ತುಮಕೂರು: ಕೇಂದ್ರ ಸರಕಾರ ಸುಮಾರು ೩೦೦೦ ಕೋಟಿ ರೂಖರ್ಚು ಮಾಡುತ್ತಿರುವ ರಾಷ್ಟಿçÃಯ ಹೆದ್ದಾರಿ ೨೦೬ರಲ್ಲಿ ತಿಪಟೂರು ಸಮೀಪದ ಅಯ್ಯನ ಭಾವಿ ಗ್ರಾಮದ ಬಳಿ ಜನರಿಗೆ ಅನುಕೂಲವಾಗುವ ರೀತಿ ಅಂಡರ್ ಪಾಸ್ ನಿರ್ಮಿಸದೆ, ಊರಿನಿಂದ ಹೊರಗೆ ನಿರ್ಮಿಸಿ, ಜನ, ಜಾನುವಾರಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಮಂಜುನಾಥ್.ಎಸ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದ್ವಿಪಥದಿಂದ ಚತುಸ್ಪಥಕ್ಕೆ ಅಭಿವೃದ್ದಿಯಾಗುತ್ತಿರುವ ರಾಷ್ಟಿçÃಯ ಹೆದ್ದಾರಿ ೨೦೬ ಸುಮಾರು ೫೦೦ ಮನೆಗಳಿರುವ ಆಯ್ಯಯನ ಬಾವಿ ಗ್ರಾಮವನ್ನು ಎರಡು ಹೋಳಾಗಿ ವಿಂಗಡಿಸಿದೆ. ಶಾಲಾ ಕಾಲೇಜುಗಳು ರಸ್ತೆಯ ಒಂದು ಬದಿ ಇದ್ದರೆ, ಜಮೀನು ಮನೆಗಳು ಮತ್ತೊಂದು ಬದಿಯಲ್ಲಿವೆ. ಎರಡು ಕಡೆಯವರು ಪ್ರತಿಯೊಂದಕ್ಕೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡಲೇಬೇಕಾದ ಅನಿವಾರ್ಯತೆ ಇದೆ. ರಸ್ತೆ ಕಾಮಗಾರಿ ಆರಂಭವಾದ ದಿನದಿಂದಲೂ ಊರಿನ ಸಮೀಪ ಕೆಳ ಸೇತುವೆ ನಿರ್ಮಿಸುವಂತೆ ಒತ್ತಾಯಿಸುತ್ತಾ, ಸಂಬAಧಪಟ್ಟವರಿಗೆ ಮನವಿ ಸಲ್ಲಿಸಿದ್ದರೂ ಗ್ರಾಮದಿಂದ ೭೦೦ ಮೀಟರ್ ದೂರದಲ್ಲಿ ಅಂಡರ್ ಪಾಸ್ ನಿರ್ಮಿಸಿ, ಮಕ್ಕಳು, ವಯೋವೃದ್ದರು, ಜಾನುವಾರುಗಳು ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಗ್ರಾಮಕ್ಕೆ ಸಮೀಪದಲ್ಲಿಯೇ ಅಂಡರ್ ಪಾಸ್ ನಿರ್ಮಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ ಎಂದರು.
ಗ್ರಾಮದ ಸಮೀಪದಲ್ಲಿಯೇ ಅಂಡರ್ ಪಾಸ್ ಇಲ್ಲದ ಕಾರಣ, ಬ್ಯುಸಿ ಇರುವ ರಾಷ್ಟಿçÃಯ ಹೆದ್ದಾರಿ ೨೦೬ನ್ನು ದಾಟಲು ಹೋಗಿ ನಾಲ್ವರು ಅಪಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ.ಆರAಭದಲ್ಲಿ ಗ್ರಾಮದ ಜನರು ಗ್ರಾಮದ ಬಳಿಯೇ ಅಂಡರ್ ಪಾಸ್ ನಿರ್ಮಿಸಿಕೊಡುವ ಭರವಸೆ ನೀಡಿದ್ದ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಹೊತ್ತಿಗೆ ಗ್ರಾಮದ ಬಳಿ ಅಂಡರ್ ಪಾಸ್ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಗ್ರಾಮದ ಜನರಿಗೆ ನೀಡಿದ್ದ ಭರವಸೆ ಈಡೇರಿಸಿಲ್ಲ. ಹಾಗಾಗಿ ಕಳೆದ ಕೆಲ ದಿನಗಳಿಂದ ಗ್ರಾಮಸ್ಥರು ರಸ್ತೆಯಲ್ಲಿಯೇ ಧರಣಿ ಕುಳಿತಿದ್ದು, ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬAಧಪಟ್ಟ ಎಲ್ಲಾ ಅಧಿಕಾರಿಗಳ ಗಮನಕ್ಕು ತರಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ.ಗ್ರಾಮದ ಸಮೀಪವೇ ಮುಂದಿನ ೧೫ ದಿನಗಳಲ್ಲಿ ಅಂಡರ್ ಪಾಸ್ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳದಿದ್ದರೆ ಕೇಂದ್ರ ಸಚಿವರು, ಸಂಸದರಾದ ವಿ.ಸೋಮಣ್ಣನವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಮಂಜುನಾಥ್.ಎಸ್.ನುಡಿದರು.
ರಾಷ್ಟçದ ವಿವಿಧಡೆ ಕಂಡು ಬಂದಿರುವAತೆ ರಾಷ್ಟಿçÃಯ ಹೆದ್ದಾರಿ ೨೦೬ರ ಅಭಿವೃದ್ದಿಯಲ್ಲಿಯೂ ಕಳಪೆ ಕಾಮಗಾರಿ ಕಂಡು ಬಂದಿದೆ.ಮೇಲ್ಸೇತುವೆ, ಕೆಳ ಸೇತುವೆ, ಫ್ಲೆöÊ ಓವರ್‌ಗಳ ನಿರ್ಮಾಣದಲ್ಲಿ ಸರಿಯಾದ ರೀತಿ ಮಣ್ಣು ಪ್ಯಾಕ್ ಮಾಡದೆ, ಬಿರುಕುಗಳು ಕಂಡಿವೆ. ಹಾಗಾಗಿ ಸಂಪೂರ್ಣ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಸಮರ್ಪಕವಾಗಿ ಪರಿಶೀಲಿಸಿ, ಲೋಪ, ದೋಷಗಳಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ನಂತರವೇ ರÀಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಬಿಜೆಪಿ ಸರಕಾರದಲ್ಲಿ ಹತ್ತಾರು ಸಾವಿರ ಕೋಟಿ ರೂಖರ್ಚು ಮಾಡಿ ನಿರ್ಮಿಸಿದ ಸೇತುವೆ, ಟನಲ್‌ಗಳು ಉದ್ಘಾಟನೆಯಾದ ಕೆಲವೇ ವಾರಗಳಲ್ಲಿ ಬಿರುಕು ಬಿಟ್ಟು, ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿವೆ.ಅAತಹದ್ದೇ ಮತ್ತೊಂದು ಉದಾಹರಣೆಯಾಗಿ ಎನ್.ಹೆಚ್.೨೦೬ ಆಗಬಾರದು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಮಂಜುನಾಥ್ ನುಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ನಿಂಗರಾಜು, ಹೋರಾಟಗಾರರಾದ ಹೆಚ್.ಬಿ.ರಾಜೇಶ್, ಅಯ್ಯನ ಬಾವಿ ಗ್ರಾಮಸ್ಥರಾದ ಗೋಪಾಲ್, ಶ್ರೀಧರ್, ದಾಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
(Visited 1 times, 1 visits today)





