BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ: ಪ್ರೊ.ಬರಗೂರು
  • ನಕಲಿ ದಾಖಲೆ ಸೃಷ್ಟಿಸಿ ವೃದ್ಧಾಪ್ಯ ವೇತನ ವಂಚನೆ
  • ತಳ ಸಮುದಾಯಗಳು ಗುರುತಿಸಿಕೊಳ್ಳಲು ಸಾಂಸ್ಕೃತಿಕ ಮನಸ್ಥಿತಿಯೇ ಕಾರಣ
  • ಸ್ಲ0 ನಿವಾಸಿಗಳ ಕುಂದು ಕೊರತೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ
  • ಬರ ಪರಿಸ್ಥಿತಿಯ ಸಮಗ್ರ ವರದಿ ಕೇಂದ್ರಕ್ಕೆ ಡಾ.ಜಿ.ಪರಮೇಶ್ವರ
  • ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ
  • ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ
  • ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರಿನಲ್ಲಿ ಜೂನ್ ೨೬ರಿಂದ ಸಾಹಿತ್ಯದ ಮಹೋತ್ಸವ
news

ತುಮಕೂರಿನಲ್ಲಿ ಜೂನ್ ೨೬ರಿಂದ ಸಾಹಿತ್ಯದ ಮಹೋತ್ಸವ

೨೮ರವರೆಗೆ ಗಾಜಿನ ಮನೆಯಲ್ಲಿ ವೀರಲೋಕ ಪುಸ್ತಕ ಸಂತೆ
By News Desk BenkiyabaleUpdated:June 25, 2026 5:31 pm

