ಚಿಕ್ಕನಾಯಕನಹಳ್ಳಿ: ತಾಲೂಕಿನ ಹುಳಿಯಾರು ಟಾಟಾ ಪವರ್ ಕಂಪನಿ ಲಿಮಿಟೆಡ್ ಸೇರಿದಂತೆ ಖಾಸಗಿ ಕಂಪನಿಗಳಿಗೆ ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ವಿತರಣಾ ಚಟುವಟಿಕೆಗೆ ಪರವಾನಿಗೆ ನೀಡಬಾರದು ಎಂದು ಆಗ್ರಹಿಸಿ ಹಾಗೂ ವಿದ್ಯುತ್ ಕಾಯ್ದೆ ೨೦೦೩ರ ಕಲಂ ೧೪ ಮತ್ತು ೧೫ರ ಅಡಿಯಲ್ಲಿ ಖಾಸಗಿ ಕಂಪನಿಗಳು ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿ ಕ.ವಿ.ಪ್ರ.ನಿ. ನೌಕರರ ಸಂಘದಿAದ ಹುಳಿಯಾರಿನಲ್ಲಿ ಮಂಗಳವಾರ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಇತ್ತೀಚೆಗೆ ‘ಟಾಟಾ ಪವರ್ ಕಂಪನಿ ಲಿಮಿಟೆಡ್’ ಸಂಸ್ಥೆಯು ರಾಜ್ಯದಲ್ಲಿ ವಿದ್ಯುತ್ ಸರಬರಾಜು ಮಾಡಲು ಅನುಮತಿ ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಏಇಖಅ) ಅರ್ಜಿ ಸಲ್ಲಿಸಿರುವುದನ್ನು ಖಂಡಿಸಿದ ಪ್ರತಿಭಟನಾಕಾರರು, ವಿದ್ಯುತ್ ಕಾಯ್ದೆ ೨೦೦೩ರ ಕಲಂ ೧೪ ಮತ್ತು ೧೫ರ ಅಡಿಯಲ್ಲಿ ಸಲ್ಲಿಸಲಾಗಿರುವ ಈ ಅರ್ಜಿಯನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿ ಸಾರ್ವಜನಿಕರು ಹಾಗೂ ರೈತರ ಸಹಿಗಳಿರುವ ಬೃಹತ್ ಆಕ್ಷೇಪಣಾ ಪತ್ರವನ್ನು ಏಇಖಅ ಗೆ ರವಾನಿಸಿದರು.
ಲಾಭದ ಆಸೆಗೆ ಬಡವರ ಬದುಕು ಬಲಿ: ಪ್ರತಿಭಟನಾಕಾರರ ಆತಂಕ ಪ್ರತಿಭಟನಾ ಸಭೆಯಲ್ಲಿ ಖಾಸಗೀಕರಣದಿಂದ ಸಾರ್ವಜನಿಕರಿಗೆ ಹಾಗೂ ಇಲಾಖೆಗೆ ಎದುರಾಗಲಿರುವ ಮಾರಕ ಸವಾಲುಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ಪ್ರಮುಖವಾಗಿ ವ್ಯಕ್ತವಾದ ಆಕ್ಷೇಪಣೆಗಳು: ರೈತರು ಹಾಗೂ ಬಡವರಿಗೆ ತೊಂದರೆ: ಖಾಸಗಿ ಕಂಪನಿಗಳು ಕೇವಲ ಲಾಭದ ಲೆಕ್ಕಾಚಾರದಲ್ಲಿ ಕೆಲಸ ಮಾಡುವುದರಿಂದ ವಿದ್ಯುತ್ ದರಗಳು ದುಬಾರಿಯಾಗಲಿವೆ. ಸದ್ಯ ರೈತರ ನೀರಾವರಿ ಯೋಜನೆಗಳಿಗೆ ಸಿಗುತ್ತಿರುವ ಉಚಿತ ವಿದ್ಯುತ್ ಹಾಗೂ ರಿಯಾಯಿತಿಗಳು ನಿಂತುಹೋಗಿ, ಕೃಷಿ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ. ಸಾರ್ವಜನಿಕ ಆಸ್ತಿಯ ದುರುಪಯೋಗ: ಸಾರ್ವಜನಿಕರ ಕೋಟ್ಯಂತರ ರೂಪಾಯಿ ತೆರಿಗೆ ಹಣದಿಂದ ಸರ್ಕಾರ ಹಲವು ವರ್ಷಗಳ ಕಾಲ ಶ್ರಮಪಟ್ಟು ನಿರ್ಮಿಸಿರುವ ವಿದ್ಯುತ್ ಗ್ರಿಡ್, ಕಂಬಗಳು ಮತ್ತು ಮೂಲಸೌಕರ್ಯಗಳನ್ನು ಸಿದ್ಧವಾಗಿ ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದು ನ್ಯಾಯಸಮ್ಮತವಲ್ಲ.
ರೈತರಿಗೆ ಮತ್ತು ಕೃಷಿಗೆ ಮಾರಕ: ಪ್ರಸ್ತುತ ಸರ್ಕಾರ ನೀಡುತ್ತಿರುವ ಉಚಿತ ವಿದ್ಯುತ್ ಹಾಗೂ ರಿಯಾಯಿತಿ ದರದ ಯೋಜನೆಗಳನ್ನು ಖಾಸಗಿ ಕಂಪನಿಗಳು ಮುಂದುವರಿಸುವುದಿಲ್ಲ. ಇದರಿಂದ ಕೃಷಿ ಕ್ಷೇತ್ರ ಸಂಪೂರ್ಣ ಅಪಾಯಕ್ಕೆ ಸಿಲುಕಲಿದ್ದು, ಅಗತ್ಯ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ.
