮಾಡಿದ್ದ ಟೂಡಾ ಮಾಜಿ ಸದಸ್ಯ ಟಿ.ಸಿ.ಪ್ರಭಾಕರ್ ಮಾತನಾಡಿ, ಕಳೆದ ೨೮ ವರ್ಷಗಳಿಂದ ಪ್ರತಿ ವರ್ಷದ ಬೆಳ್ಳಾವಿ ಸೋಮೇಶ್ವರಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ಅನ್ನಸಂತರ್ಪಣೆ ಮಾಡಿಕೊಂಡು ಬರಲಾಗುತ್ತಿದೆ. ಇದೊಂದು ದೇವರ ಸೇವೆ ಎಂದು ಮಾಡಿಕೊಂಡುಬರುತ್ತಿದ್ದೇವೆ ಎಂದ ಅವರು, ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಹೇಳಿದರು.
ಇದರ ಅಂಗವಾಗಿ ಮಾಜಿ ಶಾಸಕ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್.ನಿಂಗಪ್ಪ, ಸಾರಿಗೆ ಕ್ಷೇತ್ರದ ಸಾಧಕ ಜಿ.ರಮೇಶ್‌ಬಾಬು, ಉದ್ಯಮಿ ಓಂ ಸ್ಟಾಂಜಾ, ಇಂಜಿನಿಯರ್ ಸುನಿಲ್ ಇವರನ್ನು ಈ ವೇಳೆ ಗೌರವಿಸಿದರು.
ನಗರಪಾಲಿಕೆ ಮಾಜಿ ಸದಸ್ಯ ಮಂಜುನಾಥ್, ಡಿಪೋ ರಾಜೇಂದ್ರ ಸೇರಿದಂತೆ ವಿವಿಧ ಮುಖಂಡರು, ಸಂಘಸ0ಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(Visited 1 times, 1 visits today)
Previous Articleಖಾಲಿಯಿರುವ ಪೌರಕಾರ್ಮಿಕರ ನೇಮಕಾತಿ ವಿಳಂಬ
Next Article ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ
News Desk Benkiyabale

Related Posts

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm news

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm news

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm news
ತಾಜಾ ಸುದ್ಧಿಗಳು
news

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm
news

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm
news

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm
news

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm
news

ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ

October 01, 2026 5:25 pm
news

ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್

September 30, 2026 6:04 pm
Our Youtube Channel
Our Picks

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm

ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ

October 01, 2026 5:25 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

By News Desk BenkiyabaleOctober 01, 2026 5:34 pm

ತುಮಕೂರು: ಪ್ರವಾದಿ ಮುಹಮ್ಮದ್(ಸ) ರವರ ಜೀವನ ಮತ್ತು ಸಂದೇಶಗಳನ್ನು ಯುವಜನತೆಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಜಮಾಆತೆ ಇಸ್ಲಾಮಿಕ್ ಹಿಂದ್ ಆಯೋಜಿಸಿರುವ…

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.