ತುಮಕೂರು: ಕನ್ನಡ ಪುಸ್ತಕಲೋಕದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿರುವ ಭವ್ಯ ಸಾಹಿತ್ಯಿಕ ಹಬ್ಬ ವೀರಲೋಕ ಪುಸ್ತಕ ಸಂತೆಯ ಐದನೇ ಆವೃತ್ತಿಯು ಈ ಬಾರಿ ಜ್ಞಾನ ನಗರಿ ತುಮಕೂರಿನಲ್ಲಿ ಅತ್ಯಂತ ವೈಭವದಿಂದ ಆಯೋಜನೆಗೊಂಡಿದೆ. ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ದಿವ್ಯ ಆಶೀರ್ವಾದಗಳೊಂದಿಗೆ, ತುಮಕೂರು ಜಿಲ್ಲಾಡಳಿತ ಹಾಗೂ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಕ್ರಿಯ ಸಹಕಾರದಲ್ಲಿ, ಶ್ರೀ ಆರ್. ಕೆ. ಶ್ರೀನಿವಾಸ ಅವರ ನೇತೃತ್ವ ಹಾಗೂ ವೀರಕಪುತ್ರ ಶ್ರೀನಿವಾಸ ಅವರ ರೂವಾರಿತನದಲ್ಲಿ ಈ ಸಾಹಿತ್ಯದ ಬೃಹತ್ ಜಾತ್ರೆ ನಡೆಯಲಿದೆ. ದಿನಾಂಕ ೨೦೨೬ರ ಜೂನ್ ೨೬, ೨೭ ಮತ್ತು ೨೮ರಂದು ತುಮಕೂರಿನ ಪ್ರಸಿದ್ಧ ಅಮಾನಿಕೆರೆಯ ‘ಗಾಜಿನ ಮನೆ’ಯಲ್ಲಿ ಬೆಳಿಗ್ಗೆ ೧೦:೦೦ ಗಂಟೆಯಿAದ ರಾತ್ರಿ ೯:೦೦ ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶದೊಂದಿಗೆ ಈ ಸಂತೆ ಜರುಗಲಿದೆ.
ಈ ಹಿಂದಿನ ಆವೃತ್ತಿಯು ಬೆಂಗಳೂರಿನಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿದ್ದು, ಎರಡು ಲಕ್ಷಕ್ಕೂ ಹೆಚ್ಚು ಪುಸ್ತಕ ಪ್ರೇಮಿಗಳು ಭೇಟಿ ನೀಡಿ, ಬರೋಬ್ಬರಿ ಮೂರು ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ವ್ಯಾಪಾರ ವಹಿವಾಟು ನಡೆಸಿ ಇತಿಹಾಸ ನಿರ್ಮಿಸಿತ್ತು. ಇದೀಗ ಸಾಹಿತ್ಯ ಸಂಸ್ಕöÈತಿಯ ತವರೂರಾದ ತುಮಕೂರಿನಲ್ಲಿ ನಡೆಯಲಿರುವ ಈ ಸಂತೆಗೆ ಜಿಲ್ಲೆ ಹಾಗೂ ನಾಡಿನ ಮೂಲೆಮೂಲೆಗಳಿಂದ ಒಂದು ಲಕ್ಷಕ್ಕೂ ಅಧಿಕ ಓದುಗರು ಆಗಮಿಸುವ ನಿರೀಕ್ಷೆಯಿದೆ. ಓದುಗರ ಜ್ಞಾನದ ಹಸಿವನ್ನು ನೀಗಿಸಲು ಈ ಬಾರಿ ೬೦ಕ್ಕೂ ಹೆಚ್ಚು ಜ್ಞಾನದಾಯಕ ಪುಸ್ತಕ ಮಳಿಗೆಗಳು ಹಾಗೂ ೪೦ಕ್ಕೂ ಹೆಚ್ಚು ವೈವಿಧ್ಯಮಯ ವಾಣಿಜ್ಯ ಮಳಿಗೆಗಳನ್ನು ಸಜ್ಜುಗೊಳಿಸಲಾಗುತ್ತಿದ್ದು, ಇಡೀ ಆವರಣವು ಕನ್ನಡದ ಹಬ್ಬದ ಕಳೆಯನ್ನು ತುಂಬಲಿದೆ. ಜೊತೆಗೆ ಫುಡ್ ಕೋರ್ಟ್, ಮಕ್ಕಳಿಗೆ ಆಟದ ಮೈದಾನ ಕೂಡ ಇರಲಿದೆ. ನಾಡಿನ ಮೂಲೆಮೂಲೆಯಿಂದ ೧೫೦ಕ್ಕೂ ಹೆಚ್ಚು ಪ್ರಸಿದ್ಧ ಲೇಖಕರು ಈ ಸಂತೆಗೆ ಆಗಮಿಸುತ್ತಿದ್ದು, ಒಟ್ಟು ೩೦ ನೂತನ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.
ಜೂನ್ ೨೬ರ ಬೆಳಿಗ್ಗೆ ೧೦:೦೦ ಗಂಟೆಗೆ ಗಾಜಿನ ಮನೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭವು ನಾಡಿನ ಶ್ರೇಷ್ಠ ಗಣ್ಯರ ಸಮ್ಮುಖ ದಲ್ಲಿ ಜರುಗಲಿದೆ. ಶ್ರೀ ಸಿದ್ದಗಂಗಾ ಮಠದ ಅಧ್ಯಕ್ಷರಾದ ಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸ ಲಿದ್ದಾರೆ. ಹಿರಿಯ ಸಾಹಿತಿ ಗಳಾದ ಡಾ. ಹಂಪ ನಾಗರಾಜಯ್ಯ (ಹಂಪನಾ) ಅವರು ಸಮಾರಂಭವನ್ನು ಉದ್ಘಾಟಿಸಲಿದ್ದು, ಸಾಂಸ್ಕöÈತಿಕ ಚಿಂತಕರಾದ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಭುವನೇಶ್ವರಿ ಪುತ್ತಳಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಪುಸ್ತಕ ಸಂತೆಯನ್ನು ಮಾನ್ಯ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಉದ್ಘಾಟಿಸಲಿದ್ದು, ವಾಣಿಜ್ಯ ಮಳಿಗೆಗಳನ್ನು ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ಉದ್ಘಾಟಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ಶ್ರೀ ಜಿ. ಬಿ. ಜ್ಯೋತಿ ಗಣೇಶ್ ವಹಿಸಲಿದ್ದು, ವಿಶೇಷ ಪ್ರತಿನಿಧಿ ಶ್ರೀ ಟಿ. ಬಿ. ಜಯಚಂದ್ರ, ಕೆಎಸ್ ಆರ್‌ಟಿಸಿ ಅಧ್ಯಕ್ಷರಾದ ಶ್ರೀ ಎಸ್. ಆರ್. ಶ್ರೀನಿವಾಸ ಮತ್ತು ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ಚಿದಾನಂದ ಗೌಡ, ಶ್ರೀ ಆರ್. ರಾಜೇಂದ್ರ ರಾಜಣ್ಣ, ಹಾಗೂ ಶ್ರೀ ಡಿ. ಟಿ. ಶ್ರೀನಿವಾಸ ಮುಖ್ಯ ಅತಿಥಿಗಳಾಗಿ ಭಾಗವಹಿಸ ಲಿದ್ದಾರೆ. ಜಿಲ್ಲಾಧಿಕಾರಿ ಶ್ರೀಮತಿ ಶುಭ ಕಲ್ಯಾಣ್ ಹಾಗೂ ಜಿ.ಪಂ. ಸಿಇಒ ಶ್ರೀಮತಿ ಬಿ. ವಿ. ಅಶ್ವಿಜ ಉಪಸ್ಥಿತರಿರಲಿದ್ದಾರೆ.
ಜೂನ್ ೨೮ರ ಸಂಜೆ ೬:೦೦ ಗಂಟೆಗೆ ಈ ಮೂರು ದಿನಗಳ ಅಕ್ಷರ ಜಾತ್ರೆಗೆ ಅರ್ಥಪೂರ್ಣ ತೆರೆ ಬೀಳಲಿದೆ. ತುಮಕೂರಿನ ಶ್ರೀ ರಾಮಕೃಷ್ಣ ಆಶ್ರಮದ ಪೂಜ್ಯ ವೀರೇಶಾನಂದ ಸ್ವಾಮೀಜಿಗಳು ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಸಮಾರೋಪ ನುಡಿಗಳನ್ನು ಆಡಲಿದ್ದಾರೆ. ಮಾಜಿ ಸಚಿವರು ಹಾಗೂ ಶಾಸಕರಾದ ಶ್ರೀ ಕೆ.ಎನ್. ರಾಜಣ್ಣ ಅವರು ಬಹುಮಾನ ವಿತರಣೆ ಮಾಡಲಿದ್ದು, ಖ್ಯಾತ ವಿದ್ವಾಂಸರಾದ ಶ್ರೀ ಮಲ್ಲೇಪುರಂ ಜಿ. ವೆಂಕಟೇಶ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ಲೇಖಕರಾದ ಅಗ್ರಹಾರ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲೆಯ ಜನಪ್ರಿಯ ಶಾಸಕರುಗಳಾದ ಶ್ರೀ ಸುರೇಶ್ ಗೌಡ, ಸಿ. ಬಿ., ಸುರೇಶ್ ಬಾಬು, ಕೆ. ಷಡಕ್ಷರಿ, ಎಂ. ಟಿ. ಕೃಷ್ಣಪ್ಪ, ಎಚ್. ಟಿ. ರಂಗನಾಥ್, ಎಚ್., ವಿ. ವೆಂಕಟೇಶ್ ಮತ್ತು ಬಿಎಂಟಿಸಿ ಉಪಾಧ್ಯಕ್ಷರಾದ ನಿಕೇತ್ ರಾಜ್ ಎಂ ಭಾಗವಹಿಸಲಿದ್ದಾರೆ.
“ಮಕ್ಕಳನ್ನು ಅಕ್ಷರ ಹಾಗೂ ಜ್ಞಾನದ ಬೆಳಕಿಗೆ ಕರೆತನ್ನಿ” ಎನ್ನುವ ಆಶಯದೊಂದಿಗೆ ಆಯೋಜಿತವಾಗಿರುವ ಈ ಮಹಾ ಸಂತೆಗೆ ತುಮಕೂರು ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಸಮಸ್ತ ಸಾರ್ವಜನಿಕರು, ವಿದ್ಯಾರ್ಥಿಗಳು, ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕನ್ನಡದ ಹಬ್ಬವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ. ಯಾವುದೇ ಪುಸ್ತಕಗಳ ಮಾಹಿತಿಗಾಗಿ ೭೦೨೨೧೨೨೧೨೧ / ೮೮೬೧೨೧೨೧೭೨ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.