ಸಾರ್ವಜನಿಕ ಹಣದ ದುರುಪಯೋಗ: ಸಾರ್ವಜನಿಕರ ತೆರಿಗೆ ಹಣದಿಂದ ಹಲವು ವರ್ಷಗಳ ಕಾಲ ನಿರ್ಮಿಸಲಾದ ವಿದ್ಯುತ್ ಗ್ರಿಡ್, ಕಂಬಗಳು ಮತ್ತು ಮೂಲಸೌಕರ್ಯಗಳನ್ನು ಸಿದ್ಧವಾಗಿ ಖಾಸಗಿ ಕಂಪನಿಗಳಿಗೆ ಒಪ್ಪಿಸುವುದು ಸಾರ್ವಜನಿಕ ಆಸ್ತಿಗೆ ಮಾಡುವ ದ್ರೋಹವಾಗಿದೆ.
ಗ್ರಾಮೀಣ ಪ್ರದೇಶಗಳ ನಿರ್ಲಕ್ಷ: ಖಾಸಗಿ ಸಂಸ್ಥೆಗಳು ಕೇವಲ ಲಾಭದಾಯಕ ಹಾಗೂ ನಗರ ಪ್ರದೇಶಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಸೇವೆ ನೀಡುತ್ತವೆ (ಚರ‍್ರಿ ಪಿಕಿಂಗ್). ಇದರಿಂದ ಮಲೆನಾಡು, ಕರಾವಳಿ ಸೇರಿದಂತೆ ಹಿಂದುಳಿದ ಗ್ರಾಮೀಣ ಭಾಗಗಳ ಮೂಲಸೌಕರ್ಯ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಳ್ಳಲಿದೆ.
ಸೇವಾ ಭದ್ರತೆ ಮತ್ತು ಉದ್ಯೋಗದ ಆತಂಕ: ಇಲಾಖೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಹಾಗೂ ಅವರ ಕುಟುಂಬಗಳಿಗೆ ಮುಂದೆ ಸೇವಾ ಭದ್ರತೆ ಇರುವುದಿಲ್ಲ. ಸಾರ್ವಜನಿಕ ಉದ್ಯೋಗ ಭದ್ರತೆಗೆ ಆತಂಕ ಎದುರಾಗಲಿದ್ದು, ಸಾವಿರಾರು ನಿರುದ್ಯೋಗಿ ಯುವಕರಿಗೆ ಮುಂದಿನ ದಿನಗಳಲ್ಲಿ ಸರ್ಕಾರಿ ಉದ್ಯೋಗ ನೇಮಕಾತಿ ಸಿಗುವುದೇ ಇಲ್ಲ.
ಈ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ಬೆಸ್ಕಾಂ ಇಲಾಖೆಯ ಎಇಇ ಎನ್.ಬಿ. ಗವಿರಂಗಯ್ಯ, ಕ.ವಿ.ಪ್ರ.ನಿ. ನೌಕರರ ಸಂಘದ ಹುಳಿಯಾರು ಪ್ರಾಥಮಿಕ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಹಾಯಕರಾದ ಕೆ.ಪಿ. ಮಂಜುನಾಥ್, ಶಾಖಾಧಿಕಾರಿಗಳಾದ ಪಿ. ಹನುಮಂತರಾಯಪ್ಪ, ರಘುರಾಮ್, ಎಚ್.ಜಿ. ಮೂರ್ತಿ ಇದ್ದರು.
ಇವರೊಂದಿಗೆ ಸಂಘದ ಪದಾಧಿಕಾರಿಗಳು, ಇಲಾಖೆಯ ಎಲ್ಲಾ ನೌಕರರು, ಗುತ್ತಿಗೆದಾರರಾದ ದಕ್ಷಿಣ ಮೂರ್ತಿ ಹಾಗೂ ರೈತರು ಮತ್ತು ಸಾರ್ವಜನಿಕರ ಪರವಾಗಿ ತಿಮ್ಮಯ್ಯ, ಸಾದಾತ್, ರಂಗನಾಥ್ ಸೇರಿದಂತೆ ಹಲವರು ಭಾಗವಹಿಸಿ ಖಾಸಗೀಕರಣದ ವಿರುದ್ಧ ಆಕ್ರೋಶ ಹೊರಹಾಕಿದರು. ಕರ್ನಾಟಕದ ಜನರ ಹಿತಾಸಕ್ತಿ ಹಾಗೂ ರೈತ-ಕಾರ್ಮಿಕರ ರಕ್ಷಣೆಗಾಗಿ ವಿದ್ಯುತ್ ಕಂಪನಿಗಳನ್ನು ಸರ್ಕಾರದ ಅಧೀನದಲ್ಲೇ ಮುಂದುವರಿಸಬೇಕೆAದು ಈ ಸಂದರ್ಭದಲ್ಲಿ ಒಕ್ಕೊರಲಿನಿಂದ ಒತ್ತಾಯಿಸಲಾಯಿತು.
(Visited 1 times, 1 visits today)