(Visited 1 times, 1 visits today)
books books market glas house local news tumkur news
Previous Articleಹುಳಿಯಾರು ಕೆರೆ: ತ್ಯಾಜ್ಯ ಮುಕ್ತಿಗೆ ಮುಂದಾದ ಅಧಿಕಾರಿಗಳು
Next Article ದುಶ್ಚಟಕ್ಕೆ ದಾಸರಾಗದಿರಿ, ಸಮಾಜದ ಜವಾಬ್ದಾರಿ ಹೊರಿ
News Desk Benkiyabale

Related Posts

ಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ: ಪ್ರೊ.ಬರಗೂರು

August 10, 2026 5:47 pm news

ನಕಲಿ ದಾಖಲೆ ಸೃಷ್ಟಿಸಿ ವೃದ್ಧಾಪ್ಯ ವೇತನ ವಂಚನೆ

August 10, 2026 5:46 pm news

ತಳ ಸಮುದಾಯಗಳು ಗುರುತಿಸಿಕೊಳ್ಳಲು ಸಾಂಸ್ಕೃತಿಕ ಮನಸ್ಥಿತಿಯೇ ಕಾರಣ

August 10, 2026 5:45 pm news
ತಾಜಾ ಸುದ್ಧಿಗಳು
news

ಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ: ಪ್ರೊ.ಬರಗೂರು

August 10, 2026 5:47 pm
news

ನಕಲಿ ದಾಖಲೆ ಸೃಷ್ಟಿಸಿ ವೃದ್ಧಾಪ್ಯ ವೇತನ ವಂಚನೆ

August 10, 2026 5:46 pm
news

ತಳ ಸಮುದಾಯಗಳು ಗುರುತಿಸಿಕೊಳ್ಳಲು ಸಾಂಸ್ಕೃತಿಕ ಮನಸ್ಥಿತಿಯೇ ಕಾರಣ

August 10, 2026 5:45 pm
news

ಸ್ಲ0 ನಿವಾಸಿಗಳ ಕುಂದು ಕೊರತೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ

August 10, 2026 5:44 pm
news

ಬರ ಪರಿಸ್ಥಿತಿಯ ಸಮಗ್ರ ವರದಿ ಕೇಂದ್ರಕ್ಕೆ ಡಾ.ಜಿ.ಪರಮೇಶ್ವರ

August 10, 2026 5:42 pm
news

ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ

August 08, 2026 5:13 pm
Our Youtube Channel
Our Picks

ಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ: ಪ್ರೊ.ಬರಗೂರು

August 10, 2026 5:47 pm

ನಕಲಿ ದಾಖಲೆ ಸೃಷ್ಟಿಸಿ ವೃದ್ಧಾಪ್ಯ ವೇತನ ವಂಚನೆ

August 10, 2026 5:46 pm

ತಳ ಸಮುದಾಯಗಳು ಗುರುತಿಸಿಕೊಳ್ಳಲು ಸಾಂಸ್ಕೃತಿಕ ಮನಸ್ಥಿತಿಯೇ ಕಾರಣ

August 10, 2026 5:45 pm

ಸ್ಲ0 ನಿವಾಸಿಗಳ ಕುಂದು ಕೊರತೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ

August 10, 2026 5:44 pm

ಬರ ಪರಿಸ್ಥಿತಿಯ ಸಮಗ್ರ ವರದಿ ಕೇಂದ್ರಕ್ಕೆ ಡಾ.ಜಿ.ಪರಮೇಶ್ವರ

August 10, 2026 5:42 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ: ಪ್ರೊ.ಬರಗೂರು

By News Desk BenkiyabaleAugust 10, 2026 5:47 pm

ತುಮಕೂರು: ಕನ್ನಡ ಉಳಿಸುವ ಪ್ರಶ್ನೆ ಸವಾಲಾಗಿರುವ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಆದ್ಯತೆ ಕನ್ನಡದ ಉಳಿವಿಗೆ ಮುಖ್ಯವಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ…

ನಕಲಿ ದಾಖಲೆ ಸೃಷ್ಟಿಸಿ ವೃದ್ಧಾಪ್ಯ ವೇತನ ವಂಚನೆ

August 10, 2026 5:46 pm

ತಳ ಸಮುದಾಯಗಳು ಗುರುತಿಸಿಕೊಳ್ಳಲು ಸಾಂಸ್ಕೃತಿಕ ಮನಸ್ಥಿತಿಯೇ ಕಾರಣ

August 10, 2026 5:45 pm

ಸ್ಲ0 ನಿವಾಸಿಗಳ ಕುಂದು ಕೊರತೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ

August 10, 2026 5:44 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.